
777 ಚಾರ್ಲಿ(777 Charlie) ಚಿತ್ರ ವಿಶ್ವಾದ್ಯಂತ ಇಂದು ಬಿಡುಗಡೆ ಆಗ್ತಿದೆ. ಇಡೀ ಚಿತ್ರತಂಡ, ಸಿನಿಮಾ ವ್ಯಾಮೋಹಿಗಳು ಈ ಚಿತ್ರವನ್ನು ಕಣ್ತುಂಬಿಕೊಳ್ಳೋ ಕ್ಷಣಗಳನ್ನೇ ಎದುರು ನೋಡ್ತಿದ್ದಾರೆ. ಕೆಜಿಎಫ್ 2(KGF 2) ನಂತರ ಅತೀ ಹೆಚ್ಚು ಗಳಿಕೆ ಮಾಡೋ ಚಿತ್ರ ಇದಾಗಲಿದೆ ಎಂದು ಜನ ಎಲ್ಲ ಕಡೆ ಮಾತಾಡಿಕೊಳ್ತಿದ್ದಾರೆ. ಆದರೆ ಈ ಸಿನಿಮಾವನ್ನು ರಕ್ಷಿತ್ ಶೆಟ್ಟಿ ಫ್ಯಾನ್ಸ್(Rakshith shetty Fans) ಬೇರೇ ಥರ ಅರ್ಥ ಮಾಡಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಮಾಜಿ ಪ್ರಿಯತಮೆ, ಸದ್ಯ ನ್ಯಾಶನಲ್ ಲೆವೆಲ್‌ನಲ್ಲಿ ಹೆಸರು ಮಾಡುತ್ತಿರುವ ರಶ್ಮಿಕಾ ಮಂದಣ್ಣ (Rashmika Mandanna) ಅವರನ್ನು ಈ ಸಿನಿಮಾ ಜೊತೆಗೆ ಲಿಂಕ್ ಮಾಡ್ತಿದ್ದಾರೆ.
ಹಾಗೆ ನೋಡಿದರೆ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಬ್ರೇಕ್‌ಅಪ್ (Breakup )ಅವರಿಬ್ಬರಿಗೂ ಅಂಥ ದೊಡ್ಡ ವಿಚಾರ ಆದ ಹಾಗಿಲ್ಲ. ಆದರೆ ಫ್ಯಾನ್ಸ್ ಮಾತ್ರ ಈ ವಿಚಾರದಲ್ಲಿ ಟ್ರೋಲ್ (Troll) ಮಾಡಿದ್ದೇ ಮಾಡಿದ್ದು. ಅವರ ಕಣ್ಣಲ್ಲಿ ಇಂದಿಗೂ ರಶ್ಮಿಕಾ ಮಂದಣ್ಣ ಅಪರಾಧಿ. ಒಂದು ವೇಳೆ ರಶ್ಮಿಕಾ ಅವತ್ತು ರಕ್ಷಿತ್ ಶೆಟ್ಟಿ ಅವರನ್ನು ಮದುವೆ ಆಗಿದ್ದಿದ್ದರೆ ಮಾಮೂಲಿ ಗೃಹಿಣಿ (Homemaker)ಯಂತೆ ಇವತ್ತು ಬದುಕಬೇಕಿತ್ತು. ಈ ಮಟ್ಟದ ಯಶಸ್ಸು, ಪ್ರಸಿದ್ಧಿ ಪಡೆಯೋದು ಸಾಧ್ಯವಾಗುತ್ತಿತ್ತಾ? ರಕ್ಷಿತ್ ಶೆಟ್ಟಿ ಅವರಂತೆ ಸಿನಿಮಾ ಬಗ್ಗೆ ಸಾಕಷ್ಟು ಕನಸು, ಆಸೆ ಇಟ್ಟುಕೊಂಡೇ ಇಂಡಸ್ಟ್ರಿ (Industry)ಗೆ ಬಂದ ರಶ್ಮಿಕಾ ತನ್ನ ಕನಸನ್ನೆಲ್ಲ ಮರೆತು ರಕ್ಷಿತ್ ಹೆಂಡತಿಯಾಗಷ್ಟೇ ಇದ್ದಿದ್ದರೆ ಅವರ ಕನಸಿನ ಕತೆ ಏನಾಗ್ತಿತ್ತು? ಈ ಬಗ್ಗೆ ಎಲ್ಲ ಫ್ಯಾನ್ಸ್ ಹೆಚ್ಚು ತಲೆ ಕೆಡಿಸಿಕೊಂಡ ಹಾಗಿಲ್ಲ. ಅವರ ಚಿಂತನೆಯ ರೀತಿಯೇ ಬೇರೆ. ಅವರ ಪ್ರಕಾರ ರಶ್ಮಿಕಾ ಮಂದಣ್ಣ ರಕ್ಷಿತ್ ಪ್ರೀತಿಗೆ ದ್ರೋಹ ಮಾಡಿದ್ದಾರೆ, ರಕ್ಷಿತ್ ಅವರನ್ನು ಮೆಟ್ಟಿಲಾಗಿ ಬಳಸಿಕೊಂಡು ಆಮೇಲೆ ತಾನು ಹತ್ತಿಬಂದ ಮೆಟ್ಟಿಲನ್ನೇ ಕೆಳದೂಡಿದ್ದಾರೆ. ತೆಲುಗು ನಟ ವಿಜಯ ದೇವರಕೊಂಡ (Vijay Devarakinda)ಅವರ ಜೊತೆಗೂ ಅಫೇರ್ ಇಟ್ಟುಕೊಂಡಿದ್ದಾರೆ. ಇದೀಗ ತನ್ನ ಕೆಲಸ ಆದಮೇಲೆ ಅವರ ಜೊತೆಗೂ ಬ್ರೇಕ್‌ಅಪ್ ಮಾಡಿಕೊಂಡಿದ್ದಾರೆ. ಈ ಬಗೆಯ ಆಪಾದನೆಗಳನ್ನೆಲ್ಲ ರಶ್ಮಿಕಾ ಮಂದಣ್ಣ ಮೇಲೆ ರಕ್ಷಿತ್ ಅಭಿಮಾನಿಗಳು ಹೊರಿಸಿದ್ದಾರೆ.
777 Charlie film review: ಸದ್ದುಗದ್ದಲದ ಜಗತ್ತಲ್ಲಿ ಒಂದು ಆಹ್ಲಾದಕರ ಮೌನ
ಇದೀಗ ಅವರ ವರ್ಶನ್‌ನಲ್ಲಿ ಕೊಂಚ ಬದಲಾವಣೆ ಆಗಿದೆ. ಅವರ ಪ್ರಕಾರ ಸದ್ಯಕ್ಕೆ ರಕ್ಷಿತ್ ಶೆಟ್ಟಿ 777 ಚಾರ್ಲಿ ಸಿನಿಮಾ ಮಾಡಿರೋದು ರಶ್ಮಿಕಾಗೊಂದು ಮೆಸೇಜ್(Message) ಕೊಡಲಿಕ್ಕೆ. ನಿನಗಿಂತ ಹೆಚ್ಚಿನ ನಿಯತ್ತು, ಪ್ರೀತಿ ನಾಯಿಗಿದೆ, ಅದನ್ನು ಪ್ರೀತಿಸಿದರೆ ಪ್ರತಿಯಾಗಿ ಅದು ತನ್ನ ಪ್ರಾಣವನ್ನೇ ಕೊಡುತ್ತದೆ, ಆದರೆ ನಿನ್ನಂಥವರು ನಾಯಿಗಿಂತ ಕಡೆ ಅನ್ನೋ ಮೆಸೇಜ್‌ಅನ್ನು ರಕ್ಷಿತ್ ಶೆಟ್ಟಿ ಈ ಸಿನಿಮಾ ಮೂಲಕ ಕೊಟ್ಟಿದ್ದಾರೆ ಅನ್ನೋದು ಅಭಿಮಾನಿಗಳ ವಲಯದಲ್ಲಿ ಹರಿದಾಡ್ತಿರೋ ಮಾತು.
ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಧ್ಯೆ 'ಕಿರಿಕ್ ಪಾರ್ಟಿ'(Kirik Party) ಸಿನಿಮಾ ಮಾಡ್ತಿರುವಾಗಲೇ ಲವ್ ಆಗಿದೆ. ಅದು ಮುಂದುವರಿದು ಅವರಿಬ್ಬರ ಎಂಗೇಜ್‌ಮೆಂಟ್(Engagement) ವರೆಗೂ ಹೋಗಿದೆ. ಆಮೇಲೆ ಮದುವೆಯ ವಿಚಾರಕ್ಕೆ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಕಾಣಿಸಿಕೊಂಡು ಸಂಬಂಧ ಬೇರ್ಪಟ್ಟಿದೆ. ಇದರ ಬಗ್ಗೆ ಆ ಕ್ಷಣಕ್ಕೆ ನೋವು ಅನುಭವಿಸಿದರೂ ಆಮೇಲೆ ರಕ್ಷಿತ್ ಆಗಲೀ, ರಶ್ಮಿಕಾ ಆಗಲಿ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಅವರಿಬ್ಬರಿಗೂ ಸಿನಿಮಾ ಪ್ರೀತಿ ವೈಯುಕ್ತಿಕ ಪ್ರೀತಿಗಿಂತ ಹೆಚ್ಚಾಗಿದ್ದ ಕಾರಣ ಅವರು ಸಿನಿಮಾಗಳಲ್ಲಿ ಇನ್ನಷ್ಟು ತೀವ್ರವಾಗಿ ಕಳೆದುಹೋದರು. ರಕ್ಷಿತ್ ಈ ಬಗ್ಗೆ ಇತ್ತೀಚೆಗೆ ಒಂದು ಸಂದರ್ಶನದಲ್ಲೂ ಹೇಳಿದ್ದರು, 'ನನಗೆ ನಾನು ಭಗ್ನ ಪ್ರೇಮಿ ಅಂತ ಅನಿಸಿಲ್ಲ. ಆದರೆ ಜಗತ್ತು ಹಾಗೆ ತಿಳ್ಕೊಂಡಿದೆ' ಅಂತ.
Rakshith shettyಗೆ ನಾಯಿಗಿಂತ ಬೆಕ್ಕೇ ಇಷ್ಟವಂತೆ! ಬೆಕ್ಕಿನ ಸಿನಿಮಾ ಮಾಡ್ತಾರಾ?
ಈ ಸಿನಿಮಾ ನೋಡಿದ ಬಳಿಕ ನಿರ್ದೇಶಕ ಸಂತೋಷ್ ಆನಂದರಾಮ್(Santhosh Anandram) ಕಾರ್ಡ್‌ನಲ್ಲಿ ಬರೆದು ಒಂದು ಲೆಟರ್ ಸೋಷಿಯಲ್ ಮೀಡಿಯ(Social Media) ದಲ್ಲಿ ವೈರಲ್(Viral) ಆಗಿತ್ತು. ಅದರಲ್ಲಿ ಅವರು, 'ರಕ್ಷಿತ್ ಶೆಟ್ಟಿ ನೈಜ ಜೀವನದಲ್ಲೂ ಧರ್ಮನಂಥಾ ಮಾನವೀಯ ವ್ಯಕ್ತಿತ್ವ ಹೊಂದಿರುವವರಾದ ಕಾರಣ ಮೂರು ವರ್ಷ ಕಾದು ಈ ಸಿನಿಮಾವನ್ನು ತೆರೆಯಮೇಲೆ ತರಲು ಸಾಧ್ಯವಾಯ್ತು. ಇಂಥಾ ವ್ಯಕ್ತಿಯನ್ನು ಕಳೆದುಕೊಂಡವರು ನತದೃಷ್ಟರು' ಎಂದು ಬರೆದಿದ್ದರು. ಇದು ರಶ್ಮಿಕಾಗೆ ಹೇಳಿದ ಮಾತು ಅನ್ನೋದು ಹೆಚ್ಚಿನವರ ಅಭಿಪ್ರಾಯ.
ಒಟ್ಟಾರೆ, ರಕ್ಷಿತ್ ಶೆಟ್ಟಿ ಏನೇ ಮಾಡಿದರೂ ಅದನ್ನು ರಶ್ಮಿಕಾ ಜೊತೆಗಿನ ಸಂಬಂಧದ ಜೊತೆಗೆ ಲಿಂಕ್ ಮಾಡೋದು ರಕ್ಷಿತ್ ಗೆ ಇಷ್ಟವಾಗುತ್ತೋ ಇಲ್ವೋ, ಆದರೆ ಫ್ಯಾನ್ಸ್ ಅಂತೂ ಮಾಡ್ತಿದ್ದಾರೆ. ಅವರಿಗೆ ತಮ್ಮ ನೆಚ್ಚಿನ ನಾಯಕನ ಬಗೆಗಿರುವ ಅತೀವ ಪ್ರೀತಿಯೇ ಇದಕ್ಕೆಲ್ಲ ಕಾರಣ ಅಂದರೆ ತಪ್ಪಾಗಲಿಕ್ಕಿಲ್ಲವೇನೋ..
Yash: ಮಕ್ಕಳ ಜೊತೆ ಪಿಕ್ ನಿಕ್ ಹೋಗಿ ಬಂದ ರಾಕಿಂಗ್ ಸ್ಟಾರ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.