ಕಿಚ್ಚ ಸುದೀಪ್ ಗೆ ಬ್ಯಾಟ್ ಗಿಫ್ಟ್ ನೀಡಿದ ಜೋಸ್ ಬಟ್ಲರ್!

Published : Jun 09, 2022, 07:36 PM ISTUpdated : Jun 11, 2022, 03:31 PM IST
ಕಿಚ್ಚ ಸುದೀಪ್ ಗೆ ಬ್ಯಾಟ್ ಗಿಫ್ಟ್ ನೀಡಿದ ಜೋಸ್ ಬಟ್ಲರ್!

ಸಾರಾಂಶ

ಐಪಿಎಲ್ ನಲ್ಲಿ ನಾಲ್ಕು ಶತಕ ಸಿಡಿಸುವ ಮೂಲಕ ಭರ್ಜರಿ ಬ್ಯಾಟಿಂಗ್ ನಡೆಸಿ ರಾಜಸ್ಥಾನ ರಾಯಲ್ಸ್ ತಂಡ ಫೈನಲ್ ಗೇರುವಲ್ಲಿ ನೆರವಾಗಿದ್ದ ಜೋಸ್ ಬಟ್ಲರ್, ಟೂರ್ನಿಯ ವೇಳೆ ತಾವು ಆಡಿದ್ದ ಬ್ಯಾಟ್ ಅನ್ನು ನಟ ಕಿಚ್ಚ ಸುದೀಪ್ ಗೆ ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದಾರೆ.

ಬೆಂಗಳೂರು (ಜೂನ್ 9): ಇಂಗ್ಲೆಂಡ್ ಕ್ರಿಕೆಟ್ (England Cricket) ತಂಡದ ಸ್ಪೋಟಕ ಬ್ಯಾಟ್ಸ್ ಮನ್, ರಾಜಸ್ಥಾನ ರಾಯಲ್ಸ್ (Rajasthan Royals) ತಂಡವನ್ನು 2022ರ ಐಪಿಎಲ್ ನಲ್ಲಿ (2022 IPL) ಏಕಾಂಗಿಯಾಗಿ ಫೈನಲ್ ಹಂತಕ್ಕೆ ಏರಿಸಿದ್ದ ಆರಂಭಿಕ ಆಟಗಾರ ಜೋಸ್ ಬಟ್ಲರ್ (Jos Buttler), ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ (Kichcha Sudeepa) ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

2022ರ ಐಪಿಎಲ್ ನಲ್ಲಿ ತಾವು ಆಡಿದ್ದ ಬ್ಯಾಟ್ ಅನ್ನು ಸುದೀಪ್ ಗೆ (Kicha Sudeepa)ಬಟ್ಲರ್ ಉಡುಗೊರೆಯಾಗಿ ನೀಡಿದ್ದು, ಅವರ ಸಹಿ ಕೂಡ ಅದರಲ್ಲಿದೆ. ಕಿಚ್ಚ ಸುದೀಪ್ ಈ ಕುರಿತಾಗಿ ಟ್ವಿಟರ್ ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಸಂಭ್ರಮ ಹಂಚಿಕೊಂಡಿದ್ದಾರೆ.

ಅದರೊಂದಿಗೆ ಬ್ಯಾಟ್ ಸಿಗಲು ಸಹಾಯ ಮಾಡಿದ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಕನ್ನಡಿಗ ಕೆಸಿ ಕಾರ್ಯಪ್ಪ ಹಾಗೂ ರಾಜಸ್ಥಾನ ರಾಯಲ್ಸ್ ತಂಡಕ್ಕೂ ಕೂಡ ಸುದೀಪ್ (Kiccha Sudeep) ಧನ್ಯವಾದ ಹೇಳಿದ್ದು, ಈ ಬ್ಯಾಟ್ ಅನ್ನು ಜತನವಾಗಿ ಕಾಯ್ದಿರಿಸಿಕೊಳ್ಳುವುದಾಗಿ  ಹೇಳಿದ್ದಾರೆ.

 

"ನಿಜಕ್ಕೂ ನನಗೆ ಬಹಳ ಅಚ್ಚರಿಯಾಯಿತು. ನಾನು ನಿಜಕ್ಕೂ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಮೊದಲಿಗೆ ನಾನು ರಾಜಸ್ಥಾನ ರಾಯಲ್ಸ್ ಗೆ ಥ್ಯಾಂಕ್ಸ್ ಹೇಳಲು ಇಷ್ಟಪಡುತ್ತೇನೆ. ಇದನ್ನು ಸಾಧ್ಯವಾಗಿಸಿದ ನನ್ನ ಸ್ನೇಹಿತ ಕೆಸಿ ಕಾರ್ಯಪ್ಪಗೂ ಥ್ಯಾಂಕ್ಸ್ ಹೇಳುತ್ತೇನೆ. ಆದರೆ, ಈ ವಿಡಿಯೋ ವಿಶೇಷವಾಗಿ ಜೋಸ್ ಬಟ್ಲರ್ ಸಲುವಾಗಿ. ವೈಯಕ್ತಿಕವಾಗಿ ನೀವು ಸಹಿ ಮಾಡಿದಂಥ ಬ್ಯಾಟ್ ಅನ್ನು ನನಗೆ ನೀಡಿದ್ದಕ್ಕೆ ಬಹಳ ಥ್ಯಾಂಕ್ಸ್. ಇದನ್ನು ನಾನು ಇಂದು ಸ್ವೀಕರಿಸಿದ್ದೇನೆ. ನನಗೆ ಬಹಳ ಸಂತೋಷವಾಗಿದೆ ಎಂದು ಸುದೀಪ್ ಕೃತಜ್ಞತಾ ವಿಡಿಯೋದಲ್ಲಿ ಹೇಳಿದ್ದಾರೆ.

ಅದರೊಂದಿಗೆ ಈ ಬಾರಿಯ ಐಪಿಎಲ್ ನಲ್ಲಿ ಜೋಸ್ ಬಟ್ಲರ್ ಅವರ ಭರ್ಜರಿ ಆಟದ ಬಗ್ಗೆಯೂ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಖಂಡಿತವಾಗಿ ನಾನು ಇದನ್ನು ಜೋಪಾನವಾಗಿ ಕಾಯ್ದಿಟ್ಟುಕೊಳ್ಳುತ್ತೇನೆ ಎಂದು ಹೇಳಿ ಸುದೀಪ್ ವಿಡಿಯೋವನ್ನು ಮುಗಿಸಿದ್ದಾರೆ.

ಕ್ರಿಕೆಟ್ ನ ಜೊತೆ ಉತ್ತಮ ನಂಟು ಹೊಂದಿರುವ ಸುದೀಪ್, ತಮ್ಮ ಮುಂದಿನ ಚಿತ್ರ ವಿಕ್ರಾಂತ್ ರೋಣ ಬಿಡುಗಡೆಯ ಕುರಿತಾದ ತಯಾರಿಯಲ್ಲಿದ್ದಾರೆ. ಇತ್ತೀಚೆಗೆ 'ಕ್ರಿಕೆಟ್ ಕಾಶಿ' ಎಂದೇ ಕರೆಯಲ್ಪಡುವ ಲಂಡನ್ ನಲ್ಲಿರುವ ಲಾರ್ಡ್ಸ್ ಕ್ರಿಕೆಟ್ ಮೈದಾನದ ಇಟ್ಟಿಗೆ ಮೇಲೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೆಸರು ಇದೆ ಅನ್ನೋ ವಿಚಾರವನ್ನ ಸ್ವತಃ ನಟ ಕಿಚ್ಚ ಸುದೀಪ್ ಅವರೇ ಬಹಿರಂಗ ಮಾಡಿದ್ದಾರೆ. ಖಾಸಗಿ ಸಂದರ್ಶನ ಒಂದರಲ್ಲಿ ಮಾತನಾಡಿದ್ದ ನಟ ಕಿಚ್ಚ ಸುದೀಪ್, ತಮ್ಮ ಹೆಸರು ಕ್ರಿಕೆಟ್ ಕಾಶಿ ಲಾರ್ಡ್ಸ್ ಗ್ರೌಂಡ್ ಗೋಡೆಯ ಇಟ್ಟಿಗೆ ಮೇಲಿರುವ ಮಹತ್ವದ ವಿಚಾರವನ್ನ ತಿಳಿಸಿದ್ದಾರೆ. ಹೀಗೆ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಮಹತ್ವದ ಮಾಹಿತಿಯನ್ನ ರಿವೀಲ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. 

ಡ್ರಗ್ಸ್ ಮಾಫಿಯಾ ಬಗ್ಗೆ ಕಿಚ್ಚ ಫಸ್ಟ್ ರಿಯಾಕ್ಷನ್: ಚೇತನ್ ಟ್ವೀಟ್‌ಗೆ ಹೀಗಂದ್ರು

ಸುದೀಪ್ ಪಾಲಿಗೆ ಕ್ರಿಕೆಟ್ ಅಚ್ಚುಮೆಚ್ಚು, ಕ್ರಿಕೆಟ್ ನ ಜೊತೆ ಉತ್ತಮ ನಂಟು ಕೂಡ ಕೂಡ ಹೊಂದಿರುವ ಸುದೀಪ್ ಸಮಯ ಸಿಕ್ಕಾಗಲೆಲ್ಲಾ ಸ್ನೇಹಿತರ ಜೊತೆ ಕ್ರಿಕೆಟ ಆಡುತ್ತಿರುತ್ತಾರೆ. ಕೆಪಿಎಲ್ ನಲ್ಲಿ ಸುದೀಪ್ ನೇತೃತ್ವದ ತಂಡ ಕೂಡ ಹಿಂದೊಮ್ಮೆ ಆಡಿತ್ತು. ಅಲ್ಲದೇ ಸಿಸಿಎಲ್, ಕೆಪಿಎಲ್ ಟೂರ್ನಿಗಳಲ್ಲಿ ಕರ್ನಾಟಕ ಬುಲ್ಡೋಜರ್ ತಂಡವನ್ನು ಮುನ್ನಡೆಸಿದ್ದಾರೆ.

ಕವನ ರಚಿಸಿದ್ರು ಬಿಗ್‌ಬಾಸ್: ಮಗಳ ಬರ್ತ್‌ಡೇಗೆ ಕಿಚ್ಚ ಸ್ಪೆಷಲ್ ಗಿಫ್ಟ್

ಗ್ಲೌಸ್ ನೀಡಿ ಎಂದ ರಾಜಸ್ಥಾನ ರಾಯಲ್ಸ್: ಬಟ್ಲರ್ ತಮ್ಮ ಬ್ಯಾಟ್ ನೀಡಿದ ಪ್ರತಿಯಾಗಿ ರಾಜಸ್ಥಾನ ರಾಯಲ್ಸ್,  ಸಿಸಿಎಲ್ ನಲ್ಲಿ ಕರ್ನಾಟಕ ಬುಲ್ಡೋಜರ್ ತಂಡದ ಪರವಾಗಿ ಆಡಿದ್ದ ವೇಳೆ ಧರಿಸಿದ್ದ ವಿಕೆಟ್ ಕೀಪಿಂಗ್ ಗ್ಲೌಸ್ ನೀಡುವಂತೆ ಕೇಳಿಕೊಂಡಿದೆ. ಬಹುಶಃ ಸುದೀಪ್ ಇದನ್ನು ನೀಡುವ ಸಾಧ್ಯತೆಗಳೂ ಇದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!
34th Wedding Anniversary : ಅಂಬಿ ನೆನಪಲ್ಲಿ ಸುಮಲತಾ ಭಾವನಾತ್ಮಕ ಪೋಸ್ಟ್