ಸೋಷಿಯಲ್ ಮೀಡಿಯಾ ನಿಂದಕರಿಗೆ ಬುದ್ದಿ ಕಲಿಸಲು ಮುಂದಾದ ರಮ್ಯಾ

By Sharath Sharma  |  First Published Jun 9, 2022, 2:52 PM IST

Sandalwood queen Ramya: ಮೋಹಕ ತಾರೆ ರಮ್ಯ ವಿರುದ್ಧ ಅವಹೇಳನಾಕಾರಿಯಾಗಿ ಕೆಲವರು ಇನ್ಸ್‌ಟಾಗ್ರಾಂನಲ್ಲಿ ಕಮೆಂಟ್‌ ಮಾಡಿದ್ದರು. ಈ ಸಂಬಂಧ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ರಮ್ಯ ದೂರು ದಾಖಲಿಸಿದ್ದಾರೆ. 


ಬೆಂಗಳೂರು: ಸಾಮಾಜಿಕ ಜಾಲತಾಣ Instagram ನಲ್ಲಿ ನಿಂದಿಸಿ ಕಮೆಂಟ್‌ ಮಾಡಿದವರ ವಿರುದ್ಧ ನಟಿ ರಮ್ಯ ದೂರು ನೀಡಿದ್ದಾರೆ. ಬೆಂಗಳೂರು ಕೇಂದ್ರ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಮೋಹಕ ತಾರೆ ರಮ್ಯ (Sandalwood queen Ramya) ದೂರು ನೀಡಿದ್ದಾರೆ. ರಮ್ಯ ವಿರುದ್ಧ ಅವಹೇಳನಕಾರಿಯಾಗಿ ಕೆಲವರು ಕಮೆಂಟ್‌ ಮಾಡಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ರಮ್ಯ ದೂರು ದಾಖಲಿಸಿದ್ದು, ತಪ್ಪಿತಸ್ತರ ಮೇಲೆ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. 

ಈ ಹಿಂದೆಯೂ ಸಾಮಾಜಿಕ ಜಾಲತಾಣದಲ್ಲಿ ರಮ್ಯ ವಿರುದ್ಧ ಅವಹೇಳನಕಾರಿಯಾಗಿ ಕಮೆಂಟ್‌ ಮಾಡಿದವರ ವಿರುದ್ಧ ರಮ್ಯ ದೂರು ನೀಡಿದ್ದರು. ಸಿನೆಮಾ ಒಂದರ ಶೂಟಿಂಗ್‌ ವೇಳೆ ಜೇನು ಕಚ್ಚಿದ ಘಟನೆಯ ಬಗ್ಗೆ ವರದಿ ಮಾಡಿದ ವರದಿಗಾರರ ಮೇಲೂ ರಮ್ಯ ಅಶೋಕನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 

Tap to resize

Latest Videos

ರಮ್ಯಾ ಕಾರಣದಿಂದ ಒಡೆದ ಮನೆಯಾಗಿತ್ತು ಕಾಂಗ್ರೆಸ್‌:

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌ ಅವರು ರಾಯಪುರದ ಎಐಸಿಸಿ ಸಂಕಲ್ಪ ಶಿಬಿರದಲ್ಲಿ ತಬ್ಬಿಕೊಂಡು ಒಗ್ಗಟು ಪ್ರದರ್ಶಿಸಿದ್ದರು. ಈ ಫೋಟೋ ಟ್ವೀಟರ್‌ನಲ್ಲಿ ಪ್ರಕಟಿಸಿ, ಕಾಂಗ್ರೆಸ್‌ ನಾಯಕ ಕೆ.ಬಿ. ಬೈಜು ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೆವಾಲಾ ಅವರಿಗೆ ‘ಉತ್ತಮವಾಗಿ ಕೆಲಸ ಮಾಡಿದ್ದೀರಿ’ ಎಂದು ರಮ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಟಿ ರಮ್ಯಾ ಟ್ವೀಟ್‌ನಿಂದ ಒಡೆದ ಮನೆಯಾದ ಕಾಂಗ್ರೆಸ್!

ಮುಂದುವರೆದ ಟ್ವೀಟ್‌ ವಾರ್‌:
ಇನ್ನು ರಾಜ್ಯ ಮಟ್ಟದಲ್ಲಿ ಯುವ ನಾಯಕರ ನಡುವೆ ವಿವಾದದ ಕುರಿತ ವಾಗ್ಯುದ್ಧ ಮುಂದುವರೆದಿದೆ. ರಮ್ಯಾ ಅವರನ್ನು ಟೀಕಿಸಿರುವ ಮೊಹಮ್ಮದ್‌ ನಲಪಾಡ್‌ ಹೇಳಿಕೆ ಉದ್ದೇಶಿಸಿ ಟ್ವೀಟ್‌ ಮಾಡಿರುವ ರಕ್ಷಾ ರಾಮಯ್ಯ, ಪಕ್ಷದ ಆಂತರಿಕ ವಿಷಯ ಅಥವಾ ಪಕ್ಷದ ಹಿರಿಯ ನಾಯಕರ ಹೇಳಿಕೆಗಳನ್ನು ಕಿರಿಯರಾದ ನಾವು ವಿಮರ್ಶೆ ಮಾಡುವುದಾಗಲಿ, ಬೇರೆ ರೀತಿ ಅರ್ಥ ಬರುವ ರೀತಿಯಲ್ಲಿ ಸಾರ್ವಜನಿಕವಾಗಿ ಮಾತನಾಡುವುದು ಸರಿಯಲ್ಲ. ನನ್ನ ಯುವ ಕಾಂಗ್ರೆಸ್‌ನ ಸ್ನೇಹಿತ ಇದನ್ನ ಅರ್ಥಮಾಡಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ರಮ್ಯಾ ಕರ್ನಾಟಕದ ಹೆಮ್ಮೆ:
ಇನ್ನು ಕೆಪಿಸಿಸಿ ವಕ್ತಾರ ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ಮಾಜಿ ಮುಖ್ಯಸ್ಥ ನಟರಾಜ್‌ ಗೌಡ, ರಮ್ಯಾ ಅವರನ್ನು ಟ್ರೋಲ್‌ ಮಾಡಲು ಪ್ರಚೋದಿಸಿದ್ದ ಬಿ.ಆರ್‌. ನಾಯ್ಡು ವಿರುದ್ಧ ನೇರವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಪ್ರಖ್ಯಾತ ಬಹುಭಾಷಾ ಚಿತ್ರನಟಿ, ಮಾಜಿ ಸಂಸದೆ, ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮಾಜಿ ಅಧ್ಯಕ್ಷೆ ರಮ್ಯಾ ಅವರು ಕರ್ನಾಟಕದ ಹೆಮ್ಮೆ. ಇವರನ್ನು ಅವಮಾನಿಸುವ ರೀತಿಯಲ್ಲಿ ಟ್ವೀಟ್‌ಗಳನ್ನು ಮಾಡುತ್ತಿರುವುದು ಸರಿಯಲ್ಲ. ಬಿ.ಆರ್‌. ನಾಯ್ಡು ಅವರೇ ನಿಮ್ಮ ಹೋರಾಟ ಬಿಜೆಪಿಯ ಮೇಲಿರಲಿ ಎಂದಿದ್ದಾರೆ.

ಇದನ್ನೂ ಓದಿ: ನನ್ನ ಬೆನ್ನಿಗೆ ಚೂರಿ ಹಾಕಿದ್ದು ಡಿಕೆಶಿ, ರಮ್ಯಾ ವಾಗ್ದಾಳಿ

ನಟಿ ರಮ್ಯಾ ಮತ್ತೆ ಮಂಡ್ಯ ರಾಜಕೀಯಕ್ಕೆ ಬರುತ್ತಾರಾ?
ಮಂಡ್ಯ ಜಿಲ್ಲಾ ರಾಜಕಾರಣದಲ್ಲಿ ಮಿಂಚಿನಂತೆ ಪ್ರತ್ಯಕ್ಷವಾಗಿ ಮಾಯವಾಗಿದ್ದ ಮಾಜಿ ಸಂಸದೆ ರಮ್ಯಾ ಅವರನ್ನು ಮತ್ತೆ ಜಿಲ್ಲಾ ರಾಜಕಾರಣಕ್ಕೆ ಕರೆತರುವ ಪ್ರಯತ್ನಗಳು ಕಾಂಗ್ರೆಸ್‌ ಪಾಳಯದೊಳಗೆ ಒಳಗಿಂದೊಳಗೆ ನಡೆಯುತ್ತಿವೆಯೇ ಎಂಬ ಅನುಮಾನಗಳು ಮೂಡಲಾರಂಭಿಸಿವೆ. ಸಂಸದೆ ಸುಮಲತಾಗೆ ಪ್ರತಿಸ್ಪರ್ಧಿಯಾಗಿ ಮಾಜಿ ಸಂಸದೆ ರಮ್ಯಾ ಅವರನ್ನು ಕಣಕ್ಕಿಳಿಸುವ ಚಿಂತನೆ ನಡೆಸಿದ್ದಾರೆಯೇ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರಲಾರಂಭಿಸಿವೆ. ಇಷ್ಟುವರ್ಷ ರಾಜಕೀಯವಾಗಿ ಮಾತನಾಡದೆ ಮೌನವಾಗಿದ್ದ ಮಾಜಿ ಸಂಸದೆ ರಮ್ಯಾ ಅವರು ಕಾಂಗ್ರೆಸ್‌ನ ಹಿರಿಯ ನಾಯಕ ಎಂ.ಬಿ.ಪಾಟೀಲ್‌ ಮತ್ತು ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಭೇಟಿ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಡಿದ ಮಾತುಗಳಿಗೆ ಪ್ರತಿಕ್ರಿಯಿಸುವುದರೊಂದಿಗೆ ವಿಭಿನ್ನ ರೀತಿಯಲ್ಲಿ ರಾಜಕಾರಣದ ಸೆಕೆಂಡ್‌ ಇನ್ನಿಂಗ್ಸ್‌ ಆರಂಭಿಸಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ಕಾಂಗ್ರೆಸ್‌ನೊಳಗೆ ಮೂಲೆಗುಂಪಾಗಿದ್ದ ರಮ್ಯಾ ಇದೀಗ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳುವ ಪ್ರಯತ್ನಕ್ಕಿಳಿದಿದ್ದಾರೆ ಎನ್ನಲಾಗುತ್ತಿದೆ.

click me!