Toby: ರಾಜ್ ಬಿ ಶೆಟ್ಟಿ ಮುಂದಿನ ಚಿತ್ರ 'ಟೋಬಿ', ನಟನೆ ಜೊತೆಗೆ ನಿರ್ದೇಶನ

By Shruthi Krishna  |  First Published Jun 13, 2023, 3:25 PM IST

ರಾಜ್ ಬಿ ಶೆಟ್ಟಿ ಹೊಸ ಸಿನಿಮಾ ಘೋಷಣೆ ಮಾಡಿದ್ದು ಚಿತ್ರಕ್ಕೆ 'ಟೋಬಿ' ಎಂದು ನಾಮಕರಣ ಮಾಡಿದ್ದಾರೆ. ನಟನೆ ಜೊತೆಗೆ ನಿರ್ದೇಶನ ಕೂಡ ಮಾಡುತ್ತಿದ್ದಾರೆ. 


ರಾಜ್ ಬಿ ಶೆಟ್ಟಿ ನಟನೆ ಮತ್ತು ನಿರ್ದೇಶನದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ವಿಭಿನ್ನ ಸಿನಿಮಾಗಳ ಮೂಲಕವೇ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ ರಾಜ್ ಬಿ ಶೆಟ್ಟಿ. ರಾಜ್ ಬಿ ಶೆಟ್ಟಿ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಏನಾದರೊಂದು ವಿಶೇಷತೆ ಇದ್ದೇ ಇರುತ್ತೆ. ಇದೀಗ ರಾಜ್ ಬಿ ಶೆಟ್ಟಿ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಮತ್ತೊಂದು ಕಾನ್ಸೆಪ್ಟ್ ಮೂಲಕ ಸಿನಿ ರಸಿಕರ ಮುಂದೆ ಬರ್ತಿದ್ದಾರೆ. ಟೈಟಲ್ ಮೂಲಕವೇ ಗಮನ ಸೆಳೆಯುತ್ತಿರುವ ಶೆಟ್ರು ಇನ್ನ  ಸಿನಿಮಾ ಹೇಗಿರಲಿದೆ ಎನ್ನುವ ಕಾತರ ಹೆಚ್ಚಿದ್ದಾರೆ. ಅಂದಹಾಗೆ ಚಿತ್ರಕ್ಕೆ  ‘ಟೋಬಿ’ಎಂದು ಟೈಟಲ್ ಫಿಕ್ಸ್ ಮಾಡಿದ್ದಾರೆ. 
 
ಸದ್ಯ ಟೈಟಲ್​ ಅನೌನ್ಸ್​ ಮಾಡುವ ಜೊತೆಗೆ ಮೋಷನ್​ ಪೋಸ್ಟರ್​ ಕೂಡ ಹಂಚಿಕೊಳ್ಳಲಾಗಿದೆ. ‘ಮಾರಿ.. ಮಾರಿ.. ಮಾರಿಗೆ ದಾರಿ’ ಎಂದು ಕ್ಯಾಪ್ಷನ್​ನೊಂದಿಗೆ ರಾಜ್ ಬಿ ಶೆಟ್ಟಿ ಈ ಸುದ್ದಿ ಬಹಿರಂಗ ಪಡಿಸಿದ್ದಾರೆ. ಇನ್ನು, ‘ಟೋಬಿ’ ಚಿತ್ರದ ರಿಲೀಸ್​ ದಿನಾಂಕದ ಬಗ್ಗೆಯೂ ಅಪ್​ಡೇಟ್​ ನೀಡಿದ್ದಾರೆ. ಆಗಸ್ಟ್​ 25ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಟಟೈಲ್, ಮೋಷನ್ ಪೋಸ್ಟರ್ ನೋಡಿದ ಫ್ಯಾನ್ಸ್ ಸಿನಿಮಾಗಾಗಿ ಕಾಯುತ್ತಿದ್ದಾರೆ. 

‘ಒಂದು ಮೊಟ್ಟೆಯ ಕಥೆ’, ‘ಗರುಡ ಗಮನ ವೃಷಭ ವಾಹನ’ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ರಾಜ್​ ಬಿ. ಶೆಟ್ಟಿ ಇದೀಗ ಟೋಬಿ ಮೂಲಕ ಮತ್ತೊಂದು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಅಂದಹಾಗೆ ರಾಜ್ ಬಿ ಶೆಟ್ಟಿ ಇತ್ತೀಚೆಗಷ್ಟೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ರಮ್ಯಾ ನಿರ್ಮಾಣದಲ್ಲಿ ಬರ್ತಿರುವಮೊದಲ ಸಿನಿಮಾವಿದು. ಆ ಸಿನಿಮಾ ರಿಲೀಸ್​ ಆಗುವುದಕ್ಕೂ ಮುನ್ನವೇ ಅವರು ಹೊಸ ಚಿತ್ರದ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ‘ಟೋಬಿ’ ಸಿನಿಮಾದ ಮೋಷನ್​ ಪೋಸ್ಟರ್​ ಗಮನ ಸೆಳೆಯುತ್ತಿದೆ. ‘ಟೋಬಿ’ ಕೂಡ ತುಂಬ ಡಿಫರೆಂಟ್​ ಆಗಿರಲಿದೆ ಎಂಬ ಭರವಸೆ ಮೂಡಿದೆ.

Tap to resize

Latest Videos

ಮಂಗಳೂರಿನಲ್ಲಿ ರಾಜ್ ಬಿ ಶೆಟ್ಟಿಯ ಭರ್ಜರಿ ಹುಲಿ ಕುಣಿತ!

ಲೈಟರ್​ ಬುದ್ಧ ಫಿಲ್ಮ್ಸ್​ ಮೂಲಕ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಮೂಡಿಬಂದಿತ್ತು. ಈಗ ಅದೇ ಬ್ಯಾನರ್​ನಲ್ಲಿ ‘ಟೋಬಿ’ ಸಿನಿಮಾ ಸಿದ್ಧವಾಗುತ್ತಿದೆ. ಅಗಸ್ತ್ಯ ಫಿಲ್ಮ್ಸ್ ಕೂಡ ಸಾಥ್​ ನೀಡಿದೆ. ಈ ಸಿನಿಮಾದಲ್ಲಿ ರಾಜ್​ ಬಿ. ಶೆಟ್ಟಿ ಜೊತೆ ಸಂಯುಕ್ತಾ ಹೊರನಾಡು ಮತ್ತು ಚೈತ್ರಾ ಆಚಾರ್​ ನಾಯಕಿಯರಾಗಿ ನಟಿಸಿದ್ದಾರೆ. ಇದೊಂದು ಪಕ್ಕಾ ಮಾಸ್​ ಸಿನಿಮಾ ಎಂದು ರಾಜ್​ ಬಿ. ಶೆಟ್ಟಿ ಹೇಳಿದ್ದಾರೆ. ‘ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಹಾಗೂ ಟೋಬಿ ಚಿತ್ರತಂಡದ ಭಾಗವಾಗಿಸಿದ್ದಕ್ಕೆ ಧನ್ಯವಾದಗಳು. ರಾಜ್​ ಬಿ. ಶೆಟ್ಟಿ ಮತ್ತು ಇಡೀ ತಂಡದಿಂದ ಸಿಕ್ಕ ಪ್ರೀತಿಗೆ ಧನ್ಯವಾದಗಳು’ ಎಂದು ಸಂಯುಕ್ತಾ ಹೊರನಾಡು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ.

ಮಾರಿ.. ಮಾರಿ.. ಮಾರಿಗೆ ದಾರಿ!
‘ಟೋಬಿ’ ಆಗಸ್ಟ್ 25ರಂದು ನಿಮ್ಮ ಮುಂದೆ 😊
Make way for Maari 💥

The beast that got the best out of us! Presenting to you,

𝐈𝐍 𝐂𝐈𝐍𝐄𝐌𝐀𝐒 𝟐𝟓 𝐀𝐔𝐆𝐔𝐒𝐓, 𝟐𝟎𝟐𝟑 pic.twitter.com/YGSOBNW80t

— Raj B Shetty (@RajbShettyOMK)

ರಾಜ್ ಬಿ ಶೆಟ್ಟಿಗೆ ಜೋಡಿಯಾದ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಅಪರ್ಣಾ; ಯಾವ ಸಿನಿಮಾ, ಏನ್ ಕಥೆ? ಇಲ್ಲಿದೆ ವಿವರ

ರಾಜ್ ಬಿ ಶೆಟ್ಟಿ ಕೊನೆಯದಾಗಿ ತುರ್ತು ನಿರ್ಗಮನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಸ್ವಾತಿ ಮುತ್ತಿನ ಮಳೆ ಹನಿಯೇ ಮುಗಿಸಿರುವ ರಾಜ್ ಬಿ ಶೆಟ್ಟಿ, ರಾಮನ ಅವತಾರ ಚಿತ್ರ ಕೂಡ ಕೈಯಲ್ಲಿದೆ. ಜೊತೆಗೆ ಮಲಯಾಳಂ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಇದೀಗ ಟೋಬಿ ಸಿನಿಮಾದಲ್ಲಿ ನಿರತರಾಗಿದ್ದಾರೆ. 

click me!