ಅಭಿಷೇಕ್-ಅವಿವಾ ದಂಪತಿಗೆ ಮೋದಿ ಪತ್ರ; ನವ ಜೋಡಿಗೆ ಶುಭಕೋರಿದ ಪ್ರಧಾನಿ

By Shruthi KrishnaFirst Published Jun 13, 2023, 12:28 PM IST
Highlights

ಜೂನ್ 5ರಂದು ದಾಂಪತ್ಯಕ್ಕೆ ಕಾಲಿಟ್ಟ ನಟ ಅಭಿಷೇಕ್ ಅಂಬರೀಷ್ ಮತ್ತು ಅವಿವಾ ದಂಪತಿಗೆ ಪ್ರಧಾನಿ ಮೋದಿ ಪತ್ರ ಬರೆದು ಶುಭಕೋರಿದ್ದಾರೆ. 

ದಾಂಪತ್ಯ ಜೀವನಕ್ಕೆ ಕಾಲಿಟ್ಟ ರೆಬಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಜೋಡಗೆ ಪ್ರಧಾನಿ ಮೋದಿ ಶುಭಾಶಯ ತಿಳಿಸಿದ್ದಾರೆ. ಪತ್ರದ ಮೂಲಕ ನವ ಜೋಡಿಗೆ ಮೋದಿ ವಿಶ್ ಮಾಡಿದ್ದಾರೆ. ಮೋದಿ ಶುಭಕೋರಿರುವ ಪತ್ರ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಅವಿವಾ ಮತ್ತು ಅಭಿಷೇಕ್ ಅಂಬರೀಷ್ ಕಳೆದ 5 ವರ್ಷಗಳಿಂದ ಪ್ರೀತಿಯಲ್ಲಿದ್ದರು. ಜೂನ್ 5ರಂದು ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬೆಂಗಳೂರಿನ ಅರಮನೆ ಮೈದಾನದ ಚಾಮರವಜ್ರದಲ್ಲಿ ಇಬ್ಬರೂ ಅದ್ದೂರಿಯಾಗಿ ವಿವಾಹವಾದರು. ಅಭಿ-ಅವಿವಾ ಮದುವೆಗೆ ಅನೇಕ ಗಣ್ಯರು ಆಗಮಿಸಿ ಶುಭಹಾರೈಸಿದರು. ಜೂನ್ 5ರಂದು ದಾಂಪತ್ಯ ಕಾಲಿಟ್ಟ ಅವಿವಾ ಮತ್ತು ಅಭಿಷೇಕ್ ಜೂನ್ 7ರಂದು ಅದ್ದೂರಿ ಆರತಕ್ಷತೆ ಮಾಡಿಕೊಂಡರು.

ಮೋದಿ ಪತ್ರ

ನವ ಜೋಡಿಗೆ ಪ್ರಧಾನಿ ಮೋದಿ ಶುಭಾಶಯ ಕೋರಿದ್ದಾರೆ. 'ನನ್ನನ್ನು ಈ ಸುಂದರ ಸಮಾರಂಭಕ್ಕೆ ಆಹ್ವಾನ ಮಾಡಿದ್ದಕ್ಕೆ ಧನ್ಯವಾದಗಳು. ಹೊಸ ಪಯಣ ಪ್ರಾರಂಭಿಸಿರುವ ಅಭಿಷೇಕ್ ಮತ್ತು ಅವಿವಾ ಜೀವನ ಸಮೃದ್ಧಿ ಮತ್ತು ಅದ್ಭುತವಾಗಿರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಇಬ್ಬರೂ ಸಂತೋಷದಿಂದ ಇರಲಿ ಎಂದು ಶುಭಕೋರುತ್ತೇನೆ. ಕುಟುಂಬಕ್ಕೆ, ಸ್ನೇಹಿತರು ಹಾಗೂ ಆಪ್ತರಿಗೆ ಒಳ್ಳೆಯದಾಗಲಿ' ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 
 
ಅಭಿಷೇಕ್ ಮತ್ತು ಅವಿವಾ ಜೋಡಿ ಜೂನ್ 7ರಂದು ಅದ್ದೂರಿಯಾಗಿ ಆರತಕ್ಷತೆ ಮಾಡಿಕೊಂಡರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅದ್ದೂರಿ ಆರತಕ್ಷತೆ ಸಮಾರಂಭದಲ್ಲಿ ಅನೇಕ ಗಣ್ಯರು ಹಾಜರಿದ್ದರು. ಸ್ಯಾಂಡಲ್ ವುಡ್, ಬಾಲಿವುಡ್, ಟಾಲಿವುಡ್ ಸೇರಿದಂತೆ ಅನೇಕರು ಭಾಗಿಯಾಗಿ ನವ ಜೋಡಿಗೆ ಶುಭಹಾರೈಸಿದರು. ಆರತಕ್ಷತೆ ಬಳಿಕ ಚಿತ್ರರಂಗದವರಿಗಾಗಿ ಅಭಿಷೇಕ್ ಅದ್ದೂರಿ ಪಾರ್ಟಿ ಹಮ್ಮಿಕೊಂಡಿದ್ದರು. ಇದೀಗ ಮಂಡ್ಯದಲ್ಲಿ ಬೀಗರೂಟಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ.    

ಮಗನ ಸಂಗೀತ್ ಕಾರ್ಯಕ್ರಮಕ್ಕೆ ವಜ್ರದ ನೆಕ್ಲೇಸ್ ಧರಿಸಿದ ಸುಮಲತಾ ಅಂಬರೀಶ್!

ಮೋದಿ ಕಾರ್ಯಕ್ರಮ ನಡೆದಿದ್ದ ಜಾಗದಲ್ಲೇ ಬೀಗರೂಟ

ಮಂಡ್ಯದಲ್ಲಿ ಅಭಿಷೇಕ್  ಮತ್ತು ಅವಿವಾ ಮದುವೆಯ ಬೀಗರ ಔತಣಕ್ಕೆ ಭರ್ಜರಿ ಸಿದ್ದತೆ ನಡೆಯುತ್ತಿದೆ. ಪ್ರಧಾನಿ ಮೋದಿ ಕಾರ್ಯಕ್ರಮ ನಡೆದಿದ್ದ ಜಾಗದಲ್ಲೇ ಬಾಡೂಟ ಆಯೋಜನೆ ಮಾಡಲಾಗುತ್ತಿದೆ. ಮಂಡ್ಯ ಜಿಲ್ಲೆ ಮದ್ದೂರು ತಾ ಗೆಜ್ಜಲಗೆರೆ ಕಾಲೋನಿ ಬಳಿ ಕಾರ್ಯಕ್ರಮ ನಡೆಯುತ್ತಿದೆ. ಇದೇ ಸ್ಥಳದಲ್ಲಿ ಪ್ರಧಾನಿ ಮೋದಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉದ್ಘಾಟಿಸಿದ್ದರು. ಅದೇ ಜಾಗದಲ್ಲಿ ಜೂನ್ 16 ಶುಕ್ರವಾರ ಅದ್ದೂರಿಯಾಗಿ ಬೀಗರೂಟ ನಡೆಯುತ್ತಿದೆ. ಸುಮಾರು 15ಎಕರೆ ಪ್ರದೇಶದಲ್ಲಿ ಜರ್ಮನ್ ಟೆಂಟ್ ಹಾಕಿ ಊಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಸುಮಾರು 50 ಸಾವಿರಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆ ಇದೆ. ಸಿದ್ಧತೆ ನಡೆಯುತ್ತಿರುವ ಬಗ್ಗೆ ಅಂಬರೀಶ್ ಕುಟುಂಬದ ಆಪ್ತ ಹಾಗೂ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್‌ ಪರಿಶೀಲನೆ ನಡೆಸುತ್ತಿದ್ದಾರೆ. ಈವೇಳೆ ರಾಜ್ ಲೈನ್ ಜೊತೆ  ಅಂಬರೀಶ್ ಅಣ್ಣನ ಮಗ ಮದನ್, ಸುಮಲತಾ ಬೆಂಬಲಿಗರು ಭಾಗಿ‌ಯಾಗಿದ್ದರು. 

ಅಭಿಷೇಕ್-ಅವಿವಾ ಬೀಗರೂಟಕ್ಕೆ ಮಂಡ್ಯದಲ್ಲಿ ಭರ್ಜರಿ ಸಿದ್ದತೆ: ಬಾಡೂಟದ ಮೆನು ನೋಡಿದ್ರೆ ಬಾಯಲ್ಲಿ ನೀರು ಬರುತ್ತೆ

ಊಟದ ಮೆನು 

ಬೀಗರ ಊಟ ಅಂದ್ಮೇಲೆ ಭರ್ಜರಿ ಬಾಡೂಟ ಇರಲಿದೆ. ಅಭಿ ಮತ್ತು ಅವಿವಾ ಮದುವೆ ಬೀಗರೂಟ ಪಕ್ಕಾ ಮಂಡ್ಯ ಶೈಲಿಯಲ್ಲಿಯೇ ಇರಲಿದೆಯಂತೆ. ಸಂಪೂರ್ಣ ಮಂಡ್ಯ ಶೈಲಿಯಲ್ಲಿ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಮುದ್ದೆ, ಬೋಟಿ ಗೊಜ್ಜು, ಮಟನ್, ಚಿಕನ್, ಮೊಟ್ಟೆ, ಗೀ ರೈಸ್, ಅನ್ನ ತಿಳಿ ಸಾಂಬಾರ್, ಮಜ್ಜಿಗೆ, ಬೀಡಾ, ಐಸ್ ಕ್ರೀಂ ಮೆನು ಸೇರಿದಂತೆ ಇನ್ನೂ ಸಾಕಷ್ಟು ವೆರೈಟಿ ಇರಲಿದೆ. 

click me!