ಶಮಿಕಾ ಭೈರಾದೇವಿಗೆ ಕೊಟ್ಟ ಆಡಿಷನ್ ನೋಡಿ ಅತ್ತುಬಿಟ್ಟೆ... ಸಿನಿಮಾಕ್ಕೆ ಪುತ್ರಿ ಎಂಟ್ರಿಗೆ ರಾಧಿಕಾ ಹೇಳಿದ್ದೇನು?

By Suchethana D  |  First Published Sep 8, 2024, 2:24 PM IST

ರಾಧಿಕಾ ಕುಮಾರಸ್ವಾಮಿ ಪುತ್ರಿ ಶಮಿಕಾ ಸಿನಿಮಾಕ್ಕೆ ಎಂಟ್ರಿ ಕೊಡ್ತಾ ಇದ್ದಾರಾ? ಮಗಳ ಬಗ್ಗೆ ನಟಿ ಹೇಳಿದ್ದೇನು? 
 


ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ  ಪುತ್ರಿ ಶಮಿಕಾ ಕುಮಾರಸ್ವಾಮಿಗೆ ಈಗ 14 ವರ್ಷ ವಯಸ್ಸು. ಹಾಗೆ ನೋಡಿದ್ರೆ 2002ರಲ್ಲಿ ರಾಧಿಕಾ ಅವರು ಸುಮಾರು 15 ವರ್ಷ ವಯಸ್ಸಿನವರಾಗಿದ್ದಾರೆ ನಿನಗಾಗಿ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದ್ದರು. ಈಗ ನಟಿಗೆ 37 ವರ್ಷ ವಯಸ್ಸು. ಈಗಲೂ ಸಕತ್​ ಚಾರ್ಮಿಂಗ್​ ಆಗಿರೋ ರಾಧಿಕಾ ಅವರಿಗೆ ಎದುರಾಗುವ ಪ್ರಶ್ನೆ ಎಂದರೆ ಮಗಳು ಶಮಿಕಾಳನ್ನು ಚಿತ್ರರಂಗಕ್ಕೆ ಕರೆತರುತ್ತಾರಾ ಎನ್ನುವುದು. ಇದೀಗ ಅದರ ಬಗ್ಗೆ ನಟಿ ಮೌನ ಮುರಿದಿದ್ದಾರೆ. ಅವರ ಮುಂಬರುವ ಚಿತ್ರ ಭೈರಾದೇವಿ ಬಿಡುಗಡೆಗೆ ಸಿದ್ಧವಾಗಿರುವ ಬೆನ್ನಲ್ಲೇ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ನಟಿ ಮಗಳು ಚಿತ್ರರಂಗಕ್ಕೆ ಬರುವ ಕುರಿತು ಮಾತನಾಡಿದ್ದಾರೆ.  

ಮಗಳು ಶಮಿಕಾಳ ವಿಷಯದಲ್ಲಿ ನನಗೇನೂ ಟೆನ್ಷನ್ನೇ ಇಲ್ಲ. ನಾನು ಹೇಳಿದಂತೆ ಕೇಳ್ತಾಳೆ. ಡಾನ್ಸ್​ ಮಾಡು ಅಂದ್ರೆ ಮಾಡ್ತಾಳೆ, ಅಭ್ಯಾಸನೂ ಚೆನ್ನಾಗಿ ಮಾಡ್ತಾಳೆ, ನನಗೆ ಒಂದು ರೀತಿಯಲ್ಲಿ ಅವಳೇ ಅಮ್ಮ ಇದ್ದಹಾಗೆ. ಹೀಗೆ ಡ್ರೆಸ್​ ಮಾಡ್ಕೊ, ವೇಟ್​ ಲಾಸ್​ ಮಾಡ್ಕೋ ಎಂದೆಲ್ಲಾ ಹೇಳ್ತಾ ಇರ್ತಾಳೆ. ನನ್ನ ಆ್ಯಕ್ಟಿಂಗ್​ ಬಗ್ಗೆನೂ ಸಜೆಷನ್​ ಕೊಡ್ತಾನೇ ಇರ್ತಾಳೆ. ಹಾಗೆ ನೋಡಿದರೆ ಅವಳಿಗಿಂತ ನಾನೇ ಸ್ವಲ್ಪ ಹೆಚ್ಚು ತುಂಟಿ ಎಂದಿರೋ ರಾಧಿಕಾ, ಮಗಳಿಗೆ ಸಿನಿಮಾ ವಿಷಯದಲ್ಲಿ ಇರೋ ಅತ್ಯಾಸಕ್ತಿಯ ಬಗ್ಗೆ ಮಾತನಾಡಿದ್ದಾರೆ.

Tap to resize

Latest Videos

ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ರಾಧಿಕಾ ಕುಮಾರಸ್ವಾಮಿ? ಜಾತಕದ ಬಗ್ಗೆ ನಟಿ ಹೇಳಿದ್ದೇನು?

ಅವಳಿಗೆ ಸಿನಿಮಾ ಅಂದ್ರೆ ಸಕತ್​ ಇಷ್ಟ. ಭೈರಾದೇವಿಯಲ್ಲಿ ಅವಳೂ ನಟನೆ ಮಾಡಬೇಕಿತ್ತು. ಮಗಳಿಗೆ ಈ ಚಿತ್ರದಲ್ಲಿ ನಟಿಸಲು ಕೊಡ್ತೀರಾ ಎಂದು ನಿರ್ದೇಶಕರು ಕೇಳಿದ್ರು. ಅದ್ಯಾವುದೋ ಗುಂಗಿನಲ್ಲಿ ಓಕೆ ಅಂದುಬಿಟ್ಟೆ. ಅವಳ ಆಡಿಷನ್​ ಕೂಡ ನಡೆಯಿತು. ಸ್ಕ್ರಿಪ್ಟ್​ ಒಂದನ್ನು ಅವಳಿಗೆ ಕೊಟ್ಟಿದ್ದರು. ಅದು ಅಪ್ಪ ಮತ್ತು ಮಗಳ ನಡುವಿನ ಸೆಂಟಿಮೆಂಟ್​ ಸೀನ್​. ಅವಳು ಯಾವ ರೀತಿಯಲ್ಲಿ ಆಡಿಷನ್ ಕೊಟ್ಟಳು ಎಂದರೆ ನಾನೂ ಅತ್ತೇ ಬಿಟ್ಟೆ ಎಂದಿದ್ದಾರೆ ರಾಧಿಕಾ. ಸೆಂಟಿಮೆಂಟ್​ ದೃಶ್ಯಗಳಲ್ಲಿ ನಾನು ಸಾಮಾನ್ಯವಾಗಿ ಗಿಸರಿನ್​ ಬಳಸುವುದೇ ಇಲ್ಲ. ಶಮಿಕಾ ಕೂಡ ಗಿಜರಿನ್​ ಬಳಸದೇ ಭಾವುಕಳಾಗಿ ಕೊಟ್ಟ ಸ್ಕ್ರಿಪ್ಟ್​ಗೆ ಆ್ಯಕ್ಟ್​ ಮಾಡಿದಳು. ನನಗೆ ನಂಬಲು ಸಾಧ್ಯವೇ ಆಗಲಿಲ್ಲ. ಅವಳ ಆಡಿಷನ್​ ನೋಡಿ ಡೈರೆಕ್ಟರ್​ ಓಕೆ ಅಂದುಬಿಟ್ಟರು ಎನ್ನುತ್ತಲೇ ನಡೆದ ಘಟನೆಯನ್ನು ರಾಧಿಕಾ ವಿವರಿಸಿದ್ದಾರೆ.

ರಾತ್ರಿ ಕನಸಿನಲ್ಲಿಯೂ ಸಿನಿಮಾದ್ದ ಕನವರಿಕೆ ಮಾಡುತ್ತಿದ್ದಳು. ಸ್ಕ್ರಿಪ್ಟ್​ ಬಗ್ಗೆ ಯೋಚಿಸುತ್ತಿದ್ದಳು. ರಾತ್ರಿ ಎದ್ದು ಕುಳಿತು ನನ್ನ ಸ್ಕಿನ್​ ಟ್ಯಾನ್​ ಆಗಿದೆ, ಬೆಳ್ಳಗೆ ಮಾಡು ಎಂದೆಲ್ಲಾ ಹೇಳಲು ಶುರು ಮಾಡಿದಳು. ಈ ಪರಿಯಲ್ಲಿ ಅವಳು ಮಾಡ್ತಿರೋದನ್ನು ನೋಡಿ ನನಗೆ ಭಯ ಆಯ್ತು. ಓದಿನಲ್ಲಿ ಅವಳ ಆಸಕ್ತಿ ಕಡಿಮೆ ಆಗ್ತಿದೆ ಎನ್ನಿಸಿತು. ಸಿನಿಮಾನ್ನೆ ತುಂಬಾ ಹಚ್ಚಿಕೊಂಡುಬಿಟ್ಟಳು. ಈಗ ಶಿಕ್ಷಣ ಮುಖ್ಯ ಅಲ್ವಾ? ಆದರೆ ಇವಳು ಮಾಡ್ತಿರೋದು ನೋಡಿದ್ರೆ ಎಲ್ಲಿ ಶಿಕ್ಷಣಕ್ಕೆ ಹೊಡೆತ ಬೀಳುತ್ತೋ ಎಂದು ಗಾಬರಿಯಾಗಿ ನೇರವಾಗಿ ಡೈರೆಕ್ಟರ್​ಗೆ ಕಾಲ್​ ಮಾಡಿ ನೀವೇ ಹೇಗಾದ್ರೂ ಈ ಸಿನಿಮಾಕ್ಕೆ ಬರೋದು ಬೇಡ ಅಂತ ಹೇಳಿಬಿಡಿ, ನಾನು ಹೇಳೋದು ಕಷ್ಟ ಆಗತ್ತೆ ಅಂದೆ. ಡೈರೆಕ್ಟರ್​ ನನ್ನ ಮಾತನ್ನು ಒಪ್ಪಿ, ಈ ಸಿನಿಮಾ ಬೇಡ, ಮುಂದಿನದ್ದಕ್ಕೆ ತೆಗೆದುಕೊಳ್ಳೋಣ ಎಂದ್ರು. ಅದನ್ನು ಕೇಳಿದಾಗ ಇಡೀ ದಿನ ಅಪ್​ಸೆಟ್​ ಆದಳು. ನಾನು ಏನೋ ಒಂದು ಸುಳ್ಳು ಹೇಳಿ ಮ್ಯಾನೇಜ್​ ಮಾಡಿದೆ. ಶಿಕ್ಷಣ ಅಂತೂ ಅವಳು ಮುಗಿಸಲೇ ಬೇಕು. ಸದ್ಯ ಟೆನ್ನೀಸ್​ ಕಡೆಯೂ ಅವಳ ಒಲವು ಇದೆ. ಮುಂದೆ ಟೆನ್ನೀಸ್​ ಪ್ಲೇಯರ್​ ಆಗ್ತಾಳೋ, ಸಿನಿಮಾಕ್ಕೆ ಬರ್ತಾಳೋ ಅವಳಿಗೆ ಬಿಟ್ಟಿದ್ದು. ನಾನು ಯಾವುದಕ್ಕೂ ಫೋರ್ಸ್ ಮಾಡಲ್ಲ. ನನ್ನ ಅಪ್ಪ-ಅಮ್ಮನೂ ನನಗೆ ಫೋರ್ಸ್​ ಮಾಡಲಿಲ್ಲ. ಸೋ ಶಿಕ್ಷಣದ ಜೊತೆಗೆ ಅವಳು ಏನು ಮಾಡಿದ್ರೂ ಓಕೆ ಎಂದಿದ್ದಾರೆ ರಾಧಿಕಾ.

ಸಮಂತಾ ಎಸ್​ಎಸ್​ಎಲ್​ಸಿ ಅಂಕಪಟ್ಟಿ ವೈರಲ್​: ಇಂಥ ದಾಖಲೆ ಮನುಷ್ಯರಿಂದ ಸಾಧ್ಯನೇ ಇಲ್ಲ ಬಿಡಿ! ಅಷ್ಟಕ್ಕೂ ಆಗಿರೋದೇನು?

click me!