ಸಂಬಳ ಅಂತ 750 ರೂ. ಕೊಡುತ್ತಿದ್ದರು, ಖರ್ಚು ಮಾಡೋಕೆ ಲವ್ ಮಾಡ್ಬೇಕಾ?; ರಚಿತಾ ರಾಮ್‌ ಮಾತಿಗೆ ಫ್ಯಾನ್ಸ್ ಶಾಕ್

Published : Apr 07, 2025, 03:34 PM ISTUpdated : Apr 07, 2025, 03:35 PM IST
ಸಂಬಳ ಅಂತ 750 ರೂ. ಕೊಡುತ್ತಿದ್ದರು, ಖರ್ಚು ಮಾಡೋಕೆ ಲವ್ ಮಾಡ್ಬೇಕಾ?; ರಚಿತಾ ರಾಮ್‌ ಮಾತಿಗೆ ಫ್ಯಾನ್ಸ್ ಶಾಕ್

ಸಾರಾಂಶ

ನಟಿ ರಚಿತಾ ರಾಮ್ ತಮ್ಮ ಮೊದಲ ಧಾರಾವಾಹಿ 'ಅರಸಿ'ಯಲ್ಲಿ ದಿನಕ್ಕೆ 750 ರೂಪಾಯಿ ಸಂಭಾವನೆ ಪಡೆಯುತ್ತಿದ್ದ ಬಗ್ಗೆ ಬಹಿರಂಗಪಡಿಸಿದ್ದಾರೆ. ದುಡಿದ ನಂತರ ಹಣದ ಬೆಲೆ ತಿಳಿಯುತ್ತದೆ ಎಂದಿದ್ದಾರೆ. ಮೊದಲ ಸಂಭಾವನೆಯ ಚೆಕ್ ಅನ್ನು ಇನ್ನೂ ಉಳಿಸಿಕೊಂಡಿದ್ದಾರೆ. ಪ್ರೀತಿಯಲ್ಲಿ ದುಡ್ಡು ಖರ್ಚು ಮಾಡಬಾರದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂದು ಅವರು ಕನ್ನಡದ ಬೇಡಿಕೆಯ ನಟಿಯಾಗಿದ್ದಾರೆ.

ಸ್ಯಾಂಡಲ್‌ವುಡ್‌ ಡಿಂಪಲ್ ಕ್ವೀನ್ ರಚಿತಾ ರಾಮ್ ಮೊದಲು ಬಣ್ಣ ಹಚ್ಚಿದ್ದು ಯಾವಾಗ? ಮೊದಲ ಸೀರಿಯಲ್ ಯಾವುದು? ಮೊದಲ ಸಂಭಾವನೆ ಎಷ್ಟು? ರಚಿತಾ ರಾಮ್ ಪ್ರೀತಿಯಲ್ಲಿ ಬಿದ್ದಿದ್ದಾರಾ? ಹೀಗೆ ಸಾಕಷ್ಟು ಪ್ರಶ್ನೆಗಳು ಅಭಿಮಾನಿಗಳಿಗೆ ಇರುತ್ತದೆ. ಸುಮಾರು 10+ ವರ್ಷದ ಜರ್ನಿಯಲ್ಲಿ ಇದೇ ಮೊದಲು ರಚಿತಾ ರಾಮ್ ತಮ್ಮ ಸಂಭಾವನೆ ಎಷ್ಟು ಇತ್ತು ಎಂದು ರಿವೀಲ್ ಮಾಡಿದ್ದಾರೆ. ಅಷ್ಟೇ ಅಲ್ಲ ಹಣದ ಪ್ರಾಮುಖ್ಯತೆಯನ್ನು ತಿಳಿಸಿ ಕೊಟ್ಟಿದ್ದಾರೆ. 

ಹೌದು! ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್ ಸೀಸನ್ 2ರಲ್ಲಿ ರಚಿತಾ ರಾಮ್ ಮತ್ತು ರವಿಚಂದ್ರನ್ ತೀರ್ಪುಗಾರರು. ಹೀಗೆ ಸ್ಕಿಟ್‌ ಒಂದರ ಬಗ್ಗೆ ಚರ್ಚೆ ಮಾಡುವಾಗ ಹಣ ಎಷ್ಟು ಮುಖ್ಯ ಎಂದು ರಚ್ಚು ಚರ್ಚೆ ಮಾಡಿದ್ದಾರೆ.'ನಾವು ದುಡಿಯುವುದಕ್ಕೆ ಶುರು ಮಾಡುವುದಕ್ಕಿಂತ ಮುಂಚೆ ಹಣದ ಬೆಲೆ ಗೊತ್ತಿರುವುದಿಲ್ಲ. ದುಡಿಯಲು ಶುರು ಮಾಡಿದ ಮೇಲೆ ಅದರ ಒಂದೊಂದು ರೂಪಾಯಿಯ ಬೆಲೆನೂ ಅರ್ಥವಾಗಲು ಶುರುವಾಗುತ್ತದೆ. ಪ್ರತಿಯೊಬ್ಬರಿಗೂ ದುಡ್ಡಿನ ಬೆಲೆ ತುಂಬಾನೇ ಚೆನ್ನಾಗಿ ಅರ್ಥವಾಗಲು ಶುರುವಾಗುತ್ತದೆ. ಕಡಿಮೆ ಹಣ ಇರಲಿ ಜಾಸ್ತಿ ಹಣ ಇರಲಿ ಅರ್ಥವಾಗುತ್ತದೆ ಏಕೆಂದರೆ ನನಗೆ ತುಂಬಾ ಚೆನ್ನಾಗಿ ಅರ್ಥವಾಗಿದೆ. ನನ್ನ ಮೊದಲ ಕೆಲಸವೇ ಅರಸಿ ಧಾರಾವಾಹಿ ಅದರಿಂದ ಬಂದ ಹಣವೇ ನನ್ನ ಮೊದಲ ಪೇಮೆಂಟ್ ಆಗಿತ್ತು. ಸೀರಿಯಲ್‌ನಲ್ಲಿ ನನಗೆ ದಿನಕ್ಕೆ 750 ರೂಪಾಯಿಗಳನ್ನು ಕೊಡುತ್ತಿದ್ದರು...ತಿಂಗಳ ಪೇಮೆಂಟ್ ಇದ್ದ ಕಾರಣ ನನಗೆ ಚೆಕ್ ಕೊಡುತ್ತಿದ್ದರು' ಎಂದು ರಚಿತಾ ರಾಮ್ ಮಾತನಾಡಿದ್ದಾರೆ.

ಅಕ್ಕಾ...ಏನ್ ನಿನ್ನ ಸ್ಟೈಲು, ಸ್ಮೈಲು...; ಚೈತ್ರಾ ಕುಂದಾಪುರ ಅವತಾರ ನೋಡಿ

'ನನ್ನ ಮೊದಲ ಪೇಮೆಂಟ್‌ ಚೆಕ್ ಈಗಲೂ ಫೈಲ್ ಮಾಡಿದ್ದೀನಿ ಏಕೆಂದರೆ ಅದನ್ನು ಬ್ಯಾಂಕ್‌ಗೆ ಹಾಕಲಿಲ್ಲ ಒಂದು ಸೆಂಟಿಮೆಂಟ್ ಇದೆ ದಯವಿಟ್ಟು ಪೇಮೆಂಟ್ ಕೈಗೆ ಕೊಡಿ ಎಂದು ಕೇಳಿದೆ. ಪಾಪ ಹಾಗೆ ಕೊಟ್ರು. ಪ್ರತಿಯೊಬ್ಬರ ಜೀವನದಲ್ಲಿ ಈ ಅನುಭವ ಆಗಿರುತ್ತದೆ. ಪ್ರಾಮಾಣಿಕವಾಗಿ ಹೇಳುತ್ತೀನಿ ಪ್ರೀತಿಯಲ್ಲಿ ದುಡ್ಡು ಖರ್ಚು ಮಾಡಬಾರದು. ಖರ್ಚು ಮಾಡುವುದಕ್ಕೆ ಲವ್ ಮಾಡ್ಬೇಕಾ?' ಎಂದು ರಚಿತಾ ರಾಮ್ ಹೇಳಿದ್ದಾರೆ. ಮೊದಲ ಸೀರಿಯಲ್ ಮಾಡುವಾಗ ನಿಜಕ್ಕೂ ನಾನು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುತ್ತೀನಿ, ಲೇಡಿ ಸೂಪರ್ ಸ್ಟಾರ್ ಪಟ್ಟ ಗಿಟ್ಟಿಸಿಕೊಳ್ಳುತ್ತೀನಿ ಅನ್ನೋ ಕಲ್ಪನೆ ಕೂಡ ಇರಲಿಲ್ಲ ಅನಿಸುತ್ತದೆ. ಇಂದು ಕೈ ತುಂಬಾ ಸಿನಿಮಾ ಆಫರ್, ರಿಯಾಲಿಟಿ ಶೋಗಲ್ಲಿ ಜಡ್ಜ್‌ ಸ್ಥಾನಕ್ಕೆ ಡಿಮ್ಯಾಂಡ್ ಹಾಗೂ ಲೆಕ್ಕವಿಲ್ಲದಷ್ಟು ಜಾಹೀರಾತುಗಳಲ್ಲಿ ರಚ್ಚು ಮಿಂಚುತ್ತಿದ್ದಾರೆ. ಅಲ್ಲದೆ ಅಯ್ಯೋಗ -2 ಚಿತ್ರಕ್ಕೆ 1 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿ ಅಂದ್ರೆ ತಪ್ಪಾಗದು. 

ವಿಜಯಲಕ್ಷ್ಮಿ ದರ್ಶನ್ ಈಗ ಖುಷಿಯಾಗಿ ಜೀವನ ನಡೆಸುತ್ತಿದ್ದಾರೆ, ಅಕ್ಕಪಕ್ಕದವರೇ ನಗುವ ಕಾಲವಿದು: ಕಾರುಣ್ಯ ರಾಮ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜನವರಿ 22ರಂದು ಪುನೀತ್ ರಾಜ್‌ಕುಮಾರ್ ದೇಗುಲ, ಕಂಚಿನ ಪ್ರತಿಮೆ ಲೋಕಾರ್ಪಣೆ
Karunya Ram Sister Case: ಒಡಹುಟ್ಟಿದ ತಂಗಿ ವಿರುದ್ಧವೇ ಪೊಲೀಸ್‌ ಠಾಣೆ ಮೆಟ್ಟಿಲೇರಿದ ನಟಿ ಕಾರುಣ್ಯಾ ರಾಮ್