ಯಾಕೆ ರಾಷ್ಟ್ರಪತಿಯನ್ನೂ ತಲುಪಲಿದೆ 'ಯುದ್ಧ ಕಾಂಡ'..?ಈ ಬಗ್ಗೆ ಅಜೇಯ್ ರಾವ್ ಹೇಳಿದ್ದೇನು..?

Published : Apr 07, 2025, 01:01 PM ISTUpdated : Apr 07, 2025, 01:29 PM IST
ಯಾಕೆ ರಾಷ್ಟ್ರಪತಿಯನ್ನೂ ತಲುಪಲಿದೆ 'ಯುದ್ಧ ಕಾಂಡ'..?ಈ ಬಗ್ಗೆ ಅಜೇಯ್ ರಾವ್ ಹೇಳಿದ್ದೇನು..?

ಸಾರಾಂಶ

'ಯುದ್ಧ ಕಾಂಡ' ತೀರಾ ಕಡಿಮೆ ಬಜೆಟ್ ಅಥವಾ ತೀರಾ ಹೆವಿ ಬಜೆಟ್ ನ ಚಿತ್ರವಲ್ಲ. ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣವಾಗಿರುವ ಚಿತ್ರ. ಇಂತಹ ಚಿತ್ರಗಳು ಹೆಚ್ಚಾಗಿ ಜನರನ್ನು ತಲುಪಬೇಕು. ಉತ್ತಮ..

ಶ್ರೀಕೃಷ್ಣ ಆರ್ಟ್ಸ್ & ಕ್ರಿಯೇಷನ್ಸ್ ಲಾಂಛನದಲ್ಲಿ ಅಜೇಯ್ ರಾವ್ ನಿರ್ಮಿಸಿ, ನಾಯಕನಾಗಿ ನಟಿಸಿರುವ 'ಯುದ್ಧಕಾಂಡ' ಚಿತ್ರ ಏಪ್ರಿಲ್ 18 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು. 

'ಯುದ್ಧಕಾಂಡ'  ಪ್ರತಿಯೊಬ್ಬ ಮಹಿಳೆಯು ನೋಡಲೇ ಬೇಕಾದ ಚಿತ್ರ.  ಮಹಿಳೆಯರ ಮೇಲೆ ಯಾವ ರೀತಿಯ ದೌರ್ಜನ್ಯಗಳು ನಡೆಯುತ್ತಿವೆ ಎಂದು ತೋರಿಸುತ್ತಿರುವ ಚಿತ್ರವೂ ಹೌದು. ನೊಂದ ಮಹಿಳೆಯರನ್ನು ಪ್ರತಿನಿಧಿಸುವ  ಪಾತ್ರವನ್ನು ಅರ್ಚನಾ ಜೋಯಿಸ್ ಅದ್ಭುತವಾಗಿ ನಿಭಾಯಿಸಿದ್ದಾರೆ. ಪವನ್ ಭಟ್ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಹಿರಿಯ ನಟರಾದ ಟಿ.ಎಸ್ ನಾಗಾಭರಣ, ಪ್ರಕಾಶ್ ಬೆಳವಾಡಿ ಮುಂತಾದವರು ನಟಿಸಿದ್ದಾರೆ. 

ಶ್ರೀಲೀಲಾರನ್ನು ಅಲ್ಲೊಬ್ಬ ಎಳೆದರೂ ಕಾರ್ತಿಕ್ ಆರ್ಯನ್‌ಗೆ ಗೊತ್ತಾಗ್ಲಿಲ್ಲ; ಫ್ಯಾನ್ಸ್ ಕೆಂಡಾಮಂಡಲ!

ಬೇಬಿ ರಾದ್ಯ ಸಹ ಈ ಚಿತ್ರದಲ್ಲಿದ್ದಾರೆ. ಇದೊಂದು ಸಾಮಾಜಿಕ ಕಳಕಳಿಯುಳ್ಳ ಚಿತ್ರವಾಗಿದೆ. 'ಯುದ್ಧ ಕಾಂಡ' ತೀರಾ ಕಡಿಮೆ ಬಜೆಟ್ ಅಥವಾ ತೀರಾ ಹೆವಿ ಬಜೆಟ್ ನ ಚಿತ್ರವಲ್ಲ. ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣವಾಗಿರುವ ಚಿತ್ರ. ಇಂತಹ ಚಿತ್ರಗಳು ಹೆಚ್ಚಾಗಿ ಜನರನ್ನು ತಲುಪಬೇಕು. ಉತ್ತಮ ಸಂದೇಶವಿರುವ ಈ ಚಿತ್ರವನ್ನು ರಾಷ್ಟ್ರಪತಿಗಳಿಗೂ ತೋರಿಸುವ ಯೋಚನೆ ಇದೆ. ಏಪ್ರಿಲ್ 18 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಸಹಕಾರವಿರಲಿ ಎಂದರು ನಿರ್ಮಾಪಕ & ನಾಯಕ ಅಜೇಯ್ ರಾವ್‌.

'ಯುದ್ಧ ಕಾಂಡ' 2022ರಲ್ಲೇ ಬರೆದ ಕಥೆ. ಈ ಕಥೆಯಲ್ಲಿ ಎಲ್ಲಾ ಪಾತ್ರಗಳು ಪ್ರಮುಖ ಪಾತ್ರಗಳೆ. ಈ ರೀತಿ ಕಥೆಯನ್ನು ನಿರ್ಮಾಪಕರು ಒಪ್ಪುತ್ತಾರೊ, ಇಲ್ಲವೊ? ಎಂಬ ಸಂಶಯದಿಂದ ಕಥೆ ಯಾರಿಗೂ ಹೇಳಿರಲಿಲ್ಲ‌. ಅನಂತರ ಕಥೆ ಕೇಳಿದ ಅಜೇಯ್ ರಾವ್ ಅವರು ನಿರ್ಮಾಣಕ್ಕೆ ಮುಂದಾದರು. ಚಿತ್ರಕಥೆ ಕೂಡ ಅಜೇಯ್ ರಾವ್ ಅವರದೆ‌. ಇನ್ನು, ಇದೊಂದು ಕೋರ್ಟ್ ರೂಮ್ ಡ್ರಾಮ. ನಾಗಾಭರಣ, ಪ್ರಕಾಶ್ ಬೆಳವಾಡಿ ಅವರಂತಹ ಅನುಭವಿ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. 

Vijay Deverakonda: ಹೋರಾಟದ ಕಥೆ ಸೀಕ್ರೆಟ್ ಬಯಲಾಯ್ತು.. 'ಎಲ್ಲಿಗೆ ಹೋಗಲಿ, ಯಾರನ್ನು ಕೇಳಲಿ'...?

ಕಾರ್ತಿಕ್ ಶರ್ಮ ಛಾಯಾಗ್ರಹಣ, ಹೇಮಂತ್ ಜೋಯಿಸ್, ಕೆ ಬಿ ಪ್ರವೀಣ್ ಸಂಗೀತ ನಿರ್ದೇಶನ ಹಾಗೂ ಶ್ರೀ ಕ್ರೇಜಿ ಮೈಂಡ್ಸ್ ಅವರ ಸಂಕಲನ 'ಯುದ್ಧ ಕಾಂಡ' ಚಿತ್ರಕ್ಕಿದೆ ಎಂದರು ನಿರ್ದೇಶಕ ಪವನ್ ಭಟ್. 'ಯುದ್ಧಕಾಂಡ' ಚಿತ್ರದಲ್ಲಿ ಅನ್ಯಾಯದಿಂದ ನೊಂದ ಹೆಣ್ಣನ್ನು ಪ್ರತಿನಿಧಿಸುವ ಪಾತ್ರ ನನ್ನದು . ಪವನ್ ಭಟ್ ಅವರ ಕಥೆ ಚೆನ್ನಾಗಿದೆ ಎಂದು ನಟಿ ಅರ್ಚನಾ ಜೋಯಿಸ್ ತಿಳಿಸಿದರು. 

ನ್ಯಾಯಾಧೀಶರ ಪಾತ್ರದಲ್ಲಿ ಅಭಿನಯಿಸಿರುವುದಾಗಿ ತಮ್ಮ ಪಾತ್ರದ ಬಗ್ಗೆ ವಿವರಿಸಿದ ಟಿ.ಎಸ್ ನಾಗಾಭರಣ,‌ 'ಯುದ್ಧ ಕಾಂಡ' ಎಲ್ಲರಿಗೂ ಪ್ರಿಯವಾಗುವ ಚಿತ್ರವಾಗಲಿದೆ ಎಂಬ ಭರವಸೆ ನಮ್ಮ ತಂಡಕ್ಕಿದೆ ಎಂದರು. ನಾನು ಹೆಚ್ಚಾಗಿ ಚಿತ್ರಗಳಲ್ಲಿ ನಟಿಸುತ್ತಿಲ್ಲ. ಅಜೇಯ್ ರಾವ್ ಅವರು ಈ ಚಿತ್ರದ ಕಥೆ ಬಗ್ಗೆ ಹೇಳಿದಾಗ ನಟಿಸಲು ಒಪ್ಪಿಕೊಂಡೆ. ನನ್ನದು ಈ ಚಿತ್ರದಲ್ಲಿ ವಕೀಲನ ಪಾತ್ರ ಎಂದು ಪ್ರಕಾಶ್ ಬೆಳವಾಡಿ ಹೇಳಿದರು. ಸಂಕಲನಕಾರ ಶ್ರೀ ಕ್ರೇಜಿ ಮೈಂಡ್ಸ್  ಮತ್ತು ತಂಡದ ಇತರೆ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಗಾಸಿಪ್‌ ಸುಳ್ಳು... ಅಲ್ಲು ಅರ್ಜುನ್-ಅಟ್ಲಿ ಚಿತ್ರದಲ್ಲಿ ಇಲ್ಲ ಪ್ರಿಯಾಂಕಾ, ಸಲ್ಲೂ ಚಿತ್ರದಲ್ಲೂ ನೋ..!?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?