ಒಂದೇ ಮನೆಯಲ್ಲಿ ಇಬ್ರು ರಕ್ಷಿತಾ; ಅವಳ ಹೆಸರಲ್ಲಿ ಇವಳನ್ನ ಕೂಗ್ಬುಟ್ಟು ಜೀವಂತ ಉಳ್ಕೊಂತಾರಾ ಜೋಗಿ ಪ್ರೇಮ್‌?

By Vaishnavi Chandrashekar  |  First Published Nov 25, 2024, 12:04 PM IST

ರಾಣಾ ಮತ್ತು ರಕ್ಷಿತಾ ಮದುವೆ ಫೆಬ್ರವರಿಯಲ್ಲಿ.....ಮನೆಯಲ್ಲಿ ಇಬ್ಬರ ಹೆಸರು ಒಂದೇ ಇದ್ರೆ ಕನ್ಫ್ಯೂಸ್ ಆಗಲ್ವಾ ಮನೆ ಮಂದಿ?


ಏಕ್ ಲವ್ ಯಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಾಣಾ ತಮ್ಮ ಬಹುಕಾಲದ ಗೆಳತಿ ರಕ್ಷತಾ ಜೊತೆ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮನೆಯಲ್ಲಿ ನಡೆದಿರುವ ಸರಳ ಶಾಸ್ತ್ರದ ಫೋಟೋವನ್ನು ಸಹೋದರಿ ರಕ್ಷಿತಾ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು. ಫೋಟೋ ವೈರಲ್ ಆಗುತ್ತಿದ್ದಂತೆ ಜನರಿಗೆ ರಕ್ಷಿತಾ ಹೆಸರು ಸಿಕ್ಕಾಪಟ್ಟೆ ಕನ್ಫ್ಯೂಷನ್ ಕ್ರಿಯೇಟ್ ಮಾಡಿದೆ. ಈಗ ರಾಣಾ ಮತ್ತು ಜೋಗಿ ಪ್ರೇಮ್ ಪರಿಸ್ಥಿತಿಯನ್ನು ನೆನೆಪಿಸಿಕೊಂಡು ನೆಟ್ಟಿಗರು ಅಯ್ಯೋ ಪಾಪ ಎನ್ನುತ್ತಿದ್ದಾರೆ.

ರಕ್ಷಿತಾ- ರಾಣಾ ಭೇಟಿ ಎಲ್ಲಿ?

Tap to resize

Latest Videos

'ಏಕ್‌ ಲವ್ ಯಾ ಚಿತ್ರಕ್ಕೆ ತಯಾರಿ ಮಾಡಿಕೊಳ್ಳುತ್ತಿರುವಾಗ ನಾನು ನನ್ನ ಸ್ನೇಹಿತೆ ಆಕಾಂಕ್ಷಾ ಕೆಫೆಗೆ ಭೇಟಿ ನೀಡುತ್ತಿದ್ದೆ. ಅಲ್ಲಿ ರಕ್ಷಿತಾ ನನ್ನ ಕಣ್ಣಿಗೆ ಬಿದ್ದಿದ್ದು..ಅದು ಲವ್ ಅಟ್‌ ಫಸ್ಟ್‌ ಸೈಟ್‌ ಆಯ್ತು...ಆಕೆಯ grace ಮತ್ತು poise ನನಗೆ ತುಂಬಾ ಇಷ್ಟವಾಗಿತ್ತು. ಆಕೆಗೂ ನನ್ನ ಮೇಲೆ ಕಣ್ಣು ಇತ್ತು. ರಿಲೇಷನ್‌ಶಿಪ್‌ನಲ್ಲಿ ಎರಡು ವರ್ಷ ದಾಟುತ್ತಿದ್ದಂತೆ ಒಬ್ಬರನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಶುರು ಮಾಡುತ್ತೀವಿ ಈ 7 ವರ್ಷದ ಜರ್ನಿಯಲ್ಲಿ ಒಬ್ಬರನೊಬ್ಬರು ಬೆಳೆಯುವುದನ್ನು ನೋಡಿದ್ದೀವಿ.ಮದುವೆ ವಿಚಾರದಲ್ಲಿ ಮನೆಯವರು ಒತ್ತಾಯ ಮಾಡಿದ್ದಕ್ಕೆ ನಾವು ನಿರ್ಧರಿಸಿದ್ದು. ಸ್ನೇಹಿತರಾದ ಮೇಲೆ ಡೇಟಿಂಗ್ ಶುರು ಮಾಡಿದ್ದ ಕಾರಣ ನಾವು ಈಗಲೂ ಸ್ನೇಹಿತರೇ ' ಎಂದು ಟೈಮ್ಸ್‌ ಆಫ್‌ ಇಂಡಿಯಾ ಸಂದರ್ಶನದಲ್ಲಿ ರಾಣಾ ಮಾತನಾಡಿದ್ದಾರೆ.

ವಾಸುಕಿ ವೈಭವ್‌ನ ಕೂಸುಮರಿ ಮಾಡಿದ ಪತ್ನಿ; ಆನಿವರ್ಸರಿ ಫೋಟೋ ವೈರಲ್

'ರಾಣಾ ಮತ್ತು ರಕ್ಷಿತಾ ತುಂಬಾ ಚೆನ್ನಾಗಿ ವೈಬ್ ಮಾಡುತ್ತಾರೆ ಹೀಗಾಗಿ ಅವರ ಜೋಡಿ ಪರ್ಫೆಕ್ಟ್‌ ಆಗಿದೆ. ನನ್ನ ಸಹೋದರನಿಗಿಂತ ಆಕೆ ತುಂಬಾ ಅರ್ಥ ಮಾಡಿಕೊಳ್ಳುವ ವ್ಯಕ್ತಿ. ಒಬ್ಬರು ಒಟ್ಟಿಗೆ ಜೀವನ ಕಟ್ಟಿಕೊಳ್ಳುವುದನ್ನು ನೋಡಲು ಖುಷಿಯಾಗುತ್ತಿದೆ. ಸಹೋದರಿಯಾಗಿ ನನಗೆ ಅನಿಸುತ್ತದೆ ಆತ ಒಳ್ಳೆ ನಿರ್ಧಾರ ತೆಗೆದುಕೊಂಡಿದ್ದಾನೆ ಎಂದು...ಈಗ ಜನರೇಷನ್‌ ಮಂದಿ ತುಂಬಾ ಮೆಚ್ಯೂರ್ ಆಗಿರುತ್ತಾರೆ ಅಲ್ಲದೆ ಆಕೆ ಸಿಕ್ಕಾಪಟ್ಟೆ ಇಂಡಿಪೆಂಡೆಂಟ್‌ ಮಹಿಳೆ. ಮದುವೆ ಅಂದ್ರೆ ಒಬ್ಬರನೊಬ್ಬರು ಸಮನಾಗಿ ನೋಡಿಕೊಂಡು ಪ್ರೀತಿಸುವುದು' ಎಂದು ರಕ್ಷತಾ ಸಂತಸ ವ್ಯಕ್ತ ಪಡಿಸಿದ್ದಾರೆ.

ಜೈಲಿನಲ್ಲಿ 'ಬಾಸ್‌' ಗುಣಗಾನ ಮಾಡಿದ ರಜತ್ ಕಿಶನ್; ವೀಕ್ಷಕರ ತಲೆಗೆ ಹೊಳೆದಿದ್ದೇ ಬೇರೆ ಬಾಸ್?

ಈಗ ಮನೆಯಲ್ಲಿ ಇಬ್ಬರಿಗೆ ಒಂದೇ ಹೆಸರು ಇದ್ದರೆ ಯಾರು ಯಾರನ್ನು ಕರೆಯುತ್ತಿದ್ದಾರೆ ಅನ್ನೋ ಕನ್ಫ್ಯೂಷನ್ ಕ್ರಿಯೇಟ್ ಆಗುವುದು ತುಂಬಾನೇ ಕಾಮನ್. ಈಗ ರಾಣಾ ರಕ್ಷಿತಾ ಅಂದ್ರೆ ಅಕ್ಕ ತಿರುಗಿ ನೋಡುತ್ತಾಳಾ ಇಲ್ಲ ಹೆಂಡತಿ ತಿರುಗಿ ನೋಡುತ್ತಾಳ ಅನ್ನೋದು ಒಂದು ಕನ್ಫ್ಯೂಶನ್ ಆದರೆ ಜೋಗಿ ಪ್ರೇಮ್ ರಕ್ಷಿತಾ ಅಂತ ಕರೆದರೆ ಯಾರು ತಿರುಗಿ ನೋಡುತ್ತಾರೆ ಅನ್ನೋದು ಮತ್ತೊಂದು ಕನ್ಫ್ಯೂಷನ್. ರಕ್ಷಿತಾ ಪಕ್ಕಾ ಮನೆ ಹುಡುಗಿ..ಕನ್ನಡಿಗರ ಮನೆ ಮಗಳು...ಹೀಗಾಗಿ ಹಾಗೆ ತಮಾಷೆಯಲ್ಲಿ ನೆಟ್ಟಿಗರು ಕನ್ಫ್ಯೂಷನ್‌ ಮುಂದೆ ಇಟ್ಟಿದ್ದಾರೆ. 

click me!