ಬೆಂಗಳೂರು ಭೂಗತ ಲೋಕದ ದೊರೆ ಜೈ ರಾಜ್ ಜೀವನಾಧಾರಿತ ಚಿತ್ರಕಥೆಯ ಶೀರ್ಷಿಕೆ ಬಿಡುಗಡೆಗೆ ನಟ ಪುನೀತ್ ರಾಜ್‌ಕುಮಾರ್ ಸಾಥ್ ನೀಡಿದ್ದಾರೆ.
70-80 ದಶಕದಲ್ಲಿ ಬೆಂಗಳೂರಿನ ಭೂಗತ ದೊರೆಯಾಗಿದ್ದ ಜೈ ರಾಜ್ ಜೀವನದ ಪ್ರಮುಖ ಅಂಶಗಳನ್ನು ಆಯ್ಕೆ ಮಾಡಿಕೊಂಡು, ಅಗ್ನಿ ಶ್ರೀಧರ್ ಅವರ ದೃಷಿಯಲ್ಲಿ ಚಿತ್ರಕಥೆ ಮಾಡಲಾಗುತ್ತಿದೆ. ಟಗರು ಚಿತ್ರದ ಮೂಲಕ ಎಲ್ಲರ ಗಮನ ಸೆಳೆದ ಡಾಲಿ ಧನಂಜಯ್ ಜೈರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
'ರತ್ನನ್ ಪ್ರಪಂಚ' ಕಟ್ಟೋಕೆ ಹೊರಟಿದ್ದಾರೆ ಡಾಲಿ ಧನಂಜಯ್..!
ದಿನೆ ದಿನೇ ಕುತೂಹಲ ಹೆಚ್ಚಿಸುತ್ತಿರುವ ಈ ಚಿತ್ರದ ಶಿರ್ಷಿಕೆಯನ್ನು ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಆಗಸ್ಟ್ 15ರಂದು ಬಿಡುಗಡೆ ಮಾಡಲಿದ್ದಾರೆ. ಆಶು ಬೇಂದ್ರ ನಿರ್ಮಾಣ ಹಾಗೂ ಶೂನ್ಯ ಅವರ ನಿರ್ದೇಶನಲ್ಲಿ ಮೂಡಿ ಬರುತ್ತಿರುವ ಸಿನಿಮಾವನ್ನು ನೋಡಲು ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.
ಚಿತ್ರಕಥೆ ಇನ್ನೂ ತಯಾರಿಯಲ್ಲಿದ್ದು, ಡಾನ್ ಜೈ ರಾಜ್ ಸಾವಿಗೆ ಕಾರಣವಾದ ಮುತ್ತಪ್ಪ ರೈ ಪಾತ್ರ ಈ ಚಿತ್ರದಲ್ಲಿ ಇರುವುದಿಲ್ಲ, ಎಂದು ಈ ಹಿಂದೆಯೇ ಚಿತ್ರತಂಡ ಮಾಹಿತಿ ನೀಡಿದೆ. ಆದರೆ ಚಿತ್ರದಲ್ಲಿ ಅಗ್ನಿ ಶ್ರೀಧರ್ ಅಭಿನಯಿಸುತ್ತಾರಾ ಇಲ್ವಾ ಎಂಬ ವಿಚಾರವೂ ಸಾಕಷ್ಟು ಕುತೂಹಲ ಹುಟ್ಟಿಸಿದೆ.
7ನೇ ಕ್ಲಾಸ್‌ನಲ್ಲೇ ರಾಜನಾದ ಖ್ಯಾತ ಸ್ಯಾಂಡಲ್‌ವುಡ್ ಖ್ಯಾತ ನಟ!
ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಡಾಲಿ ಧನಂಜಯ್ ಸದ್ಯಕ್ಕೆ 'ಬಡವ ರಾಸ್ಕಲ್' ಚಿತ್ರದಲ್ಲಿ ಅಭಿನಯಿಸುತ್ತಾ ನಿರ್ಮಾಣ ಮಾಡುತ್ತಿದ್ದಾರೆ. ಅದನ್ನು ಹೊರತು ಪಡಿಸಿ ಸಲಗ ಹಾಗೂ ಯುವರತ್ನ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅಲ್ಲು ಅರ್ಜುನ್ ಪುಷ್ಪ ಚಿತ್ರದಲ್ಲಿ ಅಭಿನಯಿಸುವುದರ ಬಗ್ಗೆಯೂ ಮಾತುಕಥೆ ನಡೆಯುತ್ತಿದೆಯಂತೆ.
ಒಟ್ಟಿನಲ್ಲಿ ಡಾಲಿ ಧನಂಜಯ್ ಇದೀಗ ಸ್ಯಾಂಡಲ್‌ವುಡ್‌ನ ಬೇಡಿಕೆ ನಟನಾಗಿದ್ದು, ಹೀರೋ ಪಾತ್ರಕ್ಕೂ ಸೈ, ವಿಲನ್ ಪಾತ್ರಕ್ಕೂ ಜೈ ಎನ್ನುತ್ತಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲ ತೆಲುಗು ಚಿತ್ರಗಳಲ್ಲಿಯೂ ಆಫರ್ಸ್ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅವರಿಗೆ ಶುಭವಾಗಲಿ.