'ಸ್ಟುಡಿಯೋ ಮ್ಯಾನ್‌ಕಿನ್' ಆನಿಮೇಷನ್‌ ಸ್ಟುಡಿಯೋ ಅರಂಭಿಸಿದ ನಟಿ ಮಾನ್ವಿತಾ ಕಾಮತ್!

Kannadaprabha News   | Asianet News
Published : Aug 14, 2020, 09:15 AM ISTUpdated : Aug 14, 2020, 09:46 AM IST
'ಸ್ಟುಡಿಯೋ ಮ್ಯಾನ್‌ಕಿನ್' ಆನಿಮೇಷನ್‌ ಸ್ಟುಡಿಯೋ ಅರಂಭಿಸಿದ ನಟಿ ಮಾನ್ವಿತಾ ಕಾಮತ್!

ಸಾರಾಂಶ

ಎರಡು ಚಿತ್ರಗಳಿಗೆ ಶೂಟಿಂಗ್‌ ಮುಗಿಸಿರುವ ನಟಿ ಮಾನ್ವಿತಾ ಕಾಮತ್‌, ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಬಾರಿ ಅವರು ಸಿನಿಮಾ ತೆರೆ ಹಿಂದಿನ ಕೆಲಸಗಳತ್ತ ಗಮನ ಹರಿಸಿದ್ದಾರೆ. ನಟನೆ, ಓದು, ಬರವಣಿಗೆ ಹಾಗೂ ತಿರುಗಾಟದ ಪ್ರಿಯೆ ಆಗಿರುವ ಮಾನ್ವಿತಾ ಅವರ ಜತೆ ಮಾತು-ಕತೆ.

- ಆರ್‌ ಕೇಶವಮೂರ್ತಿ

ಮರಾಠಿಗೆ ಹೋದ ಮೇಲೆ ಯಾಕೋ ಕನ್ನಡಕ್ಕೆ ಅಪರೂಪ ಆಗಿದ್ದೀರಿ ಅನಿಸುತ್ತದೆಯಲ್ಲ?

ಹಾಗೇನು ಇಲ್ಲ. ಮರಾಠಿಯ ‘ರಾಜಸ್ಥಾನಿ ಡೈರೀಸ್‌’ ಚಿತ್ರಕ್ಕೆ ಶೂಟಿಂಗ್‌ ಮುಗಿಸಿ, ಕನ್ನಡದಲ್ಲೂ ಒಂದು ಸಿನಿಮಾ ಒಪ್ಪಿಕೊಂಡು ಚಿತ್ರೀಕರಣ ಮಾಡಿದ್ದೇನಲ್ಲ.. ‘ಶಿವ 143’ ಚಿತ್ರಕ್ಕೂ ಶೂಟಿಂಗ್‌ ಮುಗಿದೆ. ಎರಡೂ ಸಿನಿಮಾ ಬಿಡುಗಡೆಯಾಗುವ ಹೊತ್ತಿಗೆ ಕೊರೋನಾ, ಲಾಕ್‌ಡೌನ್‌ ಶುರುವಾಗಿ ಮನೆಯಲ್ಲಿ ಕೂರುವಂತಾಯಿತು.

ತಂದೆ ಜೊತೆ ಒಂದು ಫೋಟೋ ಇಲ್ಲ; ಕಣ್ಣೀರಿಟ್ಟ ಮಾನ್ವಿತಾಗೆ ಸಿಗ್ತು ಬಿಗ್ ಸರ್ಪ್ರೈಸ್!

ಈ ಎರಡೂ ಚಿತ್ರಗಳು ಹೇಗೆ ಬಂದಿವೆ?

ಮೆಲೋಡಿ ಪ್ರೇಮ ಕತೆಯ ಸಿನಿಮಾ ‘ರಾಜಸ್ಥಾನಿ ಡೈರೀಸ್‌’ ಚಿತ್ರದಲ್ಲಿ ನಟನೆಗೆ ಸ್ಕೋಪ್‌ ಇದೆ. ಪಾತ್ರವೂ ತುಂಬಾ ಚೆನ್ನಾಗಿದೆ. ರೆಗ್ಯೂಲರ್‌ ನಾಯಕಿ ಪಾತ್ರವಲ್ಲ. ಧೀರೇನ್‌ ರಾಮ್‌ಕುಮಾರ್‌ ಜತೆಗೆ ನಾಯಕಿಯಾಗಿ ನಟಿಸಿರುವ ‘ಶಿವ 143’ ಚಿತ್ರದಲ್ಲೂ ಬೇರೆಯದ್ದೇ ಆದ ಪಾತ್ರ ಮಾಡಿದ್ದೇನೆ. ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದೇನೆ. ನಿರ್ದೇಶಕ ಅನಿಲ್‌ ಅವರು ಚಿತ್ರದ ಪ್ರತಿಯೊಂದು ಪಾತ್ರವನ್ನು ಚೆನ್ನಾಗಿ ಕಂಪೋಸ್‌ ಮಾಡಿದ್ದಾರೆ.

 

ಬೇರೆ ಯಾವ ಚಿತ್ರಗಳು ಒಪ್ಪಿಕೊಂಡಿಲ್ಲವೇ?

ಸದ್ಯಕ್ಕೆ ಯಾವುದೂ ಇಲ್ಲ. ಮಾತುಕತೆ ನಡೆಯುತ್ತಿದೆ. ಕೊರೋನಾ ಕಾರಣ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಎಲ್ಲವೂ ಸಿದ್ಧತೆಯಲ್ಲಿದೆ.

ಕೊರೋನಾ, ಲಾಕ್‌ಡೌನ್‌ ಬಿಡುವಿನ ದಿನಗಳನ್ನು ಹೇಗೆ ಬಳಸಿಕೊಂಡಿದ್ದೀರಿ?

ಹಲವು ವಿಷಯಗಳನ್ನು ಕಲಿಯಲು ಅವಕಾಶ ಸಿಕ್ಕಿತ್ತು. ನಟನೆಯ ಜತೆಗೆ ನನಗೆ ಚಿತ್ರರಂಗದಲ್ಲೇ ಬೇರೆ ಬೇರೆ ವಿಭಾಗಗಳ ಬಗ್ಗೆ ಕುತೂಹಲ ಇತ್ತು. ಚಿತ್ರಕಥೆ ಬರೆಯುವುದು, ಓದುವುದು, ನಿರ್ದೇಶನದ ಬಗ್ಗೆ ತಿಳಿಯಲು ಬಳಸಿಕೊಂಡೆ. ಎಲ್ಲಕ್ಕಿಂತ ಮುಖ್ಯವಾಗಿ ಒಂದು ಆ್ಯನಿಮೇಷನ್‌ ಸ್ಟುಡಿಯೋ ಆರಂಭಿಸುವ ಯೋಚನೆ ಬಂದಿದ್ದು ಕೂಡ ಇದೇ ಬಿಡುವಿನಲ್ಲಿ.

ಯಾವ ರೀತಿಯ ಅನಿಮೇಷನ್‌ ಸ್ಟುಡಿಯೋ?

ನನ್ನ ಸ್ನೇಹಿತೆ ಅಂಕಿತಾ ಕಿಣಿ ಅವರ ಜತೆ ಸೇರಿ ‘ಸ್ಟುಡಿಯೋ ಮ್ಯಾನ್‌ಕಿನ್‌’ (studio manekin) ಹೆಸರಿನಲ್ಲಿ ಆ್ಯನಿಮೇಷನ್‌ ಸ್ಟುಡಿಯೋ ಆರಂಭಿಸಿದ್ದೇವೆ. ಇದರ ಅಫೀಸ್‌ ನೆದಲ್ರ್ಯಾಂಡ್‌ನಲ್ಲಿದೆ. ಅಂಕಿತಾ ಅವರು ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಆ.24ರಂದು ವೆಬ…ಸೈಟ್‌ ರೂಪದಲ್ಲಿ ಇದನ್ನು ಲಾಂಚ್‌ ಮಾಡುತ್ತಿದ್ದೇವೆ. ಡಿಸೆಂಬರ್‌ ನಂತರ ಬೆಂಗಳೂರು ಅಥವಾ ಮುಂಬಾಯಿನಲ್ಲೂ ಅಫೀಸ್‌ ತೆರೆಯಲಿದ್ದೇವೆ.

'ಟಗರು ಪುಟ್ಟಿ' ಮಾನ್ವಿತಾ ಫೋನ್‌ ನೋಡ್ರಿ, ಸೀಕ್ರೆಟ್‌ ಮಾತ್ರವಲ್ಲ ವೆಯ್ಟ್ ಗೊತ್ತಾಗುತ್ತೆ! 

ಈ ಸ್ಟುಡಿಯೋ ಉದೇಶ ಏನು?

ಒಂದು ಚಿತ್ರಕ್ಕೆ ಬೇಕಾದ ಸ್ಟೋರಿ ಬೋರ್ಡ್‌ಅನ್ನು ಅನಿಮೇಷನ್‌ ರೂಪದಲ್ಲಿ ಮಾಡಿಕೊಡುವುದು. ಹಾಲಿವುಡ್‌ನಲ್ಲಿ ಸ್ಟೋರಿ ಬೋರ್ಡ್‌ ಇಲ್ಲದೇ ಯಾವ ಚಿತ್ರವೂ ಶೂಟಿಂಗ್‌ ಮಾಡಲ್ಲ. ಕನ್ನಡದಲ್ಲಿ ಸ್ಟೋರಿ ಬೋರ್ಡ್‌ಗಳ ಬಗ್ಗೆ ತಿಳುವಳಿಕೆ ಇದ್ದರೂ ಅದರ ಸೌಲಭ್ಯಗಳು ಇಲ್ಲ. ಒಂದು ಚಿತ್ರಕ್ಕೆ ಸ್ಟೋರಿ ಬೋರ್ಡ್‌ ಎಷ್ಟುಅಗತ್ಯ ಎಂಬುದನ್ನು ಬಾಲಿವುಡ್‌ನಲ್ಲಿ ಸಂಜಯ… ಲೀಲಾ ಬನ್ಸಾಲಿ, ತೆಲುಗಿನಲ್ಲಿ ರಾಜಮೌಳಿ ಅವರ ಚಿತ್ರಗಳನ್ನು ನೋಡಿದಾಗ ಗೊತ್ತಾಗುತ್ತದೆ. ಅಂದರೆ ನಿರ್ದೇಶಕ ತಾನು ಬರೆದುಕೊಂಡಿರುವ ಚಿತ್ರಕಥೆ ತೆರೆ ಮೇಲೆ ಹೇಗೆ ಬರುತ್ತದೆ, ಕತೆ ಪಾತ್ರದಾರಿಗಳ ಲುಕ್ಕು, ಅದರ ಹಿನ್ನೆಲೆ ಹೇಗೆ ಕಾಣುತ್ತದೆ ಎಂಬುದನ್ನು ಶೂಟಿಂಗ್‌ಗೆ ಹೋಗುವ ಮುನ್ನವೇ ತೋರಿಸುವ ತಂತ್ರಜ್ಞಾನ ಅಥವಾ ಕಲೆಯೇ ಈ ಸ್ಟೋರಿ ಬೋರ್ಡ್‌.

 

ನಿಮ್ಮ ಪ್ರಕಾರ ಇದರ ಉಪಯೋಗಗಳೇನು?

ಈ ಸ್ಟೋರಿ ಬೋರ್ಡ್‌ ತಂತ್ರಜ್ಞಾನವನ್ನು ಕನ್ನಡ ಚಿತ್ರರಂಗಕ್ಕೂ ಪರಿಚಯಿಸುವ ಗುರಿಯಿಂದ ಈ ಸ್ಟುಡಿಯೋ ಆರಂಭಿಸಿದ್ದೇವೆ. ಸಿನಿಮಾಗಳ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಿಗಾಗಿ ಸಾಕಷ್ಟುಸ್ಟುಡಿಯೋಗಳು ಹಾಗೂ ಕಂಪನಿಗಳು ಇವೆ. ಆದರೆ, ಪ್ರಿ ಪೊ›ಡಕ್ಷನ್‌ಗಾಗಿ ಕರ್ನಾಟಕದಲ್ಲಿ ಮಾತ್ರವಲ್ಲ, ಭಾರತದಲ್ಲಿ ಎಲ್ಲೂ ಸ್ಟುಡಿಯೋಗಳಿಲ್ಲ. ಈ ಕೊರತೆ ನೀಗಿಸುವ ಉದ್ದೇಶ ನಮ್ಮದು. ನಿರ್ದೇಶಕ ತಾನು ಹೇಳುವ ಸಿನಿಮಾ ಹೀಗೆ ಇರುತ್ತದೆ ಎಂದು ತೋರಿಸಲು, ಲೋಕೇಶನ್‌ ಹುಡುಕಾಟದ ಸಮಯ ಸೇರಿದಂತೆ ಒಂದು ಚಿತ್ರದ ಬಜೆಟ್‌ ಉಳಿಸಲು ಅನುಕೂಲ. ಚಿತ್ರದ ನಾಯಕ, ನಾಯಕಿ ಹಾಗೂ ನಿರ್ಮಾಪಕರಿಗೆ ತುಂಬಾ ಸುಲಭವಾಗಿ ತಮ್ಮ ಚಿತ್ರಕಥೆಗಳನ್ನು ಸ್ಟೋರಿ ಬೋರ್ಡ್‌ ಮೂಲಕ ಪ್ರೆಸೆಂಟ್‌ ಮಾಡಬಹುದು. ಈ ಹಂತದಲ್ಲಿ ಬೇರೆ ಚಿತ್ರಗಳ ಪಾತ್ರಗಳ ಲುಕ್ಕು, ಮೇಕಿಂಗ್‌ ಸ್ಟೈಲು ಅನ್ನು ರೆಫರೆನ್ಸ್‌ ಕೊಡುವ ಬದಲು ಸ್ವಂತವಾಗಿ ಕ್ರಿಯೇಟ್‌ ಮಾಡಿದರೆ ಹೊಸತನದಿಂದ ಕೂಡಿರುತ್ತದೆ.

ಅಂದರೆ ಕನ್ನಡದಲ್ಲಿ ಯಾರೂ ಸ್ಟೋರಿ ಬೋರ್ಡ್‌ ಮಾಡಿಕೊಳ್ಳುತ್ತಿಲ್ಲವೇ?

ನಾನು ಕೆಲಸ ಮಾಡಿದ ನಿರ್ದೇಶಕರ ಪೈಕಿ ದುನಿಯಾ ಸೂರಿ ಅವರು ತಮ್ಮ ಚಿತ್ರಗಳ ಪಾತ್ರಧಾರಿಗಳ ಲುಕ್‌ಅನ್ನು ಸ್ವತಃ ಡಿಸೈನ್‌ ಮಾಡಿಕೊಳ್ಳುತ್ತಿದ್ದರು. ಸೂರಿ ಅವರು ಮೂಲತಃ ಆರ್ಟಿಸ್ಟ್‌ ಆಗಿರುವ ಕಾರಣ ಅವರು ಕ್ಯಾರೆಕ್ಟರ್‌ ಸ್ಕೆಚ್‌ ಮಾಡಿಕೊಂಡು ಶೂಟಿಂಗ್‌ ಮಾಡುತ್ತಾರೆ. ಆದರೆ, ಸ್ಟೋರಿ ಬೋರ್ಡ್‌ ರೂಪಿಸುವುದಕ್ಕಾಗಿಯೇ ವೃತ್ತಿಪರ ಸ್ಟುಡಿಯೋಗಳು ಇದ್ದರೆ ಹೇಗೆ ಎಂಬುದನ್ನು ತಿಳಿದುಕೊಂಡಿದ್ದು ಇವರಿಂದಲೇ. ಇದೇ ಸ್ಫೂರ್ತಿಯಿಂದ ಸೇರಿ ಸ್ಟುಡಿಯೋ ಮ್ಯಾನ್‌ಕಿನ್‌ ಹೆಸರಿನ ಸ್ಟೋರಿ ಬೋರ್ಡ್‌ ರೂಪಿಸುವ ಸ್ಟುಡಿಯೋ ಆರಂಭಿಸುತ್ತಿದ್ದೇವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?