
ಬೆಂಗಳೂರು(ಅ.29): ಸ್ಯಾಂಡಲ್‌ವುಡ್ ನಟ, ಡಾ. ರಾಜ್ ಕುಮಾರ್(Dr Rajkumar) ಕಿರಿಯ ಪುತ್ರ ಪುನೀತ್ ರಾಜ್‌ಕುಮಾರ್(Puneeth Rajkumar) ನಿಧನದಿಂದ(Death) ಚಿತ್ರಲೋಕ, ಅಭಿಮಾನಿಗಳು ಮಾತ್ರವಲ್ಲ, ಭಾರತವೇ ಆಘಾತಕ್ಕೊಳಗಾಗಿದೆ. ಇಂದು ಬೆಳಗ್ಗೆ ಹೃದಯಾಘಾತಕ್ಕೊಳಗಾದ ಪುನೀತ್ ರಾಜ್‌ಕುಮಾರ್ ಕೊನೆಯುಸಿರೆಳೆದಿದ್ದಾರೆ. 46ರ ಹರೆಯದ ಪುನೀತ್ ಇದೀಗ ನೆನಪು ಮಾತ್ರ. ಆದರೆ ಪುನೀತ್ ಕೇವಲ ತಮ್ಮ ಚಿತ್ರಗಳಿಂದ ಮಾತ್ರವಲ್ಲ, ನಡವಳಿಕೆ, ಮಾನವೀಯತೆ, ಗುಣದಿಂದ ಎಲ್ಲರಿಗೂ ಮಾದರಿಯಾಗಿದ್ದಾರೆ. ಇದೀಗ ಬೆಂಗಳೂರು ಪೊಲೀಸ್(Bengaluru Police) ಪುನೀತ್ ರಾಜ್‌ಕುಮಾರ್ ಸ್ಮರಿಸಿದ್ದಾರೆ. ಇದೇ ವೇಳೆ ಪುನೀತ್‌ಗೆ ಗೌರವ ನಮನ ಸಲ್ಲಿಸಿದೆ.
Puneeth Rajkumar Death: ಪಿಎಂ ಮೋದಿ, ಸಚಿವ ರಾಜೀವ್ ಚಂದ್ರಶೇಖರ್ ಸೇರಿ ಗಣ್ಯರ ಕಂಬನಿ
ಬೆಂಗಳೂರು ಸಿಟಿ ಪೊಲೀಸ್(Bengaluru City Police) ತನ್ನ ಟ್ವಿಟರ್ ಖಾತೆ ಮೂಲಕ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದೆ. ದಯೆ ಮತ್ತು ಅಪ್ಪಟ ವಿನಮ್ರ ಮನುಷ್ಯರಲ್ಲಿ ಒಬ್ಬರು. ಎಲ್ಲಾ ನೆನಪುಗಳಿಗೆ ಧನ್ಯವಾದಗಳು ಅಪ್ಪು! ನೀವು ಯಾವಾಗಲೂ ಯುವ ಪೀಳಿಗೆಗೆ ಪ್ರಬಲವಾದ ಮಾದರಿಗಳಲ್ಲಿ ಒಬ್ಬರಾಗಿದ್ದಿರಿ ಮತ್ತು ಸದಾ ನೆನಪಿನಲ್ಲಿ ಉಳಿದಿರುತ್ತೀರಿ ಎಂದು ಟ್ವೀಟ್ ಮಾಡಿದೆ.
ಪುನೀತ್ ರಾಜ್‌ಕುಮಾರ್ ಅಗಲಿಕೆಯಿಂದ ಬೆಂಗಳೂರು ಸೆಂಟ್ರಲ್ ಡಿಸಿಪಿ ಇಶಾ ಪಂತ್ ಭಾವುಕರಾಗಿದ್ದಾರೆ. ಪೊಲೀಸ್ ಇಲಾಖೆಯ ಹಲವು ಜಾಗೃತಿ ಕಾರ್ಯಕ್ರಮಗಳಲ್ಲಿ ರಾಯಭಾರಿಯಾಗಿ ಕಾಣಿಸಿಕೊಂಡ ಪುನೀತ್ ರಾಜ್‌ಕುಮಾರ್ ಒಂದು ಪೈಸೆಯನ್ನು ಚಾರ್ಜ್ ಮಾಡಿಲ್ಲ. ಪೊಲೀಸ್ ಇಲಾಖೆಯ ಹಲವು ಆಂದೋಲನಗಳಲ್ಲಿ ಪುನೀತ್ ರಾಜ್‌ಕುಮಾರ್ ಭಾಗವಹಿಸಿದ್ದಾರೆ. ಹಲವು ಜಾಗೃತಿ ವಿಡಿಯೋಗಳನ್ನು ಮಾಡಿದ್ದಾರೆ ಎಂದು ಇಶಾ ಪಂತ್ ಟ್ವೀಟ್ ಮೂಲಕ ಹೇಳಿದ್ದಾರೆ.
Puneeth Rajkumar Death: ಅಣ್ಣಾವ್ರಂತೆ ನೇತ್ರದಾನ ಮಾಡಿದ ಅಪ್ಪು
ಪುನೀತ್ ರಾಜ್‌ಕುಮಾರ್ ಸೂಪರ್ ಸ್ಟಾರ್ ಮಾತ್ರವಲ್ಲ, ರತ್ನದಂತ ವ್ಯಕ್ತಿತ್ವ. ಕೇವಲ ಚಲನ ಚಿತ್ರ ಪರಂಪರೆಯನ್ನು ಬಿಟ್ಟುಹೋಗುತ್ತಿಲ್ಲ. ಇದರ ಜೊತೆಗೆ ಮೇರು ನಟ ಅತ್ಯುತ್ತಮ ನಡವಳಿಕೆಯನ್ನು ತೋರಿಸಿಕೊಟ್ಟಿದ್ದಾರೆ. ಎಲ್ಲರಿಗೂ ಮಾದರಿಯಾಗಬಲ್ಲ ಗುಣ ನಡತೆ ಪುನೀತ್ ಅವರದ್ದು, ಓಂ ಶಾಂತಿ ಎಂದು ಇಶಾ ಪಂತ್ ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ಸಾರ್ವಜನಿಕರಿಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ. ಪುನೀತ್ ರಾಜ್‌ಕುಮಾರ್ ನಿಧನದ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ, ಹಿಂಸಾಚಾರಕ್ಕೆ ಅವಕಾಶ ನೀಡದಂತೆ ಬಂದೋಬಸ್ತ್ ಮಾಡಲಾಗಿದೆ. ಹೀಗಾಗಿ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಟ್ರಾಫಿಕ್ ಪೊಲೀಸ್ ಕೂ ಆ್ಯಪ್ ಮೂಲಕ ಮನವಿ ಮಾಡಿದ್ದಾರೆ.
ಆತ್ಮೀಯ ಬೆಂಗಳೂರಿಗರೇ, ದಯವಿಟ್ಟು ಯಾವುದೇ ವದಂತಿಗಳನ್ನು ನಂಬಬೇಡಿ ಹಾಗೂ ಯಾವುದೇ ರೀತಿಯ ವದಂತಿಗಳನ್ನು ಪ್ರಚಾರ ಮಾಡಬೇಡಿ. ಬೆಂಗಳೂರು ನಗರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಬೆಂಗಳೂರು ನಗರ ಪೊಲೀಸರಾದ ನಾವು ನಮ್ಮ ನಗರದಲ್ಲಿ ಶಾಂತಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಭರವಸೆಯನ್ನು ನೀಡುತ್ತೇವೆ.
- Bengaluru City Police (@blrcitypolice) 29 Oct 2021
Puneeth Rajkumar Death: ಹಾಡಿನಿಂದ ಬರ್ತಿದ್ದ ಹಣವೆಲ್ಲ ದಾನಕ್ಕೆ ಬಳಸ್ತಿದ್ದ ಅಪ್ಪು
ಪವರ್ ಸ್ಟಾರ್ ಪುನೀತ್:
ಮಾರ್ಚ್ 17, 1975ರಲ್ಲಿ ಹುಟ್ಟಿದ ಪುನೀತ್ ರಾಜ್‌ಕುಮಾರ್ ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಪ್ರತಿಬೆ. ಬೆಟ್ಟದ ಹೂವು ಚಿತ್ರದ ಅಭಿಯನಕ್ಕೆ ರಾಷ್ಟ್ರಮಟ್ಟದ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಪಡೆದಿದ್ದಾರೆ. ಇನ್ನು ಚಲಿಸುವ ಮೋಡ ಹಾಗೂ ಎರಡು ನಕ್ಷತ್ರಗಳು ಚಿತ್ರದಲ್ಲಿನ ನಟನೆಗ ಅತ್ಯುತ್ತಮ ಕರ್ನಾಟಕ ರಾಜ್ಯ ಬಾಲ ನಟನೆ ಪ್ರಶಸ್ತಿ ಪಡೆದಿದ್ದಾರೆ.
ಅಪ್ಪು ಚಿತ್ರದ ಮೂಲಕ ನಾಯಕ ನಟನಾಗಿ ಸ್ಯಾಂಡಲ್‌ವುಡ್‌ನಲ್ಲಿ ಧೂಳೆಬ್ಬಿಸಿದ ಪುನೀತ್ ರಾಜ್‌ಕುಮಾರ್, 29ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಅತ್ಯುತ್ತಮ ಡ್ಯಾನ್ಸರ್, ಪವರ್‌ಫುಲ್ ಆ್ಯಕ್ಷನ್ ಮೂಲಕ ಕನ್ನಡಿಗರಿಂದ ಪವರ್ ಸ್ಟಾರ್ ಬಿರುದು ಪಡೆದ ನಟ. ಗಾಯಕನಾಗಿ, ನಿರ್ಮಾಪಕನಾಗಿ, ನಿರೂಪಕನಾಗಿ, ಉದ್ಯಮಿಯಾಗಿಯೂ ಅಪ್ಪು ಸೈ ಎನಿಸಿಕೊಂಡಿದ್ದಾರೆ.
Puneeth RajKumar Death: ಒಂದೂವರೆ ವರ್ಷದಲ್ಲಿ ಮೂವರು ನಟರನ್ನು ಕಳೆದುಕೊಂಡ ಸ್ಯಾಂಡಲ್‌ವುಡ್
ಅಪ್ಪು (2002), ಅಭಿ (2003), ವೀರ ಕನ್ನಡಿಗ (2004), ಮೌರ್ಯ (2004), ಆಕಾಶ್ (2005), ಅಜಯ್ (2006), ಅರಸು (2007), ಮಿಲನ (2007), ವಂಶಿ (2008), ರಾಮ್ (2009), ಜಾಕಿ (2010), ಹುಡುಗರು (2011), ರಾಜಕುಮಾರ (2017), ಮತ್ತು ಅಂಜನಿ ಪುತ್ರ (2017), ನಟ ಸಾರ್ವಭೌಮ್, ಯುವರತ್ನ ಸೇರಿದಂತೆ ಹಲವು ಚಿತ್ರಗಳು ಸೂಪರ್ ಹಿಟ್ ಆಗಿದೆ.
ಸೌತ್ ಇಂಡಿಯನ್ ಇಂಟರ್‌ನ್ಯಾಶಲ್ ಮೂವಿ ಆವಾರ್ಡ್ ನೀಡುವ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿಯನ್ನು 3 ಬಾರಿ ಗೆದ್ದುಕೊಂಡಿದ್ದಾರೆ. ಒಂದು ಬಾರಿ ಯೂಥ್ ಐಕಾನ್ ಆಫ್ ಸೌತ್ ಸಿನಿಮಾ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಕರ್ನಾಟಕ ಸರ್ಕಾರ ನೀಡುವ ಬೆಸ್ಟ್ ಆಕ್ಯರ್ ಪ್ರಶಸ್ತಿಯನ್ನು 2 ಬಾರಿ ಗೆದ್ದುಕೊಂಡಿದ್ದಾರೆ. 4 ಬಾರಿ ಫಿಲ್ಮ್ ಫೇರ್ ಬೆಸ್ಟ್ ಆಕ್ಟರ್ ಪ್ರಶಸ್ತಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಬಿಎಸ್ ಯಡಿಯೂರಪ್ಪ, ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ನಾಡಿನ ಜನಪ್ರಿಯ ಕಲಾವಿದ,ಡಾ.ರಾಜ್ ವಂಶದ ಕುಡಿ ಪುನೀತ್ ರಾಜಕುಮಾರ್ ಹಠಾತ್ ನಿಧನರಾದ ವಿಷಯ ದಿಗ್ಭ್ರಮೆ ಮೂಡಿಸಿದೆ. ಕಿರುವಯಸ್ಸಿನಲ್ಲೇ ಅವರು ನಮ್ಮನ್ನು ಅಗಲಿದ್ದು ತೀವ್ರ ಆಘಾತ ತಂದಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ ಅವರ ಕುಟುಂಬ, ಅಪಾರ ಅಭಿಮಾನಿಗಳಿಗೆ ಆಘಾತವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ.(1/2)
View attached image
- BS Yediyurappa (@bsybjp) 29 Oct 2021
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನ ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ. ವೈಯಕ್ತಿಕವಾಗಿ ನನಗೆ ಆಗಿರುವ ಆಘಾತ ಅಷ್ಟಿಷ್ಟಲ್ಲ. ಇಂತಹ ಸುದ್ದಿ ಕೇಳಬೇಕಾಗುತ್ತದೆ ಎಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ.ವ್ಯಕ್ತಿಗತವಾಗಿ ನನಗೆ ಬಹಳ ಇಷ್ಟದ ವ್ಯಕ್ತಿ, ನಟ ಆಗಿದ್ದರು ಪುನೀತ್. ಅವರ ಜತೆ ಸಾಕಷ್ಟು ಸಮಯ ಕಳೆದಿದ್ದೇನೆ. ಜತೆಯಲ್ಲಿ ಹಲವು ಬಾರಿ ಊಟವನ್ನು ಮಾಡಿ ಚಿತ್ರರಂಗದ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇನೆ. 1/3
View attached image
- H D Kumaraswamy (@h_d_kumaraswamy) 29 Oct 2021
So hard to believe that #PuneetRajkumar is no more. This was at Bengaluru airport just a few weeks ago when we chatted for a long time. He was so excited on launching young actors on OTT. More than movie star, he was Karnataka’s beloved boy next door. Life is so fragile!
View attached image
- Tejasvi Surya / ತೇಜಸ್ವೀ ಸೂರ್ಯ (@Tejasvi_Surya) 29 Oct 2021
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.