Puneeth Rajkumar Death: ಸೆಲೆಬ್ರಿಟಿಗಳಿದ್ದರೂ, ಡ್ಯಾನ್ಸರ್ಸ್ ಮಾತನಾಡಿಸುತ್ತಿದ್ದ ಅಣ್ಣಾಬಾಂಡ್

By Suvarna News  |  First Published Oct 29, 2021, 6:09 PM IST

ಡ್ಯಾನ್ಸ್‌ ಡ್ಯಾನ್ಸ್‌ ಅಪ್ಪು ಡ್ಯಾನ್ಸ್‌ ...ಈ ಹಾಡು ಕೇಳಿದ ತಕ್ಷಣ ಎಲ್ಲರಿಗೂ ಕಣ್ಮುಂದೆ ಬರುವುದು ಪವರ್ ಸ್ಟಾರ್ ಪವರ್‌ಫುಲ್ ಡ್ಯಾನ್ಸ್.......
 


ಕನ್ನಡ ಚಿತ್ರರಂಗದಲ್ಲಿ ಏಕೈಕ ಪವರ್ ಸ್ಟಾರ್ ಅಂದ್ರೆ ಪುನೀತ್ ರಾಜ್‌ಕುಮಾರ್ (Puneeth Rajkumar). ಪುಟ್ಟ ಮಕ್ಕಳಿನಿಂದ ಹಿಡಿದು, ಹಿರಿಯರವೆಗೂ ಅಭಿಮಾನಿಗಳನ್ನು ಹೊಂದಿದ್ದ ಪುನೀತ್ ತಮ್ಮ ಚಿತ್ರದ ಮೂಲಕ ಕುಟುಂಬದ ಮೌಲ್ಯತೆಗಳ (Family Values) ಬಗ್ಗೆ ಮಹತ್ವ ಸಾರುತ್ತಿದ್ದರು. ಅಪ್ಪು ಸಿನಿಮಾದಲ್ಲಿ ಲವ್ ಆಂಡ್ ಕಾಮಿಡಿ (Love and Comedy) ಎಷ್ಟು ಇರುತ್ತೋ ಅಷ್ಟೇ ಡ್ಯಾನ್ಸ್ ಇರುತ್ತದೆ. ಸೋಲೋ ಹಾಡುಗಳಾದರೆ ಒಬ್ಬರೇ ಕುಣಿಯುವರು, ಜೋಡಿ ಸಾಂಗ್ ಆದರೆ ನಟಿಗೆ ಸುಲಭವಾಗುವಂತೆ ಅವರಿಗೆ ಹೊಂದಿಕೊಂಡು ಕುಣಿಯುವರು. 

ಪುನೀತ್ ನಿಧನದ ವಿಚಾರ ತಿಳಿಯುತ್ತಿದ್ದಂತೆ ನಟಿ ಶ್ರುತಿ ಹರಿಹರನ್, ಅವರು ಅಪ್ಪುವನ್ನು ಮೊದಲು ನೋಡಿದ ಸಂಗತಿಯೊಂದನ್ನು ತಮ್ಮ social mediaದಲ್ಲಿ  ಹಂಚಿಕೊಂಡಿದ್ದಾರೆ. 'ಲೆಜೆಂಡ್ ಪುನೀತ್ ರಾಜ್‌ಕುಮಾರ್  ಅವರನ್ನು ಭೇಟಿ ಮಾಡಿದ ಮೊದಲು ನೆನಪು ಇದು, ಇದು ಶಾಶ್ವತವಾಗಿ ನನ್ನ ನೆನಪಿನಲ್ಲಿ ಉಳಿಯುತ್ತದೆ. ಆಗ ನಾನು ಕೇವಲ ಡ್ಯಾನ್ಸರ್ ಅಷ್ಟೆ. ಅವಾರ್ಡ್ ಕಾರ್ಯಕ್ರವಿತ್ತು. ಆಗ ನಾವು ಬ್ಯಾಕ್ ಸ್ಟೇಜ್‌ನಲ್ಲಿ ಡ್ಯಾನ್ಸ್ ರಿಹರ್ಸಲ್ ಮಾಡುತ್ತಿದ್ದೆವು. ಊಟದ ಸಮಯದ ನಂತರ ಪುನೀತ್ ಸರ್ ಅವರ ಡ್ಯಾನ್ಸ್ ರಿಹರ್ಸಲ್‌ಗೆ ಬಂದರು. ಅವರನ್ನು ಸ್ವಾಗತಿಸಲು ನಾವೆಲ್ಲರೂ ಎದ್ದು ನಿಂತೆವು.  ಒಂದು ಭಾಗದಲ್ಲಿ ಸಿನಿಮಾ ನಟ, ನಟಿಯರು, ಕೋರಿಯೋಗ್ರಾಫರ್ಸ್ ನಿಂತಿದ್ದರು, ಮತ್ತೊಂದು ಕಡೆ ನಾವು ಡ್ಯಾನ್ಸರ್‌ಗಳು ನಿಂತಿದ್ದೆವು. ಆ ರೂಮ್ ಪ್ರವೇಶ ಮಾಡುತ್ತಿದ್ದಂತೆ ಪುನೀತ್ ಅವರು ತಿರುಗಿ ಮೊದಲು ಡ್ಯಾನ್ಸರ್‌ಗಳನ್ನು ಮಾತನಾಡಿಸಿದ್ದರು. ಅಲ್ಲಿದ್ದ ಎಲ್ಲರಿಗೂ ಹಲೋ ಹೇಗಿದ್ದೀರಾ ಎಂದು ಕೇಳಿದರು,' ಎಂದು ಶ್ರುತಿ ಬರೆದುಕೊಂಡಿದ್ದಾರೆ. 

Tap to resize

Latest Videos

'ನೃತ್ಯ ಅಭ್ಯಾಸ ಮಾಡಿ ಮಾಡಿ ಸುಸ್ತಾಗಿತ್ತು, ನೋವಿತ್ತು ಆದರೆ ಪುನೀತ್ ಅವರ ಎನರ್ಜಿ ಮತ್ತು ಅವರ ನಗು ನೋಡಿ ನಮಗೆ ಮತ್ತೆ ರಿಹರ್ಸಲ್ ಮಾಡಬೇಕು ಅನಿಸುತ್ತಿತ್ತು. ಎಲ್ಲರಿಗೂ ಜೋಶ್ ಬಂದಿತ್ತು. ಪುನೀತ್ ರಾಜ್‌ಕುಮಾರ್ ನಂತರ ಗ್ರೇಟ್ ನಟ ಈ ರೀತಿ ಮಾಡುವ ಅಗತ್ಯವಿರಲಿಲ್ಲ. ಅವರು ಎಂಟರ್ ಆಗುತ್ತಿದ್ದಂತೆ ಮತ್ತೊಂದು ಭಾಗದಲ್ಲಿದ್ದ ಸೆಲೆಬ್ರಿಟಿಗಳನ್ನು ಮಾತನಾಡಿಸಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಈ ಗುಣಕ್ಕೆ ಹೇಳುವುದು ಪುನೀತ್ ಎಂಥ ನಟ ಎಂದು. ಪ್ರತಿಯೊಬ್ಬರಿಗೂ ಒಂದೇ ರೀತಿಯ ಪ್ರೀತಿ ಮತ್ತು ಗೌರವ ಕೊಡುತ್ತಿದ್ದರು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸರ್. It is never going to be the same without you,' ಎಂದು ಹೇಳಿದ್ದಾರೆ. 

ಪ್ರಭುದೇವ ಜೊತೆ ಹೆಜ್ಜೆ ಹಾಕಲಿದ್ದಾರೆ ಪವರ್‌ಸ್ಟಾರ್

ಪುನೀತ್ ರಾಜ್‌ಕುಮಾರ್ ಅವರನ್ನು ಕನ್ನಡ ಚಿತ್ರರಂಗ ಮೈಕಲ್ ಜ್ಯಾಕ್ಸನ್ ಎಂದು ಹೆಸರು ಗಳಿಸಿದ್ದರು. ಪ್ರತಿಯೊಂದು ಸಿನಿಮಾದಲ್ಲೂ ವಿಭಿನ್ನತೆ ಇರಬೇಕು ಎಂದು ಪುನೀತ್ ಡಿಫರೆಂಟ್ ಡ್ಯಾನ್ಸ್ ಸ್ಟೈಲ್‌ಗಳನ್ನು ಕಲಿಯುತ್ತಿದ್ದರು. ಬೇರೆ ಬೇರೆ ರಾಜ್ಯಗಳಿಂದ ಡ್ಯಾನ್ಸ್ ಮಾಸ್ಟರ್‌ (Dance master) ಹಾಗೂ ಫೈಟ್ ಮಾಸ್ಟರ್‌ಗಳನ್ನು ಕರೆಸಿ ಕಲಿತು ಮಾಡುತ್ತಿದ್ದರು. ವೇದಿಕೆ ಮೇಲೆ ಹಾಡು ಬಂದರೆ ಸಾಕು ಪುನೀತು ಕುಣಿದು ಕುಪ್ಪಳಿಸುವರು. ಕನ್ನಡ ಚಿತ್ರರಂಗದಲ್ಲಿರುವ ಅದೆಷ್ಟೋ ಜನರಿಗೆ ಡ್ಯಾನ್ಸ್‌ ಹಾಗೂ Mannerisumನಲ್ಲಿ ಪುನೀತ್ ಮಾದರಿ ಆಗಿದ್ದರು. ಕೆಲವು ದಿನಗಳ ಹಿಂದೆ ನಡೆದ ಭಜರಂಗಿ 2 ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಯಶ್ ಮತ್ತು ಶಿವರಾಜ್‌ಕುಮಾರ್ ಜೊತೆ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗುತ್ತಿದೆ.

click me!