ಸಾವಿನಲ್ಲಿಯೂ ನಟ ಪುನೀತ್ ರಾಜ್‌ಕುಮಾರ್ ಸಾರ್ಥಕತೆ ಮರೆದಿದ್ದಾರೆ. ನೇತ್ರದಾನ ಮಾಡಿದ್ದಾರೆ....
ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ವೃತ್ತಿ ಜೀವನ (Career) ಆರಂಭಿಸಿದ ಸಮಯದಿಂದಲೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಲ್ಲೂ ಕೊರೋನಾ ಲಾಕ್‌ಡೌನ್ (Covid Lockdown) ಸಮಯದಲ್ಲಿ ಸರ್ಕಾರಕ್ಕೆ 50 ಲಕ್ಷ ನೀಡಿ ಜನರ ನೆರವಿಗೆ ನಿಂತ ಮುತ್ತು ರತ್ನ ಅಪ್ಪು. ಸಾವಿನಲ್ಲೂ ನೇತ್ರದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.
ಡಾ.ರಾಜ್‌ಕುಮಾರ್ ಅವರ ಇಡೀ ಕುಟುಂಬ ನೇತ್ರದಾನ ಮಾಡುವುದಕ್ಕೆ ಹಲವು ವರ್ಷಗಳ ಹಿಂದೆಯೇ ಸಹಿ ಮಾಡಿದ್ದರು. ಅಣ್ಣಾವ್ರು ಕೂಡ ನೇತ್ರದಾನ ಮಾಡಿ ಇಬ್ಬರಿಗೆ ಬೆಳಕಾಗಿ ಹೋದರು. ಹಾಗೆಯೇ ಪುನೀತ್ ಕೂಡ ನೇತ್ರದಾನ ಮಾಡಿ, ಕತ್ತಲ ಜೀವಗಳಿಗೆ ಪ್ರಪಂಚ ತೋರಿಸಲು ಮುಂದಾಗಿದ್ದಾರೆ. 'ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಲ್ಲ ರೀತಿಯ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೆ ಸದಾ ಬೆಂಬಲ ನೀಡುತ್ತಿದ್ದ ಪುನೀತ್ ರಾಜ್ ಕುಮಾರ್, ಅವರು ನಾಡಿನ ಸಾರ್ವಜನಿಕರ ಆರೋಗ್ಯದ ಬಗ್ಗೆ ಅಪಾರ ಕಳಕಳಿ ಹೊಂದಿದ್ದರು. ಇಂದು ತಮ್ಮ ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಅಪ್ಪು ಅವರು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ,' ಎಂದು ಡಾ. ಸುಧಾಕರ್ ಕೆ (Dr K Sudhakar) ಟ್ಟೀಟ್ ಮಾಡಿದ್ದಾರೆ.
ಡಾ. ರಾಜ್‌ರಂತೆ ನೇತ್ರದಾನ ಮಾಡಿದ ನಟಿ ಜಯಂತಿundefined
ಪುನೀತ್ ರಾಜ್‌ಕುಮಾರ್ ಅವರು ಅನಾಥಾಶ್ರಮ, ಹಲವು ಶಾಲೆಗಳಿಗೆ ಹಣ ಸಹಾಯ, ವೃದ್ಧಾಶ್ರಮಗಳಿಗೆ ನೆರವು, ಗೋಶಾಲೆ ನಿರ್ಹಣೆಗೆ ಸಹಾಯ, ಕೆಲವು ಮಕ್ಕಳ ಸಂಪೂರ್ಣ ಶಿಕ್ಷಣ ಹಾಗೂ ಮೈಸೂರಿನಲ್ಲಿ ಶಕ್ತಿ ಧಾಮ ಹೆಸರಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು. ಆದರೆ, ಯಾವತ್ತೂ ತಾವು ಮಾಡಿದ ಕಾರ್ಯಗಳಿಗೆ ಪ್ರಚಾರ ಬಯಸಲೇ ಇಲ್ಲ ಈ ನಟ. ರಣವಿಕ್ರಂ ಸಿನಿಮಾ ಸೆಟ್‌ನಲ್ಲಿದ್ದ ಬಾಲ ಕಲಾವಿದನೊಬ್ಬನ ತಂದೆ ತೀರಿಕೊಂಡ ವಿಚಾರ ತಿಳಿಯುತ್ತಿದ್ದಂತೆ, ಪುನೀತ್ ಸ್ಥಳದಲ್ಲೇ ಆ ಹುಡುಗನ ಭವಿಷ್ಯಕ್ಕೆ ಸಹಾಯ ಮಾಡಬೇಕು ಎಂದು 10ನೇ ಕ್ಲಾಸ್‌ವರೆಗೂ ಸಂಪೂರ್ಣ ಉಚಿತ ಕೊಡಿಸುವುದಾಗಿ ಮಾತುಕೊಟ್ಟು, ಅದರಂತೆ ನಡೆಸಿಕೊಟ್ಟಿದ್ದಾರೆ.
Puneeth Rajkumar Death: ಪಿಎಂ ಮೋದಿ, ಸಚಿವ ರಾಜೀವ್ ಚಂದ್ರಶೇಖರ್ ಸೇರಿ ಹಲವು ರಾಜ್ಯಗಳ ಸಿಎಂಗಳ ಕಂಬನಿದೂರದ ಊರುಗಳಿಂದ ಬಂದ ಅಭಿಮಾನಿಗಳು ಊಟ ತಿನ್ನದೆ ಹಾಗೆ ಹೋಗಬಾರದು, ಎಂದು ಪುನೀತ್ ತಮ್ಮ ನಿವಾಸದ ಹಿಂದಿರುವ ಹೋಟೆಲ್‌ನಲ್ಲಿ ಸದಾ ಊಟ ಸಿಗುವಂತೆ ವ್ಯವಸ್ಥೆ ಮಾಡಿಸಿದ್ದರು ಈ ಅಣ್ಣಾಬಾಂಡ್. ಅಂಗವಿಕಲ ಅಭಿಮಾನಿಗಳು ಮನೆ ಬಳಿ ಬಂದು ಸಿಗಲಾಗದೆ ಬೇಸರದಿಂದ ಹಿಂತಿರುಗಿ ಹೋದರೆ ಅವರನ್ನು ಸಂಪರ್ಕಿಸಿ ಮನೆಗೆ ಕರೆಸಿ ಮಾತನಾಡಿಸಿ ಸಹಾಯ ಮಾಡುತ್ತಿದ್ದಂತೆ.
ಕನ್ನಡ ಚಿತ್ರರಂಗ ಇಂದು ಒಬ್ಬ ಶ್ರೇಷ್ಠ ನಟರನ್ನು ಕಳೆದುಕೊಂಡಿದೆ. ಪುನೀತ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.