Puneeth Rajkumar: ರಾಜ್ಯಾದ್ಯಂತ ಅಪ್ಪು ಹುಟ್ಟುಹಬ್ಬ: 'ಜೇಮ್ಸ್' ಬಿಡುಗಡೆಯ ಸಂಭ್ರಮ

By Suvarna News  |  First Published Mar 17, 2022, 2:32 PM IST

ಪುನೀತ್ ಅಭಿನಯದ 'ಜೇಮ್ಸ್' ಚಿತ್ರವು ಇಂದು ತೆರೆಕಂಡಿದೆ. ಈ ಹಿನ್ನಲೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಅಪ್ಪು ಅಭಿಮಾನಿಗಳು ಈ ಸಂಭ್ರಮವನ್ನು ಭರ್ಜರಿಯಾಗಿ ಆಚರಿಸಿದ್ದಾರೆ. ಹಿಜಾಬ್ ಬಂದ್ ನಡುವೆ ಭಟ್ಕಳದಲ್ಲಂತೂ ಅಪ್ಪು ಫೋಟೊ ಜತೆ ರಿಕ್ಷಾ, ಬೈಕ್‌ಗಳಲ್ಲಿ ಅಭಿಮಾನಿಗಳು ಮೆರವಣಿಗೆಯನ್ನು ನಡೆಸುತ್ತಿದ್ದಾರೆ.


ಉತ್ತರಕನ್ನಡ (ಮಾ.17): ಪುನೀತ್​ ರಾಜ್​ಕುಮಾರ್ (Puneeth Rajkumar) ಅವರು ಇಂದು (ಮಾರ್ಚ್​ 17) ಬದುಕಿದ್ದರೆ 47ನೇ ವರ್ಷದ ಬರ್ತ್​ಡೇಯನ್ನು (Birthday) ಅಭಿಮಾನಿಗಳ (Fans) ಜತೆಗೂಡಿ ಆಚರಿಸಿಕೊಳ್ಳುತ್ತಿದ್ದರು. ಆದರೆ, ಇಂದು ಅವರು ನಮ್ಮೊಂದಿಗೆ ಇಲ್ಲ. ಅವರಿಲ್ಲ ಎಂಬ ನೋವಿನಲ್ಲೇ ಅಭಿಮಾನಿಗಳು ಬರ್ತ್​ಡೇ ಆಚರಿಸುತ್ತಿದ್ದಾರೆ. ಹಾಗೂ ಇಂದು ಪುನೀತ್ ಅಭಿನಯದ 'ಜೇಮ್ಸ್' (James) ಚಿತ್ರವು ತೆರೆಕಂಡಿದೆ. ಈ ಹಿನ್ನಲೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಅಪ್ಪು ಅಭಿಮಾನಿಗಳು ಈ ಸಂಭ್ರಮವನ್ನು ಭರ್ಜರಿಯಾಗಿ ಆಚರಿಸಿದ್ದಾರೆ. ಹಿಜಾಬ್ ಬಂದ್ ನಡುವೆ ಭಟ್ಕಳದಲ್ಲಂತೂ ಅಪ್ಪು ಫೋಟೊ ಜತೆ ರಿಕ್ಷಾ, ಬೈಕ್‌ಗಳಲ್ಲಿ ಅಭಿಮಾನಿಗಳು ಮೆರವಣಿಗೆಯನ್ನು ನಡೆಸುತ್ತಿದ್ದಾರೆ.

ಭಟ್ಕಳದ ಪುಷ್ಪಾಂಜಲಿ ಚಿತ್ರಮಂದಿರದ ಮುಂದೆಯೇ ಅಪ್ಪು ಫೋಟೊಗೆ ಮಾಲಾರ್ಪಣೆ ಮಾಡಿ, ಪಟಾಕಿ ಒಡೆದು ಹಾಲಿನ ಅಭಿಷೇಕ ಮಾಡಿದ್ದಾರೆ. ಪ್ರಮುಖ ಆಕರ್ಷಣೆಯಾಗಿ ಟಾಕೀಸ್ ಮುಂದೆ ಗಂಟೆಗಳ ಕಾಲ ಹುಲಿವೇಷ ಕುಣಿತ ನಡೆದಿದ್ದು, ಟಾಕೀಸ್ ಪ್ರವೇಶಕ್ಕೆ ಮುನ್ನ ಅಪ್ಪುಗೆ ಜೈಕಾರವನ್ನು ಅಭಿಮಾನಿಗಳು ಕೂಗಿದ್ದಾರೆ. ಚಿತ್ರ ಪರದೆಯ ಮುಂದೆಯೇ ಅಪ್ಪು ಫೋಟೊಗಳನ್ನು ಇರಿಸಿ ಹೂ ಅರ್ಪಿಸಿ, ಕುಂಬಳಕಾಯಿ, ಈಡುಗಾಯಿ ಒಡೆದು ಸಂಭ್ರಮಿಸಿದ್ದಾರೆ. ಈ ವೇಳೆ ಪುಷ್ಪಾಂಜಲಿ ಟಾಕೀಸ್‌ ಹೌಸ್‌ಫುಲ್ ಪ್ರದರ್ಶನವನ್ನು ಕಾಣುತ್ತಿದೆ. ಹುಲಿವೇಷದ ಬೆನ್ನ ಹಿಂದೆ ಸೇರಿ ಎಲ್ಲೆಲ್ಲೂ ಪುನೀತ್ ರಾಜ್‌ಕುಮಾರ್ ಅವರದ್ದೇ ಫೋಟೊ ರಾರಾಜಿಸಿವೆ. 

Tap to resize

Latest Videos

undefined

ಇನ್ನು ಶಿರಸಿಯಲ್ಲೂ ಅಪ್ಪು ಫೋಟೊ ಜತೆ ಮೆರವಣಿಗೆಯೊಂದಿಗೆ ನಟರಾಜ ಟಾಕೀಸ್‌ಗೆ ಅಭಿಮಾನಿಗಳು ಸಾಗಿದ್ದಾರೆ. ಈ ಸಮಯದಲ್ಲಿ ಅಪ್ಪು ಫೋಟೊಗೆ ಮಾಲಾರ್ಪಣೆ ಮಾಡಿ, ಹಾಲು ಅರ್ಪಿಸಿ, ಪಟಾಕಿ ಹೊಡೆದು, ಕೇಕ್ ಕತ್ತರಿಸಿ ಸಂಭ್ರಮಾಚರಣೆಯನ್ನು ನಡೆಸಿದ್ದಾರೆ. ಮಾತ್ರವಲ್ಲದೇ ಕಾರವಾರ, ದಾಂಡೇಲಿ ಮುಂತಾದೆಡೆ ಮಧ್ಯಾಹ್ನದ ನಂತರ ಪ್ರದರ್ಶನಗೊಳ್ಳುವ 'ಜೇಮ್ಸ್' ಚಿತ್ರದ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ನಡೆದಿದೆ.

James 2022: ಪುನೀತ್ ಕೊನೆಯ ಚಿತ್ರವನ್ನು ನೋಡಿ ಕಣ್ಣೀರು ಹಾಕಿದ ಅಭಿಮಾನಿ!

ಪುನೀತ್ ರಾಜ್‍ಕುಮಾರ್ ಪುತ್ಥಳಿ ಅನಾವರಣ: ಇಂದು ನಾಡಿನಾದ್ಯಂತ ದೊಡ್ಮನೆ ಹುಡುಗ, ನಾಡಿನ ಯುವರತ್ನ ಪುನೀತ್ ರಾಜ್‍ಕುಮಾರ್ ರವರ ಹುಟ್ಟುಹಬ್ಬ ಮತ್ತು ಅವರ ಕೊನೆಯ ಚಿತ್ರ 'ಜೇಮ್ಸ್' ತೆರೆ ಕಂಡಿದೆ. ಒಂದೊಂದು‌ ಕಡೇ ಒಂದೋಂದು ರೀತಿಯಲ್ಲಿ ಗೌರವ ವ್ಯಕ್ತಪಡಿಸುತ್ತಿದ್ದಾರೆ. ಹೊಸೂರು ಮುಖ್ಯರಸ್ತೆಯ ಬೊಮ್ಮನಹಳ್ಳಿ ವೃತ್ತದಲ್ಲಿ ಅವರ ಅಭಿಮಾನಿಗಳಿಂದ ಕಂಚಿನ‌ ಪುತ್ಥಳಿ ನಿರ್ಮಿಸಿ ವಿಧಾನಸಭೆಯ ಮುಖ್ಯ ಸಚೇತಕ‌ ಹಾಗೂ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಲೋಕಾರ್ಪಣೆ ಮಾಡಿದರು. ಇದಕ್ಕೂ ಮೊದಲು ಕಲಾ ತಂಡಗಳಿಂದ ಮೆರವಣಿವೆ ನಡೆಸಿ ಪುತ್ಥಳಿ ಅನಾವರಣಗೊಳಿಸಿ ಕನ್ನಡ ಧ್ವಜಾರೋಹಣದ ಮೂಲಕ ಗೌರವ ಸಲ್ಲಿಸಿದರು. ಹಾಗೇಯೆ 'ಜೇಮ್ಸ್' ಚಿತ್ರ ಪ್ರತಿಯೊಬ್ಬರು ವೀಕ್ಷಿಸಬೇಕೆಂದು ಕರೆ ನೀಡಿದರು, ಇನ್ನೂ ಪುತ್ಥಳಿಯ ನಿರ್ಮಾತೃ ನಿರ್ಮಾಪಕ ಬಿ.ಎಂ.ರಮೇಶ್ ಹಾಗೂ ಚಿತ್ರ ನಟ ಮಯೂರ್ ಪಟೇಲ್ ಕೂಡ ಉಪಸ್ಥಿತರಿದ್ದರು.

ರಾಜ್ಯದ ಪ್ರತಿ ಮೂಲೆಯಲ್ಲೂ ಈ ಸಿನಿಮಾ ಅಬ್ಬರಿಸುತ್ತಿದೆ. ಎಲ್ಲ ಕಡೆಗಳಲ್ಲೂ ‘ಜೇಮ್ಸ್​’ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಪುನೀತ್​ ರಾಜ್​ಕುಮಾರ್​ ಅವರನ್ನು ದೊಡ್ಡ ಪರದೆ ಮೇಲೆ ನೋಡಿದ ಅಭಿಮಾನಿಗಳು (Puneeth Rajkumar Fans) ಭಾವುಕರಾಗುತ್ತಿದ್ದಾರೆ. ಕೆಲವರಂತೂ ಅಕ್ಷರಶಃ ಕಣ್ಣೀರು ಹಾಕುತ್ತಿದ್ದಾರೆ. ಇನ್ನು ಜಿಲ್ಲೆಯ ಚಿತ್ರಮಂದಿರಗಳಲ್ಲಿ 'ಜೇಮ್ಸ್' ಹವಾ ಜೋರಾಗಿದ್ದು, ಇಂದು ಬೆಳಗ್ಗೆಯಿಂದಲೇ ಟಿಕೆಟ್ ಪಡೆಯಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಜೊತೆಗೆ ಅಪ್ಪು ಅಭಿಮಾನಿಗಳು ಪುನೀತ್ ಅವರ ಭಾವಚಿತ್ರ ಹಿಡಿದು ಜಾನಪದ ಕಲಾತಂಡಗಳೊಂದಿಗೆ ನಗರದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಅಭಿಮಾನ ಮೆರೆದಿದ್ದಾರೆ.

Puneeth Rajkumar: ಅಪ್ಪು ಜನ್ಮದಿನ ಹಿನ್ನೆಲೆಯಲ್ಲಿ ಉಚಿತ ಹೇರ್ ಕಟಿಂಗ್ ಮಾಡುತ್ತಿರುವ ಅಭಿಮಾನಿ

ಮೆರವಣಿಗೆಗೆ ಅವಕಾಶ ಇಲ್ಲ: ಹಿಜಾಬ್‌ ವಿವಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರುವ ಕಾರಣ ಕೆಲವೆಡೆ ಪುನೀತ್‌ ಜನ್ಮದಿನಾಚರಣೆಗೆ ಅನುಮತಿ ಸಿಕ್ಕಿಲ್ಲ. ಬೆಂಗಳೂರಿನ ಚಾಮರಾಜಪೇಟೆಯಿಂದ ವೀರೇಶ್‌ ಚಿತ್ರಮಂದಿರದವರೆಗೂ ಬೈಕ್‌ ರಾರ‍ಯಲಿ, ಮೆರವಣಿಗೆ ಮಾಡಲು ಅಭಿಮಾನಿಗಳು ನಿರ್ಧರಿಸಿದ್ದರು. ಜೊತೆಗೆ ಪುನೀತ್‌ ಸಮಾಧಿ, ವೀರಭದ್ರೇಶ್ವರ, ಪ್ರಸನ್ನ ಹಾಗೂ ವೀರೇಶ್‌ ಚಿತ್ರಮಂದಿರಗಳ ಮೇಲೆ ಹೆಲಿಕಾಪ್ಟರ್‌ ಮೂಲಕ ಪುಷ್ಪಮಳೆ ಸುರಿಸಲು ಅಭಿಮಾನಿಗಳು ಸಜ್ಜಾಗಿದ್ದರು. ಇವೆರಡೂ ಕಾರ್ಯಕ್ರಮಗಳಿಗೆ ಪೊಲೀಸ್‌ ಇಲಾಖೆ ಅನುಮತಿ ನೀಡಿಲ್ಲ. ಅಭಿಮಾನಿಗಳು ಈ ಕಾರಣಕ್ಕೆ ಕಣ್ಣೀರು ಹಾಕಿದ್ದಾರೆ.

click me!