Puneeth Rajkumar: ಅಪ್ಪು ಜನ್ಮದಿನ ಹಿನ್ನೆಲೆಯಲ್ಲಿ ಉಚಿತ ಹೇರ್ ಕಟಿಂಗ್ ಮಾಡುತ್ತಿರುವ ಅಭಿಮಾನಿ

By Suvarna News  |  First Published Mar 17, 2022, 1:29 PM IST

ಅಭಿಮಾನಿಗಳ ಆರಾಧ್ಯ ದೈವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಯೊಬ್ಬರು ತಮ್ಮ ಸಲೂನಿನಲ್ಲಿ ಉಚಿತವಾಗಿ ಹೇರ್ ಕಟಿಂಗ್ ಮಾಡುವ ಮೂಲಕ ಅಪ್ಪು ಹುಟ್ಟುಹಬ್ಬವನ್ನು ಆಚರಿಸಲು ಮುಂದಾಗಿದ್ದಾರೆ. 


ವಿಜಯಪುರ (ಮಾ.17): ಅಭಿಮಾನಿಗಳ ಆರಾಧ್ಯ ದೈವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ (Puneeth Rajkumar) ಹುಟ್ಟುಹಬ್ಬದ (Birthday) ಪ್ರಯುಕ್ತ ಅಭಿಮಾನಿಯೊಬ್ಬರು ತಮ್ಮ ಸಲೂನಿನಲ್ಲಿ ಉಚಿತವಾಗಿ ಹೇರ್ ಕಟಿಂಗ್ (Free Haircut) ಮಾಡುವ ಮೂಲಕ ಅಪ್ಪು ಹುಟ್ಟುಹಬ್ಬವನ್ನು ಆಚರಿಸಲು ಮುಂದಾಗಿದ್ದಾರೆ. ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಅಪ್ಪು ಹೇರ್ ಸಲೂನ್ ಮಾಲೀಕ ಪ್ರಕಾಶ ಶಹಾಪೂರ ಎಂಬಾತನಿಂದ ಉಚಿತ ಹೇರ್ ಕಟಿಂಗ್ ನಡೆಯುತ್ತಿದೆ. ಈ ವೇಳೆ ಸರತಿ ಸಾಲಿನಲ್ಲಿ ಕುಳಿತು ಮಕ್ಕಳು ಹಾಗೂ ಜನರು ಕಟಿಂಗ್ ಮಾಡಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಅಪ್ಪು ಅಭಿಮಾನಿಗಳು (Fans) ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದು ಇದೇ ವೇಳೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಅಪ್ಪು ಹೇರ್ ಸಲೂನ್ ಮಾಲೀಕ ಪ್ರಕಾಶ ಶಹಾಪೂರ, ನಾನು ಅಪ್ಪು ಅವರ ಕಟ್ಟಾ ಅಭಿಮಾನಿಯಾಗಿದ್ದೇನೆ. ಜೀವಿತಾವಧಿಯಲ್ಲಿ ಅಪ್ಪು ಭೇಟಿ ಮಾಡಬೇಕೆಂಬುದು ನನ್ನ ಕನಸಾಗಿತ್ತು. ಆದರೆ ಅವರನ್ನು ಭೇಟಿ ಮಾಡಲು ಆಗಲಿಲ್ಲ. ಆ ನೋವು ನನ್ನ ಜೀವನುದ್ದಕ್ಕೂ ಕಾಡುತ್ತಿದೆ. ಮಾತ್ರವಲ್ಲದೇ ಅಪ್ಪು ಸದಾ ನಮ್ಮೊಂದಿಗೆ ಜೀವಂತವಾಗಿದ್ದಾರೆ. ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇವತ್ತೊಂದಿನ ಉಚಿತ ಹೇರ್ ಕಟಿಂಗ್ ಸೇವೆ ಮಾಡುತ್ತಿದ್ದೀನಿ ಎಂದು ಅಪ್ಪು ಅಭಿಮಾನಿ ಪ್ರಕಾಶ್ ಭಾವುಕ ಮಾತನಾಡಿದ್ದಾರೆ. ಪುನೀತ್​ ರಾಜ್​ಕುಮಾರ್​ ಅವರ ಹುಟ್ಟುಹಬ್ಬದ ಪ್ರಯುಕ್ತ 'ಜೇಮ್ಸ್​’ ಸಿನಿಮಾ (James) ರಿಲೀಸ್​ ಆಗಿದೆ. 

Tap to resize

Latest Videos

undefined

Puneeth Rajkumar: 'ಹಾಸ್ಟೆಲ್‌ ಹುಡುಗ್ರು ಬೇಕಾಗಿದ್ದಾರೆ' ಟೀಮ್‌ನಿಂದ ಅಪ್ಪುಗೆ ಟ್ರಿಬ್ಯೂಟ್‌

ರಾಜ್ಯದ ಪ್ರತಿ ಮೂಲೆಯಲ್ಲೂ ಈ ಸಿನಿಮಾ ಅಬ್ಬರಿಸುತ್ತಿದೆ. ಎಲ್ಲ ಕಡೆಗಳಲ್ಲೂ ‘ಜೇಮ್ಸ್​’ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಪುನೀತ್​ ರಾಜ್​ಕುಮಾರ್​ ಅವರನ್ನು ದೊಡ್ಡ ಪರದೆ ಮೇಲೆ ನೋಡಿದ ಅಭಿಮಾನಿಗಳು (Puneeth Rajkumar Fans) ಭಾವುಕರಾಗುತ್ತಿದ್ದಾರೆ. ಕೆಲವರಂತೂ ಅಕ್ಷರಶಃ ಕಣ್ಣೀರು ಹಾಕುತ್ತಿದ್ದಾರೆ. ಇನ್ನು ಜಿಲ್ಲೆಯ ಚಿತ್ರಮಂದಿರಗಳಲ್ಲಿ 'ಜೇಮ್ಸ್' ಹವಾ ಜೋರಾಗಿದ್ದು, ಇಂದು ಬೆಳಗ್ಗೆಯಿಂದಲೇ ಟಿಕೆಟ್ ಪಡೆಯಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಜೊತೆಗೆ ಅಪ್ಪು ಅಭಿಮಾನಿಗಳು ಪುನೀತ್ ಅವರ ಭಾವಚಿತ್ರ ಹಿಡಿದು ಜಾನಪದ ಕಲಾತಂಡಗಳೊಂದಿಗೆ ನಗರದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಅಭಿಮಾನ ಮೆರೆದಿದ್ದಾರೆ.

ಮೆರವಣಿಗೆಗೆ ಅವಕಾಶ ಇಲ್ಲ: ಹಿಜಾಬ್‌ ವಿವಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರುವ ಕಾರಣ ಕೆಲವೆಡೆ ಪುನೀತ್‌ ಜನ್ಮದಿನಾಚರಣೆಗೆ ಅನುಮತಿ ಸಿಕ್ಕಿಲ್ಲ. ಬೆಂಗಳೂರಿನ ಚಾಮರಾಜಪೇಟೆಯಿಂದ ವೀರೇಶ್‌ ಚಿತ್ರಮಂದಿರದವರೆಗೂ ಬೈಕ್‌ ರಾರ‍ಯಲಿ, ಮೆರವಣಿಗೆ ಮಾಡಲು ಅಭಿಮಾನಿಗಳು ನಿರ್ಧರಿಸಿದ್ದರು. ಜೊತೆಗೆ ಪುನೀತ್‌ ಸಮಾಧಿ, ವೀರಭದ್ರೇಶ್ವರ, ಪ್ರಸನ್ನ ಹಾಗೂ ವೀರೇಶ್‌ ಚಿತ್ರಮಂದಿರಗಳ ಮೇಲೆ ಹೆಲಿಕಾಪ್ಟರ್‌ ಮೂಲಕ ಪುಷ್ಪಮಳೆ ಸುರಿಸಲು ಅಭಿಮಾನಿಗಳು ಸಜ್ಜಾಗಿದ್ದರು. ಇವೆರಡೂ ಕಾರ್ಯಕ್ರಮಗಳಿಗೆ ಪೊಲೀಸ್‌ ಇಲಾಖೆ ಅನುಮತಿ ನೀಡಿಲ್ಲ. ಅಭಿಮಾನಿಗಳು ಈ ಕಾರಣಕ್ಕೆ ಕಣ್ಣೀರು ಹಾಕಿದ್ದಾರೆ.

ಪುನೀತ್ ರಾಜ್‌ಕುಮಾರ್ ಬಯೋಗ್ರಫಿ ‘ನೀನೇ ರಾಜಕುಮಾರ’ ಬಿಡುಗಡೆ ಮಾಡಿದ ಕಿಚ್ಚ

ಹಾಡುಗಳ ಅರ್ಪಣೆ: ಪುನೀತ್‌ ರಾಜ್‌ಕುಮಾರ್‌ ಅವರಿಗಾಗಿಯೇ ವಿಶೇಷವಾದ ಹಾಡುಗಳು ಮೂಡಿ ಬಂದಿವೆ. ನಿರ್ದೇಶಕ ಪವನ್‌ ಒಡೆಯರ್‌ (Pawan Wadeyar) ರಚನೆಯ ‘ಪವರಿಸಂ’ ಹಾಡು ಎಂಆರ್‌ಟಿ ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆ ಆಗಿದೆ. ರಾಕ್‌ಲೈನ್‌ ವೆಂಕಟೇಶ್‌ ಈ ಹಾಡನ್ನು ನಿರ್ಮಿಸಿದ್ದು, ಶ್ರೀಹರ್ಷ ಹಾಡಿದ್ದಾರೆ. ಡಿ ಇಮಾನ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಮತ್ತೊಬ್ಬ ನಿರ್ದೇಶಕ ಕಾಂತ ಕನ್ನಲ್ಲಿ (Kantha Kannalli) ‘ಮಹಾನುಭಾವ’ (Mahanubhava) ಹೆಸರಿನಲ್ಲಿ ಹಾಡು ರೂಪಿಸಿದ್ದಾರೆ. ಶ್ರೀಧರ್‌ ವಿ ಸಂಭ್ರಮ ಸಂಗೀತದಲ್ಲಿ ಈ ಹಾಡು ಮೂಡಿ ಬಂದಿದ್ದು, ಗಾಯಕರಾದ ವಿಜಯ್‌ ಪ್ರಕಾಶ್‌, ಶಂಕರ್‌ ಮಹಾದೇವನ್‌, ಸೋನು ನಿಗಮ್‌, ಕೈಲಾಶ್‌ ಖೇರ್‌ ‘ಮಹಾನುಭಾವ’ ಹಾಡಿಗೆ ಧ್ವನಿಯಾಗಿರುವುದು ವಿಶೇಷ. 

click me!