ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!

ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!

Published : Jul 17, 2026, 08:47 PM ISTUpdated : Jul 17, 2026, 08:51 PM IST

ನಟ ಪುನೀತ್​ ರಾಜ್‌ಕುಮಾರ್ ಬರೀ ನಟನಾಗಿ ಮಾತ್ರ ಬೆಳೆದಿಲ್ಲ. ಬ್ಯುಸಿನೆಸ್ ಮಾಡೋದ್ರಲ್ಲೂ ಅಪ್ಪುಗೆ ಸಿಕ್ಕಾಪಟ್ಟೆ ಐಡಿಯಾಗಳಿದ್ವು. ಆ ಐಡಿಯಾಗಳನ್ನ ಅಪ್ಪು ಮನೆಯವರು ಸ್ನೇಹಿತರು, ಕೆಲವೊಂದು ಫ್ಯಾನ್ಸ್​ಗೂ ಕೊಟ್ಟಿದ್ದಿದೆ. 

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್​(Puneeth Rajkumar) ಅದೆಷ್ಟೋ ಜನರಿಗೆ ಸ್ಪೂರ್ತಿ.. ಹಲವರಿಗೆ ಲೈಫ್ ಕಟ್ಟಿಕೊಳ್ಳೋ ದೈರ್ಯ ಕೊಟ್ಟವರು. ತನ್ನ ಮಕ್ಕಳಿಗೆ ಜೀವನ ಪಾಠ ಮಾಡದೇ ಇರ್ತಾರಾ ಹೇಳಿ..? ಹೌದು, ಅಪ್ಪನ ಜೀವನ ಪಾಠವೇ ಮಕ್ಕಳು ಇಂದು ತನ್ನ ಸ್ವಂತ ಕಾಲ ಮೇಲೆ ನಿಲ್ಲೋ ಸಾಹಸಕ್ಕೆ ರಕ್ಷಣಾ ಕವಚ ಆಗಿದೆ. ಅದರ ಮೊದಲ ಹೆಜ್ಜೆ ಎಂಬಂತೆ, ನಟ ಪುನೀತ್ ರಾಜ್‌ಕುಮಾರ್ ಮುದ್ದಿನ ಮಗಳು ವಂದಿತಾ (Vanditha Puneeth Rajkumar) ಕಟ್ಟಿರುವ ಈ ಉದ್ಯಮ..

ಅಪ್ಪು ಹೇಳಿದಂತೆ ಬಿಜಿನೆಸ್​ ಶುರು ಮಾಡಿದ ಪುತ್ರಿ ವಂದಿತಾ..!
ನಟ ಪುನೀತ್​ ರಾಜ್‌ಕುಮಾರ್ ಬರೀ ನಟನಾಗಿ ಮಾತ್ರ ಬೆಳೆದಿಲ್ಲ. ಬ್ಯುಸಿನೆಸ್ ಮಾಡೋದ್ರಲ್ಲೂ ಅಪ್ಪುಗೆ ಸಿಕ್ಕಾಪಟ್ಟೆ ಐಡಿಯಾಗಳಿದ್ವು. ಆ ಐಡಿಯಾಗಳನ್ನ ಅಪ್ಪು ಮನೆಯವರು ಸ್ನೇಹಿತರು, ಕೆಲವೊಂದು ಫ್ಯಾನ್ಸ್​ಗೂ ಕೊಟ್ಟಿದ್ದಿದೆ. ಅಪ್ಪು ಕೊಟ್ಟ ಬ್ಯುಸಿನೆಸ್ ಐಡಿಯಾಗಳನ್ನ ಚಾಲ್ತಿಗೆ ತಂದು ಲೈಪ್ ಕಟ್ಟಿಕೊಂಡವರು ಹಲವರಿದ್ದಾರೆ. ಈಗ ಪುನೀತ್ ರಾಜ್ ಕುಮಾರ್ ಪುತ್ರಿ ವಂದಿತಾ ಅಪ್ಪನ ಆಸೆಯಂತೆ ಒಂದು ಸಣ್ಣ ಉದ್ಯಮ ಶುರು ಮಾಡಿದ್ದಾರೆ...

ಪುನೀತ್ ರಾಜ್‌ಕುಮಾರ್‌ಗೆ ಉದ್ಯಮಗಳ ಬಗ್ಗೆ ಸಾಕಷ್ಟು ಆಸಕ್ತಿ ಇತ್ತು. ನಟರಾಗಿರುವ ಜೊತೆಗೆ ನಿರ್ಮಾಣ ಮತ್ತು ಸಂಗೀತ ಕ್ಷೇತ್ರದಲ್ಲಿ ಉದ್ಯಮವನ್ನು ಪುನೀತ್ ನಡೆಸುತ್ತಿದ್ರು. ಜೊತೆಗೆ ಇತರೆ ಕೆಲವು ಉದ್ಯಮಗಳ ಮೇಲೂ ಹೂಡಿಕೆ ಮಾಡಿದ್ರು. ಅಷ್ಟೆ ಅಲ್ಲ ಅತ್ತಿಗೆ ಶಿವರಾಜ್ ಕುಮಾರ್ ಧರ್ಮ ಪತ್ನಿ ಗೀತಾ ಶಿವರಾಜ್ ಕುಮಾರ್‌ಗೆ ಬೇಕಿಂಗ್ ಉದ್ಯಮ ಆರಂಭಿಸುವಂತೆ ಅಪ್ಪು ಹೇಳಿದ್ರು. ಯಾಕಂದ್ರೆ ಗೀತಾ ಶಿವರಾಜ್​ ಕುಮಾರ್ ಬೇಕಿಂಗ್‌ನಲ್ಲಿ ಮಾಸ್ಟರ್ ಶೆಫ್​​..

'ನುಕಾಸ್ ಕೆಫೆ'.. ಇದು ಅಪ್ಪು ಕಿರಿಯ ಪುತ್ರಿಯ ಹೊಸ ಸಾಹಸ..!
ಇದೀಗ ಪುನೀತ್ ರಾಜ್​​ಕುಮಾರ್ ಅವರ ಪುತ್ರಿಯೇ ಹೊಸ ಉದ್ಯಮ ಆರಂಭ ಮಾಡಿದ್ದಾರೆ. ಅದೂ ಅಪ್ಪ ತಮಗೆ ಇಟ್ಟ ಹೆಸರಿನಿಂದಲೇ ಉದ್ಯಮ ಆರಂಭಿಸಿರುವುದು ವಿಶೇಷ. ಪುನೀತ್ ರಾಜ್​​ಕುಮಾರ್ ಅವರ ಕಿರಿಯ ಪುತ್ರಿ ವಂದಿತಾ ಬೇಕಿಂಗ್ ಉದ್ಯಮ ಆರಂಭಿಸಿದ್ದಾರೆ. ದೊಡ್ಡಮ್ಮ ಗೀತಾ ಶಿವರಾಜ್ ಕುಮಾರ್ ರೀತಿಯಲ್ಲಿಯೇ ವಂದಿತಾಗು ಬೇಕಿಂಗ್ ಬಗ್ಗೆ ಆಸಕ್ತಿ ಇದೆ. ಹಾಗಾಗಿ ಇದೀಗ ಅವರೇ ಖುದ್ದು ಬೇಕಿಂಗ್ ಉದ್ಯಮಕ್ಕೆ ಕಾಲಿರಿಸಿದ್ದು, ಸಣ್ಣದಾಗಿ ಬ್ಯುಸಿನೆಸ್ ಪ್ರಾರಂಭ ಮಾಡಿದ್ದಾರೆ. ಅದಕ್ಕೆ ‘ನುಕಾಸ್ ಕೆಫೆ’ ಎಂದು ಹೆಸರಿಟ್ಟಿದ್ದಾರೆ. ಅಂದಹಾಗೆ ನುಕಾ ಎಂಬುದು, ವಂದಿತಾರನ್ನು ಅಪ್ಪು ಅವರು ಪ್ರೀತಿಯಿಂದ ಕರೆಯುತ್ತಿದ್ದ ಹೆಸರು.

ಕೇಕು, ಬಿಸ್ಕೆಟ್ಟುಗಳು ಸೇರಿದಂತೆ ಇನ್ನೂ ಹಲವು ಬೇಕ್ಡ್ ಐಟಂಗಳನ್ನು ವಂದಿತಾ ಮಾರಾಟ ಮಾಡುತ್ತಿದ್ದಾರೆ. ಆನ್​ಲೈನ್ ಮೂಲಕ ಆರ್ಡರ್ ಮಾಡಿ ಖಾದ್ಯಗಳನ್ನು ಖರೀದಿ ಮಾಡಬಹುದು. ಕೆಫೆಗಾಗಿ ವಿಶೇಷ ವೆಬ್​ಸೈಟ್ ಅನ್ನು ಸಹ ವಂದಿತಾ ಮಾಡಿಸಿದ್ದಾರೆ. ಖುದ್ದು ಅವರೇ ಮನೆಯಲ್ಲಿ ಖಾದ್ಯ ತಯಾರಿಸಿ ಅದನ್ನು ಆನ್​ಲೈನ್ ನಲ್ಲಿ ಮಾರಾಟ ಮಾಡುತ್ತಾರೆ ವಂದಿತಾ. ಪುನೀತ್ ಪುತ್ರಿ ವಂದಿತಾ ತಮ್ಮ ಪ್ರೀತಿ ಪಾತ್ರರಿಗೆ ಖಾದ್ಯಗಳನ್ನ ಮಾಡ್ತಿದ್ರು. ವಿನಯ್ ರಾಜ್‌ಕುಮಾರ್ ‘ಗ್ರಾಮಾಯಣ’ ಸಿನಿಮಾ ಬಂದಾಗ ವಂದಿತಾ ಅಣ್ಣನಿಗಾಗಿ ವಿಶೇಷ ಕೇಕ್ ತಯಾರಿಸಿದ್ರು. ಅದರ ಮೇಲೆ 'ಗ್ರಾಮಾಯಣ' ಎಂದು ಬರೆದಿದ್ರು. ಈಗ ಹವ್ಯಾಸವನ್ನೇ ಉದ್ಯಮವನ್ನಾಗಿ ಮಾಡಿಕೊಂಡಿದ್ದಾರೆ.

‘ಸಿನಿಮಾ ಹಂಗಾಮ’ ವಿಡಿಯೋ ನೋಡಿ..
 

02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more