
ಬೆಂಗಳೂರು (ಜೂನ್ 22): ಇದೇ 29ಕ್ಕೆ ಸರಳತೆಯ ಸಾಮ್ರಾಟ ನಟ ಪುನೀತ್ ರಾಜಕುಮಾರ್ (puneeth rajkumar ) ಅಗಲಿ 7 ತಿಂಗಳು ಕಳೆಯಲಿದೆ. ಈಗಲೂ ಕೂಡ ಕನ್ನಡಿಗರು ಪುನೀತ್ ರಾಜ್ ಕುಮಾರ್ ನೆನೆಸಿಕೊಂಡೇ ದಿನ ಕಳೆಯುತ್ತಿದ್ದಾರೆ. ಇದರ ನಡುವೆ ಬಹಳ ವರ್ಷಗಳಿಂದ ಪುನೀತ್ ರಾಜ್ ಕುಮಾರ್ ಅವರ ಬಾಡಿಗಾರ್ಡ್ ಹಾಗೂ ಗನ್ ಮ್ಯಾನ್ (bodyguard and Gunman) ಆಗಿ ಕೆಲಸ ಮಾಡಿದ್ದ ಚಲಪತಿ (Chalapathi ) ತಮ್ಮ ಕೆಲಸವನ್ನು ತೊರೆದಿದ್ದಾರೆ.
ಪುನೀತ್ ರಾಜ್ ಕುಮಾರ್ ಇದ್ದಾಗ ಅವರೆಲ್ಲಿಯೇ ಸಾರ್ವಜನಿಕ ಸಮಾರಂಭಗಳಿಗೆ ಹೋದರೂ, ಅವರೊಂದಿಗೆ ರಾಮನ ಬಂಟ ಹನುಮಂತನಂತೆ ಕಾಯುತ್ತಿದ್ದ ಚಲಪತಿ ಎನ್ನುವ ಹೆಸರು ಕನ್ನಡ ಚಿತ್ರರಂಗಕ್ಕೂ ಪರಿಚಿತ. ಪುನೀತ್ ರಾಜ್ ಕುಮಾರ್ ಭದ್ರತೆಯಲ್ಲಿ ಒಂಚೂರು ಕುಂದು ಉಂಟಾಗದ ರೀತಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ಆದರೆ, ಈಗ ಪುನೀತ್ ರಾಜ್ ಕುಮಾರ್ ಅವರೇ ಇಲ್ಲ. ಹಾಗಾಗಿ ತಾನು ಯಾರಿಗೆ ರಕ್ಷಣೆ ನೀಡುವ ಎನ್ನುವ ಚಲಪತಿ ಅದೇ ಕಾರಣಕ್ಕಾಗಿ ತಮ್ಮ ಕೆಲಸವನ್ನು ತೊರೆದಿದ್ದಾರೆ ಎಂದು ಹೇಳಲಾಗಿದೆ.
"
ಪುನೀತ್ ರಾಜ್ ಕುಮಾರ್ ಅವರ ಮನೆಯೊಂದ ಹೊರಬಂದ ಬಳಿಕ ಚಲಪತಿ ಮಾತನಾಡಿದ್ದು, ಪುನೀತ್ ಸರ್ ಇಲ್ಲದೆ ಏಳು ತಿಂಗಳು ಕಳೆಯಿತು. ನಿಜಕ್ಕೂ ಅವರಿಲ್ಲ ಎಂದು ನನಗೆ ಅನಿಸಿಲ್ಲ. ತಮ್ಮ ಕೆಲಸವನ್ನು ಬಂದು ಮುಗಿಸಿ ಹೋಗಿದ್ದಾರೆ. ಅವರು ನನಗೆ ದೇವರು. ನಾನು ಸಾಯುವವರೆಗೂ ನನ್ನ ಎದೆಯಲ್ಲಿ ಅವರನ್ನು ಇಟ್ಟು ಪೂಜೆ ಮಾಡ್ತೀನಿ' ಎನ್ನುತ್ತಾರೆ.
ನಾನು ಅವರ ಮನೆಯಲ್ಲಿ ಕೆಲಸ ಬಿಟ್ಟಿದ್ದೇನೆ ಅಂತಲ್ಲ. ದಿನಾ ಮನೆಗೆ ಬಂದು ಕೂತು ಹೋಗೋದಿಕ್ಕೆ ಬೇಜಾರಾಗ್ತಿದೆ ಎಂದು ಅಶ್ವಿನಿ ಮೇಡಂ ಅವರ ಬಳಿ ಹೇಳಿದ್ದೆ. ಅದಕ್ಕೆ ಅವರು, ಸರಿ ನಿಮ್ಮ ಕೆಲಸ ಇದ್ರೆ ಮಾಡಿಕೊಳ್ಳಿ, ಏನಾದ್ರೂ ಅಗತ್ಯವಿದ್ದಾಗ ಹೇಳಿ ಕಳಿಸುತ್ತೇನೆ ಆಗ ಬನ್ನು ಅಂದರು, ಅವರು ಕರೆದಾಗ ಹೋಗಿ ಕೆಲಸ ಮಾಡುತ್ತೇನೆ.
ನಮ್ಮ ಯಜಮಾನ್ರು ಅಪ್ಪು ಸರ್‌ಗೆ ಸುಳ್ಳು ಹೇಳಬಾರದು. ನಾನು ಹಾಗೆ ನಿಯತ್ತಾಗಿ ಇದ್ದೆ. ಅಪ್ಪು ಸರ್ ಮನೆಯಿಂದ ನಿಯತ್ತಾಗಿ ಕೆಲಸ ಮಾಡಿ ಬಂದಿದ್ದೇನೆ. ಅಪ್ಪು ಸರ್ ಯಿಂದ ನಾನು ಕಲಿತಿದ್ದು, ಎಲ್ಲರ ಜೊತೆ ಖುಷಿ ಆಗಿರಬೇಕು, ಎಲ್ಲರಿಗೂ ಒಳ್ಳೆದು ಮಾಡಬೇಕು ಅಂತ. ಅವರ ಜೊತೆ ನಾವು ಇದ್ದಿದ್ದು ಅಂದ ಮೇಲೆ ನಾನು ಹಾಗೇ ಇರುತ್ತೇನೆ. ಅಪ್ಪು ಸರ್ ಹೆಸರು ಹಾಳಾಗದ ಹಾಗೆ ನಡೆದುಕೊಳ್ಳುತ್ತೇನೆ' ಎಂದು ಚಲಪತಿ ಹೇಳಿದ್ದಾರೆ.
ಅಪ್ಪು ಸರ್ ಇಲ್ಲದೆ ಅವರ ಮನೆಗೆ ಹೋಗಿ ಬರುತ್ತಿದ್ದೆ. ಕಳೆದ ಆರು ತಿಂಗಳಿನಿಂದ ಹಾಗೇ ದಿನ ದೂಡಿದ್ದೇನೆ. ಅವರ ಮಕ್ಕಳ ಹೊಟ್ಟೆಯಲ್ಲೇ ಅಪ್ಪು ಸರ್ ಮತ್ತೆ ಹುಟ್ಟಿ ಬರ್ತಾರೆ. ಅಪ್ಪು ಸರ್ ಬಗ್ಗೆ ಯೋಚನೆ ಮಾಡಿನೇ ನಾನು ಸೊರಗಿ ಹೋಗಿದ್ದೇನೆ. ಅಪ್ಪು ಸರ್ ನ ಮನಸ್ಸಲ್ಲೇ ಇಟ್ಡುಕೊಂಡು ದಿನ ಕಳೆಯುತ್ತಿದ್ದೇನೆ ಎನ್ನುತ್ತಾರೆ.
ಚಿಕ್ಕಪ್ಪನ ಹಾದಿಯಲ್ಲಿ ಯುವ ರಾಜ್ ಕುಮಾರ್; ಯುವ ವಿಡಿಯೋ ಕಂಡು ಅಪ್ಪು ನೆನದ ಫ್ಯಾನ್ಸ್
ನನಗೆ ಗಿಫ್ಟ್ ಕೊಟ್ಟಿದ್ದು ಅಪ್ಪು ಯಜಮಾನ್ರು: ನನಗೆ ಸಾಕಷ್ಟು ಗಿಫ್ಟ್‌ಗಳನ್ನು ಅಪ್ಪು ಯಜಮಾನ್ರು ಕೊಟ್ಟಿದ್ದಾರೆ. ಕೊನೆ ಗಳಿಗೆಯಲ್ಲಿ ಅವರ ಕೈಯಲ್ಲಿ ಇದ್ದ ವಾಚನ್ನ ನಾನು ಅಕ್ಕನ ಬಳಿ ಕೇಳಿ ಇಟ್ಡುಕೊಂಡಿದ್ದೇನೆ. ನಾನು ಅದನ್ನು ಬಳಸೋದಿಲ್ಲ. ಅದನ್ನ ಪೂಜೆ ಮಾಡಿಕೊಂಡು ಇರುತ್ತೇನೆ. ಅಪ್ಪು ಸರ್ ಕೊಟ್ಟ ದುಡ್ಡನ್ನ ನಾನು ಖರ್ಚು ಮಾಡಲ್ಲ. ಚಲಪತಿ ಅಂತಾ ಎಲ್ಲೇ ಹೋದ್ರು ನನ್ನನ್ನ ಮಾತಾಡಿಸ್ತಾರೆ ಅದೇ ನನಗೆ ಭಿಕ್ಷೆ. ಅದೇ ನನಗೆ ಗಿಫ್ಟ್ ಎಂದು ಚಲಪತಿ ಹೆಳಿದ್ದಾರೆ.
ಪುನೀತ್‌ಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ, ವೇದಿಕೆ ಮೇಲೆ ಭಾವುಕರಾದ ಅಶ್ವಿನಿ ಪುನೀತ್
ಅಪ್ಪು ಸರ್ ಅವರ ದೊಡ್ಡ ಅಭಿಮಾನಿಯ ಜೊತೆ ಇದ್ದೇನೆ: ನಾನು ಜೀವನೋಪಾಯಕ್ಕೆ ಏನು ಕೆಲಸ ಮಾಡುತ್ತಿಲ್ಲ. ಈಗ ಬಳ್ಳಾರಿಯ ಮಹಾಂತೇಶ್ ಅನ್ನೋರು ನನ್ನ ಜೊತೆ ಇರು ಎಂದಿದ್ದಾರೆ. ಅವರು ಅಪ್ಪು ಸರ್ ಅವರ ದೊಡ್ಡ ಅಭಿಮಾನಿ ಆಗಿದ್ದವರು. ಅವರು ಕೆಲಸಕ್ಕೆ ಅಂತ ಕರೆದಿಲ್ಲ. ನೀವು ಅಪ್ಪು ಬಾಸ್ ಜೊತೆ ಇದ್ದವರು ನಮ್ಮ ಜೊತೆ ಇದ್ದು ನಾಲ್ಕು ಜನಕ್ಕೆ ಒಳ್ಳೆ ಕೆಲಸ ಮಾಡಿಕೊಂಡಿರೋಣ ಅಂದಿದ್ದಾರೆ. ಹಾಗಾಗಿ ಅವರೊಂದಿಗೆ ಇದ್ದೇನೆ ಎಂದು ಚಲಪತಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.