777 ಚಾರ್ಲಿ ಸಿನಿಮಾ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದರೆ ಈ ಸಿನಿಮಾದಲ್ಲಿ ಹೀಳಿದ್ದೇ ಒಂದು, ಆಗ್ತಿರೋದೇ ಇನ್ನೊಂದಾಗಿದೆ. ಲ್ಯಾಬ್ರಡಾಲ್ ತಳಿಯ ನಾಯಿಗಳಿಗೆ ವಿಪರೀತ ಡಿಮ್ಯಾಂಡ್ ಕ್ರಿಯೇಟ್ ಆಗಿ ಚಿತ್ರತಂಡದವರು ಪೇಚಾಡುವ ಹಾಗಾಗಿದೆ.
777 ಚಾರ್ಲಿ (777 charlie) ಕಳೆದ ವೀಕೆಂಡ್ ನಲ್ಲೂ ಹೆಚ್ಚಿನೆಡೆ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಈ ಸಿನಿಮಾ ಹತ್ತಿರತ್ತಿರ 100 ಕೋಟಿ ಕಲೆಕ್ಷನ್ ಮಾಡಿರಬಹುದು ಅಂತ ಅಂದಾಜಿಸಲಾಗಿದೆ. ಆದರೆ ಚಿತ್ರತಂಡ ಈ ವಿಚಾರವಾಗಿ ಕಮಕ್ ಕಿಮಕ್ ಅಂದಿಲ್ಲ. ಆದರೆ ಉತ್ತಮ ಕಲೆಕ್ಷನ್ ಗೆ ಖುಷಿಯಲ್ಲಂತೂ ಇದೆ. ಈ ನಡುವೆ ಸೂಪರ್‌ಸ್ಟಾರ್ ರಜನಿಕಾಂತ್ (rajanikanth) ಕೂಡ ಚಿತ್ರವನ್ನು ನೋಡಿ ಮೆಚ್ಚಿಕೊಂಡು ರಕ್ಷಿತ್ ಶೆಟ್ಟಿ (Rakshit shetty) ಅವರಿಗೆ ಫೋನ್ ಮಾಡಿ ಶುಭಾಶಯ ಹೇಳಿದ್ದಾರೆ. ಚಿತ್ರದ ಮೇಕಿಂಗ್, ಅದರ ಆಧ್ಯಾತ್ಮಿಕ ಧ್ವನಿ ಎಲ್ಲವೂ ಅದ್ಭುತವಾಗಿದೆ ಎಂದಿದ್ದಾರಂತೆ.
ಇದೀಗ ಜನ ಈ ಸಿನಿಮಾದ ಸಂದೇಶವನ್ನು ತಪ್ಪಾಗಿ ಅರ್ಥ ಮಾಡಿಕೊಂಡ ಪರಿಣಾಮ ತಂಡಕ್ಕೆ ಹೊಸ ತಲೆನೋವು ಶುರುವಾಗಿದೆ. ಈ ಚಿತ್ರ ತಂಡ ನಾಯಿಗಳ ಅವೖಜ್ಞಾನಿಕ ಬ್ರೀಡಿಂಗ್ ಬಗ್ಗೆ ಬೆಳಕು ಚೆಲ್ಲಿದ್ದಕ್ಕೆ ರಾಜ್ಯ ಸರ್ಕಾರ ಈ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಿತ್ತು. ಆದರೆ ಇದೀಗ ಸಿನಿಮಾ ಏನಾಗಬಾರದು ಅಂದುಕೊಂಡಿತ್ತೋ ಅದು ಹೆಚ್ಚು ಸಾಧ್ಯತೆಯನ್ನು ಹಲವರು ವ್ಯಕ್ತಪಡಿಸಿದ್ದಾರೆ. 777 ಚಾರ್ಲಿ ಸಿನಿಮಾದಲ್ಲಿ ಚಾರ್ಲಿ ಎಂಬ ನಾಯಿಯ ನಟನೆ ನೋಡಿದ ಮೇಲೆ ಜನರಿಗೆ ಚಾರ್ಲಿ ಥರದ್ದೇ ನಾಯಿ ತಮ್ಮ ಮನೆಗೂ ಬೇಕು ಅಂತ ಅನಿಸಲಾರಂಭಿಸಿದೆ. ಹಾಗಾಗಿ ಲ್ಯಾಬ್ ಪಪ್ಪಿಗಳಿಗೆ ದೇಶಾದ್ಯಂತ ವಿಪರೀತ ಬೇಡಿಕೆ ಹುಟ್ಟಿಕೊಂಡಿದೆ. ಈ ಬೇಡಿಕೆ ಪೂರೖಸಲು ಬ್ರೀಡರ್‌ಗಳು ಈ ಚಿತ್ರದಲ್ಲಿ ತಿಳಿಸಿರುವಂತೆ ಅವೖಜ್ಞಾನಿಕ ಬ್ರೀಡಿಂಗ್ ಗೆ ಮೊರೆ ಹೋಗುವ ಸಾಧ್ಯತೆ ಇದೆ. ರಾಷ್ಟ್ರಮಟ್ಟದ ಪತ್ರಿಕೆಗಳು ಈ ವಿಚಾರವನ್ನು ಪ್ರಕಟಿಸಿವೆ.
ಆದರೆ 777 ಚಾರ್ಲಿ ಚಿತ್ರತಂಡ ಈ ಥರ ಅವೖಜ್ಞಾನಿಕ ಬ್ರೀಡಿಂಗ್ ಬಗ್ಗೆ ಬೆಳಕು ಚೆಲ್ಲುವ ಜೊತೆಗೆ ದೇಸಿ ನಾಯಿಗಳ ದತ್ತು ಪಡೆಯುವ ಬಗೆಗೂ ಸಂದೇಶ ನೀಡಿತ್ತು. ಆದರೆ ಈ ಸಿನಿಮಾ ನೋಡಿ ಜನ ಚಾರ್ಲಿಯಂಥಾ ನಾಯಿಗಾಗಿ ಡಿಮ್ಯಾಂಡ್ ಮಾಡತೊಡಗಿದರೇ ವಿನಃ ದೇಸಿ ನಾಯಿ ದತ್ತು ಪಡೆಯುವ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಂಡಿಲ್ಲ.
777 ಚಾರ್ಲಿ ಸಿನಿಮಾ ನೋಡಿ ತಮ್ಮ ನಾಯಿಯನ್ನು ನೆನಪಿಸಿಕೊಂಡ ಬೊಮ್ಮಾಯಿ
ಇದೀಗ 777 ಚಾರ್ಲಿ ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿದೆ. ಈ ಚಿತ್ರದ ನಾಯಕ ರಕ್ಷಿತ್ ಶೆಟ್ಟಿ, ನಿರ್ದೇಶಕ ಕಿರಣ್ ರಾಜ್, ನಟ ರಾಜ್ ಬಿ ಶೆಟ್ಟಿ ಮೊದಲಾದವರೆಲ್ಲ ಸೋಷಿಯಲ್ ಮೀಡಿಯಾದಲ್ಲಿ, ದಯವಿಟ್ಟು ಬ್ರೀಡ್ ನೋಡಬೇಡಿ, ಸಂದೇಶ ನೋಡಿ, ದೇಸಿ ತಳಿಯನ್ನು ದತ್ತು ಪಡೆಯಿರಿ ಎನ್ನುತ್ತಿದ್ದಾರೆ. ನಿರ್ದೇಶಕ ಕಿರಣ್ ರಾಜ್ ಈ ಮೊದಲೇ ಹೇಳಿರುವಂತೆ ದೇಸಿ ನಾಯಿ ದತ್ತು ತೆಗೆದುಕೊಂಡು ಸಾಕಲಾರಂಭಿಸಿದ್ದಾರೆ. ‘ನಾನು ಮೊದಲಿಂದಲೂ ದೇಸಿ ತಳಿಯ ನಾಯಿಯನ್ನೇ ಸಾಕುತ್ತಿರುವುದು, ಈಗ ಆ ಲೀಸ್ಟ್ ಗೆ ಇನ್ನೊಂದು ದತ್ತು ಪಡೆದ ನಾಯಿ ಸೇರಿದೆ. ಈ ಮೂಲಕ ಈ ಹಿಂದೆ ನೀಡಿದ್ದ ಮಾತನ್ನು ಉಳಿಸಿಕೊಂಡಿದ್ದೇನೆ’ ಎಂದು ಕಿರಣ್ ರಾಜ್ ಟ್ವೀಟ್ ಮಾಡಿದ್ದಾರೆ.
ರಕ್ಷಿತ್ ಶೆಟ್ಟಿ, ‘ವಿದೇಶಿ ತಳಿಯ ನಾಯಿಗಿಂತ ದೇಸಿ ನಾಯಿಗಳನ್ನು ದತ್ತು ಪಡೆದು ಸಾಕಿರಿ. ನಾವು ಸಿನಿಮಾದಲ್ಲಿ ಹೇಳಿದ್ದು ಅದನ್ನು. ಸಿನಿಮಾದಲ್ಲಿ ಬಂದ ತಳಿಯ ನಾಯನ್ನು ಸಾಕಿ ಅಂತಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.
ರಾಜ್ ಬಿ ಶೆಟ್ಟಿ ಅವರೂ, ‘ನಮ್ಮನೆಯಲ್ಲಿ 8 ದೇಸಿ ತಳಿ ನಾಯಿಗಳಿವೆ. ನಿಮಗೆ ಬೇಕಾದ್ರೆ ಕೊಡುವ’ ಅಂದಿದ್ದಾರೆ.
ನಾನು ನಿಮ್ಮ ಜೊತೆ ನಟಿಸಬೇಕು; ರಕ್ಷಿತ್‌ಗೆ ಸ್ಟಾರ್ ನಟಿಯ ಬೇಡಿಕೆ
ಹಾಗಿದ್ರೆ ಸಿನಿಮಾದಲ್ಲೂ ದೇಸಿ ತಳಿಯ ನಾಯನ್ನೇ ತೋರಿಸಬಹುದಿತ್ತಲ್ವಾ ಅನ್ನುವ ಪ್ರಶ್ನೆಯನ್ನು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಕೇಳಿದ್ದಾರೆ. ಆದರೆ ಅದು ಅಷ್ಟು ಸುಲಭ ಸಾಧ್ಯವಲ್ಲ. ದೇಸಿ ನಾಯಿಯಿಂದ ಆ ಬಗೆಯ ಆ್ಯಕ್ಟಿಂಗ್ ತೆಗೆಸುವುದು ಬಹಳ ಕಷ್ಟ. ಜೊತೆಗೆ ಅವೈಜ್ಞಾನಿಕ ಬ್ರೀಡಿಂಗ್ ನಡೆಯೋದು ವಿದೇಶಿ ತಳಿಗಳ ನಾಯಿಗಳ ಮೇಲೆ. ದೇಸಿ ತಳಿಯ ನಾಯಿಗಳನ್ನು ಯಾರೂ ಬ್ರೀಡಿಂಗ್ ಮಾಡೋದಿಲ್ಲ. ಹೀಗಾಗಿ ಚಿತ್ರತಂಡದವರು ವಿದೇಶಿ ತಳಿಯ ನಾಯಿ ತೋರಿಸೋದು ಅನಿವಾರ್ಯವಾಗಿತ್ತು.
ನಮ್ಮ ಬೀದಿ ಬೀದಿಗಳಲ್ಲಿ ಅನೇಕ ದೇಸಿ ನಾಯಿಮರಿಗಳು ಕಾಯುವವರಿಲ್ಲದೆ ವಾಹನದ ಅಡಿಗೆ ಬಿದ್ದೋ, ಬೇರೆ ನಾಯಿಗಳ ದಾಳಿಯಿಂದಲೋ ಅಸುನೀಗುತ್ತಿರುತ್ತವೆ. ಆ ನಾಯಿಗಳಿಗೆ ನಿಜವಾದ ಪ್ರೊಟೆಕ್ಷನ್ ಬೇಕು. ಅಂಥಾ ನಾಯಿಗಳನ್ನು ಮಾನವೀಯತೆಯಿಂದ ಪೋಷಿಸಿದರೆ ನೀವೂ ಕಲಿಯುಗದ ಧರ್ಮರಾಯ ಆಗಬಹುದು ಅನ್ನೋದು ಚಿತ್ರತಂಡದ ವಿವರಣೆ.
ರಕ್ಷಿತ್ ಶೆಟ್ಟಿ ಚಾರ್ಲಿ ನೋಡಿ ಈ ವಿಡಿಯೋ ಹಾಕಿದ್ರಾ? ರಶ್ಮಿಕಾ ಕಾಲೆಳೆದ ನೆಟ್ಟಿಗರು