
ಬೆಂಗಳೂರು (ಮಾ. 04): ರಾಕಿಂಗ್ ಸ್ಟಾರ್ ಯಶ್ ಹಾಗೂ ಕೃತ ಕರಬಂಧ ಅಭಿನಯದ ಗೂಗ್ಲಿ ಸಿನಿಮಾ ಭಾರೀ ಹವಾ ಎಬ್ಬಿಸಿತ್ತು. ಅವರಿಬ್ಬರ ಕ್ಯೂಟ್ ಲವ್ ಸ್ಟೋರಿ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು.
ದರ್ಶನ್- ಸುದೀಪ್ ಮುಖಾಮುಖಿಗೆ ಸಿದ್ಧವಾಗಿದೆ ವೇದಿಕೆ!
ಗೂಗ್ಲಿ-2 ಸಿನಿಮಾವನ್ನು ಯಶ್ ಮಾಡಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಅವರೇ ಮಾಡಬಹುದು ಎಂದು ಅಭಿಮಾನಿಗಳು ಕಾದಿದ್ದರು. ಆದರೆ ಈ ಚಿತ್ರದಲ್ಲಿ ಯಶ್ ನಟಿಸುತ್ತಿಲ್ಲ. ಇದೀಗ ಹೊರ ಬಿದ್ದ ಮಾಹಿತಿ ಪ್ರಕಾರ, ಗೂಗ್ಲಿ-2 ದಲ್ಲಿ ಪೃಥ್ವಿ ನಾಯಕನಾಗಿ ನಟಿಸಲಿದ್ದಾರೆ.
100 ಕೆಜಿ ಬಾಂಬ್ ಸ್ಫೋಟಿಸಿ ಪಾಕ್ ನಾಶಪಡಿಸುತ್ತೇನೆ: ರಾಖಿ ಸಾವಂತ್
ಯಶ್‌ಗೆ ಬ್ರೇಕ್ ಕೊಟ್ಟ ಸಿನಿಮಾ ಗೂಗ್ಲಿ. ನಂತರ ಇವರು ಮಾಡಿದ ಸಿನಿಮಾಗಳೆಲ್ಲವೂ ಸೂಪರ್ ಡೂಪರ್ ಹಿಟ್ ಆಗಿದೆ. ಇದೀಗ ಗೂಗ್ಲಿ-2 ಬರುತ್ತಿದೆ. ಆದರೆ ಈ ಸಿನಿಮಾದಲ್ಲಿ ಯಶ್ ನಟಿಸುತ್ತಿಲ್ಲ. ಹಾಗಾದ್ರೆ ನಿರ್ಮಾಪಕರು ಯಶ್‌ರನ್ನು ಸಣಪರ್ಕಿಸಲಿಲ್ಲವೇ? ಎಂಬ ಪ್ರಶ್ನೆ ಮೂಡಿದೆ.
ಪೃಥ್ವಿ ಜಿಕೆ ವೆಂಕಟೇಶ್ ಮೊಮ್ಮಗ. ನಾನು ಮತ್ತು ವರಲಕ್ಷ್ಮೀ ಸಿನಿಮಾದಲ್ಲಿ ನಟಿಸಿದ್ದರು. ಈಗ ಗೂಗ್ಲಿ ಹಾಕಲು ರೆಡಿಯಾಗಿದ್ದಾರೆ. ಮುಂದಿನ ತಿಂಗಳಿಂದ ಚಿತ್ರೀಕರಣ ಶುರುವಾಗಲಿದೆ. ಈ ಚಿತ್ರದಲ್ಲಿ ಯಶ್ ನಟಿಸುತ್ತಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.