ಜ್ವರದಲ್ಲೇ ಸೆಟ್​ಗೆ ಹೋಗಿದ್ದೆ- ಮೊದಲ ಬಾರಿ ಉಪೇಂದ್ರ ನೋಡಿ ಅವಳು ಬೇಕು ಅಂದ್ರು... ಪ್ರಿಯಾಂಕಾ ಮೆಲುಕು

By Suchethana D  |  First Published Jul 4, 2024, 3:39 PM IST

ಉಪೇಂದ್ರ ಅವರ ಜೊತೆ ತಮ್ಮ ಮೊದಲ ಭೇಟಿ ಹೇಗಿತ್ತು, ಆ ಬಳಿಕ ಪರಿಚಯ, ಪ್ರೇಮ ಆಗಿದ್ದು ಹೇಗೆ ಎಂಬ ಬಗ್ಗೆ ನಟಿ ಪ್ರಿಯಾಂಕಾ ಹೇಳಿದ್ದಾರೆ.
 


ಅದು 2000ನೇ ಇಸ್ವಿ. ತೆಲುಗಿನ ಸೂರಿ ಚಿತ್ರದಲ್ಲಿ ನಟಿಸುತ್ತಿದ್ದೆ. ತುಂಬಾ ಹುಷಾರು ಇರಲಿಲ್ಲ. ಜ್ವರ ಬಂದಿತ್ತು. ಅದೇ ಸಮಯದಲ್ಲಿ ಉಪೇಂದ್ರ ಅವರ ಸೆಟ್​ಗೆ ಹೋಗೋಣ ಎಂದು ನಿರ್ದೇಶಕ ಸಾಂಗ್ಲಿ ಕರೆದರು. ಉಪೇಂದ್ರ ಅಂದರೆ ಯಾರು ಎಂದೇ ನನಗೆ ತಿಳಿದಿರಲಿಲ್ಲ. ಅದಾಗಲೇ ಕನ್ನಡ ಬಿಟ್ಟು ಬೇರೆ ಬೇರೆ ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದೆ. ತಮಿಳು, ತೆಲಗು, ಓಡಿಯಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದೆ. ಜ್ವರ ಇದ್ದರೂ ಅಂದು ಉಪೇಂದ್ರ ಅವರು ಫಿಲ್ಮ್​  ಶೂಟ್​ ಮಾಡ್ತಾ ಇದ್ದ ಕಡೆ ಹೋಗಿದ್ದೆ. ಅಲ್ಲಿ ಸುಮಾರು ನನ್ನಷ್ಟೇ ಉದ್ದ ಕೂದಲು, ಡಿಫರೆಂಟ್​ ಲುಕ್ಕು, ಬಿಗ್​ ಸ್ಮೈಲ್​ ಇದ್ದ ವ್ಯಕ್ತಿಯನ್ನು ನೋಡಿದೆ. ಮಸ್ಟರ್ಡ್​ ಕಲರ್​ ಔಟ್​ಫಿಟ್​ ಹಾಕಿದ್ರು. ಅವರನ್ನು ನೋಡಿದರೆ ಡಿಫರೆಂಟ್​ ಆಗಿದ್ದರು. ಅವರು ಯಾರಪ್ಪಾ ಅಂದುಕೊಳ್ತಿರುವಾಗಲೇ ಇವರು ಉಪೇಂದ್ರ ಎಂದು ಪರಿಚಯ ಮಾಡಿಕೊಟ್ಟರು ನಿರ್ದೇಶಕರು. ಆಗಲೂ ಇವರು ಯಾರು ಎಂದು ತಿಳಿದಿರಲಿಲ್ಲ ಎನ್ನುತ್ತಲೇ ಮೊದಲ ಬಾರಿಗೆ ಉಪೇಂದ್ರ ಅವರ ಕಣ್ಣಿಗೆ ತಾವು ಬಿದ್ದ ಬಗೆಯನ್ನು ವಿವರಿಸಿದ್ದಾರೆ ಪ್ರಿಯಾಂಕಾ ಉಪೇಂದ್ರ.

 Rapid Rashmi ಷೋನಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ. ನನಗೆ ಜ್ವರ ಬಂದಿದ್ದರೂ ಸುಮ್ಮನೇ ಶೂಟಿಂಗ್​ ನೋಡುತ್ತಾ ಕುಳಿತಿದ್ದೆ. ಮೇಕಪ್​ ಕೂಡ ಇರಲಿಲ್ಲ. ಹಾಗೆಯೇ ಇದ್ದೆ. ಆದರೂ ಉಪೇಂದ್ರ ಅವರು ನನ್ನನ್ನು ನೋಡುತ್ತಲೇ ಇದ್ದರು. ಇವರ ಫೋಟೋ ಏನಾದ್ರೂ ಇದೆಯಾ ಎಂದು ನಿರ್ದೇಶಕರನ್ನು ಕೇಳಿದರು. ಅವರ ಬಳಿ ನನ್ನ ಫೋಟೋ ಇತ್ತು. ಆ ಫೋಟೋಗಳನ್ನು ನೋಡುತ್ತಾ, ಅವರು ನನ್ನನ್ನು ನೋಡುತ್ತಿದ್ದರು. ನಂತರ ಅವಳು ಯಾರು ಎಂದು ನಿರ್ದೇಶಕರನ್ನು ಕೇಳಿದರು. ಆಗಲೇ ಅವರ ತಲೆಯಲ್ಲಿ ಅವರ ಮುಂದಿನ ಚಿತ್ರದ ನಾಯಕಿಯ ಪ್ಲ್ಯಾನ್​ ಮಾಡಿದಂತಿದ್ದು ಎಂದಿದ್ದಾರೆ ಪ್ರಿಯಾಂಕಾ. ನಿರ್ದೇಶಕರು ನನ್ನ ಪರಿಚಯ ಮಾಡಿಸಿದರು. ಕೋಲ್ಕತಾದ ಮೂಲದವರು.  ತಾಯಿ ಪಶ್ಚಿಮ ಬಂಗಾಳದವರು ಮತ್ತು ತಂದೆ ಉತ್ತರ ಪ್ರದೇಶದವರು. ಇದಾಗಲೇ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ ಎಂದು ಹೇಳಿದರು. ಆಗಲೂ ನನಗೆ ಅವರ ಬಗ್ಗೆ ಅಷ್ಟಾಗಿ ತಿಳಿದಿರಲಿಲ್ಲ ಎಂದು ಅಂದಿನ ದಿನಗಳನ್ನು ಪ್ರಿಯಾಂಕಾ ಉಪೇಂದ್ರ ನೆನಪಿಸಿಕೊಂಡಿದ್ದಾರೆ. 
 
ಮಧ್ಯರಾತ್ರಿ ವಿಚಿತ್ರ ಕೂಗು- ಬೆಳಗಾದರೆ ಸ್ವರ್ಗ ತೋರುವ ಸುಂದರಿ: ಕೌತುಕಗಳ ನಡುವೆ ಡಾ.ಬ್ರೋ
 
 ನಾವು ವಾಪಸಾದ ಮೇಲೆ ಸಾಂಗ್ಲಿಯವರು ಕರೆದು, ಉಪೇಂದ್ರ ಅವರು ನೀವು ಬೇಕು ಎಂದು ಹೇಳಿದ್ದಾರೆ. ಮುಂದಿನ ಚಿತ್ರಕ್ಕೆ ಅವಳು ನನಗೆ ಬೇಕು ಎಂದು ಹೇಳಿದ್ದಾರೆ ಎಂದರು. ನನಗೆ ಉಪೇಂದ್ರ ಅವರ ಬಗ್ಗೆ ತಿಳಿಯದೇ ಇದ್ದುದಕ್ಕೆ ಅವರ ಕೆಲವು ಚಿತ್ರಗಳ ವಿಡಿಯೋ ತೋರಿಸಿದರು. ಅದನ್ನು ನೋಡಿ ನಾನು ದಂಗಾಗಿ ಹೋದೆ. ಇಂಥ ಸ್ಟಾರ್​ ಜೊತೆ ನಾನು ನಟಿಸುವುದಾ ಎಂದು ಭಯವೇ ಆಗಿಹೋಯ್ತು. ಮೊದಲಿಗೆ ನಾನು ಒಪ್ಪಿರಲಿಲ್ಲ. ನಂತರ ನನ್ನ ಅಮ್ಮ ಮತ್ತು ಆಂಟಿ ನನ್ನ ಮನವೊಲಿಸಿದರು. ಲಕ್ಷ್ಮಿ ಮನೆಯ ಬಾಗಿಲಿಗೆ ಬಂದಾಗ ಒಪ್ಪಿಕೊಳ್ಳದೇ ಹೋಗಬೇಡ ಎಂದರು. 20-21 ವಯಸ್ಸಿವಳು ಆಗ ನಾನು. ನನ್ನ ನಿರ್ಧಾರವೆಲ್ಲಾ ಅಮ್ಮ, ಆಂಟಿನೇ ತೆಗೆದುಕೊಳ್ಳುತ್ತಿದ್ದರು. ಧೈರ್ಯ ಮಾಡಿ ಒಪ್ಪಿಕೊಂಡೆ ಎಂದು ಹೇಳಿದ್ದಾರೆ.

Tap to resize

Latest Videos

ನಂತರ ಎಚ್​ಟುಒನಲ್ಲಿ ನನಗೆ ಅವರ ಜೊತೆ ನಟಿಸುವ ಅವಕಾಶ ಸಿಕ್ಕಿತು. ಆಗ ಫ್ರೆಂಡ್​ಷಿಪ್​ ಆಯಿತು. ಬಳಿಕ ಒಮ್ಮೆ ನನ್ನ ಮನೆಗೆ ಬಂದರು. ನಾನು ಜ್ಯುವೆಲ್ಲರಿ ಒಂದಕ್ಕೆ ಜಾಹೀರಾತು ಮಾಡಿದ್ದೆ. ಅದರಲ್ಲಿ ಫುಲ್​ ಟ್ರೆಡಿಷನ್​ ಆಗಿ ಕಾಣಿಸುತ್ತಿದ್ದೆ. ಅದರ ಫೋಟೋ ಮನೆಯಲ್ಲಿ ಇತ್ತು. ಹೇಳದೇ ಕೇಳದೇ ಅದನ್ನು ತೆಗೆದುಕೊಂಡು ಹೋದರು. ಆಮೇಲೆ ಮುಂದಿನ ಚಿತ್ರಕ್ಕೆ ನನಗೆ ಇದೇ ಲುಕ್ಕಿನ ನಾಯಕಿ ಬೇಕು ಎಂದು ಕೇಳಿದರು. ಹೀಗೆ ನಮ್ಮ ನಡುವೆ ಫ್ರೆಂಡ್​ಷಿಪ್​ ಬೆಳೆಯಿತು, ಅದು ಪ್ರೇಮಕ್ಕೆ ತಿರುಗಿತು ಎಂದು ನೆನಪಿಸಿಕೊಂಡಿದ್ದಾರೆ ಪ್ರಿಯಾಂಕಾ. ಲವ್​  ಶುರುವಾಗಿ 24 ವರ್ಷವಾಯ್ತು. ಮದ್ವೆಯಾಗಿ 20 ವರ್ಷವಾಯ್ತು. ನಮ್ಮದು ನೆಮ್ಮದಿಯ ಜೀವನ. ಉಪೇಂದ್ರ ಅವರು ವರ್ಕೋಹಾಲಿಕ್​. ಯಾವಾಗಲೂ ಕೆಲಸದ ಬಗ್ಗೆಯೇ ಚಿಂತೆ ಎಂದು ಅನುಭವದ ಬುತ್ತಿಯನ್ನು ನಟಿ ಬಿಚ್ಚಿಟ್ಟಿದ್ದಾರೆ. 
  

ಬ್ರಾ ಧರಿಸಲ್ಲ ಎಂದು ಹಠ ಮಾಡಿದ್ದ ಮಾಧುರಿ- ರೇಪ್​ ಸೀನ್​ ಮಾಡಿಸುವಷ್ಟರಲ್ಲಿ ಸುಸ್ತಾದ ನಟ, ನಿರ್ದೇಶಕ!

 

click me!