ದರ್ಶನ್‌ & ಟೀಮ್ ನ್ಯಾಯಾಂಗ ಬಂಧನ ವಿಸ್ತರಣೆ, ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್‌ಗೆ ಹಾಜರು!

By Shriram Bhat  |  First Published Jul 4, 2024, 3:28 PM IST

ರಿಮಾಂಡ್ ಅರ್ಜಿ ನೀಡುವಂತೆ ಆರೋಪಿಗಳ ಪರ ವಕೀಲರು ಮನವಿ ಮಾಡಿಕೊಂಡಿದ್ದಾರೆ. ಆರೊಪಿಗಳ ವಕೀಲರು ಸಹಿ ಮಾಡಿ ರಿಮಾಂಡ್ ಅರ್ಜಿ ಪಡೆಯಲು ಜಡ್ಜ್ ಸೂಚನೆ ನೀಡಿದೆ. ಸದ್ಯ ನಟ ದರ್ಶನ್, ಹಾಗು ಉಳಿದ 16 ಜನ ಆರೋಪಿಗಳು..


ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿಗಳಾಗಿ ಪರಪ್ಪನ ಅಗ್ರಹಾರದಲ್ಲಿ ಜೈಲು ಬಂಧನದಲ್ಲಿರುವ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ 17 ಜನರ ವಿಚಾರಣೆ ಆರಂಭವಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಗೆ ಹಾಜರು ಪಡಿಸಲಾಗಿದೆ. ಪ್ರತಿಯೊಬ್ಬರ ಹೆಸರನ್ನೂ ಕೂಗಿದ ಕೋರ್ಟ್ ಸಿಬ್ಬಂದಿ, ಹೆಸರು ಕೂಗುತ್ತಿದ್ದಂತೆ ಎಲ್ಲ ಆರೋಪಿಗಳು ಕೂಡ ಕೈ ಎತ್ತಿ ತಮ್ಮ ಹಾಜರಿ ಖಾತರಿಪಡಿಸಿದ್ದಾರೆ. 

ಜುಲೈ ಹದಿನೆಂಟರವರೆಗೆ (18-07-2024) ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದ್ದು, ಪರಪ್ಪನ ಅಗ್ರಹಾರ ಹಾಗೂ ತುಮಕೂರು ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಆರಂಭವಾಗಿದೆ. ಎಲ್ಲಾ 17 ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲು, ನ್ಯಾಯಾಂಗ ಬಂಧನ ವಿಸ್ತರಣೆ ಮಾಡುವಂತೆ ಎಸ್ಪಿಪಿ ಕಡೆಯಿಂದ ರಿಮಾಂಡ್ ಅರ್ಜಿ ಸಲ್ಲಿಕೆಯಾಗಿದೆ. 

Latest Videos

undefined

ಭೈರವನ ಕೊನೆ ಪಾಠಕ್ಕೆ ಗುರುವಾದ್ರು ಹೇಮಂತ್ ರಾವ್; ಶಿವಣ್ಣನ ಹೊಸ ಗೆಟಪ್‌ ನೋಡಲು ರೆಡಿಯಾಗಿರಿ!

ರಿಮಾಂಡ್ ಅರ್ಜಿ ನೀಡುವಂತೆ ಆರೋಪಿಗಳ ಪರ ವಕೀಲರು ಮನವಿ ಮಾಡಿಕೊಂಡಿದ್ದಾರೆ. ಆರೊಪಿಗಳ ವಕೀಲರು ಸಹಿ ಮಾಡಿ ರಿಮಾಂಡ್ ಅರ್ಜಿ ಪಡೆಯಲು ಜಡ್ಜ್ ಸೂಚನೆ ನೀಡಿದೆ. ಸದ್ಯ ನಟ ದರ್ಶನ್, ಹಾಗು ಉಳಿದ 16 ಜನ ಆರೋಪಿಗಳು ಅಶ್ಲೀಲ ಮೆಸೇಜ್ ಕಳುಹಿಸಿ ಕೊಲೆ ಗೀಡಾಗಿದ್ದ ರೇಣುಕಾಸ್ವಾಮಿ ಕೊಲೆ ಕೇಸಿನ ಆರೋಪಿಗಳಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಬಗ್ಗೆ ಕನ್ನಡ ಚಿತ್ರರಂಗದ ಕೆಲವು ಪ್ರಮುಖರೂ ಸೇರಿದಂತೆ, ಹಲವರು ಸಂಕಟ ವ್ಯಕ್ತಪಡಿಸಿದ್ದಾರೆ. 

ಕೊಲೆ ಕೇಸ್‌ನಲ್ಲಿ ದರ್ಶನ್ ಹೆಸರು ಕೇಳಿ ಶಾಕ್ ಆಯ್ತು, ಬಹುಭಾಷಾ ನಟ ಸಾಯಿಕುಮಾರ್ ಹೇಳಿದ್ದೇನು ನೋಡಿ..!

ಸದ್ಯ ನಟ ದರ್ಶನ್ ಕೇಸ್ ತನಿಖೆ ಹಂತದಲ್ಲಿದೆ. ಆದರೆ, ಈಗಾಗಲೇ ಹಲವರು ದರ್ಶನ್ ಪರವಾಗಿ ಹಾಗೂ ಇನ್ನೂ ಹಲವರು ದರ್ಶನ್ ವಿರುದ್ಧವಾಗಿ ನಿಂತು ಮಾತನಾಡುತ್ತಿದ್ದಾರೆ. ಆದರೆ, ಕೋರ್ಟ್‌ ತೀರ್ಮಾನ ಏನಾಗಲಿದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ತನಿಖೆ ಬಳಿಕ, ನಟ ದರ್ಶನ್ ಅವರು ಅಪರಾಧಿ ಎನಿಸಿಕೊಳ್ಳುತ್ತಾರೋ ಅಥವಾ ನಿರಪರಾಧಿ ಎನಿಸಿಕೊಳ್ಳುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ. ಈಗ ಬಂದಿರುವ ಮಾಹಿತಿ ಪ್ರಕಾರ, ಈ ತಿಂಗಳು 18ರವರೆಗೆ ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ. ವಿಚಾರಣೆ ಆರಂಭವಾಗಿದೆ. 

ಕಿಡ್ನಾಪ್ ಅನ್ನೋಕೆ ಅವ್ನ ಏನೂ ಮೂಟೆ ಕಟ್ಟಿ ಕರ್ಕೊಂಡು ಬಂದಿಲ್ಲ; 'ಓಂ' ನಟ ಹರೀಶ್ ರಾಯ್!

click me!