
ಇಡೀ ಭಾರತೀಯ ಸಿನಿ ರಂಗದಲ್ಲಿ ಚಿತ್ರೀಕರಣಕ್ಕೂ ಮುನ್ನವೇ ಹವಾ ಸೃಷ್ಟಿಸಿದ ಸಿನಿಮಾ 'ಸಲಾರ್' ಬಗ್ಗೆ ಜನರಲ್ಲಿ ಹೆಚ್ಚಿನ ಕುತೂಹಲ ಹುಟ್ಟಿಸಿದೆ. ಸ್ಟಾರ್ ಡೈರೆಕ್ಟರ್ ಹಾಗೂ ಸ್ಟಾರ್ ಹೀರೋ ಮಾಡುತ್ತಿರುವ ಸಿನಿಮಾ ಅಂದ್ಮೇಲೆ ಎಲ್ಲರೂ ಹೆಸರಾಂತ ನಟ-ನಟಿಯರೇ ಇರುತ್ತಾರೆ ಎನ್ನುವ ಆಲೋಚನೆಗೆ ಬ್ರೇಕ್ ಬಿದ್ದಂತೆ ಕಾಣಿಸುತ್ತಿದೆ. ಹೊಸ ಕಲಾವಿದರು ಬೇಕೆಂದು ಚಿತ್ರ ತಂಡ ಆಡಿಷನ್ ಆರಂಭಿಸಿದೆ.
ಪ್ರಭಾಸ್ ಜೊತೆ ಸಿನಿಮಾ ಮಾಡಲು ಕಾರಣವೇನೆಂದು ರಿವೀಲ್ ಮಾಡಿದ ಪ್ರಶಾಂತ್ ನೀಲ್!
ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್‌ನ ‘ಸಲಾರ್’ ಚಿತ್ರದಲ್ಲಿ ನಟಿಸಬೇಕು ಎಂದುಕೊಳ್ಳುವವರು ಆಡಿಷನ್‌ಗೆ ಬರಬಹುದು. ಹಾಗಂತ ಚಿತ್ರತಂಡದಿಂದ ಒಂದು ಬಹಿರಂಗ ಆಹ್ವಾನ ಬಂದಿದೆ.
ವಯಸ್ಸಿನ ಗಡಿ ಇಲ್ಲ. ಹೈದರಾಬಾದ್‌ನಲ್ಲಿ ಡಿಸೆಂಬರ್ 15ರಿಂದ ಆಡಿಷನ್ ಶುರುವಾಗಲಿದೆ. ಸದ್ಯದಲ್ಲೇ ಬೆಂಗಳೂರು ಹಾಗೂ ಚೆನ್ನೈನಲ್ಲಿಯೂ ಆಡಿಷನ್ ನಡೆಯಲಿದೆ. ಯಾವುದೇ ಭಾಷೆಯಾದರೂ ಓಕೆ, ತಾವೇ ನಟಿಸಿದ ಒಂದು ನಿಮಿಷದ ವಿಡಿಯೋ ಜೊತೆಗೆ ಆಡಿಷನ್‌ಗೆ ಹೋದರೆ ಸಾಕು, ಎಂದು ನಿರ್ದೇಶಕ ಪ್ರಶಾಂತ್ ನೀಲ್ ಟ್ವೀಟ್ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ ಚಿತ್ರದ ಪೋಸ್ಟರ್‌ನಲ್ಲಿರುವ ಮೊಬೈಲ್ ನಂಬರ್‌ಗಳನ್ನು ಸಂಪರ್ಕಿಸಬಹುದು.
ಕೈಕಾಲ ಸತ್ಯನಾರಾಯಣ್‌ಗೆ ಶುಭಾ ಕೋರಿದ ಪ್ರಶಾಂತ್ ನೀಲ್; ಟ್ಟಿಟ್ಟರ್‌ನಲ್ಲಿ ಮತ್ತೆ ಟ್ರೆಂಡ್!
ಬಾಹುಬಲಿಯಾಗಿ ನಟಿಸಿದ ಪ್ರಭಾಸ್, ಕೆಜಿಎಫ್‌ನಂಥ ಚಿತ್ರ ನಿರ್ದೇಶಿಸಿದ ಪ್ರಶಾಂತ್ ನೀಲ್ ಕಾಂಬಿನೇಷನ್ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುವ ನಿರೀಕ್ಷೆ ಇದೆ. ಈ ಜೋಡಿ ಕಮಾಲ್ ಮಾಡಲಿರುವ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕವರೂ ಬಣ್ಣದ ಲೋಕದಲ್ಲಿ ಮಿಂಚುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ನಟನೆಯಲ್ಲಿ ಆಸಕ್ತಿ ಇರೋರು ಟ್ರೈ ಮಾಡಿ. All the best.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.