
ಕೋರೋನಾ ಸೋಂಕಿನ ಕುರಿತ ಸುದ್ದಿಯನ್ನು ನಟಿ ಮೇಘನಾ ರಾಜ್ ದೃಢ ಪಡಿಸಿದ್ದಾರೆ. ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ಕೊರೋನಾ ಸೋಂಕಿನ ಬಗ್ಗೆ ತಿಳಿಸಿದ್ದಾರೆ ಮೇಘನಾ. ನನಗೆ, ಮಗುವಿಗೆ ಹಾಗೂ ತಂದೆ, ತಾಯಿ ನಾಲ್ವರಿಗೂ ಕೊರೋನಾ ಸೋಂಕು ತಗುಲಿರೋದಾಗಿ ಹೇಳಿದ್ದಾರೆ.
"
ನಾವು ಹುಷಾರಾಗಿದ್ದೆವೆ ಆದಷ್ಡು ಬೇಗ ಈ ಹೋರಾಟದಲ್ಲಿ ಗೆದ್ದು ಬರುತ್ತೇವೆ. ಯಾರು ಕೂಡ ಗಾಬರಿ ಆಗುವುದು ಬೇಡ ಎಂದು ಅವರು ಫ್ಯಾನ್ಸ್‌ಗಳಲ್ಲಿ ಮನವಿ ಮಾಡಿದ್ದಾರೆ. ನಮ್ಮ ಸಂಪರ್ಕದಲ್ಲಿ ಬಂದವರಿಗೆ ಚೆಕಪ್ ಮಾಡಿಸಿಕೊಳ್ಳಲು ತಿಳಿಸಿದ್ದೇವೆ ಎಂದೂ ಹೇಳಿದ್ದಾರೆ.
ನಟಿ ಮೇಘನಾ ರಾಜ್, ಸುಂದರ್ ರಾಜ್‌ಗೆ ಕೊರೋನಾ ಪಾಸಿಟಿವ್; 'ಮಗುವಿಗೆ ಪರೀಕ್ಷೆ ಬೇಡ'
ಹೆಲೋ, ನನ್ನ ತಂದೆ, ತಾಯಿ, ನನಗೆ, ನನ್ನ ಪುಟ್ಟ ಕಂದ ಕೊರೋನಾ ಟೆಸ್ಟ್ ಪಾಸಿಟಿವ್ ಬಂದಿದೆ. ನಮ್ಮ ಕೊರೋನಾ ರಿಸಲ್ಟ್ ಬಗ್ಗೆ ನಮ್ಮ ಜೊತೆ ಕಳೆದ ಕೆಲವು ವಾರ ಜೊತೆಗಿದ್ದವರಿಗೆ ಮಾಹಿತಿ ನೀಡಿದ್ದೇವೆ ಎಂದಿದ್ದಾರೆ.
ನನ್ನ ಮತ್ತು ಚಿರು ಫ್ಯಾನ್ಸ್ ಬಳಿ ಹೇಳೋದೇನಂದ್ರೆ ನಾವು ಹುಷಾರಾಗಿದ್ದೇವೆ, ಚಿಕಿತ್ಸೆ ನಡೆಯುತ್ತಿದೆ. ಗಾಬರಿಯಾಗಬೇಕಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ. ಜ್ಯೂನಿಯರ್ ಚಿರು ಹುಷಾರಾಗಿದ್ದಾನೆ, ಪ್ರತಿ ಕ್ಷಣವೂ ನನ್ನೊಂದಿಗಿದ್ದಾನೆ. ನಾವು ಈ ಕೊರೋನಾ ಗೆದ್ದು ಬರುತ್ತೇವೆ ಎಂದಿದ್ದಾರೆ,
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.