ಕಿಚ್ಚನ ನಾಯಕಿ ಬಾಲಿವುಡ್‌ ನಟಿ ಬಗ್ಗೆ ಮಾಹಿತಿ ಕೊಡಲ್ಲ: ಜಾಕ್‌ ಮಂಜು

Kannadaprabha News   | Asianet News
Published : Dec 10, 2020, 09:09 AM ISTUpdated : Dec 10, 2020, 09:15 AM IST
ಕಿಚ್ಚನ ನಾಯಕಿ ಬಾಲಿವುಡ್‌ ನಟಿ ಬಗ್ಗೆ ಮಾಹಿತಿ ಕೊಡಲ್ಲ: ಜಾಕ್‌ ಮಂಜು

ಸಾರಾಂಶ

ಸುದೀಪ್‌ ನಟನೆಯ ‘ಫ್ಯಾಂಟಮ್‌’ ಚಿತ್ರತಂಡ ಕೇರಳದ ಪಾಲ್‌ಘಾಟ್‌ನಲ್ಲಿ ಬೀಡು ಬಿಟ್ಟಿದೆ. ಸುಮಾರು 35 ದಿನಗಳ ಕಾಲ ಕೇರಳದಲ್ಲಿ ಚಿತ್ರೀಕರಣ ಮಾಡಲು ಪ್ಲಾನ್ ಮಾಡಲಾಗಿದೆ. 

ಕಳೆದ ಎರಡು ದಿನಗಳಿಂದ (ಡಿ.8ರಿಂದ) ಪಾಲ್‌ಘಾಟ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದು, ಒಟ್ಟು 35 ದಿನಗಳ ಕಾಲ ಇದೇ ಜಾಗದಲ್ಲಿ ಶೂಟಿಂಗ್‌ ಪ್ಲಾನ್‌ ಮಾಡಿಕೊಂಡಿದ್ದಾರೆ ನಿರ್ದೇಶಕ ಅನೂಪ್‌ ಭಂಡಾರಿ. ಇದು ಚಿತ್ರತಂಡ ಅಂತಿಮ ಹಂತದ ಶೂಟಿಂಗ್‌.

ಕಿಚ್ಚ ಸುದೀಪ್‌ ಫೋಟೋ ಸಿಕ್ಕಾಪಟ್ಟೆ ವೈರಲ್; ಫ್ಯಾಂಟಮ್ ಲೋಕವಿದು! 

‘ಚಿತ್ರದ ಕೊನೆಯ ಹಂತದ ಶೂಟಿಂಗ್‌ ಆರಂಭವಾಗಿದೆ. ಲೊಕೇಶನ್‌ ಅದ್ಭುತವಾಗಿದೆ. ಅಚ್ಚುಕಟ್ಟಾಗಿ ಸೆಟ್‌ ನಿರ್ಮಿಸಲಾಗಿದೆ’ ಎಂದು ಲೊಕೇಶನ್‌ ಫೋಟೋವೊಂದನ್ನು ತಮ್ಮ ಟ್ವಿಟ್ಟರ್‌ನಲ್ಲಿ ಸುದೀಪ್‌ ಹಂಚಿಕೊಂಡಿದ್ದಾರೆ. ಬಾಲಿವುಡ್‌ ನಾಯಕಿ ತಂಡವನ್ನು ಕೂಡಿಕೊಂಡಿದ್ದು, ಆ ಬಗ್ಗೆ ಮಾಹಿತಿ ನೀಡಲು ನಿರ್ಮಾಪಕ ಜಾಕ್‌ ಮಂಜು ನಿರಾಕರಿಸಿದ್ದಾರೆ.

‘ಬಾಂಬೆಯಿಂದ ಈಗಾಗಲೇ ನಾಯಕಿ ಬಂದಿದ್ದಾರೆ. ಆಕೆಯ ಪಾತ್ರದ ಚಿತ್ರೀಕರಣ ಕೂಡ ಆಗುತ್ತಿದೆ. ಆದರೆ, ಆಕೆ ಯಾರೂ ಎಂಬುದನ್ನು ಸಿನಿಮಾ ತೆರೆಗೆ ಬರುವ ತನಕ ಹೇಳಲಾಗದು. ಸಸ್ಪೆನ್ಸ್‌ ಕಾಯ್ದುಕೊಳ್ಳುವುದಕ್ಕಾಗಿಯೇ ಬಾಂಬೆಯಿಂದ ಹೊಸ ನಟಿಯನ್ನು ಕರೆಸಿದ್ದೇವೆ. ಕತೆಯ ದೃಷ್ಟಿಯಿಂದ ಆಕೆ ಯಾರೆಂದನ್ನು ಈಗಲೇ ಬಿಟ್ಟು ಕೊಡಲು ಆಗಲ್ಲ. ಹೀಗಾಗಿ ನಾಯಕಿ ಪಾತ್ರದ ಶೂಟಿಂಗ್‌ ಶುರುವಾಗಿ 32 ದಿನ ಆದರೂ ಯಾರೆಂದು ಗುಟ್ಟಾಗಿಯೇ ಇಟ್ಟಿದ್ದೇವೆ’ ಎಂಬುದು ನಿರ್ಮಾಪಕ ಜಾಕ್‌ ಮಂಜು ಕೊಡುವ ವಿವರಣೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?