ಗುರುದತ್ ಗಾಣಿ ಚಿತ್ರಕ್ಕೆ ಕನ್ನಡದ ನಟಿಯರ ಹುಡುಕಾಟ; ಪ್ರಜ್ವಲ್‌ಗೆ ಜೋಡಿ ಯಾರು?

Published : Dec 31, 2020, 06:21 PM IST
ಗುರುದತ್ ಗಾಣಿ ಚಿತ್ರಕ್ಕೆ ಕನ್ನಡದ ನಟಿಯರ ಹುಡುಕಾಟ; ಪ್ರಜ್ವಲ್‌ಗೆ ಜೋಡಿ ಯಾರು?

ಸಾರಾಂಶ

ಪ್ರಜ್ವಲ್ ದೇವರಾಜ್‌ ಮುಂದಿನ ಚಿತ್ರಕ್ಕೆ ನಾಯಕಿಯರ ಹುಡುಕಾಟ ಶುರುವಾಗಿದೆ. ಆಶಿಕಾ ಹಾಗೂ ಅದಿತಿ ಯಾರಾಗಲಿದ್ದಾರೆ ಡೈನಾಮಿಕ್‌ ಬಾಯ್‌ಗೆ ಜೋಡಿ?  

ದಿನೆ ದಿನೇ ಸಿಕ್ಕಾಪಟ್ಟೆ ಹ್ಯಾಡ್ಸಂ ಆಗುತ್ತಿರುವ ನಟ ಪ್ರಜ್ವಲ್ ದೇವರಾಜ್‌, ಬ್ಯಾಕ್ ಟು ಬ್ಯಾಕ್ ವಿಭಿನ್ನ ಚಿತ್ರ ಕಥೆಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅದರಲ್ಲೂ ಪಕ್ಕಾ ಸ್ವಮೇಕ್‌ ಚಿತ್ರಗಳಿಗೆ ಕನ್ನಡದ ನಟಿಯರೇ ಬೇಕೆಂಬ ಹುಡುಕಾಟ ಶುರು ಮಾಡಿದ್ದಾರೆ.

ಮೂರು ಶೇಡ್‌ನಲ್ಲಿ ಪ್ರಜ್ವಲ್ ದೇವರಾಜ್‌; 'ಅಬ್ಬರ'ಕ್ಕೆ ಶಿವಣ್ಣ ಬೆಂಬಲ! 

ನಿರ್ದೇಶಕ ಗುರುದತ್ ಗಾಣಿ ಹಾಗೂ ಪ್ರಜ್ವಲ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ಈಗಾಗಲೇ ನಿರ್ದೇಶಕರು ಅದಿತಿ ಪ್ರಭುದೇವ ಹಾಗೂ ಆಶಿಕಾ ರಂಗನಾಥ್‌ ಅವರನ್ನು ಸಂಪರ್ಕಿದ್ದಾರೆ. ಇನ್ನು ಕಥೆ ಕೇಳಿ ಮೆಚ್ಚಿಕೊಂಡಿದ್ದು, ಗ್ರೀನ್ ಸಿಗ್ನಲ್‌ ಕೊಡುವುದೊಂದೇ ಬಾಕಿ ಇದೆ. 

ಬಿಗ್ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಕುಮಾರ್ ಬಂಡವಾಳ ಹಾಕುತ್ತಿದ್ದಾರೆ. ಅಪ್ಪಟ ಕನ್ನಡ ಸಿನಿಮಾದಲ್ಲಿ ನಮ್ಮೆಲ್ಲರ ಪ್ರೀತಿಯ ಡೈನಾಮಿಕ್ ಸ್ಟಾರ್ ದೇವರಾಜ್‌ ಆನ್‌ ಸ್ಕ್ರೀನ್‌ನಲ್ಲಿ ತಂದೆಯಾಗಿ ಅಭಿನಯಿಸಲಿದ್ದಾರೆ. ಹೊಸ ವರ್ಷದಲ್ಲಿ ಚಿತ್ರತಂಡ ಸಿನಿಮಾ ಶೂಟಿಂಗ್ ಆರಂಭಿಸಬೇಕೆಂದು ಸಿದ್ಧತೆ ಮಾಡಿಕೊಳ್ಳುತ್ತಿದೆ. 

ಡೈನಾಮಿಕ್ ಪ್ರಿನ್ಸ್‌ ಜೊತೆ 'ವೀರಂ' ಚಿತ್ರಕ್ಕಾಗಿ ಒಂದಾದ ರಚಿತಾ ರಾಮ್! 

ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿಯಾಗಿರುವ ಅದಿತಿ ಪ್ರಭುದೇವಾ ಕೈಯಲ್ಲಿ ಮೂರು ಸಿನಿಮಾಗಳಿವೆ. ನಟಿ ಆಶಿಕಾ ಸದ್ಯಕ್ಕೆ ಮದಗಜ ಚಿತ್ರ ರಿಲೀಸ್‌ಗೆ ರೆಡಿಯಾಗುತ್ತಿದ್ದಾರೆ. ಒಟ್ಟಿನಲ್ಲಿ ಇಬ್ಬರು ಕನ್ನಡ ನಟಿಯಲ್ಲಿ ಯಾರೇ ಪ್ರಿನ್ಸ್‌ಗೆ ಜೋಡಿಯಾದರೂ ಖುಷಿಯನ್ನು ಎನ್ನುತ್ತಾರೆ ಅಭಿಮಾನಿಗಳು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಯಶ್ ರಾವಣನಾಗಿ ಅಬ್ಬರಿಸಿದರೆ ಬಾಕ್ಸ್ ಆಫೀಸ್‌ನಲ್ಲಿ ಏನಾಗಬಹುದು? ಆ ಲೆಕ್ಕ ಚುಕ್ತಾ ಮಾಡ್ತಾರಾ?
ಸಿನಿಮಾ, ರಾಜಕೀಯ ಎರಡರಿಂದಲೂ ದೂರ: ಮೋಹಕ ತಾರೆ ರಮ್ಯಾ ಈಗ ಏನ್ ಮಾಡ್ತಿದ್ದಾರೆ ಗೊತ್ತಾ?