ಉಪ್ಪಿನಕಾಯಿಗೆ ಬದಲು 50-50 ಬಿಸ್ಕತ್; ಹೊಸ ವರ್ಷಕ್ಕೂ ಮುನ್ನ ಹವಾ ಸೃಷ್ಟಿಸಿದ ಟ್ರೋಲ್!

Suvarna News   | Asianet News
Published : Dec 31, 2020, 05:29 PM IST
ಉಪ್ಪಿನಕಾಯಿಗೆ ಬದಲು 50-50 ಬಿಸ್ಕತ್; ಹೊಸ ವರ್ಷಕ್ಕೂ ಮುನ್ನ ಹವಾ ಸೃಷ್ಟಿಸಿದ ಟ್ರೋಲ್!

ಸಾರಾಂಶ

ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ಟ್ರೋಲ್ ವೈರಲ್ ಆಗಲಿ, ಅದಕ್ಕೆ ನಟ ಸಾಧು ಕೋಕಿಲ್ ಪೋಟೋ ಬಳಸುವುದನ್ನು ನೆಟ್ಟಿಗರು ರೂಢಿಸಿಕೊಂಡಿದ್ದಾರೆ. ಈ ಬಗ್ಗೆ ಕೋಕಿಲಾ ಅವರು ದೂರನ್ನೂ ದಾಖಲಿಸಿದ್ದರು.  

ಇನ್ನೇನು ಕೆಲವೇ ಗಂಟೆಗಳಲ್ಲಿ ಹೊಸ ವರ್ಷದ ಕೌಂಟ್‌ಡೌನ್‌ ಶುರುವಾಗುತ್ತದೆ. ಯಾವ ಬಾರ್‌ ನೋಡಿದರೂ ಹೌಸ್‌ಫುಲ್‌. ಯಾವ ಸೋಷಿಯಲ್ ಮೀಡಿಯಾ ನೋಡದರೂ ಎಣ್ಣೆ ಬಾಟಲ್‌ಗಳೇ ಕಾಣಿಸುತ್ತವೆ.  ಪಾರ್ಟಿ ಮಾಡ್ತಾರೋ ಇಲ್ವೋ, ಆದರೆ ಎಣ್ಣೆನೇ ದೇವ್ರು ಎಂದು ಪರಿಗಣಿಸಿ ಟ್ರೋಲ್‌ ಮಾಡುವವರಂತೂ ಕಡಿಮೆ ಇಲ್ಲ. 

ಸಾಧು ಕೋಕಿಲ ಜೊತೆ ಕ್ರಿಸ್ಮಸ್‌ ಆಚರಿಸಿದ ದರ್ಶನ್; ಹೇಗಿತ್ತು ಸೆಲೆಬ್ರೇಷನ್? 

ಸಾಮಾಜಿಕ ಜಾಲತಾಣದಲ್ಲಿ ಸಾಮಾನ್ಯವಾಗಿ ವೈರಲ್ ಆಗುವ ಫೋಟೋದಂತೆ ಈ ಫೋಟೋ ಕೂಡ ವೈರಲ್ ಆಗುತ್ತಿದೆ. ಇದರಲ್ಲಿ ಮುಖ ಕಾಣಿಸದ ವ್ಯಕ್ತಿಯೊಬ್ಬ ಮಲ್ಯ ಬ್ರ್ಯಾಂಡ್‌‌ನ ಕಿಂಗ್ ಫಿಷರ್ ಎಣ್ಣೆ ಬಾಟಲ್‌ ಜೊತೆ 50-50 ಬಿಸ್ಕತ್‌ ಹಿಡಿದು ಕುಳಿತಿದ್ದಾನೆ. ಈ ಫೋಟೋಗೆ ಹ್ಯಾಸ ನಟ ಸಾಧು ಕೋಕಿಲಾ ಫೋಟೋ ಹಾಕಿ 'ಎಲ್ಲಾ ಓಕೆ ಆದರೆ ಈ 50-50 ಬಿಸ್ಕತ್ ಯಾಕೆ?' ಎಂದು ಪ್ರಶ್ನೆ ಹಾಕಿ, ಟ್ರೋಲ್ ಮಾಡುತ್ತಿದ್ದಾರೆ.

ನೆಟ್ಟಿಗರ ಕಾಮೆಂಟ್:
ಸೋಷಿಯಲ್ ಮೀಡಿಯಾದಲ್ಲಿ ಇಂತಹ ಫೋಟೋಗಳು ಹರಿದಾಡುವುದು ತುಂಬ ಕಾಮನ್‌. ಆದರೆ ಅದಕ್ಕೆ ಬಂದಿರುವ ಕಾಮೆಂಟ್‌ಗಳು ಸಿಕ್ಕಾಪಟ್ಟೆ ತಮಾಷೆಯಾಗಿರುತ್ತವೆ. ಯಾಕಂದ್ರೆ ಕುಡುಕರ ಸಾಮಾಜ್ರ್ಯೇ ಹಾಗೆ. 'ಉಪ್ಪಿನಕಾಯಿ ಸಿಕ್ಕಿಲ್ಲ ಅಂತ ಬಿಸ್ಕತ್ ಇರ್ಬೇಕು. ಸ್ವಲ್ಪ ಉಪ್ಪು ಅದರಲ್ಲಿ ಇರುತ್ತೆ' ಎಂದು ಒಬ್ಬ ಕಾಮೆಂಟ್ ಮಾಡಿದರೆ, ಮತ್ತೊಬ್ಬ 'ಯಾವನೋ ಸಿಂಗಲ್ ಇರ್ಬೇಕು ಅದಿಕ್ಕೆ ಕಾಂಬಿನೇಷನ್‌ ಗೊತ್ತಾಗುತ್ತಿಲ್ಲ,' ಎಂದು  ಕಾಮೆಂಟ್ ಮಾಡಿದ್ದಾನೆ.

ಫೋಟೋ ದುರ್ಬಳಕೆ ಬಗ್ಗೆ ನಟ ಸಾಧು ಕೋಕಿಲ ದೂರು! 

ಸಾಧು ಕೋಕಿಲ್ ಗರಂ:
ಅನೇಕ ಟ್ರೋಲ್ ಪೇಜ್‌ಗಳು ಸಾಧು ಕೋಕಿಲ ಫೋಟೋ ಬಳಸುತ್ತಿರುವುದಕ್ಕೆ ಅವರ ಅಸಮಾಧಾನ ವ್ಯಕ್ತ ಪಡಿಸಿದ್ದರು. ಇದರಿಂದ ಅವರ ಗೌರವಕ್ಕೆ ಧಕ್ಕೆಯಾಗುತ್ತಿದೆ, ಎಂದು ಆರೋಪಿಸಿ ಎಂದು ಕಾನೂನು ಕ್ರಮಕ್ಕೆ ಆಗ್ರಹಿಸಿದ್ದರು. ಈ ಸಂಬಂಧ ದೂರೂ ಸಹ ದಾಖಲಾಗಿತ್ತು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12 ಗಿಲ್ಲಿ ನಟನ ಗುಣ ಹೇಳುತ್ತಲೇ Bigg Boss Winner ಯಾರೆಂದು​ ಹಿಂಟ್​ ಕೊಟ್ಟೇ ಬಿಟ್ರು ಶಿವರಾಜ್​ ಕುಮಾರ್!
BBK 12: ಗೆಲ್ತಾರಾ ಗಿಲ್ಲಿ ನಟ..? ಈ ಮಂಡ್ಯದ ಹೈದ ನಟರಾಜ್‌ನ ಪ್ಲಸ್ & ಮೈನಸ್ ಏನು? ಸೀಕ್ರೆಟ್ ರಿವೀಲ್..!