ತುಂಬಾ ಹೆಮ್ಮೆಯಾಗುತ್ತಿದೆ; ಕಾಂತಾರ ನೋಡಿ ಹೊಗಳಿದ ನಟಿ ಪೂಜಾ ಹೆಗ್ಡೆ

By Shruthi Krishna  |  First Published Oct 24, 2022, 3:47 PM IST

ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ನೋಡಿ ನಟಿ ಪೂಜಾ ಹೆಗ್ಡೆ ಮೆಚ್ಚಿಕೊಂಡಿದ್ದಾರೆ. ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಹೆಮ್ಮೆಯಾಗುತ್ತಿದೆ ಎಂದು ಹೇಳಿದರು. 


ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾಗೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಾಕ್ಸ್ ಆಫೀಸಿನಲ್ಲೂ ಭರ್ಜರಿ ಕಮಾಯಿ ಮಾಡಿದೆ. ಎಲ್ಲಾ ಭಾಷೆಯಿಂದನೂ ಮೆಚ್ಚುಗೆ ಮಹಾಪೂರ ಬರುತ್ತಿದೆ. ಪ್ರೇಕ್ಷಕರು ಮಾತ್ರವಲ್ಲದೇ ಸಿನಿ ಗಣ್ಯರು ಸಹ ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಬೇರೆ ಬೇರೆ ಭಾಷೆಯ ಸಿನಿ ಗಣ್ಯರು ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನಕ್ಕೆ ಫಿದಾ ಆಗಿದ್ದಾರೆ. ಇದೀಗ ರಿಷಬ್ ಶೆಟ್ಟಿ ಕಾಂತಾರ ನೋಡಿದ ಕರಾವಳಿ ಮೂಲದ ನಟಿ ಪೂಜಾ ಹೆಗ್ಡೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ನೋಡಿ ಅಶ್ಚರ್ಯಚಕಿತಳಾದೆ ಎಂದು ಹೇಳಿದ್ದಾರೆ. 

ತೆಲುಗಿನಲ್ಲಿ ಕಾಂತಾರ ವೀಕ್ಷಿಸಿದ ಪೂಜೆ ಹೆಗ್ಡೆ ಸಿನಿಮಾ ಬಗ್ಗೆ ಇನ್ಸ್ಟಾಗ್ರಾಮ್ ಸ್ಟೇಟಸ್‌ನಲ್ಲಿ ಹಾಕಿದ್ದಾರೆ. 'ನಿಮಗೆ ತಿಳಿದಿದ್ದನ್ನು ಬರೆಯಿರಿ. ನಿಮ್ಮ ಹತ್ತಿರದ ಹೃದಯಕ್ಕೆ ಹೃಯದಿಂದ ಕಥೆ ಹೇಳಿ. ಚಿತ್ರದ ಕೊನೆಯ ಇಪ್ಪತ್ತು ನಿಮಿಷಗಳು ನನಗೆ ನಡುಕ ಹುಟ್ಟಿಸಿತು. ನಾನು ದಿಗ್ಭ್ರಮೆಗೊಂಡೆ ಮತ್ತು ಸಂಪೂರ್ಣವಾಗಿ ವಿಸ್ಮಯಗೊಂಡಿದ್ದೇನೆ. ರಿಷಬ್ ಶೆಟ್ಟಿ ಅವರ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ನೋಡಿ ಹೆಮ್ಮೆಯಾಗುತ್ತಿದೆ' ಎಂದು ಹೇಳಿದ್ದಾರೆ. 

Tap to resize

Latest Videos

ಕಾಂತಾರ ಬಾಲ್ಯದ ನೆನಪು ಮರುಕಳಿಸಿತು ಎಂದಿರುವ ಪೂಜಾ, 'ನಾನು ಬಾಲ್ಯದಲ್ಲಿ ನೋಡಿದ ಕೋಲ, ಭೂತಗಳು, ದೈವಾರಾಧನೆ. ಇವುಗಳನ್ನು ತುಂಬಾ ಗೌರವದಿಂದ ಮತ್ತು ಅಷ್ಟೆ ಸುಂದರವಾಗಿ ಸಿನಿಮಾ ಮಾಡಲಾಗಿದೆ. ಮತ್ತಷ್ಟು ಶಕ್ತಿ ಸಿಗಲಿ ನಿಮಗೆ. ಎಲ್ಲರೂ ಸಿನಿಮಾವನ್ನು ವೀಕ್ಷಿಸಿ' ಎಂದು ಬರೆದುಕೊಂಡಿದ್ದಾರೆ.

   

Kanatara; ಗರ್ನಾಲು ಸಾಹೇಬನ ಧರ್ಮ ಕಾಣುತ್ತಿಲ್ಲವೇಕೆ? ನಟ ಕಿಶೋರ್ ಪ್ರಶ್ನೆ

ಕಾಂತಾರ ಸಿನಿಮಾ ಕರಾವಳಿ ಮೂಲದವರಿಗೆ ತುಂಬಾ ಕನೆಕ್ಟ್ ಆದಂತ ಸಿನಿಮಾ. ದೇಶದ ಬೇರೆ ಬೇರೆ ನೆಲೆಸಿರುವ ಕರಾವಳಿ ಅವರಿಗೆ ಈ ಸಿನಿಮಾ ತುಂಬಾ ಖುಷಿ ಕೊಟ್ಟಿದೆ. ಸಿನಿಮಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ನಟಿ ಅನುಷ್ಕಾ ಶೆಟ್ಟಿ, ಬಾಲಿವುಡ್ ಸ್ಟಾರ್ ಶಿಲ್ಪಾ ಶೆಟ್ಟಿ ಸೇರಿದಂತೆ ಅನೇಕರು ಸಿನಿಮಾ ಮೆಚ್ಚಿಕೊಂಡಿದ್ದಾರೆ. ಇದೀಗ ಕರಾವಳಿ ಮೂಲದವರೇ ಆದ ಪೂಜಾ ಹೆಗ್ಡೆ ಕೂಡ ಸಿನಿಮಾ ನೋಡಿ ಇಷ್ಟಪಟ್ಟಿರುವುದು ಸಿನಿಮಾತಂಡಕ್ಕೆ ಮತ್ತಷ್ಟು ಸಂತಸ ತಂದಿದೆ. 

ಅಂದಹಾಗೆ ಪೂಜಾ ಹೆಗ್ಡೆ ಉಡುಪಿ ಜಿಲ್ಲೆಯ ಕಾರ್ಕಳದವರು. ಮಹಾರಾಷ್ಟ್ರದಲ್ಲಿಯೇ ಹುಟ್ಟಿ ಬೆಳೆದಿರುವ ಪೂಜಾ ಆಗಾಗ ತನ್ನ ಮೂಲ ಸ್ಥಾನಕ್ಕೆ ಬಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.  ಇತ್ತೀಚಿಗಷ್ಟೆ ಪೂಜಾ ಉಡುಪಿ  ಜಿಲ್ಲೆಯ ಕಾಪು ಮಾರಿ ಗುಡಿಗೆ ಭೇಟಿ ನೀಡಿ ದರ್ಶನ ಪಡೆದಿದ್ದರು. ಕುಟುಂಬದ ಜೊತೆ ಆಗಮಿಸಿದ್ದ ಪೂಜಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ತನ್ನದೇ ಊರಿನ ಆಚಾರ, ವಿಚಾರಗಳ ಬಗ್ಗೆ ಇರುವ ಕಾಂತಾರ ನೋಡಿ ಇಷ್ಟಪಟ್ಟಿದ್ದಾರೆ. 

ರಿಷಬ್ ಶೆಟ್ಟಿಯ ಮಾಸ್ಟರ್‌ಪೀಸ್; 'ಕಾಂತಾರ' ನೋಡಿ ಹೊಗಳಿದ 'ಕಾಶ್ಮೀರ್ ಫೈಲ್ಸ್' ನಿರ್ದೇಶಕ ಅಗ್ನಿಹೋತ್ರಿ

ಕಾಂತಾರ ಬಗ್ಗೆ

ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್ ಪಾತ್ರ ಗಮನಾರ್ಹವಾಗಿದೆ. ಸ್ಯಾಂಡಲ್ ವುಡ್‌ನ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಕಾಂತಾರ ಮೂಡಿಬಂದಿದೆ.    

click me!