ಸುದೀಪ್ ಜೊತೆ ರೊಮಾನ್ಸ್ ಮಾಡೋಕೆ ಬಲಗಾಲಿಟ್ಟು ಬಂದೇ ಬಿಟ್ರಾ ಪೂಜಾ ಹೆಗ್ಡೆ..?!

Published : Apr 20, 2025, 05:17 PM ISTUpdated : Apr 20, 2025, 05:22 PM IST
ಸುದೀಪ್ ಜೊತೆ ರೊಮಾನ್ಸ್ ಮಾಡೋಕೆ ಬಲಗಾಲಿಟ್ಟು ಬಂದೇ ಬಿಟ್ರಾ ಪೂಜಾ ಹೆಗ್ಡೆ..?!

ಸಾರಾಂಶ

ಪೂಜಾ ಕೊನೆಯದಾಗಿ ಶಾಹಿದ್ ಕಪೂರ್ ಜೊತೆ ದೇವ್ ಅನ್ನೋ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ವಿಮರ್ಶಕರಿಂದ ತಣ್ಣನೆಯ ಪ್ರತಿಕ್ರಿಯೆ ಸಿಕ್ಕಿದೆ, ಆದ್ರೆ ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಗೆದ್ದಿಲ್ಲ. ಮುಂದೆ ವರುಣ್ ಧವನ್...

ಕನ್ನಡ ಮೂಲದ ನಟಿ, ಬಾಲಿವುಡ್ ಬೆಡಗಿ ಪೂಜಾ ಹೆಗ್ಡೆ (Pooja Hegde) ಕನ್ನಡ ಸಿನಿಮಾಗೆ ಕಾಲಿಡ್ತಾ ಇದಾರಾ? ಹೌದು ಎನ್ನುತ್ತಿವೆ ಸುದ್ದಿ ಮೂಲಗಳು. ಸಿಕ್ಕ ಸುದ್ದಿಯ ಪ್ರಕಾರ, ಮಂಗಳೂರು ಮೂಲದ ಸ್ಟಾರ್ ನಟಿ ಪೂಜಾ ಹೆಗಡೆ ಅವರು ಅದೇ ಮೂಲದ ನಿರ್ದೇಶಕರಾದ ಅನೂಪ್ ಭಂಡಾರಿಯವರ 'ಬಿಲ್ಲ ರಂಹ ಭಾಷ' ಚಿತ್ರಕ್ಕೆ ಕಾಲ್‌ ಶೀಟ್ ಕೊಟ್ಟಿದ್ದಾರೆ, ಸದ್ಯದಲ್ಲೇ ಈ ಟೀಮ್ ಸೇರಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಪೂಜಾ ಹೆಗ್ಡೆ ಸದ್ಯದಲ್ಲೇ ಬಿಆರ್‌ಬಿ (BRB) ಟೀಮ್ ಸೇರಿಕೊಳ್ಳಲಿದ್ದಾರೆ, ಕಿಚ್ಚ ಸುದೀಪ್ (Kichcha Sudeep) ಜೊತೆ ರೊಮಾನ್ಸ್ ಮಾಡಲಿದ್ದಾರೆ. 

ಹೌದು, ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಕಿಚ್ಚ ಸುದೀಪ್ ನಟನೆಯ ಮುಂಬರುವ ಬಿಲ್ಲ ರಂಗ ಭಾಷ ಚಿತ್ರದಲ್ಲಿ ಪೂಜಾ ಹೆಗಡೆ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸುದ್ದಿ ನಿಜ ಎಂದಾದರೆ, ಇದೇ ಮೊದಲ ಬಾರಿಗೆ ಪೂಜಾ ಹೆಗ್ಡೆ ಕನ್ನಡ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಇಲ್ಲಿಯವರೆಗೂ ಹಿಂದಿ ಹಾಗೂ ತೆಲುಗು ಚಿತ್ರಗಳಲ್ಲಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಆದರೆ ಈಗ ಕನ್ನಡಕ್ಕೂ ಕಾಲಿಡಲು ಸಜ್ಜಾಗಿದ್ದಾರೆ ಎನ್ನಬಹುದು. ಸುದ್ದಿ ಸತ್ಯವಾಗಲಿ ಎಂದು ಪೂಜಾ ಹೆಗಡೆ ಕನ್ನಡ ಅಭಿಮಾನಿಗಳು ಕೈ ಮುಗಿಯುತ್ತಿದ್ದಾರೆ ಎನ್ನಲಾಗುತ್ತಿದೆ. 

ಸುದೀಪ್ ಈ ಮಾತು ಹೇಳಿದ್ದು ಯಾರಿಗೆ ? ನಿಮ್ಗೆ ಯಾರ ಹೆಸ್ರು ನೆನಪಾಗುತ್ತೆ?

ಕಿಚ್ಚ ಸುದೀಪ್ ನಟನೆ, ಅನೂಪ್ ಭಂಡಾರಿ ನಿರ್ದೇಶನದ ಚಿತ್ರ ಬಿಲ್ಲ ರಂಗ ಭಾಷ ಇತ್ತೀಚೆಗೆ ಶೂಟಿಂಗ್ ಶುರು ಮಾಡಿದೆ. ಬಹಳ ಕಾಲದಿಂದಲೂ ಸುದ್ದಿಯಲ್ಲಿದ್ದ ಈ ಚಿತ್ರವು ಶೂಟಿಂಗ್‌ ಶುರು ಮಾಡಲಿಕ್ಕೆ ಬಹಳಷ್ಟು ಸಮಯ ತೆಗೆದುಕೊಂಡಿದೆ, ಬೇರೆ ಬೇರೆ ಅನಿವಾರ್ಯ ಕಾರಣಗಳಿಂದ ಈ ಚಿತ್ರದ ಶೂಟಿಂಗ್ ವಿಳಂಬವಾಗಿ ನಡೆಯುತ್ತಿದೆ. ರಂಗಿ ತರಂಗ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ಹಾಗೂ 'ಮ್ಯಾಕ್ಸ್' ಗೆಲುವಿನ ಸರದಾರ ಸುದೀಪ್ ಜೋಡಿಯ ಈ ಚಿತ್ರಕ್ಕೆ ನಿರೀಕ್ಷ ದಿನದಿನಕ್ಕೂ ಹೆಚ್ಚಾಗುತ್ತಿದೆ. 

ಅಂದಹಾಗೆ, ಪೂಜಾ ಕೊನೆಯದಾಗಿ ಶಾಹಿದ್ ಕಪೂರ್ ಜೊತೆ ದೇವ್ ಅನ್ನೋ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ವಿಮರ್ಶಕರಿಂದ ತಣ್ಣನೆಯ ಪ್ರತಿಕ್ರಿಯೆ ಸಿಕ್ಕಿದೆ, ಆದ್ರೆ ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಗೆದ್ದಿಲ್ಲ. ಮುಂದೆ ವರುಣ್ ಧವನ್ ಜೊತೆ ಹಾಯ್ ಜವಾನಿ ತೋ ಇಷ್ಕ್ ಹೋನಾ ಹೇ ಅನ್ನೋ ಸಿನಿಮಾದಲ್ಲಿ ಅವರು ಅಭಿನಯಿಸುತ್ತಾರೆ. ರಜನಿಕಾಂತ್ ಲೋಕೇಶ್ ಸಿನಿಮಾ ಕೂಲಿಯಲ್ಲಿ ಒಂದು ಡಾನ್ಸ್ ದೃಶ್ಯದಲ್ಲೂ ಪೂಜಾ ಅಭಿನಯಿಸ್ತಿದ್ದಾರೆ.

ಮತ್ತೆ ಒಂದಾದ ಶ್ರೀನಾಥ್-ಪದ್ಮಾ ವಾಸಂತಿ ಜೋಡಿ; 'ಗೌರಿ ಶಂಕರ'ಕ್ಕೆ ಮ್ಯಾಚ್ ಆಗಿದ್ದು ಹೇಗೆ?

ಒಟ್ಟಿನಲ್ಲಿ ಹೇಳಬೇಕು ಎಂದರೆ, ಪ್ಯಾನ್ಇಂಡಿಯಾ ಲೆವಲ್‌ನಲ್ಲಿ, ಬಿಗ್ ಬಜೆಟ್ ಚಿತ್ರವಾಗಿರುವ ಬಿಲ್ಲ ರಂಗ ಭಾಷ ಚಿತ್ರಕ್ಕೆ ನಾಯಕಿ ಯಾರಾಗಬಹುದು ಎಂಬ ಕುತೂಹಲ ಹಲವರಲ್ಲಿತ್ತು. ಇದೀಗ, ಪೂಜಾ ಹೆಗಡೆ ಎಂಟ್ರಿ ಆಗಲಿದ್ದಾರೆ ಎನ್ನಲಾಗುತ್ತಿದೆ. ಒಮ್ಮೆ ನಿಜವೇ ಆಗಿದ್ದರೆ, ಸಿನಿಮಾದಲ್ಲಿ ಸುದೀಪ್-ಪೂಜಾ ಹೆಗಡೆ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ. ಈ ಇಬ್ಬರ ಅಭಿಮಾನಿಗಳ ಕನಸು ಏನಾಗಲಿದೆ ಎಂಬುದಕ್ಕೆ ಕಾಲವೇ ಉತ್ತರ ಕೊಡಬೇಕಿದೆ. ಕಾದುನೋಡಿ..!

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ