ಖುಷ್ಬೂ 20 ಕೆಜಿ ತೂಕ ಇಳಿಕೆ ರಹಸ್ಯ; ಇಂಜೆಕ್ಷನ್ ತಗೊಂಡ್ರಾ 54ರ ನಟಿ!

Published : Apr 19, 2025, 11:57 PM ISTUpdated : Apr 20, 2025, 05:00 AM IST
ಖುಷ್ಬೂ 20 ಕೆಜಿ ತೂಕ ಇಳಿಕೆ ರಹಸ್ಯ; ಇಂಜೆಕ್ಷನ್ ತಗೊಂಡ್ರಾ 54ರ ನಟಿ!

ಸಾರಾಂಶ

ಖುಷ್ಬು ಸುಂದರ್ ೨೦ ಕೆಜಿ ತೂಕ ಇಳಿಸಿ, ೫೪ನೇ ವಯಸ್ಸಿನಲ್ಲಿ ಹೊಸ ಲುಕ್ ಪಡೆದಿದ್ದಾರೆ. ಒಂಬತ್ತು ತಿಂಗಳ ಕಠಿಣ ವ್ಯಾಯಾಮದಿಂದ ಈ ಸಾಧನೆ ಮಾಡಿದ್ದಾರೆ. ಆದರೆ, ಅತಿಯಾದ ವ್ಯಾಯಾಮದಿಂದ ಸ್ನಾಯು ಅಲರ್ಜಿಗೂ ತುತ್ತಾಗಿದ್ದಾರೆ. ತೂಕ ಇಳಿಕೆ ಬಗ್ಗೆ ಆನ್‌ಲೈನ್ ಟೀಕೆಗೂ ಖಡಕ್ ಉತ್ತರ ನೀಡಿದ್ದಾರೆ.

ದಕ್ಷಿಣ ಭಾರತದಲ್ಲಿ ಹಲವು ದಶಕಗಳಿಂದ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ ಖುಷ್ಬು. ಪ್ರಸ್ತುತ ರಾಜಕೀಯದಲ್ಲೂ ಮುಂಚೂಣಿಯಲ್ಲಿರುವ ಈ ನಟಿ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ತಮ್ಮ ದೇಹ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಈ ಹಿಂದೆಯೇ ನಟಿ ತಿಳಿಸಿದ್ದರು. ಇದೀಗ 20 ಕೆಜಿ ತೂಕ ಇಳಿಸಿಕೊಂಡಿರುವ ಖುಷ್ಬು ಅವರ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಮೂಡಿಸಿವೆ.

ನಟಿ ಖುಷ್ಬೂ ಅವರು ತಮ್ಮ 54ನೇ ವಯಸ್ಸಿನಲ್ಲಿ ಖುಷ್ಬು ಸುಂದರ್ 20 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಕೋವಿಡ್ ಸಮಯದಲ್ಲಿ ಖುಷ್ಬು ಅವರ ವರ್ಕೌಟ್ ಪ್ರಯಾಣ ಆರಂಭವಾಯಿತು. ಆಗ ನಟಿಯ ತೂಕ 93 ಕೆಜಿ ಇತ್ತು. ಕೇವಲ ಒಂಬತ್ತು ತಿಂಗಳಲ್ಲಿ ಇಷ್ಟು ತೂಕ ಇಳಿಸಿಕೊಂಡಿದ್ದೇನೆ ಎಂದು 'ಟೆಲ್ ಮೈ ಸ್ಟೋರಿ' ಎಂಬ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಖುಷ್ಬು ಹೇಳಿದ್ದಾರೆ. ಅಧಿಕ ತೂಕದಿಂದಾಗಿ ತುಂಬಾ ತೊಂದರೆ ಆಗುತ್ತಿತ್ತು. ದೇಹ ತೂಕದಿಂದ ಉಂಟಾಗಿದ್ದ ಕೀಲು ನೋವು ಈಗ ಕಡಿಮೆಯಾಗಿದೆ ಎಂದು ನಟಿ ಹೇಳುತ್ತಾರೆ.

ನಟಿ ಖುಷ್ಬು ಅವರನ್ನು ಹೊಗಳುತ್ತಾ ಅನೇಕರು ಪೋಸ್ಟ್‌ಗಳ ಕೆಳಗೆ ಕಾಮೆಂಟ್ ಮಾಡಿದ್ದಾರೆ. ಇದರಲ್ಲಿ ಒಂದು ಟೀಕಾತ್ಮಕ ಕಾಮೆಂಟ್‌ಗೆ ಖುಷ್ಬು ನೀಡಿದ ಉತ್ತರವೂ ಸಾಕಷ್ಟು ಗಮನ ಸೆಳೆಯುತ್ತಿದೆ. ಟೈಪ್-2 ಮಧುಮೇಹ ಇರುವವರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮೌಂಜಾರೊ ಇಂಜೆಕ್ಷನ್ ಅನ್ನು ಖುಷ್ಬು ತೆಗೆದುಕೊಂಡಿದ್ದಾರೆ ಎಂದು ಈ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. 'ಇದು ಮೌಂಜಾರೊ ಇಂಜೆಕ್ಷನ್‌ನ ಮ್ಯಾಜಿಕ್. ಈ ವಿಷಯ ನಿಮ್ಮ ಅನುಯಾಯಿಗಳಿಗೂ ತಿಳಿಯಲಿ. ಆಗ ಅವರೂ ಇಂಜೆಕ್ಷನ್ ತೆಗೆದುಕೊಳ್ಳಬಹುದು' ಎಂದು ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಕಾಮೆಂಟ್ ಮಾಡಿದ್ದಾರೆ. 

ಇದನ್ನೂ ಓದಿ: ಸ್ಲಿಮ್‌ ಆಗಲು ಹೋಗಿ ಖುಷ್ಬೂ ಯಡವಟ್ಟು, ಚೆಲುವೆಯ ಸ್ಥಿತಿ ಹಲವರಿಗೆ ಚಿಂತಾಜನಕ!

ಇದನ್ನು ಗಮನಿಸಿದ ಖುಷ್ಬು ಉತ್ತರ ನೀಡಿದ್ದಾರೆ. 'ನಿಮ್ಮಂಥವರು ಎಂತಹ ತಲೆನೋವು. ನೀವು ನಿಮ್ಮ ಮುಖ ತೋರಿಸುವುದಿಲ್ಲ. ಯಾಕೆಂದರೆ ನಿಮಗೆ ಗೊತ್ತು, ಒಳಗೊಳಗೆ ನೀವು ಎಷ್ಟು ಕೊಳಕು ಎಂದು. ನಿಮ್ಮ ತಂದೆ ತಾಯಂದಿರ ಬಗ್ಗೆ ಸಹಾನುಭೂತಿ ಮಾತ್ರ' ಎಂದು ಖುಷ್ಬು ಉತ್ತರಿಸಿದ್ದಾರೆ.

ಅತಿಯಾದ ವರ್ಕೌಟ್‌ನಿಂದ ಸ್ನಾಯು ಅಲರ್ಜಿ!
ಇನ್ನು ನಟಿ ಖುಷ್ಬೂ ಅತಿಯಾದ ವರ್ಕೌಟ್‌ನಿಂದಾಗಿ ಸ್ನಾಯು ಅಲರ್ಜಿ ಕಾಯಿಲೆಗೆ ತುತ್ತಾಗಿದ್ದು, ಇದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಇನ್ನು ಈ ಸ್ನಾಯು ಅಲರ್ಜಿ ಸಾಮಾನ್ಯವಾಗಿ ಕ್ರೀಡಾಪಟುಗಳನ್ನು ಬಾಧಿಸುತ್ತದೆ. ಕಾರಣ, ಅವರು ಮಿತಿಮೀರಿದ ವ್ಯಾಯಾಮ ಮಾಡುತ್ತಾರೆ. ಸಾಮಾನ್ಯವಾಗಿ ನಟಿಯರು ಹೆಚ್ಚಿನ ವ್ಯಾಯಾಮ ಮಾಡುವುದಿಲ್ಲ. ಆದರೆ, ನಟಿ ಖುಷ್ಬೂಗೆ ಯಾಕೆ ಈ ಕಾಯಿಲೆ ಬಂತೋ ಗೊತ್ತಿಲ್ಲ. ಆದರೆ, ಸ್ಯಾಯು ಅಲರ್ಜಿಯಿಂದ ಬಳಲುತ್ತಿರುವ ಅವರು ಸಣ್ಣಗಾದರೂ ಅದರ ಖುಷಿ ಅನುಭವಿಸಲು ಸಾಧ್ಯವಾಗುತ್ತಿಲ್ಲ. ಸ್ಲಿಮ್ ಆಗಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ಸ್ಲಿಮ್ ಏನೋ ಆಗಿದ್ದಾರೆ, ಆದರೆ ಆರೋಗ್ಯ ಕೈ ಕೊಟ್ಟಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ನಟಿ ಖುಷ್ಬೂ ರವಿಚಂದ್ರನ್‌ಗೆ ಯಾಕೆ ಹಣ ಕೊಟ್ರು? ಮಾಲಾಶ್ರೀಗೂ ಅದಕ್ಕೂ ಲಿಂಕ್ ಏನು?

ನಟಿ ಖುಷ್ಬೂ ಅವರು ಅನೇಕ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ನಟ ರವಿಚಂದ್ರನ್ ಅವರ 'ರಣಧೀರ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ, ಸಾಹಸಸಿಂಹ ವಿಷ್ಣುವರ್ಧನ್‌ ನಟನೆ 'ಜೀವನದಿ', ಅನಂತ್‌ ನಾಗ್ ನಟನೆಯ 'ಗಗನ' ಹೀಗೆ ಸಾಲುಸಾಲು ಚಿತ್ರಗಳಲ್ಲಿ ನಟಿಸಿ ಕನ್ನಡಿಗರಿಗೂ ಚಿರಪರಿಚಿತರಾಗಿದ್ದಾರೆ. ತಮಿಳುನಾಡಿನಲ್ಲಿ ಅತ್ಯಂತ ಜನಪ್ರಿಯ ಆಗಿರುವ ನಟಿ ಖುಷ್ಬೂಗೆ ಅವರ ತಮಿಳು ಅಭಿಮಾನಿಯೊಬ್ಬ ದೇವಸ್ಥಾನ ಕಟ್ಟಿಸಿದ್ದಾನೆ. ಬಳಿಕ ಅವರು ಖುಷ್ಬೂ ಮದುವೆ ಆದಮೇಲೆ ಹುಚ್ಚಾಟಗಳ ಕಡಿಮೆಯಾಗಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ