ರಿಲೀಸ್ ದಿನಾಂಕ ರಿವೀಲ್ ಆದರೂ 'ಪೊಗರು' ಪ್ರಚಾರಕ್ಕೆ ರಶ್ಮಿಕಾ ಇರಲ್ವಾ?; ನಿರ್ದೇಶಕ ನಂದ ಕಿಶೋರ್ ಸ್ಪಷ್ಟನೆ!

Suvarna News   | Asianet News
Published : Jan 21, 2021, 11:35 AM IST
ರಿಲೀಸ್ ದಿನಾಂಕ ರಿವೀಲ್ ಆದರೂ 'ಪೊಗರು' ಪ್ರಚಾರಕ್ಕೆ ರಶ್ಮಿಕಾ ಇರಲ್ವಾ?; ನಿರ್ದೇಶಕ ನಂದ ಕಿಶೋರ್ ಸ್ಪಷ್ಟನೆ!

ಸಾರಾಂಶ

ಬಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾ ಪ್ರಚಾರ ಮಾಡಲು ಬರಲ್ವಾ? ನೆಟ್ಟಿಗರ ಆಕ್ರೋಶಕ್ಕೆ ನಿರ್ದೇಶಕ ನಂದ ಕಿಶೋರ್ ಸ್ಪಷ್ಟನೆ...

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಜೋಡಿಯಾಗಿ ಅಭಿನಯಿಸಿರುವ ಪೊಗರು ಸಿನಿಮಾ ಇದೇ 2021ರ ಫೆಬ್ರವರಿ 19ರಂದು ಎಲ್ಲೆಡೆ ಬಿಡುಗಡೆಯಾಗುತ್ತಿದೆ. ಸಿನಿಮಾ ಪ್ರಚಾರಕ್ಕೆಂದು ಪರ ರಾಜ್ಯಗಳಿಗೆ ಪಯಣ ಮಾಡುತ್ತಿರುವ ಧ್ರುವ ಜೊತೆಗೆ ನಾಯಕಿ ಯಾಕಿಲ್ಲ ಎಂಬುದು ಅಭಿಮಾನಿಗಳ ಪ್ರಶ್ನೆ.

'ಪೊಗರು' ಅಣ್ಣನಿಗೆ ಸಿನಿಮಾ ಅರ್ಪಣೆ ಮಾಡಿ ವೇದಿಕೆಯಲ್ಲೇ ಧ್ರುವ ಹೇಳಿದ ಮಾತು 

ಹೌದು! ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ಶೂಟಿಂಗ್‌ ಇರುವ ಕಾರಣ ಹೆಚ್ಚಾಗಿ ಖಾಸಗಿ ಕಾರ್ಯಕ್ರಮಗಳಲ್ಲಿ ಹಾಗೂ ಯಾವುದೇ ಪ್ರಚಾರಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲೂ ಚಿತ್ರವನ್ನು ಏಕೆ ಪ್ರಚಾರ ಮಾಡುತ್ತಿಲ್ಲವೆಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಏನಾದರೂ ಒಂದು ಪೋಸ್ಟ್‌ ಮಾಡುತ್ತಾರಾ? ರಶ್ಮಿಕಾ ಅಕೌಂಟ್‌ ಆ್ಯಕ್ಟಿವ್ ಆಗಿಟ್ಟಿದ್ದಾರೆ. ಇನ್ನೂ ಹಿಂದಿ ಆಲ್ಬಂ, ತೆಲುಗು ಸಿನಿಮಾ ಬಗ್ಗೆಯೂ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಧ್ರುವ ಜೊತೆ ಅಭಿನಯಿಸಿರುವ ಪೊಗರು ಚಿತ್ರದ ಬಗ್ಗೆ ಈವರೆಗೂ ಏನೂ ಶೇರ್ ಮಾಡಿಲ್ಲ. ರಿಲೀಸ್ ದಿನಾಂಕ ರಿವೀಲ್ ಆದ ಮೇಲೆ ಮಾಡಬಹುದು ಎಂದು ಕಾದು ನೋಡಿದರೆ, ಇನ್ನೂ ಸುದ್ದಿಯೇ ಇಲ್ಲ. ಏಕ್ಹಿಂಗೆ ಎಂದು ನಿರ್ದೇಶಕ ನಂದ ಕಿಶೋರ್‌ನ ಪ್ರಶ್ನೆ ಮಾಡಿದ ಖಾಸಗಿ ವರದಿಗಾರನಿಗೆ ಸಿಕ್ಕಿದ್ದು ಈ ಉತ್ತರ.

' ರಶ್ಮಿಕಾ ಮಂದಣ್ಣ ಟ್ಟೀಟ್ ಮಾಡಿದ್ದಾರೆ. ನಮ್ಮ ತಂಡದಲ್ಲಿ ಎಲ್ಲರೂ ಒಳ್ಳೆಯವರು. ನಮ್ಮ ನಡುವೆ ಭಿನ್ನಾಭಿಪ್ರಾಯ ಇಲ್ಲ. ಪ್ರತಿಯೊಬ್ಬರೂ ಅವರಿಗೆ ಅನ್ನಿದಂತೆ ಸ್ಪಂದಿಸುತ್ತಿದ್ದಾರೆ. ರಶ್ಮಿಕಾ ಜೊತೆ ಈ ವಿಚಾರವಾಗಿ ಸಂಪರ್ಕದಲ್ಲಿದ್ದೀವಿ,' ಎಂದಷ್ಟೇ ನಂದ ಕಿಶೋರ್ ಉತ್ತರಿಸಿದ್ದಾರೆ. 

ಧ್ರುವ ಸರ್ಜಾ ಅಭಿನಯದ ಪೊಗರು ರಿಲೀಸಿಂಗ್ ಡೇಟ್ ಫಿಕ್ಸ್ 

ಒಟ್ಟಿನಲ್ಲಿ ಪೊಗರು ಚಿತ್ರ ಪ್ರಚಾರಕ್ಕೆ ರಶ್ಮಿಕಾ ಏಕೆ ಬಂದಿಲ್ಲ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ಅಭಿಮಾನಿಗಳಿಗೆ ಸಿಕ್ಕಿಲ್ಲ. ಕನ್ನಡ ಚಿತ್ರೋದ್ಯಮವನ್ನು ರಶ್ಮಿಕಾ ನಿರ್ಲಕ್ಷಿಸುತ್ತಿದ್ದಾರೆ ಎಂಬ ಅಪವಾದದ ನಡುವೆ, ಇಂಥ ನಡೆ ಕನ್ನಡಿಗರನ್ನು ಮತ್ತಷ್ಟು ಕೆರಳಿಸುವಂತೆ ಮಾಡೋದು ಮಾತ್ರ ಸುಳ್ಳಲ್ಲ.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ