‘ಭೂಮಿ ಮೇಲಿನ ಸ್ವರ್ಗ ಅಂದ್ರೆ ಇದೇ..’ ಎಂದ ಯಶ್ | ಸಮುದ್ರದ ಆಳದ ವಿಲ್ಲಾದಲ್ಲಿ ಯಶ್ ಫ್ಯಾಮಿಲಿ
‘ಭೂಮಿ ಮೇಲಿನ ಸ್ವರ್ಗ ಅಂದ್ರೆ ಇದೇ..’ ಮಾಲ್ಡೀವ್‌್ಸನ ಸುಂದರ ಕಡಲ ಕಿನಾರೆಯಲ್ಲಿ ನಿಂತು ರಾಕಿಂಗ್ ಸ್ಟಾರ್ ಯಶ್ ಹೀಗೆ ಉದ್ಗರಿಸಿದ್ದಾರೆ. ಅವರೀಗ ಪತ್ನಿ ರಾಧಿಕಾ ಪಂಡಿತ್, ಮಕ್ಕಳಾದ ಐರಾ ಮತ್ತು ಯಥರ್ವ ಜೊತೆಗೆ ಸಮುದ್ರದಾಳದ ಮಾಲ್ಡೀವ್‌್ಸನ ಕಾನ್ರಾಡ್ ರಾರಯಂಗಲಿ ಐಲ್ಯಾಂಡ್‌ನಲ್ಲಿದ್ದಾರೆ.
‘ಜಗತ್ತಿನಲ್ಲಿ ಉಷ್ಣವಲಯದ ಸ್ವರ್ಗ ಅಂತೇನಾದ್ರೂ ಇದ್ರೆ, ಅದು ಇದೇ, ಮಾಲ್ಡೀವ್‌್ಸ! ನಾವೀಗ ಈ ಸ್ವರ್ಗದಲ್ಲಿದ್ದೇವೆ’ ಹೀಗೆ ಯಶ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಕಣ್ಣೆಲ್ಲಾ ನಿನ್ನ ಮೇಲೆಂದು ಕಣ್ಣು ಮಿಟುಕಿಸಿದ ಶಾನ್ವಿಗೆ ನೆಟ್ಟಿಗರು ಕೊಟ್ಟ ಟಾಂಗ್?
ಇವರು ಉಳಿದುಕೊಂಡಿರುವ ರೆಸಾರ್ಟ್ ಹಲವು ಅಚ್ಚರಿಗಳ ಆಗರ. ಆಳ ಸಮುದ್ರದೊಳಗೆ ಇರುವ ಐಷಾರಾಮಿ ಪ್ರೈವೇಟ್ ವಿಲ್ಲಾ ಈ ರೆಸಾರ್ಟ್‌ನಲ್ಲಿದೆ. ಮೂರು ಬೆಡ್‌ರೂಮ್‌ಗಳ ಸಂಪೂರ್ಣ ಗ್ಲಾಸ್‌ನಿಂದ ಆವೃತವಾಗಿರುವ ಈ ಮನೆಯೊಳಗೆ ಮಲಗಿ ಸಮುದ್ರದೊಳಗಿನ ಪ್ರಪಂಚವನ್ನು ನೋಡಬಹುದು.
ವೈವಿಧ್ಯಮಯ ಜಲಚರಗಳು, ಶಾರ್ಕ್ಗಳನ್ನು ಹತ್ತಿರದಿಂದ ನೋಡಬಹುದು. ಮನೆಯಾಚೆ ಬಂದು ಸ್ವಿಮ್ಮಿಂಗ್ ಮಾಡಬಹುದು. ಇದಲ್ಲದೇ ಮಾಮೂಲಿನಂತೆ ಬೀಚ್ ಬದಿಯ ಸ್ವಚ್ಛ ಮರಳಿನಲ್ಲಿ ಆಟವಾಡಬಹುದು.