ಮದುವೆನೇ ಆಗಿಲ್ಲ, ನಾನ್ಯಾಕೆ ವಿಚ್ಛೇದನ ತಗೋಬೇಕು; ಪವಿತ್ರಾ ಲೋಕೇಶ್ ಕಿಡಿ

Published : Jul 01, 2022, 12:58 PM ISTUpdated : Jul 01, 2022, 02:39 PM IST
ಮದುವೆನೇ ಆಗಿಲ್ಲ, ನಾನ್ಯಾಕೆ ವಿಚ್ಛೇದನ ತಗೋಬೇಕು; ಪವಿತ್ರಾ ಲೋಕೇಶ್ ಕಿಡಿ

ಸಾರಾಂಶ

ನಟ ಸುಚ್ಚೇಂದ್ರ ಪ್ರಸಾದ್ ಜೊತೆಗಿನ ಮದುವೆ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ.  'ನಾನು ಮದುವೆನೇ ಆಗಿಲ್ಲ, ವಿಚ್ಛೇದನ ಯಾಕೆ ತೆಗೆದುಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ.  ನಾನು ಈಗ ಬೇರೆ ಇದ್ದೀನಿ. ನಾನು ಮದುವೆ ಆಗಿರುವುದಕ್ಕೆ ಏನಾದರೂ ದಾಖಲೆ ಇದಿಯಾ. ಅದು ನನಗೆ ಬಿಟ್ಟಿದ್ದು. ಮಾಧ್ಯಮದ ಮುಂದೆ ನಾನ್ಯಾಕೆ ಮಾತನಾಡಬೇಕು ಎಂದು ಹೇಳಿದ್ದಾರೆ. 

ನಟಿ ಪವಿತ್ರಾ ಲೋಕೇಶ್ (Pavitra Lokesh) ಮತ್ತು ತೆಲುಗು ನಟ ನರೇಶ್ ಬಾಬು (Naresh Babu) ಮದುವೆ ವಿಚಾರ ಮತ್ತೊಂದು ರೂಪ ಪಡೆದುಕೊಂಡಿದೆ. ನರೇಶ್ ಬಾಬು ಪತ್ನಿ ರಮ್ಯಾ, ಪವಿತ್ರಾ ಲೋಕೇಶ್ ಮತ್ತು ನರೇಶ್ ಬಾಬು ವಿರುದ್ಧ ಆರೋಪ ಮಾಡಿದ ಬೆನ್ನಲ್ಲೇ ಇದೀಗ ಪವಿತ್ರಾ ಲೋಕೇಶ್ ಮಾಧ್ಯಮದ ಜೊತೆ ಮಾತನಾಡಿದ್ದಾರೆ. ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಪವಿತ್ರಾ ಲೋಕೇಶ್, ರಮ್ಯಾ ವಿರುದ್ಧ ಕಿಡಿಕಾರಿದ್ದಾರೆ. ರಮ್ಯಾ ತೆಲುಗಿನಲ್ಲಿ ಕೂತು ಮಾತನಾಡಬೇಕು, ಇಲ್ಲಿ ಯಾಕೆ ಬಂದು ಮಾತನಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. 

ಇದೇ ಸಮಯದಲ್ಲಿ ನಟ ಸುಚೇಂದ್ರ ಪ್ರಸಾದ್ ಜೊತೆಗಿನ ಮದುವೆ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ.  'ನಾನು ಮದುವೆನೇ ಆಗಿಲ್ಲ, ವಿಚ್ಛೇದನ ಯಾಕೆ ತೆಗೆದುಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ.  ನಾನು ಈಗ ಬೇರೆ ಇದ್ದೀನಿ. ನಾನು ಮದುವೆ ಆಗಿರುವುದಕ್ಕೆ ಏನಾದರೂ ದಾಖಲೆ ಇದಿಯಾ. ಅದು ನನಗೆ ಬಿಟ್ಟಿದ್ದು. ಮಾಧ್ಯಮದ ಮುಂದೆ ನಾನ್ಯಾಕೆ ಮಾತನಾಡಬೇಕು' ಎಂದು ಹೇಳಿದ್ದಾರೆ. 

'ನನಗೇನು ಮಾಧ್ಯಮ ಸಹಾಯ ಮಾಡುತ್ತಾ, ನ್ಯಾಯ ಕೊಡಿಸುತ್ತಾ, ಜನ ಸಹಾಯ ಮಾಡುತ್ತಾರಾ, ಜನ ನನಗೆ ಸ್ಪಂದನೆ ನೀಡಬಹುದು, ಆದರೆ ಸಹಾಯ ಮಾಡೋಕೆ ಆಗಲ್ಲ. ನನ್ನ ಸಮಸ್ಯೆಯನ್ನು ನಾನೆ ಬಗೆಹರಿಸಿಕೊಳ್ಳುತ್ತೇನೆ. ನಾನು ಓದಿದ್ದೀನಿ, ಕೆಲಸ ಮಾಡುತ್ತಿದ್ದೀನಿ, ನನಗೆ ಬೆಂಬಲವಿದೆ. ನನ್ನ ತಾಯಿ ಇದ್ದಾರೆ, ನಾನು ನೋಡಿಕೊಳ್ಳುತ್ತೇನೆ' ಎಂದು ಹೇಳಿದರು.

ಇನ್ನು ನರೇಶ್ ಜೊತೆಗಿನ ಮದುವೆ ವದಂತಿ ಬಗ್ಗೆ ಮಾತನಾಡಿದ ಪವಿತ್ರಾ, ಹೆಣ್ಣು ಮತ್ತು ಗಂಡು ಇಬ್ಬರು ಕ್ಲೋಸ್ ಇದಾರೆ ಅಂತ ಮಾತ್ರಕ್ಕೆ ಎಲ್ಲನೂ ಹೇಳಬಹುದಾ. ನನ್ನ ಮನೆಯೊಳಗೆ ಬಂದು ಏನು ಬೇಕಾದರೂ ಮಾಡಬಹುದಾ. ನನಗೆ ರಕ್ಷಣೆ ಬೇಕು, ನಾನು ಈಗ ಹೇಗೆ ಹೊರಗೆ ಹೋಗಲಿ, ಹೇಗೆ ಓಡಾಡಲಿ ಎಂದರು. ನನ್ನ ಜೀವಕ್ಕೆ, ನನ್ನ ವೃತ್ತಿ ಬದುಕಿಗೆ ಎಷ್ಟು ತೊಂದರೆ ಆಗುತ್ತಿದೆ ಎನ್ನುವುದು ಗೊತ್ತಾಗುತ್ತಿಲ್ಲವಾ.ನನಗೆ ಯಾಕೆ ಯಾರು ಬೆಂಬಲ ನೀಡುತ್ತಿಲ್ಲಾ ಎಂದು ಪವಿತ್ರಾ ಲೋಕೇಶ್ ಗರಂ ಆಗಿದ್ದಾರೆ. 

ಪವಿತ್ರಾ ಲೋಕೇಶ್‌ ನನ್ನ ಸ್ನೇಹಿತೆ, ರಮ್ಯಾ ಮಾನಸಿಕವಾಗಿ ಸರಿ ಇಲ್ಲ ಎಂದ ನರೇಶ್ ಬಾಬು!

ನರೇಶ್ ಪತ್ನಿ ರಮ್ಯಾ ಅಂತ ಹೇಳುತ್ತಿರುವವರನ್ನು ನನ್ಯಾಕೆ ಮಾತನಾಡಬೇಕು. ಅವರೇನು ದೀಪಿಕಾನಾ, ಹೇಮಮಾಲಿನಾ ಎಂದು ಪ್ರಶ್ನೆ ಮಾಡಿದ್ದಾರೆ. ನರೇಶ್ ಮತ್ತು ರಮ್ಯಾ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ನರೇಶ್ ಬಗ್ಗೆ ಕೇಳಿ ಹೇಳುತ್ತೀನಿ ಎಂದು ಹೇಳಿದರು. ನರೇಶ್ ಮನೆಗೆ ನಾನು ಭೇಟಿ ಕೊಟ್ಟಿದ್ದೀನಿ, ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿದ್ದೀನಿ ಅಂದ್ರೆ ಏನು ತಪ್ಪಿದೆ? ನರೇಶ್ ತಂದೆ ತಾಯಿ ಅವರನ್ನು ಭೇಟಿ ಮಾಡಿದ್ದೀನಿ ಅದರಲ್ಲಿ ತಪ್ಪೇನು? ನರೇಶ್ ಮನೆಯಲ್ಲಿ ಚಿನ್ನದ ತಟ್ಟೆಯಲ್ಲಿ ಊಟ ಮಾಡುತ್ತಾರೆ. ಅವರ ಮನೆಯಲ್ಲಿ ತುಂಬಾ ಜನ ಇದ್ದಾರೆ. ಅವರ ಮನೆಯಲ್ಲಿ ಮೂರು ಜನ ಅಣ್ಣತ್ತಮ್ಮಂದಿರು ಇದ್ದಾರೆ ಅವರ ಹೆಂಡತಿಯರು ನನಗೆ ಊಟ ಬಡಿಸಿದ್ದು ರಮ್ಯಾ ನನ್ನ ಕಣ್ಣಿಗೆ ಕಾಣಿಸಿಕೊಂಡಿಲ್ಲ. ನರೇಶ್ ಬಗ್ಗೆ ಕೇಳಿದ್ದರೆ ಮಾತ್ರ ನಾನು ಉತ್ತರ ಕೊಡ್ತೀನಿ ಅವರಿಗೆ ನನಗೆ ಕ್ಲೂಸ್ ಸ್ನೇಹಿತ ಎಂದು ಹೇಳಿದರು.

100ಕ್ಕೂ ಹೆಚ್ಚು ಮಂದಿಗೆ ರಮ್ಯಾ ವಂಚಿಸಿದ್ದಾಳೆ, ನಂಗವಳಿಂದ ಜೀವ ಬೆದರಿಕೆ ಇದೆ: ನರೇಶ್

ನನ್ನ ಮಾನ ಮರ್ಯಾದೆ ಹಾಳಾಗುತ್ತಿದೆ, ಇದರ ಬಗ್ಗೆ ಯಾರು ಮಾತನಾಡುತ್ತಿಲ್ಲ ಯಾಕೆ, ಯಾವ ಕಲಾವಿದರು ಮಾತನಾಡುತ್ತಿಲ್ಲ ಯಾಕೆ, ನನ್ನ ತಂದೆ ಇಲ್ಲಿಯವರು, ಕನ್ನಡಕ್ಕೆ ನಾನು ಹೊಸಬಳಲ್ಲ, ನನ್ನನ್ನು ಯಾಕೆ ಇದರಲ್ಲಿ ಎಳೆಯುತ್ತಿದ್ದಾರೆ ಎಂದು ಪವಿತ್ರಾ ಲೋಕೇಶ್ ಪ್ರಶ್ನೆ ಮಾಡಿದ್ದಾರೆ.   

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!