Exclusive: ನನಗೆ ರಕ್ಷಣೆ ಬೇಕು, ನನ್ನ ಜೀವನ ಹಾಳಾಗಿದೆ- ಪವಿತ್ರಾ ಲೋಕೇಶ್

Published : Jul 01, 2022, 12:34 PM ISTUpdated : Jul 01, 2022, 12:58 PM IST
Exclusive: ನನಗೆ ರಕ್ಷಣೆ ಬೇಕು, ನನ್ನ ಜೀವನ ಹಾಳಾಗಿದೆ- ಪವಿತ್ರಾ ಲೋಕೇಶ್

ಸಾರಾಂಶ

ತೆಲಗು ನಟ ನರೇಶ್ ಬಾಬು ಜೊತೆ ಕನ್ನಡದ ನಟಿ ಪವಿತ್ರಾ ಲೋಕೇಶ್ ಅವರು ಮದುವೆಯಾಗಿದ್ದಾರೆಂಬ ಸುದ್ದಿ ಇತ್ತೀಚೆಗೆ ಸದ್ದು ಮಾಡುತ್ತಿದೆ. ಬಾಬು ಅವರ ಮೂರನೇ ಪತ್ನಿಯ ಆರೋಪಗಳು, ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳಿಗೆ ಪವಿತ್ರಾ ಏಷ್ಯಾನೆಟ್‌ ಸುವರ್ಣನ್ಯೂಸ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಬಹುಭಾಷಾ ನಟಿ ಪವಿತ್ರಾ ಲೋಕೇಶ್‌ (Pavitra Lokesh) ಮತ್ತು ತೆಲುಗು ನಟ ನರೇಶ್ (Naresh) ಮದುವೆಯಾಗುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಟ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ (Ramya Raghupathi) ಮಾಧ್ಯಮಗಳ ಎದುರು ಪವಿತ್ರಾ ಲೋಕೇಶ್‌ ಬಗ್ಗೆ ಆರೋಪ ಮಾಡಿದ್ದಾರೆ. ನನ್ನ ಮೇಲೆ ಅವಹೇಳನಕಾರಿಯಾಗಿ ಪೋಸ್ಟ್‌ ಮಾಡುತ್ತಿದ್ದಾರೆ ಎಂದು ಪವಿತ್ರಾ ಲೋಕೇಶ್ ಮೈಸೂರು ಸೈಬರ್ ಪೊಲೀಸರಿಗೆ ದೂರು ದಾಖಲಿಸಿದ್ದರು. 

ಪವಿತ್ರಾ ಲೋಕೇಶ್ ಮಾತು: 

'ನಾನು ನರೇಶ್‌ನ ಮದ್ವೆ ಆಗಿದ್ದೀನಿ ಅಂತ ಯಾರು ಹೇಳಿದ್ದು? ಈಗ ನಾನು ಮಾಧ್ಯಮಗಳ ಮುಂದೆ ಬಂದಿಲ್ಲ ಅಂದ್ರೆ ನಾನು ವಿಕ್ಟಿಮ್ ಆಗುತ್ತೀನಿ. ಎಲ್ಲಾ ರೂಮರ್ಸ್‌ ಸತ್ಯ ಅಲ್ಲ ಇದಕ್ಕೆ ನಿಮ್ಮ ಬಳಿ ದಾಖಲೆ ಇದ್ಯಾ? ಅದಿಕ್ಕೆ ನಾನು ದೂರು ನೀಡಿದ್ದೀನಿ.  ತೆಲುಗು ಸಿನಿಮಾದವರು ಕರ್ನಾಟಕದಲ್ಲಿ ಬಂದು ಯಾಕೆ ಮಾತನಾಡುತ್ತಿದ್ದಾರೆ. ರಮ್ಯಾ ಎಲ್ಲಿ ಇದ್ದಾರೆ?  ಅವರು ಮನೆ ಇರುವುದು ಅಲ್ಲಿ ಅವರು ಗಂಡ ಇರುವುದು ಅಲ್ಲಿ ಯಾಕೆ ಇಲ್ಲಿ ಬಂದು ಮತನಾಡುತ್ತಿದ್ದಾರೆ.  ಮಾಧ್ಯಮದವರು ಯಾಕೆ ಆ ಪ್ರಶ್ನೆ ಮಾಡುತ್ತಿಲ್ಲ. ನರೇಶ್ ಡಿವೋರ್ಸ್‌ (Divorce) ಬಗ್ಗೆ ಯಾವುದೇ ಮಾಹಿತಿ ಇಲ್ಲ. ನನ್ನ 12 ವರ್ಷಗಳ ಸಿನಿಮಾ ಜರ್ನಿಯಲ್ಲಿ ಕನ್ನಡದಲ್ಲಿ ನಾನು 5 ಸಿನಿಮಾ ಮಾಡಿರಬಹುದು ಅದರೆ ತೆಲುಗುನಲ್ಲಿ 150 ಸಿನಿಮಾ ಮಾಡಿದ್ದೀನಿ, ನಾನು ಅಲ್ಲಿ ಫೇಸಮ್ ಆಗಿದ್ದೀನಿ ನಾನಿಗ ಅಲ್ಲಿ ಲೋಕಲ್ ವ್ಯಕ್ತಿ ಆಗಿದ್ದೀನಿ. ಇಲ್ಲಿ ಏನು ಸಂಬಂಧ ಇದೆ? ನನ್ನ ಮಾನ ಮರೆಯಾದೆ ತೆಗೆದಯೋದೆ ಅವರ ಉದ್ದೇಶ ಅದನ್ನು ಅಲ್ಲೇ ಮಾಡಲಿ ಅವರು' ಎಂದು ಮಾತನಾಡಿದ್ದಾರೆ. 

ಪವಿತ್ರಾ ಲೋಕೇಶ್‌ ನನ್ನ ಸ್ನೇಹಿತೆ, ರಮ್ಯಾ ಮಾನಸಿಕವಾಗಿ ಸರಿ ಇಲ್ಲ ಎಂದ ನರೇಶ್ ಬಾಬು!

'ರಮ್ಯಾ ರಘುಪತಿ ಯಾರು ಅಂತ ನಾನು ಭೇಟಿ ಆಗಬೇಕು. ದೀಪಿಕಾನಾ (Deepika Padukone), ಹೇಮಮಾಲಿನಾ (Hema Malini) ನಾನು ಯಾಕೆ ಅವರನ್ನು ಭೇಟಿಯಾಗಬೇಕು. ಇಲ್ಲಿ ಇವರಿಗೆ ಏನು ಸಂಬಂಧವಿದೆ. ಹೆಣ್ಣು ಮತ್ತು ಗಂಡು ಇಬ್ಬರೂ ಕ್ಲೋಸ್ ಇದ್ದಾರೆ ಅನ್ನೋ ಮಾತ್ರಕ್ಕೆ ಎಲ್ಲನೂ ಹೇಳಬಹುದಾ? ನನ್ನ ಮನೆಯೊಳಗೆ ಬಂದು ಏನು ಬೇಕಾದರೂ ಮಾಡಬಹುದಾ.ನನಗೆ ರಕ್ಷಣೆ ಬೇಕು, ನಾನು ಈಗ ಹೇಗೆ ಹೊರಗೆ ಹೋಗಲಿ.ನನ್ನ ಜೀವನಕ್ಕೆ, ನನ್ನ ವೃತ್ತಿ ಬದುಕಿಗೆ ಎಷ್ಟು ತೊಂದರೆ ಆಗುತ್ತಿದೆ ಎನ್ನುವುದು ಗೊತ್ತಾಗುತ್ತಿಲ್ವಾ? ನನಗೆ ಯಾಕೆ ಯಾರು ಬೆಂಬಲ ನೀಡುತ್ತಿಲ್ಲ' ಎಂದು ಹೇಳಿದ್ದಾರೆ.

100ಕ್ಕೂ ಹೆಚ್ಚು ಮಂದಿಗೆ ರಮ್ಯಾ ವಂಚಿಸಿದ್ದಾಳೆ, ನಂಗವಳಿಂದ ಜೀವ ಬೆದರಿಕೆ ಇದೆ: ನರೇಶ್

'ಇಲ್ಲಿವರೆಗೂ ನಾನು ಯಾವ ಕಾರ್ಯಕ್ರಮಕ್ಕೆ ಹೋಗಿದ್ದೀನಿ, ಎಲ್ಲಿ ಕಾಣಿಸಿಕೊಂಡಿದ್ದೀನಿ, ನಾನು ಯಾವ ಹೀರೋ ಜೊತೆ ಕಾಣಿಸಿಕೊಂಡಿದ್ದೀನಿ ನನ್ನನ್ನು ಯಾಕೆ ಎಳೆಯುತ್ತಿದ್ದಾರೆ. ನಾನು ಮದುವೆನೇ ಆಗಿಲ್ಲ...ವಿಚ್ಛೇದನ ಯಾಕೆ ತೆಗೆದುಕೊಳ್ಳಬೇಕು ನಾನು ಬೇರೆ ಇದ್ದೀನಿ. ನಾನು ಮದುವೆ ಆಗಿರುವುದು ದಾಖಲೆ ಇದಿಯಾ. ಅದು ನನಗೆ ಬಿಟ್ಟಿರುವ ವಿವಾರ. ಮಾಧ್ಯಮದ ಮುಂದೆ ನಾನ್ಯಾಕೆ ಮಾತನಾಡಬೇಕು ನನಗೇನು ಮಾಧ್ಯಮ ಸಹಾಯ ಮಾಡುತ್ತಾ, ನ್ಯಾಯ ಕೊಡಿಸುತ್ತಾ, ಜನ ಸಹಾಯ ಮಾಡುತ್ತಾರಾ, ಜನ ನನಗೆ ಸ್ಪಂದನೆ ನೀಡಬಹುದು.ನನ್ನ ಸಮಸ್ಯೆನ ನಾನೆ ಬಗೆಹರಿಸಿಕೊಳ್ಳುತ್ತೇನೆ. ನಾನು ಓದಿದ್ದೀನಿ, ನನಗೆ ಬೆಂಬಲವಿದೆ. ನನ್ನ ಜೊತೆ ನನ್ನ ತಾಯಿ ಇದ್ದಾರೆ' ಎಂದಿದ್ದಾರೆ.

6 ಸಿನಿಮಾಗಳು ಒಟ್ಟಿಗೆ ನಟನೆ ಮಾಡಿದ್ದೀರಿ. ನರೇಶ್ ಜೊತೆಗೆನೇ ಯಾಕೆ ನಿಮ್ಮ ಹೆಸರು ಕೇಳಿಬರುತ್ತಿದೆ?

ಇದಕ್ಕೆ ರಮ್ಯಾ ಉತ್ತರ ಕೊಡಬೇಕು..ನಾನ್ಯಾಕೆ ಉತ್ತರ ಕೊಡಬೇಕು.. ರಮ್ಯಾ ಯಾರು ಎಂದು ಪ್ರಶ್ನೆ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!