ಪವಿತ್ರಾ ಲೋಕೇಶ್ 'ಮತ್ತೆ ಮದುವೆ'?; ನರೇಶ್‌ ಜೊತೆ ಲೀವಿಂಗ್‌ ರಿಲೇಶನ್‌ಶಿಪ್‌ ನಿಜವೇ?

By Vaishnavi Chandrashekar  |  First Published May 18, 2023, 1:19 PM IST

ಮತ್ತೆ ಮದುವೆ ಸುದ್ದಿಗೋಷ್ಠಿ. ವೈಯಕ್ತಿಕ ವಿಚಾರಗಳನ್ನು ಚರ್ಚೆ ಮಾಡಿದ ಪವಿತ್ರಾ ಲೋಕೇಶ್.... 


ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ಕಮ್ ನಿರ್ದೇಶಕ ನರೇಶ್ ಪ್ರೀತಿಸುತ್ತಿದ್ದಾರೆ ಹಲವು ವರ್ಷಗಳಿಂದ ಲೀವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದಾರೆ ಮದುವೆ ಆಗುತ್ತಿದ್ದಾರೆ ಹಾಗೆ ಹೀಗೆ ಎಂದು ಸಾಕಷ್ಟು ವಿಚಾರಗಳನ್ನು ಮಾಧ್ಯಮಗಳ ಎದುರು ಚರ್ಚೆ ಆಯ್ತು. ಇವರಿಬ್ಬರ ವಿಚಾರಕ್ಕೆ ಬಿಗ್ ಟ್ವಿಸ್ಟ್‌ ಕೊಟ್ಟಿದ್ದು ನರೇಶ್ ಪತ್ನಿ ರಮ್ಯಾ ರಘುಪತಿ. ಒಂದು ವಾರ ಆಯ್ತು ಎರಡು ವಾರ ಆಯ್ತು ಅಲ್ಲಿಗೆ ವಿಚಾರ ತಣ್ಣಗಾಗುವ ಸಣ್ಣ ಸುಳಿವು ಕೂಡ ಸಿಗಲಿಲ್ಲ...ಅಷ್ಟರಲ್ಲಿ ನರೇಶ್ ಮತ್ತು ಪವಿತ್ರ ಒಂದೇ ರೂಮ್‌ನಲ್ಲಿ ಸಿಕ್ಕಿಬಿದ್ದರು. ಅದಾದ ಕೆಲವು ದಿನಗಳಲ್ಲಿ ಮದುವೆ ಫೋಟೋ ವಿಡಿಯೋ ರಿಲೀಸ್ ಮಾಡಿದ್ದರು. ಓಕೆ ಮದುವೆ ಆದರು ವಿಚಾರ ಕೂಲ್ ಆಯ್ತು ಅಂದುಕೊಂಡರೆ ಅದು ಮದುವೆ ಅಲ್ಲ ಸಿನಿಮಾ ಎಂದು ಮತ್ತೊಂದು ಟ್ವಿಸ್ಟ್‌ ಕೊಟ್ಟರು. ತಮ್ಮ ವೈಯಕ್ತಿಕ ಜೀವನದ ವಿಚಾರ ಹಿಡಿದು ಮಾಡಿರುವ ಚಿತ್ರಕ್ಕೆ 'ಮತ್ತೆ ಮದುವೆ' ಎನ್ನುವ ಟೈಟಲ್ ಕೊಟ್ಟಿದ್ದಾರೆ. 

ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಮತ್ತೆ ಮದುವೆ ಸಿನಿಮಾ ಪ್ರೆಸ್‌ ಮೀಟ್ ಅದ್ಧೂರಿಯಾಗಿ ನಡೆಯಿತ್ತು. 'ನಾನು ತುಂಬಾ ವರ್ಷಗಳ ನಂತರ ಮಾಧ್ಯಮದವರನ್ನು ಭೇಟಿ ಮಾಡುತ್ತಿರುವುದು. ನಾನು ಕೆಲವೊಂದು ವಿಚಾರವನ್ನು ನಿಮ್ಮ ಮುಂದೆ ಹಂಚಿಕೊಳ್ಳಬೇಕು. ನನ್ನ ಪರಿಚಯ ನಿಮಗೆ ಮಾಡಿಕೊಡುವುದು ಬೇಡ ಅಂದುಕೊಂಡಿರುವೆ. ನಾನು ಹುಟ್ಟಿದ್ದು ಬೆಳೆದಿದ್ದೇ ಈ ಕನ್ನಡ ಚಿತ್ರರಂಗದಿಂದ.  ಅಪ್ಪ ಅಸಿಸ್ಟೆಂಟ್‌ ಆಗಿದ್ದಾಗಿನಿಂದ ನಾನು ಕನ್ನಡ ಚಿತ್ರರಂಗದಲ್ಲಿದ್ದೇವೆ. ನಾನು ನನ್ನ ತಂದೆ ನಿಧನ ಆದ ನಂತರ ಚಿತ್ರರಂಗಕ್ಕೆ ಕಾಲಿಟ್ಟಿದ್ದು. ನಾನು ಚಿತ್ರರಂಗದಲ್ಲಿ ಎಲ್ಲಾ ಕಲಾವಿದರ ಜೊತೆ  ನಟಿಸಿದ್ದೇನೆ ಎಲ್ಲಾ ಕಲಾವಿದರ ಜೊತೆಗೂ ನಾನು ಒಡನಾಟ ಇಟ್ಟುಕೊಂಡಿದ್ದೇನೆ' ಎಂದು ಪವಿತ್ರಾ ಲೋಕೇಶ್ ಮಾತು ಆರಂಭಿಸಿದ್ದರು. 

Tap to resize

Latest Videos

ಪವಿತ್ರಾ ಲೋಕೇಶ್-ನರೇಶ್ ಪ್ರೇಮ್ ಕಹಾನಿ, ರಮ್ಯಾ-ಸುಚೇಂದ್ರ ಪ್ರಸಾದ್ ವಿಲನ್: 'ಮತ್ತೆ ಮದುವೆ' ಟ್ರೇಲರ್ ಔಟ್

'ನನಗೆ ಆಲೋಚನೆ ಮಾಡುವ ಶಕ್ತಿ. ಆದ್ರೆ ಕೆಲವು ಕಟ್ಟ ಸಮಸ್ಯೆ ಕೆಲವೊಂದು ಕೆಟ್ಟ ಘಟನೆಗಳು ನನ್ನನ್ನು ತುಂಬಾ ಕಾಡಿದೆ.  ಅದರಿಂದ ಹೊರ ಬರೋಕೆ ತುಂಬಾ ಸಮಯ ಹಿಡಿಯಿತ್ತು. ನಾನು ಹಣದ ಹಿಂದೆ ಅದಕ್ಕೆ ಹಣಕ್ಕಾಗಿ ಎಂದು ಹೋಗವಳಲ್ಲ ಏಕೆಂದರೆ ಕನ್ನಡ ಚಿತ್ರರಂಗ ಎಲ್ಲವನ್ನು ಕೊಟ್ಟಿದೆ. ನನಗೆ ತೆಲುಗು ಚಿತ್ರರಂಗದವರು ತುಂಬಾ ಕೆಲಸ ಕಟ್ಟಿದ್ದಾರೆ ಆ ಭಾಷೆಯಲ್ಲಿ ನಾನು ಚೆನ್ನಾಗಿ ದುಡಿದಿರುವೆ. ನನ್ನ ಮೇಲೆ ಮಾಡಿರೋ ಆರೋಪಗಳನ್ನು ತುಂಬಾ ನೋವು ಕೊಟ್ಟಿದೆ. ಆದರೆ ಅದರಿಂದ ಹೊರ ಬಂದಿರುವೆ. ನನ್ನ ಬದುಕಿನ ಒಳ್ಳೆ ವಿಚಾರಗಳು ಸೇರೆ ಮತ್ತೆ ಮದುವೆ ಸಿನಿಮಾ ಆಗಿದೆ. ನರೇಶ್ ಬಗ್ಗೆ ಹೇಳ ಬೇಕು ಅಂದ್ರೆ ಅವರು ಒಬ್ಬ ಸೂಪರ್ ಸ್ಟಾರ್ ಕುಟುಂಬದಿಂದ ಬಂದವರು. ನರೇಶ್ ಸಾಮಾನ್ಯ ನಟ ಅಲ್ಲ ತೆಲುಗು ಸಿನಿಮಾದ ಎಲ್ಲಾ ಚಿತ್ರಗಳಲ್ಲೂ ನಟಿಸಿದ್ದಾರೆ ನನ್ನ ಸಿನಿಮಾದಲ್ಲಿ ಅವರು ನಟಿಸಿರುವುದು ನನಗೆ ತುಂಬಾ ಖುಷಿ ಕೊಟ್ಟಿದೆ' ಎಂದು ಪವಿತ್ರಾ ಲೋಕೇಶ್ ಹೇಳಿದ್ದಾರೆ. 

ನರೇಶ್ ಮಾತು:

'ನನಗೆ ಕನ್ನಡ ಸ್ವಲ್ಪ ಗೊತ್ತು. ಮತ್ತೆ ಮದುವೆ ಚಿತ್ರಕ್ಕೆ ನಾನು ಕನ್ನಡದಲ್ಲಿ ಡಬ್ ಮಾಡಿದ್ದೀನಿ. ಕನ್ನಡ ತೆಲುಗು ಸಿನಿಮಾರಂಗ ಅಕ್ಕ ತಂಗಿ ಇದ್ದಂತೆ. ಆರಂಭದಿಂದಲ್ಲೂ ಕನ್ನಡ ಚಿತ್ರರಂಗದ ಜೊತೆ ನನಗೆ ಒಳ್ಳೆಯ ಸ್ನೇಹವಿದೆ. ಶಿವಣ್ಣ ನನ್ನ ಸ್ಕೂಲ್‌ನಲ್ಲಿ ನನ್ನ ಕ್ಲಾಸ್‌ಮೆಟ್ ಆಗಿದ್ದರು. ಅಂಬರೀಶ್ ಮತ್ತು ಸುಮಲತಾ ಕೂಡ ನನಗೆ ತುಂಬಾ ಆತ್ಮೀಯರು. ಮತ್ತೆ ಮದುವೆ ಸಿನಿಮಾದಲ್ಲಿ ಐದು ಬೆಸ್ಟ್‌ ಹಾಡುಗಳು ಇದೆ ಏಕೆಂದರೆ ಇದೊಂದು ಎಮೋಷನಲ್ ಸಿನಿಮಾ. ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ನನ್ನ ಪ್ರಯಾಣ ಶುರುವಾಗಲಿದೆ. ನನ್ನ ವೈಯಕ್ತಿಕ ಜೀವನದ ಬಗ್ಗೆ ಅನೇಕರು ಪ್ರಶ್ನೆ ಮಾಡಿದ್ದಾರೆ ನೀವಿಬ್ಬರು ಮದುವೆ ಆಗಿದ್ದೀರಾ ಅಂತ ಕೇಳಿದ್ದಾರೆ ನನ್ನ ಪ್ರಕಾರ ಮದುವೆ ಅನ್ನೋದು ಹೃದಯದಲ್ಲಿ ಇದ್ದರೆ ಸಾಕು ಅದನ್ನು ತೋರಿಸಿಕೊಳ್ಳಲು ತಾಳಿ ಉಂಗುರ ಬೇಕಿಲ್ಲ...ನಾನು ಪವಿತ್ರ ಲೋಕೇಶ್‌ ಲೀವಿಂಗ್‌ ರಿಲೇಷನ್‌ಶಿಪ್‌ನಲ್ಲಿದ್ದೀವಿ' ಎಂದು ನರೇಶ್ ಸ್ಪಷ್ಟನೆ ಕೊಟ್ಟಿದ್ದಾರೆ. 

click me!