ನಟಿ ಹರಿಪ್ರಿಯಾಗೆ ಲಾಸ್ಟ್‌ ಮೆಸೇಜ್ ಮಾಡಿದ್ದರು ಯಾರು? ಲಾಕ್‌ ಇದ್ರೂ ಫೋನ್‌ ಫುಲ್ ಲೀಕ್!

Published : May 18, 2023, 10:46 AM IST
ನಟಿ ಹರಿಪ್ರಿಯಾಗೆ ಲಾಸ್ಟ್‌ ಮೆಸೇಜ್ ಮಾಡಿದ್ದರು ಯಾರು? ಲಾಕ್‌ ಇದ್ರೂ ಫೋನ್‌ ಫುಲ್ ಲೀಕ್!

ಸಾರಾಂಶ

ವೈರಲ್ ಆಯ್ತು ನಟಿ ಹರಿಪ್ರಿಯಾ ವಾಟ್ಸ್‌ ಇನ್‌ ಮೈ ಮೊಬೈಲ್ ವಿಡಿಯೋ. ವಾಲ್‌ ಪೇಪರ್ ಇಷ್ಟೊಂದು ಕೂಲ್‌? 

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಹರಿಪ್ರಿಯಾ ಯುಟ್ಯೂಬ್ ಚಾನೆಲ್ ಆರಂಭಿಸಿದ ದಿನದಿಂದ ಸಿನಿ ರಸಿಕರ ಮನಸ್ಸಿಗೆ ತುಂಬಾನೇ ಹತ್ತಿರವಾಗಿದ್ದಾರೆ. ಸಿನಿಮಾ, ಲೈಫ್‌ಸ್ಟೈಲ್‌, ಪರ್ಸನಲ್ ಕೆಲಸಗಳು, ಮನೆ ಗಂಡ ಹೀಗೆ ಪ್ರತಿಯೊಂದನ್ನು ಜನರ ಜೊತೆ ಹಂಚಿಕೊಳ್ಳುತ್ತಾರೆ. ನೆಟ್ಟಿಗರು ಪದೇ ಪದೆ ಕೇಳುತ್ತಿದ್ದ ಏಕೈಕಾ ವಿಡಿಯೋ ಅಂದ್ರೆ ನಿಮ್ಮ ಮೊಬೈಲ್‌ನಲ್ಲಿ ಏನಿದೆ ತೋರಿಸಿ ಎಂದು...ಹೀಗಾಗಿ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾರೆ. 

ಸದಾ ಕೈಯಲ್ಲಿ ಫೋನ್ ಹಿಡಿದುಕೊಂಡು ಓಡಾಡುವ ಹರಿಪ್ರಿಯಾ ಅವರಿಗೆ ಮೊಬೈಲ್‌ನಲ್ಲಿ ತಪ್ಪದೆ ಆಹಾರ (Food Delivery) ಆಪ್‌ಗಳು ಇರಲೇ ಬೇಕಂತೆ. ಅಷ್ಟೇ ಅಲ್ಲ ದಿನ ತಪ್ಪದೆ ಯೋಗ ಮಾಡುವ ನಟಿ ಮೊಬೈಲ್‌ನಲ್ಲಿ ಆಪ್‌ ಒಂದನ್ನು ಡೌನ್‌ಲೋಡ್ ಮಾಡಿಕೊಂಡು ಅದನ್ನು ತಪ್ಪದೆ ಫಾಲೋ ಮಾಡಿ ಫಿಟ್ನೆಸ್‌ ನೋಡಿಕೊಳ್ಳುತ್ತಾರಂತೆ. 'ನನ್ನ ಪರ್ಸನಲ್‌ ಅಪ್‌ಡೇಟ್‌ಗಳ ಬಗ್ಗೆ ಜನರಿಗೆ ನೀಡಲು ಪ್ರಪಂಚದಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳಲು ನಾನು ಸೋಷಿಯಲ್ ಮೀಡಿಯಾ ಬಳಸುವೆ. ಶಾಪಿಂಗ್ ಕ್ರೇಜ್ ಹೆಚ್ಚಿರುವ ಕಾರಣ ಶಾಪಿಂಗ್‌ಗೆ ಬ್ರೇಕ್ ಹಾಕುವುದಿಲ್ಲ. ಮನೆಯಿಂದ ಹೊರಗಡೆ ಇರುವಾಗ ಅಮ್ಮನಿಗೆ ತರಕಾರಿ ಆರ್ಡರ್‌ ಮಾಡಿ ಕೊಡುವೆ' ಎಂದು ಹರಿಪ್ರಿಯಾ ಮಾತನಾಡಿದ್ದಾರೆ. 

ಅಫ್ರಿಕಾದ ಮಾರಿಷಸ್‌ಗೆ ಹಾರಿದ ಸಿಂಹ ಪ್ರಿಯಾ; ಹನಿಮೂನ್‌ ಫೋಟೋ ವೈರಲ್!

ಹರಿಪ್ರಿಯಾ ಮೊಬೈಲ್‌ ಬಗ್ಗೆ ಯಾರಿಗೂ ಗೊತ್ತಿರದ ಸತ್ಯವೊಂದನ್ನು ರಿಲೀವ್ ಮಾಡಿ ಎಂದು ಪ್ರಶ್ನೆ ಮಾಡಿದಾಗ. 'ನನ್ನ ಮೊಬೈಲ್‌ನಲ್ಲಿ ಪ್ರತಿಯೊಂದು ಆಪ್‌ಗೂ ನಾನು ಲಾಕ್‌ ಇಟ್ಟಿರುವೆ. ಯಾವುದನ್ನು ಯಾರೂ ಸುಲಭವಾಗಿ ನೋಡಲು ಆಗಲ್ಲ. ಪ್ರತಿ ಆಪ್‌ಗೂ ಬೇರೆ ಬೇರೆ ಪಾಸ್‌ ವರ್ಡ್‌ ಇರುತ್ತದೆ. ಸುರಕ್ಷಾ ಆಪ್‌ನ ಹೆಚ್ಚಿಗೆ ಬಳಸುವೆ ಅದಕ್ಕೆ ಯಾವುದೇ ಲಾಕ್‌ ಇಟ್ಟಿಲ್ಲ. ಸಮಸ್ಯೆಯಲ್ಲಿದ್ದಾಗ ನಾವು ಇದನ್ನು ಬಳಸಬಹುದು. ನೆಟ್‌ವರ್ಕ್‌ ಇಲ್ಲದ ಜಾಗದಲ್ಲೂ ಇದನ್ನು ಬಳಸಬಹುದು ಹೀಗಾಗಿ ಹೆಣ್ಣು ಮಕ್ಕಳು ತಪ್ಪದೆ ಬಳಸಬೇಕು' ಎಂದು ಹರಿಪ್ರಿಯಾ ಹೇಳಿದ್ದಾರೆ. 

ವಿಡಿಯೋ ಆರಂಭದಲ್ಲಿ ಹರಿಪ್ರಿಯಾ ತಮ್ಮ ಮೊಬೈಲ್‌ಗೆ ಲಾಕ್‌ ಸ್ಕ್ರೀನ್‌ಗೆ ಹಾಕಿರುವ ಶಿವ ಪಾರ್ವತಿ ಫೋಟೋ ತೋರಿಸಿದ್ದಾರೆ ಹಾಗೆ... ಮೊಬೈಲ್ ವಾಲ್‌ಪೇಪರ್ ಆಗಿ ಇಟ್ಟಿರುವ ರಾಧಾ ಕೃಷ್ಣ ಫೋಟೋ ತೋರಿಸಿ ನನಗೆ ಈ ಫೋಟೋಗಳು ತುಂಬಾ ಇಷ್ಟ ಎಂದಿದ್ದಾರೆ. ಇನ್ನು ನಟಿಯರು ಅಂದ್ಮೇಲೆ ಫೋಟೋ ಶೂಟ್‌ ಅದು ಇದು ಇದ್ದೇ ಇರುತ್ತೆ..ಪ್ರಿಯಾನೇ ಕ್ಲಿಕ್ ಮಾಡಿರುವ 15 ಸಾವಿರಕ್ಕೂ ಹೆಚ್ಚು ಫೋಟೋಗಳು ಮೊಬೈಲ್‌ನಲ್ಲಿ ಇಟ್ಟುಕೊಂಡಿದ್ದಾರೆ. ಯುಟ್ಯೂಬ್ ವಿಡಿಯೋ ಶೂಟ್ ಆರಂಭವಾಗುವ ಮುನ್ನವೇ ಫೋಟೋ ಕ್ಲಿಕ್ ಮಾಡಿಕೊಂಡಿದ್ದರಂತೆ.  ಹರಿಪ್ರಿಯಾ ಲಾಸ್ಟ್‌ ಅಥವಾ ಹೆಚ್ಚಿಗೆ ಮೆಸೇಜ್ ಮಾಡಿರುವುದು ತಮ್ಮ ಡಿಸೈನರ್‌ಗಂತೆ. 

ನಟ ವಸಿಷ್ಠ ಸಿಂಹ ಜೊತೆ ಹರಿಪ್ರಿಯಾ ಇತ್ತೀಚಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.  ವಿದೇಶದಲ್ಲಿ ಹನಿಮೂನ್ ಎಂಜಾಯ್ ಮಾಡಿಕೊಂಡು ಆಗಲೇ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿರುವ ಈ ಜೋಡಿ ಲೈಫ್‌ನ ಸಿಕ್ಕಾಪಟ್ಟೆ ಕೂಲ್ ಆಗಿ ಸ್ವೀಕರಿಸಿದ್ದಾರೆ. ಅಭಿಮಾನಿಗಳ ಸೋಷಿಯಲ್ ಮೀಡಿಯಾದಲ್ಲಿ ಸಿಂಹಪ್ರಿಯಾ ಎಂದು ಖಾತೆ ತೆರೆದು ಪ್ರತಿಯೊಂದು ಅಪ್ಡೇಟ್‌ಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?