
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ದಾಖಲಿಸಿದೆ. ಆದರೆ ಸಿಎಂ ಆಯ್ಕೆ ಕಗ್ಗಂಟಾಗಿದೆ. ಸಿಎಂ ಯಾರು ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಸಿದ್ಧರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರಲ್ಲಿ ಸಿಎಂ ಯಾರಾಬೇಕು ಎನ್ನುವ ಚರ್ಚೆ ಇನ್ನೂ ನಡೆಯುತ್ತಿದೆ. ಇಬ್ಬರಲ್ಲಿ ಸಿಎಂ ಯಾರಾಗಬೇಕು ಎನ್ನುವ ನಿರ್ಧಾರ ತೆಗೆದುಕೊಳ್ಳುವುದು ತೀರಾ ಕಷ್ಟವಾಗಿದೆ. ಸಿಎಂ ಆಯ್ಕೆ ವಿಚಾರದಲ್ಲಿ ಜಾತಿ ಜಾರಕಾರಣ ಮಾಡುತ್ತಿರುವ ಬಗ್ಗೆ ನಟ ಚೇತನ್ ಅಸಮಾಧಾನ ಹೊರಹಾಕಿದ್ದಾರೆ. ಒಕ್ಕಲಿಗರು ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಒತ್ತಾಯ ಮಾಡುತ್ತಿದ್ರೆ ಕುರುಬ ಸಮುದಾಯದವರು ಸಿದ್ಧರಾಮಯ್ಯ ಅವರೇ ಸಿಎಂ ಆಗಬೇಕು ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಚೇತನ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಜಾತಿ ರಾಜಕರಣ ಬಗ್ಗೆ ತಮ್ಮ ಅಭಿಪ್ರಿಯಾ ಹೊರಹಾಕಿರುವ ಚೇತನ್ ಈ ಹಿಂದೆ ಲಿಂಗಾಯತ ಗುಂಪುಗಳು / ಮಠಾಧೀಶರು ಕೂಡ ಇಂತಹ ಸ್ವಾರ್ಥ ಜಾತಿ ರಾಜಕಾರಣಕ್ಕೆ ಒತ್ತಾಯಿಸಿದ್ದರು ಎಂದು ಕಿಡಿ ಕಾರಿದ್ದಾರೆ. 'ಒಕ್ಕಲಿಗ ಮತ್ತು ಕುರುಬ ಸಮುದಾಯದ ಗುಂಪುಗಳು ತಮ್ಮ ಜಾತಿಯಲ್ಲಿ ಹುಟ್ಟಿದ ವ್ಯಕ್ತಿ ಕಾಂಗ್ರೆಸ್ ರಾಜಕಾರಣಿ ಮುಖ್ಯಮಂತ್ರಿಯಾಗಬೇಕು ಎಂದು ಬಯಸಿದ್ದಾರೆ. ಈ ಹಿಂದೆ ಲಿಂಗಾಯತ ಗುಂಪುಗಳು / ಮಠಾಧೀಶರು ಕೂಡ ಇಂತಹ ಸ್ವಾರ್ಥ ಜಾತಿ ರಾಜಕಾರಣಕ್ಕೆ ಒತ್ತಾಯಿಸಿದ್ದರು. ಕರ್ನಾಟಕದಲ್ಲಿ 'ಮಾಸ್ ಲೀಡರ್' ಎಂದರೆ ಕೇವಲ 'ಜಾತಿ ನಾಯಕ' ಎಂದು ಅರ್ಥೈಸುತ್ತದೆ' ಎಂದು ಹೇಳಿದ್ದಾರೆ.
'ಆದರೇ, ಜಾತಿ ವಿರೋಧಿ ನಾಯಕ/ನಾಯಕಿ ಮಾತ್ರ ನಿಜವಾದ ಮಾಸ್ ಲೀಡರ್ ಆಗಲು ಸಾಧ್ಯ' ಎಂದು ಹೇಳಿದ್ದಾರೆ. ಚೇತನ್ ಮಾತಿಗೆ ಅನೇಕರು ಸರಿಯಾಗಿದೆ ಎಂದು ಹೇಳುತ್ತಿದ್ದಾರೆ.
ಅಲ್ಪಾವಧಿಗೆ ಸಿದ್ಧರಾಮಯ್ಯ, ದೀರ್ಘಾವಧಿಗೆ ಡಿಕೆಶಿ: ಸಿಎಂ ಆಯ್ಕೆ ಬಿಕ್ಕಟ್ಟಿಗೆ ಸುಲಭ ಪರಿಹಾರ ಕೊಟ್ಟ ನಟ ಚೇತನ್
ಸಿಎಂ ಆಯ್ಕೆಗೆ ಸುಲಭ ಪರಿಹಾರ ಕೊಟ್ಟ ಚೇತನ್
ಈ ನಡುವೆ ನಟ ಚೇತನ್ ಅಹಿಂಸಾ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಯಾರು ಸಿಎಂ ಆದರೆ ಉತ್ತಮ ಎಂಬುದನ್ನು ಚೇತನ್ ವಿವರಣೆ ನೀಡಿದ್ದಾರೆ. ಸಿಎಂ ಆಯ್ಕೆ ಬಿಕ್ಕಟ್ಟಿಗೆ ಚೇತನ್ ಸುಲಭ ಪರಿಹಾರ ನೀಡಿದ್ದಾರೆ. ಈ ಬಗ್ಗೆ ಚೇತನ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಪಾವಧಿಗೆ ಸಿದ್ಧರಾಮಯ್ಯ, ದೀರ್ಘಾವಧಿಗೆ ಡಿಕೆಶಿ ಎಂದು ಹೇಳಿದ್ದಾರೆ. 'ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಕರ್ನಾಟಕದ ಜನತೆಗೆ ಉತ್ತಮ ಸಿಎಂ ಯಾರು?. ನಮ್ಮ ಜನರ ಜೀವನವನ್ನು ಸುಧಾರಿಸುವ ದೃಷ್ಟಿಯಿಂದ ಸಿದ್ದರಾಮಯ್ಯ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಅವನತಿ ವಿಚಾರದಲ್ಲಿ (ಪಕ್ಷದ ‘ಗೋರಿ ಅಗಿಯುವುದು’) ಡಿಕೆ ಶಿವಕುಮಾರ್. ಆದ್ದರಿದಂದ, ಅಲ್ಪಾವಧಿಗೆ ಸಿದ್ದರಾಮಯ್ಯ ಕರ್ನಾಟಕಕ್ಕೆ ಉತ್ತಮ. ದೀರ್ಘಾವಧಿಗೆ ಡಿಕೆ ಶಿವಕುಮಾರ್ ಕರ್ನಾಟಕಕ್ಕೆ ಉತ್ತಮ' ಎಂದು ಹೇಳಿದ್ದಾರೆ.
ನಟ ಚೇತನ್ ಯಾವುದೇ ವಿಚಾರಗಳ ಬಗ್ಗೆಯಾದರೂ ತಮ್ಮ ಅಭಿಪ್ರಿಯಾ ಹೊರಹಾಕುತ್ತಿರುತ್ತಾರೆ. ಅನೇಕ ಬಾರಿ ಚೇತನ್ ಮಾತುಗಳು ವಿವಾದಕ್ಕೆ ಸಿಲುಕಿ ಸಂಕಸಷ್ಟಕ್ಕೆ ಸಿಲುಕಿದ್ದು ಇದೆ. ಆದರೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಚೇತನ್ ಯಾವತ್ತೂ ಹಿಂಜರಿಯಲ್ಲ. ಇದೀಗ ಸಿಎಂ ಆಯ್ಕೆ ವಿಚಾರವಾಗಿಯೂ ತಮ್ಮದೆ ವಿವರಣೆ ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.