ಕ್ಲಿಕ್ ಆಯ್ತು ಸುದೀಪ್‌- ಆಶಿಕಾ‌ ಜೋಡಿ: ಕೋಟಿಗೊಬ್ಬ 3 ಪಟ್ಟಾಕಿ ಪೋರಿಯೋ ಹಾಡಿಗೆ ಭಾರಿ ಮೆಚ್ಚುಗೆ

Suvarna News   | Asianet News
Published : Nov 18, 2020, 09:27 AM ISTUpdated : Nov 18, 2020, 10:18 AM IST
ಕ್ಲಿಕ್ ಆಯ್ತು ಸುದೀಪ್‌- ಆಶಿಕಾ‌ ಜೋಡಿ: ಕೋಟಿಗೊಬ್ಬ 3 ಪಟ್ಟಾಕಿ ಪೋರಿಯೋ ಹಾಡಿಗೆ ಭಾರಿ ಮೆಚ್ಚುಗೆ

ಸಾರಾಂಶ

ಆಶಿಕಾ ರಂಗನಾಥ್‌ ಹಾಗೂ ಸುದೀಪ್‌ ಕಾಂಬಿನೇಷನ್‌ನಲ್ಲಿ ಬಂದಿರುವ ಈ ಹಾಡಿಗೆ ನೋಡುಗರಿಂದ ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಕ್ಕಿದೆ. ಆನಂದ್‌ ಆಡಿಯೋ ಯೂಟ್ಯೂಬ್‌ನಲ್ಲಿ 2.5 ಮಿಲಿಯನ್‌ ಹಿಟ್ಸ್‌ ದಾಟಿದೆ.

ನಟ ಸುದೀಪ್‌ ಅಭಿಮಾನಿಗಳಿಗೆ ಈ ಬಾರಿ ದೀಪಾವಳಿ ಹಬ್ಬ ಭರ್ಜರಿಯಾಗಿಯೇ ಇತ್ತು. ಅದಕ್ಕೆ ಕಾರಣ ‘ಕೋಟಿಗೊಬ್ಬ 3’ ಚಿತ್ರದ ಹಾಡು. ಆಶಿಕಾ ರಂಗನಾಥ್‌ ಹಾಗೂ ಸುದೀಪ್‌ ಕಾಂಬಿನೇಷನ್‌ನಲ್ಲಿ ಬಂದಿರುವ ಈ ಹಾಡಿಗೆ ನೋಡುಗರಿಂದ ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಕ್ಕಿದೆ.

ಆನಂದ್‌ ಆಡಿಯೋ ಯೂಟ್ಯೂಬ್‌ನಲ್ಲಿ 2.5 ಮಿಲಿಯನ್‌ ಹಿಟ್ಸ್‌ ದಾಟಿದೆ. ಹಾಡು ಬಿಡುಗಡೆಯಾದ 20 ಗಂಟೆಯಲ್ಲಿ 25 ಲಕ್ಷ ಹಿಟ್ಸ್‌ ಬಂದಿರುವುದು ಚಿತ್ರತಂಡದ ಉತ್ಸಾಹಕ್ಕೆ ಕಾರಣವಾಗಿದೆ.

ಡಬ್ಬಿಂಗ್ ಬಗ್ಗೆ ಜಗ್ಗೇಶ್ ಮಾತು; 'ನಿಮ್ಮ ಮನೆ ಪಾಯಿಖಾನೆ ತೊಳೆದು ನಿಮ್ಮ ಸೇವೆ ಮಾಡುವೆ'

‘ಹಲ್ಲೋ ಹಲ್ಲೋ ಮಿಟುಕಲಾಡಿ.. ಮಿಟುಕತೈತೆ ನಿನ್ನ ಬಾಡಿ.. ಟಚ್ಚಾಗೋದ್ರೆ ಬೈಯ್ಕೋಬೇಡಿ ಸಾರಿ.... ಪಟ್ಟಾಕಿ ಪೋರಿಯೋ’ ಎಂದು ಸಾಗುವ ಈ ಹಾಡಿನ ಪದಗಳನ್ನು ಜೋಡಿಸಿರುವುದು ನಿರ್ದೇಶಕ ಅನೂಪ್‌ ಭಂಡಾರಿ. ಅರ್ಜುನ್‌ ಜನ್ಯಾ ಸಂಗೀತ, ವಿಜಯ್‌ ಪ್ರಕಾಶ್‌ ಹಾಗೂ ಅನುರಾಧ ಭಟ್‌ ಧ್ವನಿ ಹಾಡಿನ ಸೊಗಸು ಹೆಚ್ಚಿಸಿದೆ.

ಶಿವಕಾರ್ತಿಕ್‌ ನಿರ್ದೇಶಿಸಿ, ಸೂರಪ್ಪ ಬಾಬು ನಿರ್ಮಿಸಿರುವ ಈ ಚಿತ್ರದ ಟೀಸರ್‌ ಹಾಗೂ ಒಂದು ಹಾಡು ಈಗಾಗಲೇ ಬಂದಿದ್ದು, ಮೊದಲ ಹಾಡಿಗೆ 12 ಮಿಲಿಯನ್‌ ಹಿಟ್ಸ್‌ ದಾಟಿದೆ. ‘ಫಾಸ್ಟ್‌ ನಂಬರ್‌ ಹಾಡಿನ ರೀತಿ ಮಾಡಿದ್ದೇವೆ. ಪಡ್ಡೆ ಹುಡುಗರಿಗೆ ಹೆಚ್ಚು ಇಷ್ಟವಾಗುತ್ತದೆ.

ದೀಪಾವಳಿ ಹಬ್ಬಕ್ಕೆ ಅಭಿಮಾನಿಗಳಿಗೆ 'ಪಂಕಜ ಕಸ್ತೂರಿ' ಗಿಫ್ಟ್ ಕೊಟ್ಟ ರಚಿತಾ ರಾಮ್!

ಎಲ್ಲೂ ನಿಮಗೆ ವಲ್ಗರ್‌ ಅನಿಸುವುದಿಲ್ಲ. ಹೀಗಾಗಿಯೇ ಎಲ್ಲರು ಹಾಡನ್ನು ನೋಡುತ್ತಿದ್ದಾರೆ. ನಮ್ಮ ನಾಯಕ ನಟ ಸುದೀಪ್‌ ಹಾಗೂ ಆಶಿಕಾ ರಂಗನಾಥ್‌ ಜೋಡಿ ಈ ಹಾಡಿನಲ್ಲಿ ಮುದ್ದಾಗಿ ಕಾಣಿಸಿಕೊಂಡಿದೆ.

ಕಂಠೀರವ ಸ್ಟುಡಿಯೋದಲ್ಲಿ ದೊಡ್ಡ ಮಟ್ಟದಲ್ಲಿ ಕಲರ್‌ಫುಲ್‌ ಸೆಟ್‌ ಹಾಕಬೇಕು ಎಂದಾಗ ಇಲ್ಲ ಎನ್ನದೆ ಬೆಂಬಲವಾಗಿ ನಿಂತ ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ಧನ್ಯವಾದ’ ಎಂಬುದು ಚಿತ್ರದ ನಿರ್ದೇಶಕ ಶಿವಕಾರ್ತಿಕ್‌ ಮಾತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ