Act 1978: ಗಮನ ಸೆಳೆಯುತ್ತಿದೆ ಮಂಸೋರೆ ನಿರ್ದೇಶನದ ಚಿತ್ರ!

Suvarna News   | Asianet News
Published : Nov 17, 2020, 05:30 PM ISTUpdated : Nov 18, 2020, 12:32 PM IST
Act 1978: ಗಮನ ಸೆಳೆಯುತ್ತಿದೆ ಮಂಸೋರೆ ನಿರ್ದೇಶನದ ಚಿತ್ರ!

ಸಾರಾಂಶ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ ಮತ್ತೊಂದು ಸಿನಿಮಾ ಮೂಲಕ ಹೊಸ ಸಂಚಲನ ಸೃಷ್ಟಿಸಲು ರೆಡಿಯಾಗಿದ್ದಾರೆ. ತಮ್ಮ ಮೂರನೇ ಪ್ರಯತ್ನಕ್ಕೆ ‘ಆ್ಯಕ್ಟ್ 1978’ ಎಂದು ಹೆಸರಿಟ್ಟಿದ್ದು, ಈಗಾಗಲೇ ಚಿತ್ರದ ಬಗೆಗಿನ ಟಾಕ್ ಎಲ್ಲೆಡೆ ಜೋರಾಗಿದೆ.

ಹರಿವು, ನಾತಿಚರಾಮಿ ಚಿತ್ರದ ಮೂಲಕ ಚಿತ್ರಪ್ರೇಮಿಗಳ ಗಮನ ಸೆಳೆದಿರೋ ಮಂಸೋರೆ ಈ ಚಿತ್ರದಲ್ಲಿಯೂ ಹೊಸ ವಿಚಾರವೊಂದನ್ನು ತಿಳಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಚಿತ್ರದ ಟೈಟಲ್, ಪೋಸ್ಟರ್ ಸೋಶಿಯಲ್ ಮೀಡಿಯಾ ಅಂಗಳದಲ್ಲಿ ಭಾರೀ ಸದ್ದು ಮಾಡಿತ್ತಿದ್ದು ಚಿತ್ರದಲ್ಲೇನಿರಬಹುದೆಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಅದರಲ್ಲಿಯೂ ಕೊರೋನಾ ಸಂಕಟದ ನಂತರ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರವಿದಾಗಿದ್ದು, ಕನ್ನಡ ಸಿನಿ ಪ್ರೇಮಿಗಳಲ್ಲಿ ಸಹಜವಾಗಿಯೋ ಕುತೂಹಲ ಹೆಚ್ಚಿಸಿದೆ.

Act 1978 ಸಿನಿಮಾ ತಂಡದಿಂದ ವಿಭಿನ್ನ ಪ್ರಚಾರ! 

ಟ್ರೇಲರ್ ರಿಲೀಸ್ ಆದ ಮೇಲಂತೂ ‘ಆ್ಯಕ್ಟ್ 1978’ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.ಚಿತ್ರರಂಗದ ಸ್ಟಾರ್ ನಟರು ಕೂಡ ಆ್ಯಕ್ಟ್ 1978 ಚಿತ್ರದ ಟ್ರೈಲರ್ ಮೆಚ್ಚಿಕೊಂಡಿದ್ದಾರೆ. ಯಜ್ಞಾ ಶೆಟ್ಟಿ (Yagna Shetty) ಮುಖ್ಯ ಭೂಮಿಕೆಯಲ್ಲಿ (Star Cast) ನಟಿಸಿರೋ ಈ ಚಿತ್ರದಲ್ಲಿ ಅಚ್ಯುತ್ ಕುಮಾರ್, ಸುಧಾ ಬೆಳವಾಡಿ, ಪ್ರಮೋದ್ ಶೆಟ್ಟಿ, ಕೃಷ್ಣ ಹೆಬ್ಬಾಳೆ, ರವಿ ಭಟ್, ಶ್ರುತಿ , ಸಂಚಾರಿವಿಜಯ್ ಸೇರಿದಂತೆ ದೊಡ್ಡ ಕಲಾವಿದರ ದಂಡು ‘ಆ್ಯಕ್ಟ್ 1978’ (Act 1978) ಚಿತ್ರ ತಂಡದಲ್ಲಿದೆ. ಸೆನ್ಸಾರ್ ಅಂಗಳದಲ್ಲಿ ‘ಯು’ ಸರ್ಟಿಫಿಕೇಟ್ ಪಡೆದುಕೊಂಡಿರೋ ಈ ಚಿತ್ರಕ್ಕೆ ದೇವರಾಜ್.ಆರ್ ಬಂಡವಾಳ ಹೂಡಿದ್ದಾರೆ.

ಸತ್ಯ ಹೆಗ್ಡೆ ಕ್ಯಾಮೆರಾ ನಿರ್ದೇಶನ, ರೋನಡ ಬಕ್ಕೇಶ್, ರಾಹುಲ್ ಶಿವಕುಮಾರ್ ಸಂಗೀತ ಹಾಗೂ ಹಿನ್ನೆಲೆ ಸಂಗೀತ ನೀಡಿದ್ದಾರೆ. ಇದೇ ತಿಂಗಳ 20ರಂದು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ