ಸಪ್ತಸಾಗರದಾಚೆ ಎಲ್ಲೋ ಬಿ ಸೈಡ್ ಟ್ರೇಲರ್ ರಿಲೀಸ್ ಆಗಿದ್ದು, ಪ್ರಿಯಾ-ಮನುವಿನ ಮಧ್ಯೆ ಇನ್ನೊಬ್ಬಳ ಎಂಟ್ರಿಯಾಗಿರುವುದನ್ನು ಕಾಣಬಹುದು.
ಈಗ ಸಪ್ತ ಸಾಗರದಾಚೆ ಎಲ್ಲೋ ಚಿತ್ರ ಎಲ್ಲೆಲ್ಲೂ ಸದ್ದು ಮಾಡುತ್ತಿದೆ. ರಕ್ಷಿತ್ ಶೆಟ್ಟಿ (Rakshit Shetty), ರುಕ್ಮಿಣಿ ವಸಂತ್ (Rukmini Vasanth) ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಸೆಪ್ಟೆಂಬರ್ 1 ರಂದು ಬಿಡುಗಡೆ ಆಗಿ ಪ್ರೇಕ್ಷಕರು ಹಾಗೂ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ. ಇದೊಂದು ಮಧ್ಯಮ ಕುಟುಂಬದ ಪ್ರೇಮಿಗಳ ನೋವಿನ ಲವ್ ಸ್ಟೋರಿ ಕಥೆ. ಪ್ರೀತಿಯಲ್ಲಿ ಮುಳಗಿರುವ ಪ್ರಿಯಾ ಮತ್ತು ಮನು ಪ್ರೇಮಿಗಳು ಬದುಕಿನ ಮೇಲೆ ಬೆಟ್ಟದಷ್ಟು ಕನಸಿಟ್ಟುಕೊಂಡವರು. ಸಣ್ಣ ಪುಟ್ಟ ವಿಷಯದಲ್ಲೇ ಇವರ ಖುಷಿ. ಬದುಕನ್ನು ಆಗಾಗ ಫಾಸ್ಟ್ ಫಾರ್ವರ್ಡ್ ಮಾಡಿಕೊಂಡು ಸಂಭ್ರಮಿಸುತ್ತಾರೆ, ತಮ್ಮದೇ ಮನೆ ಹೊಂದುವ, ಕುಟುಂಬ ಹೊಂದುವ ಕನಸು ಕಾಣುತ್ತಿರುತ್ತಾರೆ. ಪ್ರಿಯಾ, ತುಂಬ ಜಾಣೆ, ಬದುಕನ್ನು ಪ್ರಾಕ್ಟಿಕಲ್ ಆಗಿ ನೋಡುವ ಹೆಣ್ಣು ಮಗಳು. ಆದರೆ ಮನು, ಪ್ರಿಯಾಳನ್ನೇ ಬದುಕು ಎಂದುಕೊಂಡಿರುವವನು. ಇಂತಹ ಪ್ರೇಮಿಗಳು ಪರಿಸ್ಥಿತಿಯ ತಿರುವುಗಳಿಗೆ ಸಿಲುಕಿ ನಲುಗಬೇಕಾಗುತ್ತದೆ. ಮನು ಉದ್ದೇಶಪೂರ್ವಕವಾಗಿ ಜೈಲಿಗೆ ಹೋಗಿ ನೋವು ಅನುಭವಿಸುತ್ತಾನೆ. ಆಗ ಇವರಿಬ್ಬರ ಬದುಕು ಅಲ್ಲೋಲ ಕಲ್ಲೋಲವಾಗುತ್ತದೆ.
ಈ ಕಥೆಯನ್ನು ಇಟ್ಟುಕೊಂಡು ಸಾಗುವ ಸಪ್ತಸಾಗರದಾಚೆ ಎಲ್ಲೋ ಚಿತ್ರವು, ನಿರ್ದೇಶಕ ಹೇಮಂತ್ ಎಂ ರಾವ್ ಅವರ ಮೂರನೇ ಸಿನಿಮಾ. ರಕ್ಷಿತ್ ಶೆಟ್ಟಿ ಜೊತೆಗೆ ತಂದೆ-ಮಗನ ಕಥೆಯನ್ನು ಹೇಳುವ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನಿಮಾ ಮಾಡಿದ್ದ ಹೇಮಂತ್ ಅವರು ಈಗ ಲವ್ ಸ್ಟೋರಿ ಇಟ್ಟುಕೊಂಡು ಕಥೆ ಹೆಣೆದಿದ್ದಾರೆ. ಇದು ಇದಾಗಲೇ ಎಲ್ಲರ ಹೃದಯ ತಟ್ಟಿದೆ. ಸಮುದ್ರ ದಡದಲ್ಲಿ ಸದಾ ಕೇಳಿಸುವ ಅಲೆಗಳ ಸದ್ದಿನಂತೆ, ಈ ಸಿನಿಮಾದಲ್ಲೂ ಒಂದು ನಾದವಿದೆ. ಅದು ಪ್ರೀತಿಯ, ನೋವಿನ, ಅಳುವಿನ ರೂಪದಲ್ಲಿ ಸಿನಿಮಾದ ತುಂಬ ಕೇಳಿಸುತ್ತಲೇ ಇರುತ್ತದೆ. ಇದೀಗ ಚಿತ್ರದ ಬಿ ಸೈಡ್ ಹಾಡಿನ ರಿಲೀಸ್ ಕೂಡ ಆಗಿದೆ. ಹೌದು. ಕಳೆದ ಸೆಪ್ಟೆಂಬರ್ 1 ರಂದು ಬಿಡುಗಡೆಯಾದ ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆಯಿತು. ಇದನ್ನು ತೆಲುಗಿನಲ್ಲಿ ಸಪ್ತ ಸಾಗರಾಲು ದಾಟಿ ಎಂಬ ಹೆಸರಿನಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗಿದೆ. ಈಮಧ್ಯೆ, ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ ಸೆಪ್ಟೆಂಬರ್ 29ರಂದು ಪ್ರೈಮ್ ವಿಡಿಯೋದಲ್ಲಿ ಪ್ರೀಮಿಯರ್ ಆಗಿದ್ದು, ಭಾರಿ ಹಿಟ್ ಆಗಿದ್ದು ಬಿ ಸೈಡ್ ಹಾಡು ಕೂಡ ರಿಲೀಸ್ ಆಗಿತ್ತು.
undefined
'ಸೀತಾ ರಾಮ' ತಂಡದ ಬಾಯಲ್ಲಿ ಕೇಳಿ ಸಪ್ತಸಾಗರದಾಚೆಯಲ್ಲೋ ಹಾಡು: ಸಿಹಿನೇ ಸೂಪರ್ ಎಂದ ಫ್ಯಾನ್ಸ್!
‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾವು ಒಂದು ಕುತೂಹಕಲಕಾರಿ ಘಟ್ಟದಲ್ಲಿ ಅಂತ್ಯವಾಗಿ, ಕತೆಯಲ್ಲಿ ಮುಂದೆ ಏನಾಯ್ತು ಎಂಬುದನ್ನು ಮುಂದಿನ ಭಾಗದಲ್ಲಿ ತೋರಿಸುವುದಾಗಿ ಹೇಳಿದ್ದರು ನಿರ್ದೇಶಕ ಹೇಮಂತ್ ರಾವ್. ಅದರಂತೆಯೇ ಇದೀಗ ಸೈಡ್ ಬಿ ಟ್ರೇಲರ್ ಬಿಡುಗಡೆಯಾಗಿದೆ. ತನ್ನದಲ್ಲದ ತಪ್ಪಿಗೆ ಜೈಲು ಪಾಲಾಗಿದ್ದ ಮನುವಿನ ಬಿಡುಗಡೆಯಾಗಿದೆ. ಆದರೆ ಪ್ರಿಯಾ ಹಾಗೂ ಅವಳ ಜೊತೆ ಸಮುದ್ರದ ತೀರದ ನೆನಪು ಮಾಸಿಲ್ಲ. ಆಕೆಯ ಮಾತು ಪದೇ ಪದೇ ಸಮುದ್ರದ ಅಲೆಗಳಂತೆ ಬಂದು ಅಪ್ಪಳಿಸುತ್ತಿದೆ. ಪ್ರಿಯಾ ಮದುವೆಯಾಗಿ ವಿವಾಹಿತೆಯಾಗಿದ್ದಾಳೆ. ಆಕೆ ಹತ್ತಿರವಾಗಿದ್ದರೂ ಹತ್ತಿರ ಬಾರದ ಸ್ಥಿತಿ ಮನುವಿನದ್ದು. ಟ್ರೇಲರ್‌ನಲ್ಲಿ ಚೈತ್ರಾ ಆಚಾರ್ ಸಹ ಇದ್ದಾರೆ. ಮನು, ಪ್ರಿಯಾಳ ನೆನಪಿನಿಂದ ಹೊರಗೆ ಬರಲು ಚೈತ್ರಾ ಆಚಾರ್ ನಿರ್ವಹಿಸಿರುವ ಸುರಭಿ ಪಾತ್ರದ ಸಾಂಗತ್ಯಕ್ಕೆ ಜಾರುವ ಕೆಲವು ದೃಶ್ಯಗಳನ್ನು ಟ್ರೈಲರ್ನಲ್ಲಿ ತೋರಿಸಲಾಗಿದೆ. ಮೊದಲ ಭಾಗದಲ್ಲಿ ಕಾಣಿಸಿಕೊಂಡಿದ್ದ ಅಚ್ಯುತ್ ಕುಮಾರ್ ಈ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಎರಡನೇ ಭಾಗದಲ್ಲಿ ಗೋಪಾಲ ದೇಶಪಾಂಡೆ ಅವರಿಗೆ ಮಹತ್ವದ ಪಾತ್ರ ಇರುವಂತಿದೆ.
ಎರಡನೇ ಭಾಗದ ಟ್ರೈಲರ್ ಪ್ರಿಯಾಳನ್ನು ಮರೆಯಲು ಮನುವಿನ ಹೋರಾಟವನ್ನು ತೋರಿಸುತ್ತದೆ. ಅವರು ಸುರಭಿ (ಚೈತ್ರ ಜೆ ಆಚಾರ್) ರೊಂದಿಗೆ ಸ್ನೇಹ ಬೆಳೆಸುತ್ತಿರುವುದನ್ನು ಈ ಟ್ರೇಲರ್‌ನಲ್ಲಿ ಕಾಣಬಹುದು, ಆದರೂ ಅವರು ಪ್ರಿಯಾಳ ಹುಡುಕಾಟದಲ್ಲಿದ್ದಾರೆನ್ನುವುದನ್ನು ಸಹ ಆ ವಿಡಿಯೋ ತಿಳಿಸುತ್ತದೆ.. ಟ್ರೇಲರ್ ಚಿತ್ರವು ತೀವ್ರವಾದ ಹಿಂಸಾತ್ಮಕವಾಗಿದೆ ಎಂಬ ಸುಳಿವು ನೀಡುತ್ತದೆ, ಮನು ತನಗೆ ಅನ್ಯಾಯ ಮಾಡಿದವರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ.. ಮತ್ತೊಬ್ಬರನ್ನು ಪ್ರೀತಿಸಿ ಆ ಪ್ರೀತಿಯನ್ನಾದರೂ ಉಳಿಸಿಕೊಳ್ಳುತ್ತಾನಾ ಅನ್ನೋದನ್ನು ಕಾದು ನೋಡಬೇಕಿದೆ.
ಕಟ್ಟಡದಿಂದ ಕಟ್ಟಡಕ್ಕೆ ಜಿಗಿದ ಆ್ಯಕ್ಷನ್ ಕಿಂಗ್: ಅಕ್ಷಯ್ ಕುಮಾರ್ ವಿಡಿಯೋ ನೋಡಿ ಸುಸ್ತಾದ ಫ್ಯಾನ್ಸ್