ಚಿರು ಪುತ್ರನ ಡ್ಯಾನ್ಸ್‌ಗೆ ಮನಸೋತ ನೆಟ್ಟಿಗರು: ಭವಿಷ್ಯದ ಸ್ಟಾರ್‌ ನಟ ಫಿಕ್ಸ್‌ ಎಂದ ಫ್ಯಾನ್ಸ್‌

By Suvarna News  |  First Published Nov 4, 2023, 5:46 PM IST

ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್‌ ಅವರ ಪುತ್ರ ರಾಯನ್‌ ಸಕತ್‌ ಡ್ಯಾನ್ಸ್‌ ಮಾಡಿದ್ದು, ಇದಕ್ಕೆ ನೆಟ್ಟಿಗರು ಮನಸೋತಿದ್ದಾರೆ.
 


 ಮೇಘನಾ-ಚಿರಂಜೀವ ಪುತ್ರ  ರಾಯನ್​ ಸರ್ಜಾ ಮೊನ್ನೆಯಷ್ಟೇ ಮೂರನೆಯ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ.  ಅಕ್ಟೋಬರ್​ 22ರ 2020ರಂದು ಹುಟ್ಟಿರುವ ರಾಯನ್​ ಈಗ ಸಕತ್​ ಚೂಟಿಯಾಗಿದ್ದಾನೆ. ಮೊನ್ನೆಯಷ್ಟೇ  ಧ್ರುವ ಅವರ ಮೊದಲ ಮಗುವಿನ ಒಂದನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಂದರ್ಭದಲ್ಲಿ  ರಾಯನ್​ ತನ್ನ ತಂಗಿಯ ಜೊತೆ ಮಾತನಾಡುತ್ತಿದ್ದು, ಅದರ ವಿಡಿಯೋ ವೈರಲ್​ ಆಗಿತ್ತು. ಹಾರ್ಟ್​ ಇಮೋಜಿಗಳಿಂದ ಕಮೆಂಟ್​ ಬಾಕ್ಸ್​ ತುಂಬಿ ಹೋಗಿದ್ದು, ಸೋ ಕ್ಯೂಟ್​ ಎಂದಿದ್ದರು ಫ್ಯಾನ್ಸ್​​. ಅಣ್ಣನನ್ನು ತದೇಕ ಚಿತ್ತದಿಂದ  ನೋಡುತ್ತಿರುವ ಪುಟಾಣಿ ತನ್ನದೇ ತೊದಲು ಭಾಷೆಯಲ್ಲಿ ಅಣ್ಣನಿಗೆ ಉತ್ತರಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಿ ಜನರು ಮನಸೋತಿದ್ದರು.  ರಾಯನ್​ ಕೂಡ ಅದರ ಜೊತೆ ತನ್ನದೇ ಮುದ್ದು ಭಾಷೆಯಲ್ಲಿ ಮಾತುಕತೆಯಲ್ಲಿ ತೊಡಗಿದ್ದ.  ಮೇಘನಾ ರಾಜ್​ ಮಗಳನ್ನು ಎತ್ತಿಕೊಂಡಿದ್ದು, ಮಗನಿಗೆ ಏನು ಮಾತನಾಡಬೇಕು ಎನ್ನುವುದನ್ನು ಹೇಳಿಕೊಡುತ್ತಿದ್ದ ವಿಡಿಯೋ ಸಕತ್‌ ಸದ್ದು ಮಾಡಿತ್ತು.
 
 ರಾಯನ್ (Rayan)  ಕಳೆದ ಅಕ್ಟೋಬರ್​ 6ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಸಂದರ್ಭಲ್ಲಿ  ಧ್ರುವ ಸರ್ಜಾರ ಅವರು ರಾಯನ್​ಗೆ ಡ್ಯಾನ್ಸ್ ಕಲಿಸಿಕೊಟ್ಟಿದ್ದರು.  ಚಿಕ್ಕಪ್ಪ ಹೇಳಿಕೊಟ್ಟಂತೆಯೇ ಡ್ಯಾನ್ಸ್​ ಮಾಡುವ ರಾಯನ್​ ಮುಗ್ಧತೆಗೆ ಫ್ಯಾನ್ಸ್​ ಫಿದಾ ಆಗಿದ್ದರು. ತಮ್ಮದೇ ಸಿನಿಮಾದ ಹಾಡಿನ ಹುಕ್ ಸ್ಟೇಪ್ ಅನ್ನು ರಾಯನ್​ಗೆ  ಧ್ರುವ ಹೇಳಿಕೊಟ್ಟಿರುವುದನ್ನು ಇದರಲ್ಲಿ ನೋಡಬಹುದು.  ಈ ವಿಡಿಯೋದಲ್ಲಿ ರಾಯನ್ ತಾತ, ನಟ ಸುಂದರ್ ರಾಜ್ ಕೂಡ ಇದ್ದಾರೆ. ಮೊಮ್ಮಗ ಡಾನ್ಸ್ ಕಂಡು ಅವರೂ ಸಂಭ್ರಮಿಸಿದ್ದರು.

ಅಯ್ಯಯ್ಯೋ ಮಾಮ.. ಪಂಚೇಲಿ ಸೂಸೂ ಮಾಡ್ಕೊಂಡ... ಸೋ ಡರ್ಟಿ ಅಲ್ವಾ...

Tap to resize

Latest Videos

ಆದರೆ ಇವೆಲ್ಲವುಗಳಿಗಿಂತಲೂ ಭಿನ್ನವಾಗಿ ಈಗ ರಾಯನ್‌ ಸಿಂಗಲ್‌ ಆಗಿ ಡ್ಯಾನ್ಸ್‌ ಮಾಡಿದ್ದಾನೆ. ಪಕ್ಕದ ಮನೆ ಹುಡುಗಿ ಹಾಡಿಗೆ ಅವನು ಹಾಕಿದ ಸ್ಟೆಪ್‌ ನೋಡಿ ಫ್ಯಾನ್ಸ್‌ ಮೈಮರೆತಿದ್ದಾರೆ. ಇನ್ನೋರ್ವ ಸ್ಟಾರ್‌ ನಟ ಸ್ಯಾಂಡಲ್‌ವುಡ್‌ಗೆ ಫಿಕ್ಸ್‌ ಅಂತಿದ್ದಾರೆ ಫ್ಯಾನ್ಸ್‌. ನಮ್ಮನೆ ಹುಡುಗನ ಡ್ಯಾನ್ಸ್ ಹೇಗಿದೆ ಎಂದು ಮೇಘನಾ ಕೇಳಿದ್ದಾರೆ. ಇದಕ್ಕೆ ನೂರಾರು ಮಂದಿ ಕಮೆಂಟ್‌ ಮಾಡಿದ್ದು, ಸಕತ್‌, ಕ್ಯೂಟ್‌ ಎಂದೆಲ್ಲಾ ಬಣ್ಣಿಸುತ್ತಿದ್ದಾರೆ. 

ಅಂದಹಾಗೆ, ಮೇಘನಾ ರಾಜ್​ ಸದ್ಯ ತತ್ಸಮ ತತ್ಭದ ಚಿತ್ರದ ಖುಷಿಯಲ್ಲಿದ್ದಾರೆ. ಮಗನ ಲಾಲನೆ ಪಾಲನೆಯಲ್ಲಿ ತೊಡಗಿದ್ದ ಮೇಘನಾ, ಕೆಲ ವರ್ಷಗಳ ಗ್ಯಾಪ್​ ಬಳಿಕ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೇ ವೇಳೆ, ಧ್ರುವಾ ಸರ್ಜಾ ಅವರು ಕೆಲ ದಿನಗಳ ಹಿಂದೆ ಎರಡನೆಯ ಮಗುವಿನ ಅಪ್ಪ ಆಗಿದ್ದಾರೆ. ಶ್ರೀಕೃಷ್ಣ ಜನ್ಮಾಷ್ಠಮಿಯಂದೇ ಕನಕಪುರ ರಸ್ತೆಯಲ್ಲಿರುವ ಧ್ರುವ ಸರ್ಜಾ ಅವರ ಫಾರ್ಮ್ ಹೌಸ್‌ನಲ್ಲಿ ಪತ್ನಿ ಪ್ರೇರಣಾ ಶಂಕರ್ ಅವರಿಗೆ ಸೀಮಂತ ಕಾರ್ಯಕ್ರಮ ಮಾಡಲಾಗಿತ್ತು.  ಪುಟ್ಟ ಕೃಷ್ಣನ ಆಗನದಲ್ಲಿದ್ದ ದಂಪತಿಗೆ ಮುದ್ದು ಕೃಷ್ಣನೇ ಹುಟ್ಟಿದ್ದಾನೆ.  ಕಳೆದ ವರ್ಷದ ಅಕ್ಟೋಬರ್​ 2ರಂದು ಹುಟ್ಟಿರುವ ಪುಟಾಣಿಗೆ ಇಂದು ಒಂದನೇ ಹುಟ್ಟುಹಬ್ಬದ ಸಂಭ್ರಮ. ಈ ಪಾಪುವಿಗೆ ಇನ್ನೂ ನಾಮಕರಣ ಮಾಡಲಿಲ್ಲ. 
 

ಚಿರು ಪುತ್ರನಿಗೆ ಡ್ಯಾನ್ಸ್​ ಹೇಳಿಕೊಟ್ಟ ಧ್ರುವ: ಪುಟಾಣಿ ರಾಯನ್​ ಸ್ಟೆಪ್​ಗೆ ಸೋ ಸ್ವೀಟ್​ ಎಂದ ಫ್ಯಾನ್ಸ್​

click me!