
ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದಲ್ಲಿ ನಂಬರ್ 2 ಆರೋಪಿಯಾಗಿ ನಟ ದರ್ಶನ್ (Drashan) ಜೈಲು ಪಾಲಾಗಿರುವುದು ಗೊತ್ತೇ ಇದೆ. ಸ್ಯಾಂಡಲ್‌ವುಡ್ ಸ್ಟಾರ್ ನಟ ದರ್ಶನ್ ಯಾವಾಗ ಹೊರಗೆ ಬರುತ್ತಾರೋ ಗೊತ್ತಿಲ್ಲ. ತಪ್ಪಿತಸ್ಥನೆಂದು ಕೋರ್ಟಲ್ಲಿ ಸಾಬೀತಾದರೆ ಶಿಕ್ಷೆಯೂ ಪ್ರಕಟವಾಗುತ್ತೆ. ಆದರೂ, ಅಭಿಮಾನಿಗಳಿಗೆ ತಮ್ಮ ಮೆಚ್ಚಿನ ನಟ ನಿರಪರಾಧಿ ಎಂದು ಸಾಬೀತಾಗಿ ಮರಳಿ ಬರುವ ನಿರೀಕ್ಷೆ ಬೆಟ್ಟದಷ್ಟಿದೆ. ಅದಕ್ಕಾಗಿ ನಿತ್ಯ ಪ್ರಾರ್ಥನೆಗಳೂ ಆಗುತ್ತಿವೆ. ಜೊತೆಗೆ, ನಟ ದರ್ಶನ್ ಅವರು ಜೈಲಿನಿಂದ ಹೊರಗೆ ಬಂದ್ಮೇಲೆ ಮುಂದೆ ಕನ್ನಡ ಚಿತ್ರರಂಗದಲ್ಲಿ ಮುಂದುವರಿಯುವುದು ಬೆಂಡವೆಂದೂ ಅವರ ಫ್ಯಾನ್ಸ್ ಸಲಹೆ ನೀಡಲು ಶುರು ಮಾಡಿದ್ದಾರೆ.
ಹೌದು, ನಟ ದರ್ಶನ್ ನ್ಯಾಯಾಂಗ ಬಂಧನದ (Judicial Custody) ಅವಧಿ ಮತ್ತಷ್ಟು ವಿಸ್ತರಣೆ ಆಗಿದೆ. ಈ ತಿಂಗಳು 18ರವರೆಗೆ, ಅಂದರೆ 18 ಜುಲೈ 2024ರವರೆಗೆ ಜ್ಯುಡಿಸಿಯಲ್ ಕಸ್ಟಡಿ ಮುಂದುವರೆಯಲಿದೆ. ಇದೀಗ, ಬೆಂಗಳೂರಿನ ಪರಪ್ಪನ ಅಗ್ರಹಾರ ಹಾಗೂ ತುಮಕೂರಿನ ಜೈಲಿನಲ್ಲಿರುವ ಖೈದಿಗಳನ್ನು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ಗೆ ಹಾಜರುಪಡಿಸಲಾಯಿತು. ನ್ಯಾಯಾಂಗ ಬಂಧನ ವಿಸ್ತರಣೆ ಮಾಡುವಂತೆ ಎಸ್ಪಿಪಿ ಕಡೆಯಿಂದ ರಿಮಾಂಡ್ ಅರ್ಜಿ ಸಲ್ಲಿಕೆಯಾಗಿದೆ. ಹೀಗಾಗಿ, ಮತ್ತೆ ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆ ಆಗುತ್ತಿದ್ದರೂ ಅಚ್ಚರಿಯೇನಿಲ್ಲ.
ಮೂರನೇ ಸ್ಥಾನಕ್ಕೆ ಜಿಗಿದ ರಾಕಿಂಗ್ ಸ್ಟಾರ್ ಕೆಜಿಎಫ್ 2, ನಟ ಯಶ್ ಕೆಳಕ್ಕೆ ತಳ್ಳಿದ್ದು ಯಾರನ್ನ ನೋಡ್ರಿ!
ಅದು ಒಂದು ಕಡೆಯಾದರೆ, ಇನ್ನೊಂದು ಕಡೆಯ ಬೆಳವಣಿಗೆ ಅಚ್ಚರಿ ಎನಿಸುವಂತಿದೆ. ನಟ ದರ್ಶನ್ ಫ್ಯಾನ್ಸ್ 'ಕನ್ನಡ ಚಿತ್ರರಂಗ ಬಿಟ್ಟು ಹೋಗುವಂತೆ ತಮ್ಮ ಆರಾಧ್ಯ ದೈವ ಎನಿಸಿರುವ ನಟನಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ. 'ಬಾಸ್.. ನೀವು ಕನ್ನಡ, ಕನ್ನಡ ಎಂದು ಕನ್ನಡಾಭಿಮಾನ ಮೆರೆಯುತ್ತಿದ್ದೀರಿ. ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುತ್ತಿಲ್ಲ. ಬೇರೆ ನಟರೆಲ್ಲರೂ ಕನ್ನಡ ಭಾಷೆಯ ಚಿತ್ರಗಳಲ್ಲಿ ಹೀರೋಗಳಾಗಿ ನಟಿಸುತ್ತಾರೆ, ಆದರೆ ಉಳಿದ ಭಾಷೆಯಲ್ಲಿ ವಿಲನ್ ರೋಲ್ ಮಾಡಿ ಹೆಸರು ಮಾಡುತ್ತಿದ್ದಾರೆ.
ಜೈಲಿಂದ ಹೊರಗ್ ಬಂದ್ಮೇಲೆ ಕನ್ನಡ ಚಿತ್ರರಂಗ ಬಿಟ್ಬಿಡು: ದರ್ಶನ್‌ಗೆ ಹಿಂಗದಿದ್ದು ಯಾರು?
ಆದರೆ, ನೀವು ಮಾತ್ರವೇ ಕನ್ನಡ ಚಿತ್ರವನ್ನು, ಕನ್ನಡ ಚಿತ್ರೋದ್ಯಮವನ್ನು ಮಾತ್ರ ನಂಬಿಕೊಂಡಿದ್ದೀರಿ. ಕನ್ನಡದ ನಾಯಕಿಯನ್ನೇ ನಿಮ್ಮ ಚಿತ್ರಗಳಿಗೆ ಹಾಕಿ, ಕನ್ನಡ ತಂತ್ರಜ್ಞರನ್ನೇ ಬಳಿಸಿಕೊಳ್ಳಿ ಎಂದು ಸಲಹೆ-ಸೂಚನೆ ನೀಡುತ್ತ, ಕನ್ನಡ ಚಿತ್ರರಂಗವನ್ನು ಬೆಳೆಸುವಲ್ಲಿ ಮಾತ್ರವೇ ನಿಮ್ಮ ಯೋಚನೆ, ಯೋಜನೆ ಸಾಗುತ್ತಿತ್ತು. ಆದರೆ, ನಿಮಗೆ ಆಗುತ್ತಿರುವುದೇನು? ಬೇರೆ ಭಾಷೆಯವರು ಕರೆದರೂ, ಕೇಳಿದರೂ ನೀವು ಪ್ಯಾನ್ ಇಂಡಿಯಾ ಸಿನಿಮಾ ಕೂಡ ಮಾಡಲಿಲ್ಲ.
ನಾನು ಕನ್ನಡ ಸಿನಿಮಾವನ್ನು ಮಾತ್ರವೇ ಮಾಡುತ್ತೇನೆ. ಬೇಕಾದರೆ ಬೇರೆ ಭಾಷೆಗೆ ಡಬ್ಬಿಂಗ್ ಮಾಡಿಕೊಳ್ಳಲಿ ಎಂದಿರೇ ಹೊರತೂ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಲೇ ಇಲ್ಲ. ಇಂಥ ನಿಮಗೆ, ತೊಂದರೆಯಾದಾಗ, ಸಮಸ್ಯೆ ಆಗುತ್ತಿರುವಾಗ ಚಿತ್ರರಂಗದ ಯಾರೂ ನಿಮ್ಮ ಸಪೋರ್ಟ್ಗೆ ಸಮಯಕ್ಕೆ ಸರಿಯಾಗಿ ಬರಲೇ ಇಲ್ಲ. ಇನ್ಮುಂದೆ ನೀವು ಬಿಡುಗಡೆಯಾಗಿ ಬಂದ್ಮೇಲೆ, ಖಂಡಿತವಾಗಿಯೂ ಕನ್ನಡ ಚಿತ್ರರಂಗಕ್ಕೇ ಸೀಮಿತವಾಗಿ ಇರ್ಬೇಡಿ. ಬೇರೆ ಭಾಷೆಯ ಚಿತ್ರಗಳನ್ನು ಮಾಡಿ, ಸಾಧ್ಯವಾದರೆ ಅಲ್ಲಿಯೇ ಸೆಟ್ಲ್ ಆಗಿಬಿಡಿ' ಎಂದಿದ್ದಾರೆ ಹಲವು ಫ್ಯಾನ್ಸ್.
ಕಿಡ್ನಾಪ್ ಅನ್ನೋಕೆ ಅವ್ನ ಏನೂ ಮೂಟೆ ಕಟ್ಟಿ ಕರ್ಕೊಂಡು ಬಂದಿಲ್ಲ; 'ಓಂ' ನಟ ಹರೀಶ್ ರಾಯ್!
ಸೋಷಿಯಲ್ ಮೀಡಿಯಾಗಳಲ್ಲಿ ನಟ ದರ್ಶನ್ ಪರ ಅನುಕಂಪದ ಅಲೆ ಎಬ್ಬಿಸಿ ಬಹಳಷ್ಟು ಜನರು ಅವರ ಪರ ಬ್ಯಾಟ್ ಬೀಸುತ್ತಿದ್ದಾರೆ. ಆದರೆ, ಕಾನೂನು ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಿದೆ. ತನಿಖೆ ಮುಗಿದು ನಟ ದರ್ಶನ್ ಅಂಡ್ ಟೀಮ್ ಅಪರಾಧಿಗಳು ಅಥವಾ ನಿರಪರಾಧಿಗಳು ಎಂಬ ಹಣೆಪಟ್ಟಿ ಪಡೆಯುತ್ತಾರೆ. ಆ ಬಳಿಕ ಮುಂದೇನು ಎಂಬುದು ತಿಳಿದುಬರಲಿದೆ. ಅಲ್ಲಿಯವರೆಗೆ ಫ್ಯಾನ್ಸ್ ಸಹಜವಾಗಿ ಅವರದೇ ಆದ ರೀತಿಯಲ್ಲಿ ಯೋಚಿಸುತ್ತಾರೆ, ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಾರೆ.
ಹೇಳಲು ಆಗದೇ ಇರುವ ಹಲವಾರು ಸಂಗತಿಗಳು ನಮ್ಮ ಬಳಿ ಇವೆ, ಇನ್ಮುಂದೆ ಅವೆಲ್ಲ ಬರಲಿವೆ; ನಟ ಯಶ್..!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.