ಅಂಥ ತಂದೆಯ ಮುಖವನ್ನು ಆ ಮಗು ನೋಡದಿರುವುದೇ ಒಳ್ಳೆಯದು: ದರ್ಶನ್‌ ಸರ್ ನನ್ನ Inspiration ಎಂದ ತನಿಷಾ ಕುಪ್ಪಂಡ!

By Govindaraj S  |  First Published Jul 4, 2024, 4:44 PM IST

ನಾವು ದರ್ಶನ್‌ ಅವರನ್ನು ಸ್ಪೂರ್ತಿ ಅಂದುಕೊಂಡಿದ್ದೇವೆ. ಅವರು ಜೈಲಲ್ಲಿ ಕಾಲ ಕಳೆಯುತ್ತಿದ್ದಾರೆ ಎಂಬುದಕ್ಕೆ ಬೇಸರ ಇದೆ. ನನ್ನ ಲೈಫ್‌ನಲ್ಲಿ ಒಂದು ಪಾಲಿಸಿ ಇದೆ, ನಮ್ಮ ಸುತ್ತ ಸಾವಿರ ಘಟನೆ ನಡೆದರೆ, ಅದರಲ್ಲಿ ಒಳ್ಳೆಯದನ್ನೇ ಪಿಕ್‌ ಮಾಡಬೇಕು ಎಂದು ಬಿಗ್‌ ಬಾಸ್‌ ಖ್ಯಾತಿಯ ತನಿಷಾ ಕುಪ್ಪಂಡ ಹೇಳಿದ್ದಾರೆ.


ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಅರೆಸ್ಟ್​ ಆಗಿರುವ ದರ್ಶನ್​ ಕುರಿತಾಗಿ ಸ್ಯಾಂಡಲ್​ವುಡ್​ನ ಅನೇಕ ತಾರೆಯರು ಪರ ಮತ್ತು ವಿರೋಧ ಪ್ರತಿಕ್ರಿಯೆ ನೀಡಿದ್ದರು. ಅದರಲ್ಲಿ ಕೆಲವರು ದರ್ಶನ್​ ಭೇಟಿಗಾಗಿ ಪರಪ್ಪನ ಅಗ್ರಹಾರಕ್ಕೂ ತೆರಳಿದ್ದರು. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‌ ಬಾಸ್‌ ಖ್ಯಾತಿಯ ತನಿಷಾ ಕುಪ್ಪಂಡ ಮಾತನಾಡಿದ್ದಾರೆ. ನಟ ದರ್ಶನ್‌ ಪರ ಬ್ಯಾಟಿಂಗ್ ಬೀಸಿದ್ದಾರೆ.

ನಾವು ದರ್ಶನ್‌ ಸರ್ ಅವರನ್ನು ನನ್ನ ಇನ್‌ಸ್ಫಿರೇಷನ್‌ ಅಂದುಕೊಂಡಿದ್ದೇವೆ. ಅವರು ಜೈಲಲ್ಲಿ ಕಾಲ ಕಳೆಯುತ್ತಿದ್ದಾರೆ ಎಂಬುದಕ್ಕೆ ಬೇಸರ ಇದೆ. ನನ್ನ ಲೈಫ್‌ನಲ್ಲಿ ಒಂದು ಪಾಲಿಸಿ ಇದೆ, ನಮ್ಮ ಸುತ್ತ ಸಾವಿರ ಘಟನೆ ನಡೆದರೆ, ಅದರಲ್ಲಿ ಒಳ್ಳೆಯದನ್ನೇ ಪಿಕ್‌ ಮಾಡಬೇಕು. ಅವರ ವಿಚಾರದಲ್ಲಿ ನಾನು ಅದನ್ನೇ ಮಾತನಾಡ್ತಿನಿ. ದರ್ಶನ್‌ ಅವರ ಬಗ್ಗೆ ನಾನು ಇಲ್ಲಿಯವರೆಗೂ ಎಲ್ಲಿಯೂ ಮಾತನಾಡಿಲ್ಲ. ಇದೇ ಮೊದಲ ಬಾರಿಗೆ ಮಾತನಾಡುತ್ತಿದ್ದೇನೆ. ರೇಣುಕಾಸ್ವಾಮಿ ವಿಚಾರ ಆವಾಗ ಹೊರಬಂದಿರಲಿಲ್ಲ ಎಂದಿದ್ದಾರೆ. ನನ್ನ ಪತಿ ತಮ್ಮ ಖಾಸಗಿ ಅಂಗದ ಫೋಟೋ ತೆಗೆದು ಇನ್ನೊಂದು ಹೆಣ್ಣುಮಗಳಿಗೆ ಕಳಿಸಿದರೆ, ಅಂಥ ಪತಿಯೇ ಬೇಕಾಗಿಲ್ಲ. 

Tap to resize

Latest Videos

ದರ್ಶನ್‌ಗೆ ನಾನು ಮದರ್ ಇಂಡಿಯಾ, ಕೊಲೆ ಮಾಡೋ ವ್ಯಕ್ತಿ ಅವನಲ್ಲ: ಮೌನ ಮುರಿದ ಸುಮಲತಾ!

ಅಂಥವರ ಉಪಸ್ಥಿತಿಯೇ ನಮಗೆ ಬೇಕಿಲ್ಲ. ಆ ಮಗು ಹುಟ್ಟಿದ ಮೇಲೆ, ತಂದೆ ಎಲ್ಲಿ ಎಂದು ಕೇಳಿದಾಗ, ಆ ಹೆಂಡತಿ ಏನು ಮಾತನಾಡಬೇಕು ಎಂಬ ಪ್ರಶ್ನೆ ನನಗೆ ಎದುರಾಗುತ್ತು. ಆ ಥರದ ಸನ್ನಿವೇಷದಲ್ಲಿ ಈ ಥರದ ಕ್ಯಾರೆಕ್ಟರ್‌ ಇದ್ದರೆ, ಆ ತಂದೆಯ ಮುಖವನ್ನು ಆ ಮಗು ನೋಡದಿರುವುದೇ ಒಳ್ಳೆಯದು ಎಂದು ನನಗೆ ಅನಿಸುತ್ತೆ. ಘಟನೆ ಕಹಿ ಎಂದ ತಕ್ಷಣ ಅದನ್ನು ಜೀರ್ಣ ಮಾಡಿಕೊಳ್ಳಬೇಕು, ಇಲ್ಲವಾದಲ್ಲಿಅದನ್ನು ಬಿಟ್ಟು ಮುಂದುವರಿಯಬೇಕು. ಕಾನೂನಿನ ಪ್ರಕಾರ ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕೋ ಅದನ್ನು ಪೊಲೀಸ್‌ ಇಲಾಖೆ ತೆಗೆದುಕೊಳ್ಳಲಿದೆ. ರೇಣುಕಾಸ್ವಾಮಿ ಅಂಥವರೇ ಇಂದಿಗೂ ಸಾವಿರಾರು ಜನ ಕೆಟ್ಟದಾಗಿಯೇ ಕಾಮೆಂಟ್‌ ಮಾಡುತ್ತಾರೆ. 

ಅದಕ್ಕೆ ಮೊದಲು ಅಂಕುಶ ಹಾಕಬೇಕಿದೆ. ಆ ಬಗ್ಗೆ ನಾವು ಕಂಪ್ಲೇಂಟ್‌ ಮಾಡಿದ ಬಳಿಕ, ಅದೇ ವಿಚಾರವನ್ನು ನಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದರೂ, ನಮಗೆ ಜಸ್ಟಿಫಿಕೇಷನ್‌ ಸಿಗುವುದಿಲ್ಲ. ಜನ ಅಲ್ಲಿಯೂ ಮಾತನಾಡ್ತಾರೆ. ಸೋ ಕಾಲ್ಡ್‌ ಕಾಮನ್‌ಮ್ಯಾನ್‌ಗಳು ಏನು ಮಾಡ್ತಾರೆ ಅಂದ್ರೆ, ನೀವು ಆ ರೀತಿಯ ಬಟ್ಟೆ ಹಾಕಿದ್ದಕ್ಕೆ ನಿಮಗೆ ಹೀಗಾಗಿದೆ ಎನ್ನುತ್ತಾರೆ. ನಾನೇ ಯಾವುದೋ ಒಂದು ಕಾಮೆಂಟ್‌ನಲ್ಲಿ ಹೇಳಿರ್ತಿನಿ. ನಿಮ್ಮ ಮನೆ ಹೆಣ್ಣು ಮಕ್ಕಳಿಗೆ ಹೀಗಾದಾಗ ಏನ್‌ ಮಾಡ್ತಿರಿ ಎಂದಿರ್ತಿನಿ. ಅದಕ್ಕೆ ನಿಮ್ಮ ರೀತಿ ಬಟ್ಟೆ ಬಿಚ್ಕೊಂಡು ಕುಣಿಯಲ್ಲ ನಮ್ಮ ಮನೆಯವ್ರು ಎಂದು ಎದುರು ಮಾತಾಡ್ತಾರೆ. 

ರೇಣುಕಾಸ್ವಾಮಿ ಮುಗ್ಧನಲ್ಲ, ವಿಕೃತಕಾಮಿ, ದರ್ಶನ್ ಪ್ರಕರಣ ವಿಧಿಯಾಟ: ಸಂಗೀತ ನಿರ್ದೇಶಕ ವಿ.ಮನೋಹರ್

ಹಾಗಾಗಿ ಈ ರೀತಿ ಕೆಟ್ಟ ಕೆಲಸ ಮಾಡೋದನ್ನ ಬಿಟ್ಟು ಏನಾದರೂ ಒಳ್ಳೆಯ ಕೆಲಸ ಮಾಡಿ, ರೇಣುಕಾಸ್ವಾಮಿ ಮಾತ್ರವಲ್ಲ ಕಿತ್ತೋದ ಫೇಕ್‌ ಫ್ರೊಫೈಲ್‌ಗಳಿಂದ ಸಾಕಷ್ಟು ಮೆಸೆಜ್‌ಗಳು ಬಂದಿವೆ. ಆದರೆ, ರೇಣುಕಾಸ್ವಾಮಿಯೇ ಮಾಡಿಲ್ಲ. ಈ ಘಟನೆ ಆದ ಮೇಲೆ ಇದು ಹೆಚ್ಚು ಮುನ್ನೆಲೆಗೆ ಬಂದಿದೆ. ಹಾಗಾಗಿ ಕೆಟ್ಟದಾಗಿ ಮೆಸೆಜ್‌ ಮಾಡುವವರಿಗೆ ಕಾನೂನಿನಲ್ಲಿ ಇಂಥದ್ದೊಂದು ಶಿಕ್ಷೆ ಇದೆ ಎಂದು ಸರ್ಕಾರ ಘೋಷಣೆ ಮಾಡಬೇಕು. ಆಗಲಾದರೂ ಕಡಿಮೆ ಆಗಬಹುದಾ ಅಂತ ಕಾದು ನೋಡಬೇಕು ಎಂದು ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತನಿಷಾ ಕುಪ್ಪಂಡ ತಿಳಿಸಿದ್ದಾರೆ.

click me!