Old Monk Release: ಓಲ್ಡ್‌ ಮಾಂಕ್ ಫೆ.11ಕ್ಕೆ ಬಿಡುಗಡೆ

Published : Dec 23, 2021, 12:17 PM IST
Old Monk Release: ಓಲ್ಡ್‌ ಮಾಂಕ್ ಫೆ.11ಕ್ಕೆ ಬಿಡುಗಡೆ

ಸಾರಾಂಶ

ಶ್ರೀನಿ ನಟಿಸಿ, ನಿರ್ದೇಶಿಸಿರುವ ‘ಓಲ್‌ಡ್ ಮಾಂಕ್’ ಸಿನಿಮಾ ಫೆಬ್ರವರಿ 11ಕ್ಕೆ ತೆರೆಗೆ ಅದಿತಿ ಪ್ರಭುದೇವ ನಾಯಕಿ, ಫೆಬ್ರವರಿ ತಿಂಗಳಲ್ಲಿ ದೊಡ್ಡ ಮಟ್ಟದಲ್ಲಿ ಚಿತ್ರವನ್ನು ಬಿಡುಗಡೆ

ಶ್ರೀನಿ ನಟಿಸಿ, ನಿರ್ದೇಶಿಸಿರುವ ‘ಓಲ್‌ಡ್ ಮಾಂಕ್’ ಸಿನಿಮಾ ಫೆಬ್ರವರಿ 11ಕ್ಕೆ ತೆರೆಗೆ ಬರುತ್ತಿದೆ. ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿರುವ ಈ ಚಿತ್ರದ ಹಕ್ಕುಗಳನ್ನು ಅಭಿಜಿತ್ ಎಂಟರ್‌ಪ್ರೈಸಸ್ ಸಂಸ್ಥೆ ಪಡೆದುಕೊಂಡಿದೆ. ‘ಕಬೀರ್ ಸಿಂಗ್’, ‘ತಾನಾಜಿ’ ಹಾಗೂ ‘ಗಲ್ಲಿ ಬಾಯ್’ ಸೇರಿದಂತೆ ಯೂರೋಸ್‌ನ ಬಹಳಷ್ಟು ಚಿತ್ರಗಳನ್ನು ವಿತರಣೆ ಮಾಡಿದ ಸಂಸ್ಥೆ ಅಭಿಜಿತ್ ಎಂಟರ್ ಪ್ರೈಸಸ್ ‘ಓಲ್‌ಡ್ ಮಾಂಕ್’ ಚಿತ್ರದ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರದ ಬಿಡುಗಡೆ ಹಕ್ಕುಗಳನ್ನು ತೆಗೆದುಕೊಂಡಂತಾಗಿದೆ.

‘ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಬಂದಿದೆ. ಫೆಬ್ರವರಿ ತಿಂಗಳಲ್ಲಿ ದೊಡ್ಡ ಮಟ್ಟದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಅಭಿಜಿತ್ ಎಂಟರ್‌ಪ್ರೈಸಸ್ ತಯಾರಿ ಮಾಡಿಕೊಳ್ಳುತ್ತಿದೆ. ಎಂದಿನಂತೆ ತುಂಬಾ ಫನ್ ಇರುವ ಮನರಂಜನಾತ್ಮಕವಾದ ಚಿತ್ರವನ್ನು ಪ್ರೇಕ್ಷಕರ
ಮುಂದಿಡುತ್ತಿರುವುದಕ್ಕೆ ಖುಷಿ ಆಗುತ್ತಿದೆ’ ಎನ್ನುತ್ತಾರೆ ನಟ, ನಿರ್ದೇಶಕ ಶ್ರೀನಿ.

ಓಲ್ಡ್ ಮಾಂಕ್‌ನಲ್ಲಿ ಶ್ರೀನಿ ಲೈಫ್ ಗಿಚ್ಚ ಗಿಲಿಗಿಲಿ

ಶ್ರೀನಿ (Srini) ನಿರ್ದೇಶಿಸಿ, ನಾಯಕನಾಗಿ ನಟಿಸುತ್ತಿರುವ 'ಓಲ್ಡ್ ಮಾಂಕ್' (Old Monk) ಚಿತ್ರ ಸೆಟ್ಟೇರಿದಾಗಿನಿಂದಲೂ ತನ್ನ ಟೈಟಲ್ ಹಾಗೂ ಕಂಟೆಂಟ್ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದ ಈ ಚಿತ್ರ ಇದೀಗ ತೆರೆಗೆ ಬರಲು ಸಜ್ಜಾಗಿದೆ. ಈಗಾಗಲೇ ಬಿಡುಗಡೆಯಾಗಿರುವ 'ಓಲ್ಡ್‌ ಮಾಂಕ್‌' ಚಿತ್ರದ ಟ್ರೇಲರ್‌, ಹಾಡು ಎರಡಕ್ಕೂ ಸೋಶಿಯಲ್‌ ಮೀಡಿಯಾಗಳಲ್ಲಿ ಭರ್ಜರಿ ರೆಸ್ಪಾನ್ಸ್‌ ಸಿಗುತ್ತಿದ್ದು, ಚಿತ್ರಕ್ಕೂ ಬೇಡಿಕೆ ಹೆಚ್ಚಾಗಿದೆ. ಚಿತ್ರಕ್ಕೆ ಅದಿತಿ ಪ್ರಭುದೇವ (Aditi Prabhudeva) ನಾಯಕಿಯಾಗಿದ್ದಾರೆ. 'ರಂಗನಾಯಕಿ' (Ranganayaki) ಚಿತ್ರದ ನಂತರ ಮತ್ತೊಮ್ಮೆ ಶ್ರೀನಿ ಜೊತೆ ತೆರೆ ಮೇಲೆ ಜತೆಯಾಗುತ್ತಿದ್ದು, ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಚಿತ್ರದಲ್ಲಿ ಓಲ್ಡ್‌ ಮಾಂಕ್‌ ಅಂದರೆ ನಾರದ. ಪ್ರೀತಿಸಿ ಮದುವೆಯಾಗುವ ಶಾಪಕ್ಕೆ ತುತ್ತಾಗಿ ಭೂಲೋಕಕ್ಕೆ ಬರುವ ನಾರದ ಏನೆಲ್ಲಾ ರಂಪಾಟ ಮಾಡಿದ ಅನ್ನುವುದು ಚಿತ್ರದ ಕತೆಯ ಒನ್‌ಲೈನ್‌. ಸದ್ಯ ಕರ್ನಾಟಕದಲ್ಲಿ ಸುಮಾರು ಮೂರೂವರೆ ದಶಕಗಳ ‌ವಿತರಣೆಯ ಅನುಭವವಿರುವ ಅಭಿಜಿತ್‌ ಎಂಟರ್‌ಪ್ರೈಸಸ್‌ ಸಂಸ್ಥೆ 'ಓಲ್ಡ್‌ ಮಾಂಕ್‌' ಚಿತ್ರದ ಟ್ರೇಲರ್‌ ನೋಡಿ ಸಿನಿಮಾದ ಕರ್ನಾಟಕ ಔಟ್‌ ರೇಟ್‌ ರೈಟ್ಸ್‌ ಪಡೆದುಕೊಂಡಿದೆ. ದೊಡ್ಡ ಮೊತ್ತಕ್ಕೆ ಸಿನಿಮಾದ ರೈಟ್ಸ್‌ ಸೇಲ್‌ ಆಗಿರುವುದರಿಂದ ನಿರ್ಮಾಪಕರು ಖುಷಿಯಾಗಿದ್ದಾರೆ. ಇತ್ತೀಚೆಗೆ ಚಿತ್ರದ  'ಗಿಚ್ಚ ಗಿಲಿಗಿಲಿ' (Giccha Gili Gili) ಹೆಸರಿನ ಹಾಡು ಬಿಡುಗಡೆಯಾಗಿದೆ.

ಓಲ್ಡ್ ಮಾಂಕ್‌ನಲ್ಲಿ ಶ್ರೀನಿ ಲೈಫ್ ಗಿಚ್ಚ ಗಿಲಿಗಿಲಿ

ಶ್ರೀನಿ ಹಾಗೂ ಚಿತ್ರದ ನಾಯಕಿ ಅದಿತಿ ಪ್ರಭುದೇವ (Aditi Prabhudeva) ಈ ಹಾಡಿಗೆ ಬೊಂಬಾಟ್ ಸ್ಟೆಪ್ಸ್ ಹಾಕಿದ್ದಾರೆ. ಸೌರಭ್ ಮತ್ತು ವೈಭವ್ ಸಂಗೀತವಿರುವ ಈ ಚಿತ್ರದ ಹಾಡಿಗೆ ಮುದಕಣ್ಣ ಮೊರಬ (Mudakanna Moraba) ಸಾಹಿತ್ಯದ ಜೊತೆ ಹಾಡನ್ನು ಹಾಡಿದ್ದಾರೆ. ಎ.ಹರ್ಷ ನೃತ್ಯ ಸಂಯೋಜನೆ ಈ ಹಾಡಿಗಿದೆ. ಈ ಹಿಂದೆ ಬಿಡುಗಡೆಯಾದ 'ಓಲ್ಡ್‌ ಮಾಂಕ್‌' ಚಿತ್ರದ ಟ್ರೇಲರನ್ನು ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಬಿಡುಗಡೆ ಮಾಡಿ, 'ಡಿಫರೆಂಟ್‌ ಆಗಿರುವ ಟ್ರೇಲರ್‌ನಂತೆ ಸಿನಿಮಾವೂ ಒಳ್ಳೆಯ ಮನರಂಜನೆ ನೀಡಲಿ' ಎಂದು ಪುನೀತ್‌ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು.

ಹಿರಿಯ ನಟ ರಾಜೇಶ್‌, ಡಿಂಗ್ರಿ ನಾಗರಾಜ್‌, ಎಸ್‌ ನಾರಾಯಣ್‌. ಸಿಹಿಕಹಿ ಚಂದ್ರು, ಅರುಣಾ ಬಾಲರಾಜ್‌, ಸುನೀಲ್‌ ರಾವ್‌, ಸುಜಯ್‌ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಪ್ರದೀಪ್‌ ಶರ್ಮಾ ಚಿತ್ರದ ನಿರ್ಮಾಪಕರು. ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ ಹಲವು ವರ್ಷಗಳ ನಂತರ ಹಿರಿಯ ನಟ ರಾಜೇಶ್ ಬಣ್ಣ ಹಚ್ಚಿದ್ದಾರೆ. ಇನ್ನು ತೆಲುಗಿನ (Telugu) ಕ್ಲಾಪ್‌ ಬೋರ್ಡ್‌ ಪ್ರೊಡಕ್ಷನ್‌ನ ರಾಮಕೃಷ್ಣ ನಲ್ಲಂ (Ramakrishna Nallam) ಹಾಗೂ ಸ್ಟಾರ್‌ವುಡ್‌ ಪ್ರೊಡಕ್ಷನ್‌ನ ರವಿ ಕಶ್ಯಪ್‌ (Ravi Kashyap) ಚಿತ್ರದ ರೀಮೇಕ್‌ ರೈಟ್ಸ್‌ ಖರೀದಿ ಮಾಡಿದ್ದು, ಈ ಸಿನಿಮಾ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕ ಕಾಲಕ್ಕೆ ಬಿಡುಗಡೆ ಆಗುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?