
ಈ ವರ್ಷಾಂತ್ಯದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಹಲವಾರು ಚಿತ್ರಗಳು ತೆರೆಕಾಣುತ್ತಿದ್ದು, ಇದೀಗ ಆ ಸಾಲಿಗೆ 'ಹುಟ್ಟು ಹಬ್ಬದ ಶುಭಾಶಯಗಳು' (Huttu Habbada Shubhashayagalu) ಚಿತ್ರವು ಒಂದು. ದೂದ್ ಪೇಡ ದಿಗಂತ್ (Diganth) ಹಾಗೂ ಕವಿತಾ ಗೌಡ (Kavitha Gowda) ಜೊತೆಯಾಗಿ ನಟಿಸಿರುವ 'ಹುಟ್ಟು ಹಬ್ಬದ ಶುಭಾಶಯಗಳು' ಚಿತ್ರ ಇದೇ ಡಿಸೆಂಬರ್ 31ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬೆಳ್ಳಿಪರದೆ ಮೇಲೆ ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ ಚಿತ್ರದ ಟ್ರೇಲರ್ (Trailer) ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ವಿಶೇಷವಾಗಿ ಈ ಚಿತ್ರದ ಟ್ರೇಲರನ್ನು ಸ್ಪೆಷಲ್ ವ್ಯಕ್ತಿ ರಿಲೀಸ್ ಮಾಡುತ್ತಿದ್ದಾರೆ.
ಹೌದು! ದಿಗಂತ್ ನಟನೆಯ 'ಹುಟ್ಟು ಹಬ್ಬದ ಶುಭಾಶಯಗಳು' ಚಿತ್ರದ ಫಸ್ಟ್‌ಲುಕ್ ಹಾಗೂ ಟೀಸರ್ ಈಗಾಗಲೇ ಕುತೂಹಲ ಹುಟ್ಟಿಸಿದೆ. ಇದೀಗ ಟ್ರೇಲರ್ ಮೂಲಕ ಸಿನಿರಸಿಕರಲ್ಲಿ ಮತ್ತಷ್ಟು ಕೌತುಕವನ್ನು ಮೂಡಿಸಲು ಡಿಸೆಂಬರ್ 23ರಂದು ಚಿತ್ರತಂಡ ಟ್ರೇಲರ್‌ನ್ನು ಬಿಡುಗಡೆ ಮಾಡುತ್ತಿದೆ. ಮುಖ್ಯವಾಗಿ ಈ ಚಿತ್ರದ ಟ್ರೇಲರ್‌ನ್ನು ಸ್ಯಾಂಡಲ್‌ವುಡ್‌ನ ಸೂಪರ್ ಸ್ಟಾರ್ ಉಪೇಂದ್ರ (Upendra) ಅವರು ರಿಲೀಸ್ ಮಾಡುತ್ತಿದ್ದಾರೆ. ಈ ಬಗ್ಗೆ ದಿಗಂತ್ ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ 'ಹುಟ್ಟು ಹಬ್ಬದ ಶುಭಾಶಯಗಳು' ಚಿತ್ರದ ಟ್ರೇಲರ್‌ನ್ನು ಡಿಸೆಂಬರ್ 23ರಂದು ರಿಯಲ್ ಸ್ಟಾರ್ ಉಪೇಂದ್ರ ಸಂಜೆ 6 ಗಂಟೆ 36 ನಿಮಿಷಕ್ಕೆ ಕ್ರಿಸ್ಟಲ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ.
Party Song: ದೂದ್ ಪೇಡ ದಿಗಂತ್ ಚಿತ್ರದ ಎಣ್ಣೆ ಹೊಡೆದರೆ ಅಪರಾಧ ಸಾಂಗ್ ರಿಲೀಸ್
ಈ ಚಿತ್ರದ 'ಎಣ್ಣೆ ಹೊಡೆದರೆ ಅಪರಾಧ' ಎಂಬ ಪಾರ್ಟಿ ಸಾಂಗ್‌ವೊಂದು ಇತ್ತೀಚೆಗೆ ಬಿಡುಗಡೆಯಾಗಿದೆ. ಯೋಗರಾಜ್ ಭಟ್ (Yograj Bhat) ಸಾಹಿತ್ಯವಿರುವ ಈ ಹಾಡಿಗೆ ಶ್ರೀಧರ್ ವಿ ಸಂಭ್ರಮ್ (Sridhar V. Sambram) ಸಂಗೀತ ಸಂಯೋಜಿಸಿದ್ದಾರೆ. ಶಶಾಂಕ್ ಶೇಷಗಿರಿ, ಇಂಪನಾ ಜಯರಾಜ್ ಹಾಗೂ ಐಶ್ವರ್ಯಾ ಮಹೇಶ್ ಈ ಹಾಡಿಗೆ ದನಿಯಾಗಿದ್ದು, ನ್ಯೂ ಇಯರ್ ಪಾರ್ಟಿ ಮಾಡುವವರಿಗೆ ಈ ಹಾಡು ಸಖತ್ ಕಿಕ್ ನೀಡಲಿದೆ. ಥ್ರಿಲ್ಲರ್ ಕಥಾಹಂದರವನ್ನು ಹೊಂದಿರುವ ಈ ಚಿತ್ರಕ್ಕೆ ನಾಗರಾಜ್ ಬೇತೂರ್ (Nagaraj Bethur) ಆಕ್ಷನ್ ಕಟ್ ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ದಿಗಂತ್ ಮಾಸ್ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಹೊಸ ಲುಕ್ ಪಕ್ಕಾ ರಗಡ್ ಆಗಿದೆ. ಕಾಮಿಡಿ ಜೊತೆಗೆ ಲವ್ ಹಾಗೂ ಮಾಸ್ ಕಥೆಯನ್ನು ಈ ಚಿತ್ರ ಒಳಗೊಂಡಿದೆ ಎನ್ನಲಾಗಿದೆ. ಚಿತ್ರಕ್ಕೆ ಪ್ರಸನ್ನ ಕಥೆಯನ್ನು ಬರೆದಿದ್ದು, ಶ್ರೀಧರ್ ವಿ ಸಂಭ್ರಮ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಶ್ರೀಕಾಂತ್ ಶ್ರಾಫ್ ಸಂಕಲನ, ಅಭಿಲಾಶ್ ಕಲತಿ ಕ್ಯಾಮೆರಾ ಕೈಚಳಕ 'ಹುಟ್ಟು ಹಬ್ಬದ ಶುಭಾಶಯಗಳು' ಚಿತ್ರಕ್ಕಿದೆ. ಚೇತನ್ ಗಂಧರ್ವ, ಮಡೇನೂರು ಮನು, ಸೂರಜ್, ಸೂರ್ಯ, ವಾಣಿಶ್ರೀ, ರೋಹಿತ್ ರಂಗಸ್ವಾಮಿ, ಶನಯ ಕಾಟ್ವೆ, ಶರಣ್ಯ ಶೆಟ್ಟಿ, ಶ್ರೀದತ್ತ, ಶ್ರೀಹರಿ, ಸುಜಯ್ ಶಾಸ್ತ್ರಿ, ರತನ್ ರಾಮ್, ಅಮೋಘವರ್ಷ, ಅಜಯ್ ಗಜ ಸೇರಿದಂತೆ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಈ ಚಿತ್ರಕ್ಕೆ ಕ್ರಿಸ್ಟಲ್ ಪಾರ್ಕ್ ಬ್ಯಾನರ್ನಡಿ ಟಿ. ಆರ್ ಚಂದ್ರಶೇಖರ್ (TR Chandrashekar) ನಿರ್ಮಾಣ ಮಾಡಿದ್ದಾರೆ.
ಸಂಗೀತಾ ಶೃಂಗೇರಿ, ದಿಗಂತ್ ನಟನೆಯ 'ಮಾರಿಗೋಲ್ಡ್' ರಿಲೀಸ್‌ಗೆ ಸಿದ್ಧತೆ!
ಇನ್ನು 'ಹುಟ್ಟು ಹಬ್ಬದ ಶುಭಾಶಯಗಳು' ಚಿತ್ರದ ಟೀಸರ್ ಈಗಾಗಲೇ ರಿವೀಲ್ ಆಗಿದ್ದು, ದಿಗಂತ್ ಪಾತ್ರ ಕುತೂಹಲ ಮೂಡಿಸಿದೆ. ಅಲ್ಲದೇ ಟೀಸರ್ಗೆ ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಒಂದು ಬರ್ತಡೇ ಪಾರ್ಟಿಯಲ್ಲಿ ನಡೆಯುವ ಕೊಲೆಯನ್ನು ದಿಗಂತ್ ಯಾವ ರೀತಿ ಚೇಸ್ ಮಾಡ್ತಾರೆ. ಚಿತ್ರದಲ್ಲಿ ದಿಗಂತ್ ಪೊಲೀಸ್ ಪಾತ್ರ ಮಾಡಿದ್ದಾರಾ ಅನ್ನೋದೆ ಈ ಚಿತ್ರದ ಸಸ್ಪೆನ್ಸ್ ಆಗಿದೆ. ಈ ಹಿಂದೆ ಚಿತ್ರದ ಫಸ್ಟ್‌ಲುಕ್ (First Look) ಪೋಸ್ಟರ್‌ನಲ್ಲಿ ದಿಗಂತ್ ಮಾಸ್ ಆ್ಯಂಡ್ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದರು. ಮಾತ್ರವಲ್ಲದೆ ಕೈಯಲ್ಲಿ ರಕ್ತದ ಕಲೆ ಕೂಡಾ ಅಂಟಿಕೊಂಡಿತ್ತು. ಜೊತೆಗೆ ಕುರ್ಚಿಯ ಮೇಲೆ ಕುಳಿತು ಗುಲಾಬಿ ಹೂವನ್ನು ಕಾಲಲ್ಲಿ ಒಸಕಿ ಹಾಕಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.