ಯಾವ್ ಹೀರೋನೂ ನಂಗೆ ಹಾಗೆ ಹೇಳಿರ್ಲಿಲ್ಲ, ಅವ್ರು ಮಾತ್ರ ಅಂದಿದ್ರು: ಶಾಕ್ ಕೊಟ್ರು 'AK 47' ಓಂ ಪ್ರಕಾಶ್ ರಾವ್!

By Shriram Bhat  |  First Published Jul 3, 2024, 4:01 PM IST

ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ಅವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ನಾವೂ ಕೂಡ ಪ್ರಯತ್ನಿಸುತ್ತೇವೆ' ಎಂದು ನಿರ್ಮಾಪಕ ಕೆ ಮಂಜು ಸೇರಿದಂತೆ ಹಲವರು ಹೇಳಿದ್ದಾರೆ. ಜೊತೆಗೆ, ನಟ ದರ್ಶನ್ ಪರ...


ಕನ್ನಡ ಚಿತ್ರರಂಗದ ಸ್ಟಾರ್ ನಟ ದರ್ಶನ್ ಅವರು ಕೊಲೆ ಕೇಸಿನಲ್ಲಿ ಆರೊಪಿಯಾಗಿ ಪರಪ್ಪನ ಅಗ್ರಹಾರದಲ್ಲಿ ಜೈಲಿನಲ್ಲಿ ದಿನಕಳೆಯುತ್ತಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಆರೋಪಿಯಾಗಿ ಜೈಲು ಸೇರಿದ್ದು, ಅವರು ಬೇಲ್‌ ಮೇಲೆ ಹೊರಬರುತ್ತಾರೋ ಇಲ್ಲವೋ ಎಂಬುದು ಸಹ ಸದ್ಯಕ್ಕೆ ಪ್ರಶ್ನೆಯಾಗಿಯೇ ಉಳಿದಿದೆ. ನಟ ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಸೋಷಿಯಲ್ ಮೀಡಿಯಾಗಳ ಮೂಲಕ ಅಶ್ಲೀಲ ಮೆಸೇಜ್ ಕಳುಹಿಸಿರುವುದು ಕೊಲೆಗೆ ಕಾರಣ ಎನ್ನಲಾಗಿದೆ. 

ನಟ ದರ್ಶನ್ ಸ್ಯಾಂಡಲ್‌ವುಡ್‌ನ ಸ್ಟಾರ್ ನಟ. ಈಗಾಗಲೇ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಅವರ ಅಭಿಮಾನಿ ಬಳಗ ಹಾಗು ಚಿತ್ರರಂಗದ ನಂಟು ಬಹಳ ದೊಡ್ಡದು. ಕೇಸ್‌ ಆಗಿ ಸ್ವಲ್ಪ ದಿನಗಳವರೆಗೂ ಸುಮ್ಮನಿದ್ದ ಚಿತ್ರರಂಗದ ದರ್ಶನ್ ಆಪ್ತರು, ಈಗ ಒಬ್ಬೊಬ್ಬರಾಗಿಯೇ ನಟ ದರ್ಶನ್ ಪರ ಮಾತನಾಡಲು ಆರಂಭಿಸಿದ್ದಾರೆ. ಜೈಲಿಗೆ ಹೋಗಿ ನಟ ದರ್ಶನ್ ಅವರನ್ನು ಮಾತನಾಡಿಸಿಕೊಂಡು ಬಂದವರು ಸಹ ಇದ್ದಾರೆ. 

Tap to resize

Latest Videos

ಲೇಟ್ ಆಗಿ ಬ್ಯಾಟ್ ಬೀಸ್ತಿರೋದು ಯಾಕೆ, ಮ್ಯಾಚ್ ಬಗ್ಗೆ ಈಗ ಅಪ್‌ಡೇಟ್ ಆಗ್ತಿದ್ಯಾ ದರ್ಶನ್ ಆಪ್ತರಿಗೆ?

ನಟಿ ರಕ್ಷಿತಾ, ಜೋಗಿ ಪ್ರೇಮ, ವಿನೋದ್ ಪ್ರಭಾಕರ್ ಹಾಗೂ ನಟ ಧನ್ವೀರ್ ಅವರು ಪರಪ್ಪನ ಅಗ್ರಹಾರಕ್ಕೆ ಹೋಗಿ ನಟ ದರ್ಶನ್ ಅವರನ್ನು ನೋಡಿಕೊಂಡು ಬಂದಿದ್ದಾರೆ. ಇತ್ತೀಚೆಗೆ ಹಲವರು ದರ್ಶನ್ ಪರ ಬ್ಯಾಟ್ ಬೀಸತೊಡಗಿದ್ದಾರೆ. ನಟಿ ಚಿತ್ರಾಲ್, ಗಾಯಕಿ ಶಮಿತಾ ಮಲ್ನಾಡ್, ಅದ್ವಿತಿ ಶೆಟ್ಟಿ, ಎಂ ಎಸ್‌ ರಮೇಶ್ ಹಾಗೂ ಕೆ ಮಂಜು ಅವರುಗಳು ಸದ್ಯ ನಟ ದರ್ಶನ್ ಪರ ನಿಂತಿದ್ದಾರೆ. 'ನಟ ದರ್ಶನ್ ಒಳ್ಳೆಯ ವ್ಯಕ್ತಿ, ಅವರು ಸಾಕಷ್ಟು ಒಳ್ಳೆಯ ಕೆಲಸಗಳನ್ನೂ ಮಾಡಿದ್ದಾರೆ, ಸಮಾಜಕ್ಕೆ ಅವರ ಕೊಡುಗೆಯೂ ಸಾಕಷ್ಟಿದೆ.' ಎಂದಿದ್ದಾರೆ. 

ಗರ್ಭಿಣಿ ಹೆಂಡ್ತಿ, ತಂದೆ-ತಾಯಿ ಬಗ್ಗೆ ಯೋಚಿಸ್ಬೇಕಿತ್ತು, ಅಶ್ಲೀಲ ಮೆಸೇಜ್ ಕಳ್ಸಿದ್ದು ದೊಡ್ಡ ತಪ್ಪು,: ಅಗ್ನಿ ಶ್ರೀಧರ್

ಜೊತೆಗೆ, ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ಅವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ನಾವೂ ಕೂಡ ಪ್ರಯತ್ನಿಸುತ್ತೇವೆ' ಎಂದು ನಿರ್ಮಾಪಕ ಕೆ ಮಂಜು ಸೇರಿದಂತೆ ಹಲವರು ಹೇಳಿದ್ದಾರೆ. ಜೊತೆಗೆ, ನಟ ದರ್ಶನ್ ಪರ ಮಾತನಾಡಿದ ಪ್ರಮುಖರಲ್ಲಿ ನಿರ್ದೇಶಕ ಓಂ ಪ್ರಕಾಶ್ ಕೂಡ ಒಬ್ಬರು. ಅವರು ನಟ ದರ್ಶನ್ ಜತೆಗಿನ ತಮ್ಮ ಒಡನಾಟ ಸೇರಿದಂತೆ ಹಲವು ಸೀಕ್ರೆಟ್‌ಗಳನ್ನು ಹಂಚಿಕೊಂಡಿದ್ದಾರೆ. 

ಮೂರನೇ ಸ್ಥಾನಕ್ಕೆ ಜಿಗಿದ ರಾಕಿಂಗ್ ಸ್ಟಾರ್ ಕೆಜಿಎಫ್ 2, ನಟ ಯಶ್ ಕೆಳಕ್ಕೆ ತಳ್ಳಿದ್ದು ಯಾರನ್ನ ನೋಡ್ರಿ!

ಹಾಗಿದ್ದರೆ 'ಎಕೆ 47' ಸಿನಿಮಾ ನಿರ್ದೇಶಕ  (Om Prakash Rao) ಓಂ ಪ್ರಕಾಶ್ ರಾವ್ ಹೇಳಿದ್ದೇನು ಗೊತ್ತಾ? 'ನನ್ನ ಹಾಗೂ ದರ್ಶನ್  ನಡುವೆ ಇತ್ತೀಚೆಗೆ ಭೇಟಿ ಹಾಗು ಮಾತುಕತೆ ಕಡಿಮೆಯಾಗಿದೆ ನಿಜ. ಅದಕ್ಕೆ ಕಾರಣ, ನಾನು ದರ್ಶನ್ ನಟನೆಯ ಯಾವುದೇ ಸಿನಿಮಾಕ್ಕೆ ಕಾಲ್‌ಶೀಟ್ ತೆಗೆದುಕೊಂಡಿಲ್ಲ. ಆದರೆ, ನಮ್ಮ ಹಳೆಯ ಸ್ನೇಹ ಇನ್ನೂ ಹಾಗೆ ಇದೆ. ಎಲ್ಲಿ ಸಿಕ್ಕರೂ ನಟ ದರ್ಶನ್ ಅದೇ ಆತ್ಮೀಯತೆಯಿಂದ ಮಾತನಾಡುತ್ತಾರೆ. ನನ್ನ ವಿಷಯದಲ್ಲಿ ಅವರು ಸ್ವಲ್ಪವೂ ಬದಲಾಗಿಲ್ಲ. 

ಚಿತ್ರರಂಗದ ಕೆಲವರು ಈಗ ದರ್ಶನ್ ಕೆಟ್ಟವರ ಸಹವಾಸ ಮಾಡಿ ಬದಲಾಗಿದ್ದಾರೆ ಎನ್ನುವುದನ್ನು ನಾನೂ ಕೇಳಿದ್ದೇನೆ. ಆದರೆ ಅದು ಅವರ ಪಾಲಿನ ಅನುಭವ. ಅದನ್ನು ನನ್ನದು ಎಂದು ನಾನು ಯಾಕೆ ಹೇಳಲಿ. ಆದರೆ, ಒಂದು ಮಾತಂತೂ ಸತ್ಯ.. ನಾನು ಅವರ ಜೊತೆ ಸಿನಿಮಾ ಮಾಡುವಾಗ ಅವರಿಗೆ ನನ್ನ ಮೇಲೆ ಅದೆಷ್ಟು ನಂಬಿಕೆ ಹಾಗು ಗೌರವ ಇತ್ತು ಎಂದರೆ, ಓಂ ಪ್ರಕಾಸ್ ರಾವ್ ಸಿನಿಮಾ ಎಂದರೆ ನಾನು ಕತೆ ಕೂಡ ಕೇಳುವುದಿಲ್ಲ, ಅವರು ಹೇಳಿದಷ್ಟು ದಿನ ಕಾಲ್‌ಶೀಟ್ ಕೊಟ್ಟುಬಿಡುತ್ತೇನೆ ಎನ್ನುತ್ತಿದ್ದರು. 

ಕರುನಾಡ ಹಂಪಿ ವಿರೂಪಾಕ್ಷನೆದುರು ತೆಲುಗು ಟೀಮ್, ಏನ್ ಮಾಡ್ತಿದಾರೆ ಸ್ಟಾರ್ ನಟ ರಾಮ್‌ ಚರಣ್?

ಕೆಟ್ಟ ಟೈಮ್ ಇರಬಹುದು, ಕೆಟ್ಟವರ ಸಹವಾಸ ಇರಬಹುದು. ಆದರೆ, ಸದ್ಯ ತನಿಖೆ ಹಂತದಲ್ಲಿರುವ ಕೊಲೆ ಕೇಸ್‌ ಬಗ್ಗೆ ನಾನೇನೂ ಹೇಳಲಾರೆ. ಆದರೆ, ನನಗೆ ಮಾತ್ರ ಕನ್ನಡ ಚಿತ್ರರಂಗದ ಬೇರೆ ಯಾವುದೇ ಒಬ್ಬ ಹೀರೋ ಹಾಗೆ ಹೇಳಿರಲೇ ಇಲ್ಲ. 'ಗುರುಗಳೇ, ನೀವು ಕೇಳಿದರೆ ನಾನು ಕಥೆ ಕೇಳುವುದಿಲ್ಲ, ನಿಮಗೆ ಎಷ್ಟು ಬೇಕೋ ಅಷ್ಟು ದಿನಗಳ ಡೇಡ್ಸ್ ಕೊಡುತ್ತೇನೆ ಎಂದಿದ್ದರು. ಹಾಗೇ ನಡೆದುಕೊಂಡರು ಕೂಡ' ಎಂದಿದ್ದಾರೆ ಕನ್ನಡದ ಒಂದು ಕಾಲದ ಸ್ಟಾರ್ ಡೈರೆಕ್ಟರ್ ಓಂ ಪ್ರಕಾಶ್ ರಾವ್.

click me!