ನಟ ದರ್ಶನ್ ಮೇಲಿನ ಅಭಿಮಾನಕ್ಕಾಗಿ ತನ್ನ ಪುಟ್ಟ ಮಗುವಿಗೆ ಕೈದಿ ಪೋಷಾಕನ್ನು ಹಾಕಿ ಫೋಟೋ ಶೂಟ್ ಮಾಡಿಸಿ ಸಾಮಾಜಿಲ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪೋಷಕರಿಗೆ ನೋಟೀಸ್ ಜಾರಿ.
ಬೆಂಗಳೂರು (ಜು.03): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್‌ಗೆ 6106 ಕೈದಿ ನಂಬರ್ ಕೊಡಲಾಗಿದೆ. ಆದರೆ, ಆತನ ಅಭಿಮಾನಿಗಳು ಪುಟ್ಟ ಮಗುವಿಗೆ ಕೈದಿ ನಂಬರ್ ಕೊಟ್ಟು ಫೋಟೋ ಶೂಟ್ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈಗ ಪೊಲೀಸರು ಪುಟ್ಟ ಮಗುವಿನ ತಂದೆ ತಾಯಿಗೆ ನೊಟೀಸ್ ಜಾರಿ ಮಾಡಲಾಗುತ್ತಿದೆ.
ಹವದಯ, ಕೊಲೆ ಕೇಸಿನಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಜೈಲು ಸೇರಿದ್ದಾರೆ. ಇನ್ನು ಜೈಲಿನಲ್ಲಿ ದರ್ಶನ್‌ಗೆ ಕೊಡಲಾದ ವಿಚಾರಣಾಧೀನ ಕೈದಿ ನಂಬರ್ 6106 ಟ್ರೆಂಡ್ ಆಗುತ್ತಿದೆ. ಆತನ ಕೆಲ ಅಭಿಮಾನಿಗಳ ಕೈದಿ ಸಂಖ್ಯೆ 6106 ಅನ್ನು ತಮ್ಮ ವಾಹನಗಳ ಮೇಲೆ ಸ್ಟಿಕ್ಕರ್, ಕೈ ಮೇಲೆ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದಾರೆ. ಆದರೆ ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಅಭಿಮಾನ ಪ್ರದರ್ಶನ ಮಾಡಿದ್ದ ಅಭಿಮಾನಿ ತನ್ನ ಪುಟ್ಟ ಮಗುವಿಗೆ ಬಿಳಿ ಬಟ್ಟೆ, ಕೈ ಕೋಳ ಹಾಗೂ ಕೈದಿ ನಂ. 6106 ಎಂದು ಸ್ಟಿಕ್ಟರ್ ಅಂಟಿಸಿ ಫೋಟೋ ಶೂಟ್ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಎಲ್ಲೆಲ್ಲೋ.. ದರ್ಶನ್ ಮೇಲಿನ ಅಭಿಮಾನ; ಕೈ, ಕುತ್ತಿಗೆ, ಎದೆ ಆಯ್ತು, ಈಗ ಪುಷ್ಠ ಭಾಗದ ಮೇಲೂ ಕೈದಿ ನಂಬರ್ 6106..!
ಇದನ್ನು ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಶೇರ್ ಮಾಡಿಕೊಂಡಿದ್ದರು. ಆದರೆ, ಇದನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರು ಮಗುವಿಗೆ ಫೋಟೋ ಶೂಟ್ ಮಾಡಿಸಿದವವರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಸಿನಿಮಾ ನಟನೊನ್ನ ಕ್ರಿಮಿನಲ್ ಕೇಸಿನ ಅಪರಾಧಿಯಾಗಿದ್ದರೂ ಆತನನ್ನು ಬೆಂಬಲಿಸಿ ಅಂಧಾಭಿಮಾನ ಪ್ರದರ್ಶನ ಮಾಡಿದವರಿಗೆ ಈಗ ಕಾನೂನು ಕಂಟಕ ಎದುರಾಗಿದೆ. ಪುಟ್ಟ ಕಂದಮ್ಮನಿಗೆ ಕೈದಿ ಸಂಖ್ಯೆ ಕೊಟ್ಟ ತಂದೆ ತಾಯಿ ವಿರುದ್ಧ ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ ಅಡಿಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕೇಸ್ ದಾಖಲಿಸಿಕೊಂಡಿದೆ. ಇದರ ಬೆನ್ನಲ್ಲಿಯೇ ಮಗುವಿಗೆ ಕೈದಿ ಫೋಟೊ ಶೋಟ್ ಮಾಡಿಸಿದವರಿಗೆ ನೋಟಿಸ್ ನೀಡಿದೆ.
ಇನ್ನು ಬಾಲ ನ್ಯಾಯ ಕಾಯ್ದೆಯ ನಿಯಮಾವಳಿ ಅನ್ವಯ ಮಕ್ಕಳ ಅಪರಾಧಿ ಕೃತ್ಯ ಸಂಬಂಧಿತ ಹಾಗೂ ಮಕ್ಕಳಿಗೆ ಅಂದ ವೇಷಭೂಷಣ ಮಾಡಿದ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವಂತಿಲ್ಲ. ಆದರೆ, ಮಗುವಿಗೆ ಕ್ರಮಿನಲ್ ಆರೋಪಿಯೊಬ್ಬನಿಗೆ ನೀಡಿದ ಕೈದಿ ಸಂಖ್ಯೆಯನ್ನು ನೀಡಿ ಫೋಟೋ ಶೂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಬಾಲನ್ಯಾಯ ಕಾಯ್ದೆ ಉಲ್ಲಂಘನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮಗುವಿನ ಕುಟುಂಬಸ್ಥರಿಗೆ ಸಮನ್ಸ್ ಜಾರಿ ಮಾಡಲಾಗುತ್ತಿದೆ. ಈ ಬಗ್ಗೆ ಪೊಲೀಸ್ ಐಟಿ ಸೆಲ್‌ಗೆ ಪತ್ರ ಬರೆಯಲಾಗಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೊಸಂಬೆ ಮಾಹಿತಿ ನೀಡಿದ್ದಾರೆ.
ಎಲ್ಲರ ಮುಂದೆ ಎಲ್ಲೆಲ್ಲೋ ತುರಿಸಿಕೊಳ್ಳಬೇಡಿ, ಹಾಗಂಥ ಇಗ್ನೋರ್ ಮಾಡಿದ್ರೆ ಡೇಂಜರಸ್!
ಸಾಮಾಜಿಕ ಜಾಲತಾಣದಲ್ಲಿ ಕೈದಿ ರೀತಿಯ ಪೋಷಾಕಿನಲ್ಲಿ ಮಗುವಿನ ಫೋಟೋ ಹಂಚಿಕೊಂಡದ್ದರಿಂದ ಆತನಿಗೆ ಅನ್ವರ್ಥನಾಮವಾಗಿ ಕೈದಿ ಎಂದು ಕರೆಯಬಹುದು. ಇದರಿಂದ ಮಗಿವಿನ ಮನಸ್ಸಿನ ಮೇಲೆ ಮಾನಸಿಕವಾಗಿ ಅಪರಾಧಿ ಕೃತ್ಯಗಳು ಪರಿಣಾಮ ಬೀರಬಹುದು. ಇನ್ನೊಂದೆಡೆ ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗುವಂತೆ ಮಗುವಿಗೆ ಇಂತಹ ಫೋಟೋಗಳು ಪ್ರೇರಣೆ ನೀಡಬಹುದು. ಈ ಹಿನ್ನೆಲೆಯಲ್ಲಿ ಮಗುವಿನ ಮಾನಸಿಕ ಬೆಳವಣಿಗೆ ಮೇಲೆ ಅಡ್ಡ ಪರಿಣಾಮ ಬೀಡಬಹುದಾದ ಬಟ್ಟೆ ಹಾಗೂ ಸ್ಟಿಕ್ಕರ್ ಹಾಕಿರುವುದು ಅಪರಾಧವಾಗಿದೆ. ಜೊತೆಗೆ, ಇಂತಹ ಡ್ರೆಸ್ ಹಾಕಿರುವುದು ಮಗುವಿನ ಆಯ್ಕೆಯಾಗಿರದ ಕಾರಣ ಪೋಷಕರು ಮಕ್ಕಳ ಹಕ್ಕುಗಳ ಉಲ್ಲಂಘನೆ ಮಾಡಿದ್ದಾರೆ. ಇದೇ ಕಾರಣಕ್ಕೆ ಮಕ್ಕಳ ರಕ್ಷಣಾ ಆಯೋಗದಿಂದ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.