
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ತಮ್ಮ ಮೊದಲ ನಿರ್ಮಾಣದ ಸಿನಿಮಾ ಫಯರ್ ಫ್ಲೈ ರಿಲೀಸ್‌ಗೆ ಸಜ್ಜಾಗಿದೆ. ಶ್ರೀ ಮುದ್ದು ಪ್ರೊಡಕ್ಷನ್ ಹೌಸ್‌ನಲ್ಲಿ ಅಡಿಯಲ್ಲಿ ನಿರ್ಮಾಣವಾಗಿರುವ ಈ ಸಿನಿಮಾದ ಭರ್ಜರಿ ಪ್ರಮೋಷನ್ ನಡೆಯುತ್ತಿದೆ. ಇಷ್ಟು ದಿನ ಕ್ಯಾಮೆರಾ ಹಿಂದೆ ಇದ್ದ ನಿರ್ಮಾಪಕ ಈಗ ಕ್ಯಾಮೆರಾ ಮುಂದೆ ಬಂದಿದ್ದಾರೆ. ಈ ಜರ್ನಿಯಲ್ಲಿ ಫ್ಯಾಮಿಲಿ ಸಪೋರ್ಟ್ ಎಷ್ಟಿದೆ? ತಂದೆ ಸಮಯ ಕೊಡ್ತಾರಾ? ತಂದೆ ಜೊತೆ ಬಾಂಡ್ ಹೇಗಿದೆ ಎಂದು ವಿವರಿಸಿದ್ದಾರೆ.
'ತುಂಬಾ ಜನ ಅಂದುಕೊಳ್ಳುತ್ತಾರೆ ಅವರು ಫುಲ್ ಬ್ಯುಸಿಯಾಗಿರುತ್ತಾರೆ ಫ್ಯಾಮಿಲಿಗೆ ಸಮಯ ಕೊಡುವುದಿಲ್ಲ ಎಂದು ಆದರೆ ಆ ತರ ಅಲ್ಲ. ಅವರು ಎಷ್ಟೇ ಬ್ಯುಸಿ ಆಗಿದ್ದರೂ ಫ್ಯಾಮಿಲಿಗೆ ಸಮಯ ಕೊಟ್ಟೇ ಕೊಡುತ್ತಾರೆ. ನಮ್ಮ ಸ್ಕೂಲ್‌ಗೆ ಡ್ರಾಪ್ ಮಾಡಿದ್ದಾರೆ, ಡಾಕ್ಟರ್ ಅಪಾಯಿಂಟ್ಮೆಂಟ್ ಇದ್ದಾಗ ಕರೆದುಕೊಂಡು ಹೋಗಿದ್ದಾರೆ ಡೆಂಟಿಸ್ಟ್‌ಗೆ ಕರೆದುಕೊಂಡು ಹೋಗೋದಾಗಿರಲಿ ಎಲ್ಲಾ ಮಾಡ್ತಾ ಇದ್ರು ಹೀಗಾಗಿ ಫ್ಯಾಮಿಲಿ ಮಕ್ಕಳಿಗೆ ಸಮಯ ಕೊಡುತ್ತಿಲ್ಲ ಅನಿಸಲಿಲ್ಲ. ಅಪ್ಪ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುವ ಸಮಯದಲ್ಲಿ ನಾನು ಚಿಕ್ಕವಳಾಗಿದ್ದೆ ಹೀಗಾಗಿ ಆ ಸಮಯ ಹೇಗಿತ್ತು ಅಂತ ಅಷ್ಟು ನೆನಪಿಲ್ಲ.ನನ್ನ ಪ್ರಕಾರ ಅವರು ನಮಗೆ ಅಂತ ತುಂಬಾ ಸಮಯ ಕೊಡುತ್ತಿದ್ದರು. ಅಪ್ಪ ಮನೆಯಲ್ಲಿ ಇಲ್ಲ ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀನಿ ಅಂತೆಲ್ಲ ಅನಿಸಿಲ್ಲ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ನಿವೇದಿತಾ ಮಾತನಾಡಿದ್ದಾರೆ.
ಹೇರ್‌ಕಟ್ ಆದ್ಮೇಲೆ ಸಾವಿರಾರೂ ಫೋಟೋಗಳು ಬೇಕೇ ಬೇಕು...ಮಾಲಾಶ್ರೀ ಮಗಳ ಹೊಸ ಲುಕ್ ವೈರಲ್!
'ಇನ್ನು ಹೊರ ದೇಶದಲ್ಲಿ ಶೂಟಿಂಗ್ ಹೋದಾಗ ನಾವು ಹೋಗುತ್ತಿದ್ವಿ. ಸ್ಕೂಲ್‌ನಲ್ಲಿ ನಡೆಯುತ್ತಿದ್ದ ಪೇರೆಂಟ್ಸ್ ಮೀಟಿಂಗ್‌ಗಳಲ್ಲಿ ಅಮ್ಮ ಭಾಗಿಯಾಗುತ್ತಿದ್ದರು ಅಪ್ಪ ಬರುತ್ತಿರಲಿಲ್ಲ ಆದರೆ ಸ್ಕೂಲ್‌ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು ಅದರಲ್ಲೂ ಸ್ಕೂಲ್ ಡೇ ಮತ್ತು ಮಕ್ಕಳ ದಿನಾಚರಣೆಯಲ್ಲಿ ಮಿಸ್ ಮಾಡುತ್ತಿರಲಿಲ್ಲ. ನಮ್ಮ ಕಾಲೇಜ್ ಫೆಸ್ಟ್‌ನಲ್ಲಿ ಕೂಡ ಇದ್ದರು. ಸ್ಕೂಲ್‌ನಲ್ಲಿ ಜೊತೆಗಿದ್ದ ಸ್ನೇಹಿತರೇ ಕಾಲೇಜ್‌ವರೆಗೂ ಬಂದಿರುವುದು ಹೀಗಾಗಿ ಎಲ್ಲಾದರೂ ಸಿಕ್ಕಾಗ ಅಥವಾ ಮನೆಗೆ ಬಂದಾಗ ತಂದೆ ಜೊತೆ ತೆಗೆಸಿಕೊಂಡಿದ್ದಾರೆ. ನನ್ನ ಸ್ನೇಹಿತರ ಫ್ಯಾಮಿಲಿ ಕೂಡ ನನ್ನ ಫ್ಯಾಮಿಲಿಯನ್ನು ಭೇಟಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಒಂದು ರೆಸಾರ್ಟ್ ಇದೆ ಅಲ್ಲಿ ಹೆಚ್ಚಿನ ಸಮಯ ಕಳೆದಿದ್ದೀವಿ ಅಲ್ಲೇ ನನಗೆ ಮೊದಲು ಸ್ವಿಮ್ಮಿಂಗ್ ಅಪ್ಪ ಹೇಳಿಕೊಟ್ಟಿದ್ದು' ಎಂದು ನಿವೇದಿತಾ ಹೇಳಿದ್ದಾರೆ.
ಕೊನೆಗೂ ಬಾಯ್‌ಫ್ರೆಂಡ್ ಫೋಟೋ ರಿವೀಲ್ ಮಾಡ್ಬಿಟ್ರಾ ಧನುಶ್ರೀ; ಸ್ಯಾಮ್ ಸಮೀರ್ ಅಷ್ಟು ದುಡ್ಡು ಮಾಡಿದಾನ ಎಂದ ನೆಟ್ಟಿಗರು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.