ಬೇಕಿದ್ರೆ ಇನ್ನೂ ಬಯ್ಯಿರಿ, ಟ್ರೋಲ್ ಮಾಡಿ ನಾನು ನೋಡ್ಕೊಂಡು ನಗುತ್ತೀನಿ ಅಷ್ಟೇ: ನಿವೇದಿತಾ ಗೌಡ ಬೋಲ್ಡ್‌ ಉತ್ತರ

Published : Mar 12, 2025, 12:25 PM ISTUpdated : Mar 12, 2025, 12:34 PM IST
ಬೇಕಿದ್ರೆ ಇನ್ನೂ ಬಯ್ಯಿರಿ, ಟ್ರೋಲ್ ಮಾಡಿ ನಾನು ನೋಡ್ಕೊಂಡು ನಗುತ್ತೀನಿ ಅಷ್ಟೇ: ನಿವೇದಿತಾ ಗೌಡ ಬೋಲ್ಡ್‌ ಉತ್ತರ

ಸಾರಾಂಶ

ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಅಭಿನಯದ 'ಮುದ್ದು ರಾಕ್ಷಸಿ' ಚಿತ್ರದ ಪ್ರೆಸ್‌ಮೀಟ್ ನಡೆಯಿತು. ಚಿತ್ರದ ಕೊನೆಯ ಸನ್ನಿವೇಶದ ಚಿತ್ರೀಕರಣ ಮುಗಿದಿದೆ. ವಿಚ್ಛೇದನದ ನಂತರದ ಟ್ರೋಲ್‌ಗಳ ಬಗ್ಗೆ ಪ್ರತಿಕ್ರಿಯಿಸಿದ ನಿವೇದಿತಾ, ಟ್ರೋಲ್‌ಗಳು ತನ್ನ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ. ಮಹಿಳೆಯರು ಆರ್ಥಿಕವಾಗಿ ಗಟ್ಟಿಯಾಗಿರಬೇಕು, ಆಗ ಟ್ರೋಲ್‌ಗಳನ್ನು ನಿರ್ಲಕ್ಷಿಸಬಹುದು ಎಂದು ಅವರು ಹೇಳಿದರು. ನೆಗೆಟಿವ್ ಕಾಮೆಂಟ್ ಮಾಡುವವರಿಗೆ ಖುಷಿ ಸಿಕ್ಕರೆ ಮಾಡಿಕೊಳ್ಳಿ ಎಂದು ನಿವೇದಿತಾ ಹೇಳಿದ್ದಾರೆ.

ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ನಟನೆಯ 'ಮುದ್ದು  ರಾಕ್ಷಸಿ' ಸಿನಿಮಾ ಪ್ರೆಸ್‌ಮೀಟ್ ನಡೆಯಿತ್ತು. ಚಿತ್ರದ ಲಾಸ್ಟ್‌ ಸೀನ್ ಶೂಟಿಂಗ್ ಮುಗಿಸುವ ಮೂಲಕ ಪೋಸ್ಟ್‌ ಪ್ರೊಡಕ್ಷನ್‌ಗೆ ಕಾಲಿಟ್ಟರು. ಈ ವೇಳೆ ನಿವೇದಿತಾ ಸೀನ್‌ಗೆ ಆಕ್ಟಲ್‌ ಮಾಡಲು ಕಣ್ಣೀರಿಟ್ಟು ನೋಡಿ ನಿಜ ಅಂದುಕೊಂಡು ಬಿಟ್ಟಿದ್ದಾರೆ ಜನರು. ಡಿವೋರ್ಸ್ ನಂತರ ನಿವೇದಿತಾ ಗೌಡ ಅಪ್ಲೋಡ್ ಮಾಡುವ ಸಣ್ಣ ಪುಟ್ಟ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತದೆ. ಅಷ್ಟೇ ಅಲ್ಲ ನೆಗೆಟಿವ್ ಕಾಮೆಂಟ್ಸ್‌ ಬರುತ್ತದೆ. ಇದರ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಸಿಕ್ಕ ಉತ್ತರವೇ ಇದು.....

'ಟ್ರೋಲ್ ಮಾಡುವವರಿಂದ ನನಗೆ ಏನೂ ಬೇಸರ ಆಗುವುದಿಲ್ಲ ಏನೂ ಎಫೆಕ್ಟ್ ಆಗುವುದಿಲ್ಲ. ಬೇಕಿದ್ದರೆ ಇನ್ನೂ ಬಯ್ಯಿರಿ ಇನ್ನೂ ಟ್ರೋಲ್ ಮಾಡಬಹುದು. ಟ್ರೋಲ್‌ಗಳನ್ನು ನೋಡುತ್ತೀನಿ ಅಷ್ಟೇ. ಜನರು ಮಾತುಗಳು ಮತ್ತು ಟ್ರೋಲ್‌ಗಳನ್ನು ಹೇಗೆ ಓವರ್‌ ಕಮ್ ಮಾಡುತ್ತೀನಿ ಅಂದ್ರೆ ನನ್ನ ಕೆಲಸ ಮೇಲೆ ಗಮನ ಕೊಡುತ್ತೀನಿ. ಬೇರೆಯವರು ನನ್ನ ಬಗ್ಗೆ ಏನು ಅಂದುಕೊಳ್ಳುತ್ತಾರೆ ಅದು ನನ್ನ ಸಮಸ್ಯೆ ಅಲ್ಲ. ಅದು ಅವರ ಸಮಸ್ಯೆ. ನನ್ನ ಬಗ್ಗೆ ನೆಗೆಟಿವ್ ಆಗಿ ಯೋಚನೆ ಮಾಡುತ್ತಿದ್ದರೆ ಅದು ಅವರ ಸಮಸ್ಯೆ ನನ್ನ ಸಮಸ್ಯೆ ಹೇಗ್ ಆಗುತ್ತದೆ? ಬೇರೆ ಅವರು ಏನು ಅಂದುಕೊಳ್ಳುತ್ತಾರೆ ಎಂದು ಕುಗ್ಗುವುದಾದರೆ ನನ್ನ ಮೈಂಡ್ ಅಷ್ಟು ವೀಕ್ ಇಲ್ಲ. ನನ್ನ ಕೆಲಸವನ್ನು ತುಂಬಾ ಸೀರಿಯಸ್‌ ಆಗಿ ತೆಗೆದುಕೊಂಡು ಪ್ಯಾಷನೇಟ್ ಆಗಿ ಕೆಲಸ ಮಾಡುತ್ತೀನಿ' ಎಂದು ನಿವೇದಿತಾ ಗೌಡ ಮಾತನಾಡಿದ್ದಾರೆ.

ಹೊಗೇನಕಲ್ ಜಲಪಾತದಲ್ಲಿ ಬಿದ್ದ ಜಯಮಾಲಾರನ್ನು ಉಳಿಸಿದ್ದು ರಾಜ್‌ಕುಮಾರ್; ಸತ್ತೇ ಹೋಗುತ್ತಿದ್ದೆ ಎಂದ ನಟಿ

'ಕಾಮೆಂಟ್ಸ್‌ ಮತ್ತು ಮೆಸೇಜ್‌ಗಳನ್ನು ಓಪನ್ ಮಾಡಿ ನೋಡುವುದಿಲ್ಲ ಏನ್ ಬರುತ್ತದೆ ಎಂದು ಗೊತ್ತು ಆಗುವುದಿಲ್ಲ. ಬೇರೆ ಅವರಿಗೆ ಕೆಟ್ಟದು ಬಯಸುವುದರಿಂದ ಅವರಿಗೆ ಖುಷಿ ಸಿಗುತ್ತದೆ ಅಂದ್ರೆ ಮಾಡಿಕೊಳ್ಳಿ ದೇವರನ್ನು ಅದನ್ನು ನೋಡಿಕೊಳ್ಳುತ್ತಾನೆ. ನನ್ನ ಪಾಡಿಗೆ ನನ್ನ ಕೆಲಸ ಏನಿದೆ ಅದನ್ನು ಮಾಡಿಕೊಂಡು ನನ್ನ ಪಾಡಿಗೆ ಇರ್ತೀನಿ. ಒಂದಿಷ್ಟು ಜನ ನೆಗೆಟಿವ್ ಕಾಮೆಂಟ್ ಹಾಕುವವರು ಇದ್ದಾಗ ತುಂಬಾ ಜನ ಪ್ರೀತಿ ಕೊಟ್ಟು ಇಷ್ಟ ಪಡುವವರು ಇದ್ದಾರೆ. ಇಷ್ಟ ಪಡುವವರು ಯಾರೂ ಟೈಪ್ ಮಾಡಿ ಕಾಮೆಂಟ್ ಮಾಡುವುದಿಲ್ಲ. ನೇರವಾಗಿ ಬಂದು ಪ್ರೀತಿಯಿಂದ ಮಾತನಾಡಿಸಿದಾಗ ಖುಷಿಯಾಗುತ್ತದೆ ಮತ್ತಷ್ಟು ಕೆಲಸ ಮಾಡಬೇಕು ಹೆಸರು ಮಾಡಬೇಕು ಅನಿಸುತ್ತದೆ' ಎಂದು ನಿವೇದಿತಾ ಹೇಳಿದ್ದಾರೆ.

ತನ್ನ ಸಿನಿಮಾದಿಂದ ಅಕ್ಕನ ಮಗನನ್ನು ಹೊರ ಹಾಕಿದ ದರ್ಶನ್; ಹೊಸ ಕಥೆಗೆ ಪರದಾಡಬೇಕಾ?

'ಪ್ರತಿಯೊಬ್ಬ ಮಹಿಳೆ ಖುಷಿಯಾಗಿ ಇರಬೇಕು ಅರ್ಥಿಕವಾಗಿ ಗಟ್ಟಿಯಾಗಿ ಇರಬೇಕು ಅವರದ್ದೇ ಆದ ಸಂಪಾದನೆ ಇರಬೇಕು ಆಗ ಯಾರು ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳುವ ಸಮಯ ಬರುವುದಿಲ್ಲ. ನಿಮ್ಮ ಜೀವನದಲ್ಲಿ ಏನು ಆಗುತ್ತಿದೆ ಎಂದು ನನಗೆ ಗೊತ್ತಿಲ್ಲ...ಎಲ್ಲರಿಗೂ ಜೀವನದಲ್ಲಿ ಕಷ್ಟ ಇರುತ್ತದೆ ಆದರೆ ಅವರನ್ನು ನೋಡಿದಾಗ ಏನೂ ಅನಿಸುವುದಿಲ್ಲ. ಅವರವರ ಲೈಫ್‌ನಲ್ಲಿ ಎಷ್ಟು ನೋವು ಇದೆ ಅಂತ ಅವರಿಗೆ ಮಾತ್ರ ಗೊತ್ತು. ಹೀಗಾಗಿ ನಾನು ಮನವಿ ಮಾಡಿಕೊಳ್ಳುವುದು ಏನೆಂದರೆ ಸುಮ್ಮನೆ ಕೆಟ್ಟ ಕಾಮೆಂಟ್ ಮಾಡಬೇಕು ಅಂದ್ರೂ ಮಾಡಬೇಕು ಅಂದ್ರೆ ಮಾಡಿ. ಒಬ್ಬರಿಗೆ ಖುಷಿ ಸಿಗುತ್ತದೆ ಅಂದ್ರೆ ಮಾಡಿಕೊಳ್ಳಿ. ಇನ್ನೂ ಟ್ರೋಲ್ ಮಾಡಿ ನಾನು ನೋಡುತ್ತೀನಿ ಅಷ್ಟೇ' ಎಂದಿದ್ದಾರೆ ನಿವೇದಿತಾ. 

ನನ್ನ ಮೇಲಿನ ಅಭಿಮಾನಕ್ಕೆ ಅಕ್ಕನ ಮಗನ ಕಾಲಿಗೆ ಬೀಳುವುದು ನೋಡಿ ನೋವಾಗಿದೆ; ನಟ ದರ್ಶನ್ ಬೇಸರ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ