ನಿವೇದಿತಾ ಗೌಡ ಅವರು ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡೋದ್ರಿಂದ ಫ್ಯಾನ್ಸ್ ಕಾಮೆಂಟ್ ನೋಡ್ತಾರೆ ಅಂತ ಅದೆಷ್ಟೋ ಜನರು ಅಂದ್ಕೊಂಡಿರ್ತಾರೆ. ಆದರೆ ಅದು ಸುಳ್ಳು.. ಯಾಕೆ ನಿವೇದಿತಾ ಅವರು ಕಾಮೆಂಟ್ ಓದೋದಿಲ್ಲ..? ಗುಟ್ಟು ರಟ್ಟಾಗಿದೆ..
ನಟಿ ಹಾಗೂ ಸೋಷಿಯಲ್ ಮೀಡಿಯಾ ಸೆನ್ಸೇಷನ್ ನಿವೇದಿತಾ ಗೌಡ (Niveditha Gowda) ಅವರು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ಗೆ ಬಂದ ಕಾಮೆಂಟ್‌ಗಳನ್ನು ನೋಡೋದಿಲ್ವಂತೆ. ಈ ಸಂಗತಿ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ನಿವೇದಿತಾ ಗೌಡ ಅವರು ಸೋಷಿಯಲ್ ಮೀಡಿಯಾ ಸೆನ್ಸೇಷನ್ ಹೌದು ಅನ್ನೋದ್ರಲ್ಲಿ ಯಾರಿಗೂ ಡೌಟ್ ಇಲ್ಲ. ಆದ್ರೆ, ಕಾಮೆಂಟ್ಸ್ ಓದಲ್ಲ ಅನ್ನೋದು ಖಂಡಿತವಾಗಿಯೂ ಬಹಳಷ್ಟು ಜನರಿಗೆ ಶಾಕಿಂಗ್ ಸಂಗತಿ ಅನ್ನೋದು ಪಕ್ಕಾ.
ಕಾರಣ, ನಿವೇದಿತಾ ಗೌಡ ಅವರು ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡೋದ್ರಿಂದ ಫ್ಯಾನ್ಸ್ ಕಾಮೆಂಟ್ ನೋಡ್ತಾರೆ ಅಂತ ಅದೆಷ್ಟೋ ಜನರು ಅಂದ್ಕೊಂಡಿರ್ತಾರೆ. ಆದರೆ ಅದು ಸುಳ್ಳು.. ಯಾಕೆ ನಿವೇದಿತಾ ಅವರು ಕಾಮೆಂಟ್ ಓದೋದಿಲ್ಲ, ಯಾಕೆ ಅವರು ಫ್ಯಾನ್ಸ್ ಕಾಮೆಂಟ್ ನೋಡಲ್ಲ ಅನ್ನೋದು ತಿಳಿದರೆ ನೀವು ಖಂಡಿತವಾಗಿಯೂ 'ನಿವೇದಿತಾ ಈಸ್ ರೈಟ್' ಅಂತ ಮೆಚ್ಚಿಕೊಳ್ಳಬಹುದೇನೋ.. ಹಾಗಿದ್ರೆ ಅದೇನು ಅಂತ ನೋಡ್ಬಿಡಿ ಆಯ್ತಾ..
ನಿವೇದಿತಾ ಗೌಡ ಈಗ 'ಮುದ್ದು ರಾಕ್ಷಸಿ'.. ಆ ಖುಷಿಯಲ್ಲಿ ನೋಡಿ ಬಿನ್ನಾಣಗಿತ್ತಿ ಫೋಟೋಸ್!
ಹೌದು, ನಿವೇದಿತಾ ಗೌಡ ಅವರು ಸೋಷಿಯಲ್ ಮೀಡಿಯಾಗಳಲ್ಲಿ ಬಹಳಷ್ಟು ರೀಲ್ಸ್‌ಗಳನ್ನು ಅಪ್ಲೋಡ್ ಮಾಡುತ್ತಾರೆ. ಅದಕ್ಕೆ ಭಾರೀ ಎನ್ನುವಷ್ಟು ಕಾಮೆಂಟ್‌ಗಳು ಕೂಡ ಬರುತ್ತವೆ. ಆದರೆ, ಅವುಗಳಲ್ಲಿ ನೆಗೆಟಿವ್ ಕಾಮೆಂಟ್‌ಗಳೇ ಹೆಚ್ಚು ಇರುತ್ತವೆ. ಅದರಲ್ಲೂ ಮುಖ್ಯವಾಗಿ ಅವರ ವೈಯಕ್ತಿಕ ಜೀವನದ ಬಗ್ಗೆಯೇ ಹೆಚ್ಚು ಜನರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಾರೆ. ಆ ಕಾಮೆಂಟ್‌ಗಳಿಗೆ ಇನ್ನೊಂದಷ್ಟು ಜನರು ಕಾಮೆಂಟ್ ಹಾಕಿ ಅವರ ಸೋಷಿಯಲ್ ಮೀಡಿಯಾ ಪೇಜ್ ತುಂಬಿಸಿಬಿಡುತ್ತಾರೆ. ಅದು ನಿವೇದಿತಾ ಗೌಡಗೆ ಗೊತ್ತಾಗಿದೆ. ಅದಕ್ಕೇ ಅವರು ಸಂದರ್ಶನವೊಂದರಲ್ಲಿ ಆ ಬಗ್ಗೆ ಹೇಳಿಕೊಂಡಿದ್ದಾರೆ.
ಹಾಗಿದ್ದರೆ ನಿವೇದಿತಾ ಗೌಡ ಹೇಳಿದ್ದೇನು? ನೋಡಿ.. ನಾನು ಸೋಷಿಯಲ್ ಮೀಡಿಯಾಗಳಲ್ಲಿ ಈಗ ಯಾವುದೇ ಕಾಮೆಂಟ್ ನೋಡಲ್ಲ. ಕಾರಣ, ಒಮ್ಮೆ ನೋಡಿದಾಗ ಅವರಿಗೆ ಬೇಸರ ಆಯ್ತಂತೆ. ವೈಯಕ್ತಿಕ ಸಂಗತಿಗಳಿಗೆ ಕಾಮೆಂಟ್ ಮಾಡೋದು ಅವರ ಮನಸ್ಥಿತಿಯನ್ನು ತೋರಿಸುತ್ತೆ.. ನನಗೆ ಅದರಿಂದ ಯಾವುದೇ ಸಮಸ್ಯೆ ಇಲ್ಲ. ಕಾರಣ, ನಾನು ಅವುಗಳನ್ನು ಅಷ್ಟೊಂದು ಸೀರಿಯಸ್ಸಾಗಿ ತಗೊಳ್ಳೋದೇ ಇಲ್ಲ, ಕಾರಣ, ನಾನು ನನ್ನಿಷ್ಟದ ಪ್ರಕಾರ ಜೀವನ ಮಾಡ್ತೀನಿ, ಯಾರದೋ ಇಷ್ಟಕ್ಕೆ ಅಲ್ಲ..
ನಾಟಕದ ಸ್ಟೇಜಲ್ಲಿ ಡಾ ರಾಜ್‌ಕುಮಾರ್ ನಡುಗ್ತಾ ಇದ್ರಂತೆ.. ಹಾಗಂತ ಹೇಳಿದ್ದು ಯಾರು ನೋಡಿ!
ನನ್ನನ್ನು ಕೆಲವರು ದ್ವೇಷಿಸಬಹುದು. ಆದರೆ, ಪ್ರೀತಿಸುವವರು ಕೂಡ ತುಂಬಾ ಮಂದಿ ಇದ್ದಾರೆ. ಆದರೆ ಅವರೆಲ್ಲರೂ ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಹಾಕೋದಿಲ್ಲ, ನೀವು ಅಂದ್ರೆ ನನಗೆ ಇಷ್ಟ ಅಂತ ಹೇಳೋದಿಲ್ಲ. ಎಲ್ಲೋ ಭೇಟಿಯಾದಾಗ ನನ್ನ ಜೊತೆ ಫೋಟೋ ತೆಗಿಸಿಕೊಳ್ಳುತ್ತಾರೆ, ಖುಷಿಯಿಂದ ಮಾತನ್ನಾಡುತ್ತಾರೆ. ಕಾಮೆಂಟ್ ಹಾಕೋರು ಕೆಟ್ಟದನ್ನೇ ಹುಡುಕುತ್ತಾರೆ, ಕೆಟ್ಟದನ್ನಷ್ಟೇ ರಿಸೀವ್ ಮಾಡುತ್ತಾರೆ ಅನ್ನಿಸುತ್ತೆ. ಅದಕ್ಕೇ ನಾನು ನನ್ನ ಕೆಲಸವನ್ನು ಮಾಡುತ್ತೇನೆ, ಸೋಷಿಯಲ್ ಮೀಡಿಯಾಗಳಿಗೆ ಹಾಕುತ್ತೇನೆ. ಆದರೆ, ಕಾಮೆಂಟ್ ಸೆಕ್ಷನ್ ನೋಡೋದೇ ಇಲ್ಲ' ಎಂದಿದ್ದಾರೆ.
ಜೊತೆಗೆ, 'ನನ್ನ ವೈಯಕ್ತಿಕ ಜೀವನ ಸಂಪೂರ್ಣವಾಗಿ ನನಗೆ ಸಂಬಂಧಿಸಿದ್ದು. ಅದರಿಂದ ಬೇರೆಯವರಿಗೆ ಆಗಬೇಕಾದದ್ದು ಎನೂ ಇಲ್ಲ. ನಾನು ನನ್ನ ಜೀವನವನ್ನು ಯಾರೊಂದಿಗೂ ಹೋಲಿಕೆ ಮಾಡಿಕೊಳ್ಳೋದಿಲ್ಲ, ನನ್ನ ಲೈಫ್ ನಾನು ಜೀವಿಸ್ತೀನಿ ಅಷ್ಟೇ. ನನ್ನನ್ನು ಇಷ್ಟಪಡುವವರಿಗೆ ಥ್ಯಾಂಕ್ಸ್ ಹೇಳ್ತೀನಿ. ದ್ವೇಷಿಸುವವರ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ, ಅವರಿಗೆ ದೇವರು ಒಳ್ಳೇದು ಮಾಡಲಿ ಎಂದಷ್ಟೇ ಕೇಳಿಕೊಳ್ಳುತ್ತೇನೆ' ಎಂದಿದ್ದಾರೆ ನಿವೇದಿತಾ ಗೌಡ.
ಏನಾಗ್ತಿದೆ ಟಾಕ್ಸಿಕ್ ಅಡ್ಡಾದಲ್ಲಿ ಅಡ್ಡಿ?..ಈ ವರ್ಷವೂ ಬರಲ್ಲ ಯಾಕೆ ರಾಕಿಭಾಯ್!